೩
ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು 
 ೧  * ಅ. ಕೃ 20:28ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.  ೨  † ತೀತ 1:6-9ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ‡ ವ. 11ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, § 1 ಪೇತ್ರ 4:9ಅತಿಥಿಸತ್ಕಾರಮಾಡುವವನೂ, * 2 ತಿಮೊ 2:24ಬೋಧಿಸಲು ಶಕ್ತನಾಗಿರಬೇಕು.  ೩ ಅವನು ಕುಡಕನು, ಜಗಳವಾಡುವವನೂ ಆಗಿರದೆ, † ತೀತ 3:2ಸಾತ್ವಿಕನೂ, ಹೊಡೆದಾಡದವನೂ ‡ 1 ತಿಮೊ 6:10; ಇಬ್ರಿ. 13:5ದ್ರವ್ಯಾಶೆಯಿಲ್ಲದವನೂ ಆಗಿರಬೇಕು.  ೪ ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.  ೫  § ವ 12ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು?  ೬ ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.  ೭ ಇದಲ್ಲದೆ ಅವನು * ಮಾರ್ಕ 4:11; ಕೊಲೊ 4:5ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು † 2 ತಿಮೊ 2:26; 1 ತಿಮೊ 6:9ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು. 
 ೮ ಅದೇ ರೀತಿಯಾಗಿ ‡ 1 ತಿಮೊ 6:9ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, § ತೀತ 2:3; 1 ತಿಮೊ 5:23ಮದ್ಯಾಸಕ್ತರೂ, * ತೀತ 1:7; 1 ಪೇತ್ರ 5:2ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ,  ೯ ನಂಬಿಕೆಯಿಂದ ಪ್ರಕಟವಾಗಿರುವ † 1 ತಿಮೊ 1:19ಸತ್ಯಾರ್ಥವನ್ನು ಶುದ್ಧ ಮನಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು.  ೧೦ ಇದಲ್ಲದೆ ‡ 1 ತಿಮೊ 5:22ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ.  ೧೧ ಹಾಗೆಯೇ § ಅವರ ಹೆಂಡತಿಯರಾದಸಭಾಸೇವಕಿಯರಾದ ಸ್ತ್ರೀಯರೂ * ತೀತ 2:3ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.  ೧೨ ಸಭಾಸೇವಕರು ಏಕಪತ್ನಿಯುಳ್ಳವರೂ, † 1 ತಿಮೊ 3:2,4ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು.  ೧೩  ‡ ಮತ್ತಾ 25:21ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. 
ಮಹಾ ರಹಸ್ಯ 
 ೧೪ ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.  ೧೫ ಆದರೆ ಒಂದು ವೇಳೆ ನಾನು ತಡಮಾಡಿದರೂ, § ಎಫೆ 2:21; 2 ತಿಮೊ 2:20; ಇಬ್ರಿ 3:6ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ. 
 ೧೬ ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ- 
* ಯೋಹ 1:14; 1 ಪೇತ್ರ 1:20; 1 ಯೋಹಾ. 1:2,3,4,5,8ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು, 
ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು, 
ದೇವದೂತರಿಗೆ ಕಾಣಿಸಿಕೊಂಡನು, 
† ಗಲಾ 2:2ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು, 
‡ 2 ಥೆಸ 1:10ಲೋಕದಲ್ಲಿ ನಂಬಲ್ಪಟ್ಟನು, 
§ ಅ. ಕೃ 1:2 ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು. 
*೩:೧ ಅ. ಕೃ 20:28
†೩:೨ ತೀತ 1:6-9
‡೩:೨ ವ. 11
§೩:೨ 1 ಪೇತ್ರ 4:9
*೩:೨ 2 ತಿಮೊ 2:24
†೩:೩ ತೀತ 3:2
‡೩:೩ 1 ತಿಮೊ 6:10; ಇಬ್ರಿ. 13:5
§೩:೫ ವ 12
*೩:೭ ಮಾರ್ಕ 4:11; ಕೊಲೊ 4:5
†೩:೭ 2 ತಿಮೊ 2:26; 1 ತಿಮೊ 6:9
‡೩:೮ 1 ತಿಮೊ 6:9
§೩:೮ ತೀತ 2:3; 1 ತಿಮೊ 5:23
*೩:೮ ತೀತ 1:7; 1 ಪೇತ್ರ 5:2
†೩:೯ 1 ತಿಮೊ 1:19
‡೩:೧೦ 1 ತಿಮೊ 5:22
§೩:೧೧ ಅವರ ಹೆಂಡತಿಯರಾದ
*೩:೧೧ ತೀತ 2:3
†೩:೧೨ 1 ತಿಮೊ 3:2,4
‡೩:೧೩ ಮತ್ತಾ 25:21
§೩:೧೫ ಎಫೆ 2:21; 2 ತಿಮೊ 2:20; ಇಬ್ರಿ 3:6
*೩:೧೬ ಯೋಹ 1:14; 1 ಪೇತ್ರ 1:20; 1 ಯೋಹಾ. 1:2,3,4,5,8
†೩:೧೬ ಗಲಾ 2:2
‡೩:೧೬ 2 ಥೆಸ 1:10
§೩:೧೬ ಅ. ಕೃ 1:2