ಉತ್ತರಿಸಲಾದ ಬೈಬಲ್ ಪ್ರಶ್ನೆಗಳು

ನಾವು ಕ್ಷಮೆ ಯಾಚಿಸುತ್ತೇವೆ, ಆದರೆ ಈ ಸಮಯದಲ್ಲಿ ನಮಗೆ ಸಲ್ಲಿಸಿದ ಕನ್ನಡ ಪ್ರಶ್ನೆಗಳನ್ನು ನಾವು ಸ್ವೀಕರಿಸುವುದಿಲ್ಲ. ನಿಮಗೆ ಇಂಗ್ಲೀಷಿನಲ್ಲಿ ಬರೆಯಲು ಮತ್ತು ಓದಲು ಸಾಧ್ಯವಿದ್ದರೆ, ನೀವು ಪ್ರಶ್ನೆಗಳನ್ನು - ಗೆ ಸಲ್ಲಿಸಬಹುದು.
ಈ ಕೆಳಗಿನವುಗಳು ನಮ್ಮಲ್ಲಿ ಲಭ್ಯವಿರುವ ಕನ್ನಡ ಪುಟಗಳು :

ಉತ್ತರಿಸಲಾದ ಬೈಬಲ್ ಪ್ರಶ್ನೆಗಳು


ಪ್ರಶ್ನೆ: ನಿತ್ಯಜೀವನ ದೊರೆತಿದೆಯೇ?

ನಿತ್ಯಜೀವನಕ್ಕೆ ಬೈಬಲ್ ಒಂದು ಸ್ಪಷ್ಟವಾದ ಮಾರ್ಗವನ್ನು ತೋರಿಸುತ್ತದೆ. ಮೊದಲನೆಯದಾಗಿ, ನಾವು ದೇವರ ವಿರುದ್ಧವಾಗಿ ತಪ್ಪು ಮಾಡಿದ್ದೇವೆಂದು ಗುರುತಿಸಿಕೊಳ್ಳಬೇಕು: “ ಎಲ್ಲರೂ ಪಾಪವನ್ನು ಮಾಡಿದ್ದಾರೆ ಮತ್ತು ದೇವರ ಮಹಿಮೆಯಿಂದ ದೂರ ಸರಿದಿದ್ದಾರೆ" (ರೋಮನ್ಸ್ 3:23). ನಮ್ಮನ್ನು ಶಿಕ್ಷೆಗೆ ಅರ್ಹವನ್ನಾಗಿ ಮಾಡುವ, ದೇವರು ಮೆಚ್ಚದಿರುವ ವಿಷಯಗಳನ್ನು ನಾವೆಲ್ಲಾ ಮಾಡಿದ್ದೇವೆ. ನಮ್ಮ ಎಲ್ಲಾ ಪಾಪಗಳು ನಿತ್ಯವಾದ ದೇವರ ವಿರುದ್ಧವಾಗಿರುವುದರಿಂದ, ನಿತ್ಯವಾದ ಶಿಕ್ಷೆಯು ಮಾತ್ರ ಸಾಕಾಗುತ್ತದೆ. “ಪಾಪಕ್ಕೆ ಕೊಡುವ ಸಂಬಳ ಮರಣವೇ, ಆದರೆ ನಮ್ಮ ಏಸು ಕ್ರಿಸ್ತನ ಮೂಲಕ ನಿತ್ಯಜೀವನವೇ ದೇವರ ಉಡುಗೊರೆ" (ರೋಮನ್ಸ್ 6:23)

ಆದರೆ ಪಾಪರಹಿತನಾದ ಏಸು ಕ್ರಿಸ್ತ, (1 ಪೀಟರ್ 2:22), ದೇವರ ಶಾಶ್ವತನಾದ ಪುತ್ರ, ಒಬ್ಬ ಮನುಷ್ಯನಾದನು.(ಜಾನ್ 1:1,14) ಮತ್ತು ನಮ್ಮ ದಂಡವನ್ನು ತೆರಲು ಮರಣ ಹೊಂದಿದರು. “ ಇದರಲ್ಲಿ ದೇವರು ನಮ್ಮ ಬಗ್ಗೆ ಹೊಂದಿರುವ ಪ್ರೇಮವನ್ನು ನಿದರ್ಶಿಸುತ್ತಾನೆ: “ನಾವಿನ್ನೂ ಪಾಪಿಗಳಾಗಿರುವಾಗಲೇ ದೇವರು ನಮಗಾಗಿ ಮರಣವನ್ನಪಿದನು. " (ರೋಮನ್ಸ್5:8). ಯೇಸು ಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದರು(ಜಾನ್ 19:31-42), ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತೆಗೆದುಕೊಳ್ಳುತ್ತಾ (2 ಕರಿಂತಿಯನ್ಸ್ 5:21). ಮೂರು ದಿನಗಳ ನಂತರ ಅವರು ಸಾವಿನಿಂದ ಮೇಲೆದ್ದರು (1 ಕರಿಂತಿಯನ್ಸ್ 15:1-4), ಪಾಪ ಮತ್ತು ಮರಣದ ಮೇಲೆ ಅವರ ವಿಜಯವನ್ನು ಸಾರುತ್ತಾ . " ತನ್ನ ಮಹಾನ್ ಕರುಣೆಯಲ್ಲಿ, ಯೇಸು ಕ್ರಿಸ್ತನನ್ನು ಮರಣದಿಂದ ಪುನರುಜ್ಜೀವನಗೊಳಿಸುವ ಮೂಲಕ ಅವನು ನಮಗೆ ಜೀವಂತ ಭರವಸೆಯ ಹೊಸ ಜನ್ಮವನ್ನು ನೀಡಿದ್ದಾನೆ." (1 ಪೀಟರ್ 1:3)

ಶ್ರದ್ಧೆಯಿಂದ, ನಾವು ಕ್ರಿಸ್ತನ ಬಗ್ಗೆ ನಮ್ಮ ಮನೋವಿಚಾರಗಳನ್ನು ಬದಲಿಸಿಕೊಳ್ಳಬೇಕು- ಅವನು ಯಾರು, ಅವನು ಏನನ್ನು ಮಾಡಿದನು, ಮತ್ತು ಏಕೆ - ರಕ್ಷಣೆಗಾಗಿ (ಕಾಯ್ದೆಗಳು 3:19). ನಾವು ನಮ್ಮ ಶ್ರದ್ಢೆಯನ್ನು ಅವನಲ್ಲಿಟ್ಟರೆ, ನಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಶಿಲುಬೆಯ ಮೇಲೆ ಅವರ ಮರಣದಲ್ಲಿ ವಿಶ್ವಾಸವಿರಿಸಿದರೆ, ನಾವು ಕ್ಷಮಿಸಲ್ಪಡುತ್ತೇವೆ ಮತ್ತು ಸ್ವರ್ಗದಲ್ಲಿ ನಿತ್ಯಜೀವನದ ಅಭಯದಾನವನ್ನು ಪಡೆಯುತ್ತೇವೆ. "ದೇವರು ಜಗತ್ತನ್ನು ಎಷ್ಟು ಪ್ರೀತಿಸಿದನೆಂದರೆ ತನ್ನನ್ನು ನಂಬಿದ ಯಾರೇ ಆಗಲಿ ಅವರು ನಾಶ ಹೊಂದದೆ ನಿತ್ಯಜೀವನವನ್ನು ಹೊಂದುವಂತಾಗಲು ಅವನು ತನ್ನ ಏಕೈಕಪುತ್ರನನ್ನು ಕೊಟ್ಟನು" (ಜಾನ್ 3:16). "ನೀವು ನಿಮ್ಮ ಬಾಯಿಯಿಂದ ತಪ್ಪೊಪ್ಪಿಗೆ ಮಾಡುತ್ತಾ ಹೇಳಿದರೆ, ’ಯೇಸುವು ದೇವರು’ ಮತ್ತು ದೇವರು ಅವನನ್ನು ಮರಣದಿಂದ ಹೊರತಂದ ಎಂದು ಹೃದಯದಲ್ಲಿ ನಂಬಿದರೆ, ನೀವು ಕಾಪಾಡಲ್ಪಡುತ್ತೀರಿ” (ರೋಮನ್ಸ್ 10:9). ಶಿಲುಬೆಯ ಮೇಲಿರುವ ಕ್ರಿಸ್ತನ ಪೂರ್ಣವಾದ ಕೆಲಸದ ಮೇಲಿನ ಶ್ರದ್ಧೆ ಮಾತ್ರವೇ ನಿತ್ಯಜೀವನಕ್ಕೆ ನಿಜವಾದ ದಾರಿ! ” ಏಕೆಂದರೆ ನೀವು ಕೃಪೆಯಿಂದ, ಕಾಪಾಡಲ್ಪಟ್ಟಿದ್ದೀರಿ, ಶ್ರದ್ಧೆಯಿಂದ – ಮತ್ತು ಇದು ನಿಮ್ಮಿಂದಲೇ ಆದದ್ದಲ್ಲ, ಇದು ದೇವರ ಕೊಡುಗೆ – ಆತ್ಮಶ್ಲಾಘನೆ ಮಾಡಿಕೊಳ್ಳಲು ದಾರಿ ಮಾಡಿಕೊಡುವ ಕರ್ಮಗಳಿಂದಲ್ಲ” (ಎಫೆಸಿಯನ್ಸ್ 2:8-9).

ನೀವು ಯೇಸು ಕ್ರಿಸ್ತನನ್ನು ನಿಮ್ಮ ಉದ್ಧಾರಕನನ್ನಾಗಿ ಒಪ್ಪಿಕೊಳ್ಳಲು ಇಚ್ಛಿಸಿದರೆ, ಇಲ್ಲೊಂದು ಮಾದರಿ ಪ್ರಾರ್ಥನೆಯಿದೆ. ನೆನಪಿರಲಿ ಈ ಪ್ರಾರ್ಥನೆಯನ್ನು ಅಥವಾ ಯಾವುದೇ ಇತರ ಪ್ರಾರ್ಥನೆಯನ್ನು ಹೇಳುವುದು ನಿಮ್ಮನ್ನು ರಕ್ಷಿಸುವುದಿಲ್ಲ. ಕ್ರಿಸ್ತನಲ್ಲಿ ವಿಶ್ವಾಸವಿರಿಸುವುದು ಮಾತ್ರ ನಿಮ್ಮನ್ನು ಪಾಪದಿಂದ ರಕ್ಷಿಸುತ್ತದೆ. ಈ ಪ್ರಾರ್ಥನೆಯು ಅವನೆಡೆಗಿರುವ ನಿಮ್ಮ ಶ್ರದ್ಧೆಯನ್ನು ವ್ಯಕ್ತ ಪಡಿಸಲು ಮತ್ತು ನಿಮ್ಮ ಮುಕ್ತಿಗಾಗಿ ಅವಕಾಶ ಒದಗಿಸುದುದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಲು ಸುಮ್ಮನೆ ಒಂದು ದಾರಿ. " ದೇವರೇ, ನಾನು ನಿನ್ನ ವಿರುದ್ಧ ಪಾಪವನ್ನು ಮಾಡಿದ್ದೇನೆ ಮತ್ತು ಶಿಕ್ಷೆಗೆ ಅರ್ಹನೆಂದು ಅರಿತಿದ್ದೇನೆ. ಆದರೆ ಅವರಲ್ಲಿಟ್ಟ ಶ್ರದ್ಧೆಯ ಮೂಲಕ ನಾನು ಕ್ಷಮೆಯನ್ನು ಹೊಂದುವಂತಾಗಲು ನನಗೆ ಸಲ್ಲಬೇಕಾಗಿದ್ದ ಶಿಕ್ಷೆಯನ್ನು ಯೇಸು ಕ್ರಿಸ್ತ ಪಡೆದನು. ಮುಕ್ತಿಗಾಗಿ ನಾನು ನನ್ನ ವಿಶ್ವಾಸವನ್ನು ನಿನ್ನಲ್ಲಿಡುತ್ತೇನೆ. ನಿನ್ನ ಅದ್ಭುತವಾದ ಕೃಪೆ ಮತ್ತು ಕ್ಷಮೆಗಾಗಿ – ನಿತ್ಯಜೀವನದ ಉಡುಗೊರೆಗಾಗಿ ಧನ್ಯವಾದಗಳು! ಅಮೇನ್!”

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.

ಪ್ರಶ್ನೆ: ಕ್ಷಮೆ ದೊರೆತಿದೆಯೇ? ನಾನು ದೇವರಿಂದ ಕ್ಷಮೆಯನ್ನು ಪಡೆಯುವುದು ಹೇಗೆ?

ಕಾಯಿದೆ 13:38 ಘೋಷಿಸುತ್ತದೆ, “ಆದ್ದರಿಂದ, ನನ್ನ ಸಹೋದರರೇ, ಯೇಸುವಿನ ಮೂಲಕ ನಿಮ್ಮ ಪಾಪಗಳ ಕ್ಷಮೆಯನ್ನು ಸಾರಲಾಗಿದೆ ಎಂಬುದನ್ನು ನೀವು ತಿಳಿಯಲು ನಾನು ಬಯಸುತ್ತೇನೆ.”

ಕ್ಷಮೆಯೆಂದರೇನು ಮತ್ತು ನನಗೆ ಅದರ ಅವಶ್ಯಕತೆ ಏನು?

“ಕ್ಷಮೆ” ಪದದ ಅರ್ಥ, ಸ್ಲೇಟನ್ನು ಸ್ವಚ್ಛವಾಗಿ ಒರೆಸುವುದು, ಮನ್ನಿಸುವುದು, ಒಂದು ಸಾಲವನ್ನು ರದ್ದುಗೊಳಿಸುವುದು. ನಾವು ಯಾರ ಕುರಿತಾದರೂ ತಪ್ಪನ್ನು ಮಾಡಿದರೆ, ಸಂಬಂಧವನ್ನು ಕಾಯ್ದುಕೊಳ್ಳಲು ಅವರಲ್ಲಿ ಕ್ಷಮೆ ಯಾಚಿಸುತ್ತೇವೆ. ಒಬ್ಬ ವ್ಯಕ್ತಿ ಕ್ಷಮೆಗೆ ಅರ್ಹನೆಂದು ಕ್ಷಮಿಸಲಾಗುವುದಿಲ್ಲ. ಕ್ಷಮೆಗೆ ಯಾರೂ ಅರ್ಹರಲ್ಲ. ಕ್ಷಮೆಯು ಒಂದು ಪ್ರೇಮಪೂರ್ಣ, ಕರುಣಾಭರಿತ ಮತ್ತು ಕೃಪೆಯಿಂದ ಕೂಡಿದ ಕ್ರಿಯೆ. ನಿಮಗೆ ಅವರು ಏನೇ ಮಾಡಿರಲಿ, ಆ ಮತ್ತೊಬ್ಬ ವ್ಯಕ್ತಿಯ ವಿರುದ್ಧವಾಗಿ ಏನನ್ನಾದರೂ ಹಿಡಿದಿಟ್ಟುಕೊಳ್ಳದಿರುವ ನಿರ್ಧಾರವೇ ಕ್ಷಮೆ.

ದೇವರಿಂದ ನಮಗೆಲ್ಲರಿಗೂ ಕ್ಷಮೆಯ ಅವಶ್ಯಕತೆಯಿದೆಯೆಂದು ಬೈಬಲ್ ನಮಗೆ ಹೇಳುತ್ತದೆ. ನಾವೆಲ್ಲ ಪಾಪವನ್ನು ಮಾಡಿದ್ದೇವೆ. 7:20 ಸಾರುತ್ತದೆ, “ಭೂಮಿಯ ಮೇಲೆ, ಯಾವುದು ಸರಿಯೋ ಅದನ್ನು ಮಾತ್ರ ಮಾಡುವ ಮತ್ತು ಎಂದೂ ಪಾಪವನ್ನೇ ಮಾಡದ ಸರಿಯಾದ ವ್ಯಕ್ತಿ ಒಬ್ಬರೂ ಇಲ್ಲ.” 1 ಜಾನ್ 1:8 ಹೇಳುತ್ತದೆ, “ನಾವು ಪಾಪರಹಿತರು ಎಂದು ಸಾರುವೆವಾದರೆ, ನಾವು ನಮ್ಮನ್ನೇ ವಂಚಿಸಿಕೊಳ್ಳುತ್ತೇವೆ ಮತ್ತು ನಮ್ಮಲ್ಲಿ ಸತ್ಯವಿಲ್ಲ.” ಒಟ್ಟಿನಲ್ಲಿ ಎಲ್ಲಾ ಪಾಪಗಳು ದೇವರ ವಿರುದ್ಧ ದಂಗೆಯೇಳುವ ಒಂದು ಕ್ರಿಯೆ (ಸಾಮ್ 51:4). ಫಲಸ್ವರೂಪವಾಗಿ, ನಮಗೆ ದೇವರ ಕ್ಷಮೆಯ ಅತ್ಯಂತ ಅವಶ್ಯಕತೆಯಿದೆ. ನಮ್ಮ ಪಾಪಗಳು ಕ್ಷಮಿಸಲ್ಪಡಲಿಲ್ಲವಾದರೆ, ಶಾಶ್ವತವಾಗಿ ನಮ್ಮ ಪಾಪಗಳ ಪರಿಣಾಮಗಳಲ್ಲಿ ನರಳಬೇಕಾಗುತ್ತದೆ. 25:46; ಜಾನ್ 3:36).

ಕ್ಷಮೆ – ನಾನು ಅದನ್ನು ಹೇಗೆ ಪಡೆಯಬಹುದು?

ದೇವರು ಪ್ರೇಮಪೂರ್ಣ ಮತ್ತು ಕರುಣಾಭರಿತನಾಗಿದ್ದಾನೆ –ನಮ್ಮ ಪಾಪಗಳನ್ನು ಕ್ಷಮಿಸಲು ಕಾತರನಾಗಿದ್ದಾನೆ, ಇದಕ್ಕೆ ಧನ್ಯವಾದಗಳು! 2 ಪೀಟರ್ 3:9 ನಮಗೆ ಹೇಳುತ್ತಾನೆ, “…ಯಾರೂ ನಾಶವಾಗದಿರಲಿ ಆದರೆ ಪ್ರತಿಯೊಬ್ಬರು ಪಶ್ಚಾತ್ತಾಪವನ್ನು ಹೊಂದಲಿ, ಎನ್ನುತ್ತಾ ಅವನು ನಿಮ್ಮೊಂದಿಗೆ ಸಹನೆಯಿಂದಿದ್ದಾನೆ.” ದೇವರು ನಮ್ಮನ್ನು ಕ್ಷಮಿಸಲು ಇಚ್ಛಿಸುತ್ತಾನೆ, ಆದ್ದರಿಂದ ಅವನು ಕ್ಷಮೆಗೆ ಅವಕಾಶ ಒದಗಿಸಿದನು.

ಮರಣವೇ ನಮ್ಮ ಪಾಪಗಳಿಗೆ ನ್ಯಾಯಸಮ್ಮತವಾದ ದಂಡ. ರೋಮನ್ಸ್ 6:23 ಮೊದಲರ್ಧ ಘೋಷಿಸುತ್ತದೆ, “ಪಾಪಗಳಿಗೆ ಕೊಡುವ ಸಂಬಳ ಮರಣ…” ಶಾಶ್ವತವಾದ ಮರಣವನ್ನೇ ನಾವು ನಮ್ಮ ಪಾಪಗಳಿಂದ ಗಳಿಸಿರುವುದು. ದೇವರು, ಅವನ ಪರಿಪೂರ್ಣವಾದ ಯೋಜನೆಯಲ್ಲಿ, ಒಬ್ಬ ಮನುಷ್ಯ – ಯೇಸು ಕ್ರಿಸ್ತನಾದ. 1:1,14). ಯೇಸುವು ಶಿಲುಬೆಯ ಮೇಲೆ ಮರಣ ಹೊಂದಿದನು, ನಾವು ಸಲ್ಲಿಸಬೇಕಾಗಿದ್ದ ದಂಡ –ಮರಣವನ್ನು ಸ್ವೀಕರಿಸುತ್ತಾ.2 ಕೋರಿನ್ಥಿಯನ್ಸ್ 5:21 ನಮಗೆ ಬೋಧನೆ ಮಾಡುತ್ತದೆ, “ನಮ್ಮ ಪಾಪಗಳಿಗಾಗಿ ಯಾವುದೇ ಪಾಪವಿಲ್ಲದ ಅವನನ್ನು ದೇವರು ಮಾಡಿದನು, ಇದರಿಂದ ಅವನಲ್ಲಿ ದೇವರ ಧರ್ಮಶೀಲತೆ ನಾವಾಗಬಹುದು”. ಯೇಸುವು ಶಿಲುಬೆಯ ಮೇಲೆ ಮರಣ ಹೊಂದಿದನು, ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ದೇವರಾಗಿ ತಾನು ಪಡೆಯುತ್ತಾ, ಯೇಸುವು ಶಿಲುಬೆಯ ಮೇಲೆ ಮರಣ ಹೊಂದಿದನು! ದೇವರಾಗಿ ಯೇಸುವಿನ ಮರಣ ಇಡೀ ಜಗತ್ತಿನ ಪಾಪಗಳ ಪ್ರಾಯಶ್ಚಿತ್ತಕ್ಕೆ ಅವಕಾಶ ಒದಗಿಸಿಕೊಟ್ಟಿತು. 1 ಜಾನ್ 2:2 ಸಾರುತ್ತದೆ, “ನಮ್ಮ ಪಾಪಗಳಿಗಾಗಿ ಅವನು ತ್ಯಾಗದ ಮೂಲಕ ಪರಿಹಾರ ನೀಡುತ್ತಿದ್ದಾನೆ, ಮತ್ತು ಕೇವಲ ನಮ್ಮದಕ್ಕಷ್ಟೇ ಅಲ್ಲ ಆದರೆ ಇಡೀ ಜಗತ್ತಿನ ಪಾಪಗಳಿಗೆ.” ಯೇಸುವು ಮರಣೋನ್ಮುಖನಾಗಿ ಎದ್ದನು, ಪಾಪ ಮತ್ತು ಮರಣದ ಮೇಲೆ ಅವನ ವಿಜಯವನ್ನು ಸಾರುತ್ತಾ (1 ಕೋರಿನ್ಥಿಯನ್ಸ್ 15:1-28). ದೇವರನ್ನು ಸ್ತುತಿಸಿ, ಯೇಸು ಕ್ರಿಸ್ತನ ಮರಣ ಮತ್ತು ಪುನರುಜ್ಜೀವನದ ನಂತರದ ರೋಮನ್ನರ ಉತ್ತರಾರ್ಧವು 6:23 ನಿಜ, “…ಆದರೆ ನಮ್ಮ ದೇವರಾದ ಯೇಸು ಕ್ರಿಸ್ತನ ಮೂಲಕ ನಿತ್ಯಜೀವನವು ದೇವರ ಉಡುಗೊರೆ.”ನೀವು ನಿಮ್ಮ ಪಾಪಗಳಿಗೆ ಕ್ಷಮೆಯನ್ನು ಇಚ್ಚಿಸುತ್ತೀರಾ? ಹೋಗಲಾಡಿಸಿಕೊಳ್ಳಲು ಆಗದಂಥ ಅಪರಾಧಿಪ್ರಜ್ಞೆ ಯ ಕ್ಲೇಶ ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ಉದ್ಧಾರಕನಾಗಿ ಯೇಸು ಕ್ರಿಸ್ತನಲ್ಲಿ ನಿಮ್ಮ ಶ್ರದ್ಧೆಯನ್ನು ಇರಿಸಿದರೆ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಎಫೆಸಿಯನ್ಸ್ 1:7 ಹೇಳುತ್ತದೆ, “ದೇವನ ಕೃಪೆಯೆಂಬ ಸಂಪತ್ತಿನ ಪ್ರಕಾರ, ಅವನ ರಕ್ತದ ಮೂಲಕ ಅವನಲ್ಲಿ ನಾವು ಪರಿಹಾರವನ್ನು ಹೊಂದಿದ್ದೇವೆ.” ನಾವು ಕ್ಷಮಿಸಲ್ಪಡಲೆಂದು, ಯೇಸುವು ನಮ್ಮ ಸಾಲಗಳಿಗೆ ಪಾವತಿಸಿದನು. ಯೇಸುವಿನ ಮೂಲಕ ನಿಮ್ಮನ್ನು ಕ್ಷಮಿಸಲು ದೇವರನ್ನು ಬೇಡುವುದು ಮಾತ್ರ ನೀವು ಮಾಡಬೇಕಾಗಿರುವುದು, ನಿಮ್ಮ ಕ್ಷಮೆಗಾಗಿ ಭರಿಸಲು ಯೇಸುವು ಮರಣ ಹೊಂದಿದನ ಎಂದು ನಂಬುತ್ತಾ – ಮತ್ತು ಅವನು ನಿಮ್ಮನ್ನು ಕ್ಷಮಿಸುತ್ತಾನ್! 3:16-17 ಈ ಅದ್ಭುತವಾದ ಸಂದೇಶವನ್ನು ಒಳಗೊಂಡಿದೆ, “ಭಗವಂತನು ಜಗತ್ತನ್ನು ಎಷ್ಟೊಂದು ಪ್ರೀತಿಸಿದನೆಂದರೆ, ಅವನಲ್ಲಿ ಯರು ಶ್ರದ್ಧೆಯನ್ನಿರಿಸಿದ್ದಾರೋ ಅವರು ನಾಶ ಹೊಂದದೆ ನಿತ್ಯಜೀವನವನ್ನು ಹೊಂದುವಂತಾಗಲು ಅವನು ತನ್ನ ಏಕೈಕ ಪುತ್ರನನ್ನು ನೀಡಿದನು. ದೇವರು ಅವನ ಪುತ್ರನನ್ನು ಜಗತ್ತನ್ನು ಹೀಯಾಳಿಸಲು ಕಳುಹಿಸಲಿಲ್ಲ, ಆದರೆ ಅವನ ಮೂಲಕ ಜಗತ್ತನ್ನು ರಕ್ಷಿಸಲು ಕಳುಹಿಸಿದನು.”

ಕ್ಷಮೆ – ಇದು ಅಷ್ಟು ಸುಲಭವೇ?

ಹೌದು ಇದು ಅಷ್ಟೇ ಸುಲಭ! ನೀವು ದೇವರಿಂದ ಕ್ಷಮೆಯನ್ನು ಸಂಪಾದಿಸಲು ಸಾಧ್ಯವಿಲ್ಲ. ದೇವರಿಂದ ಪಡೆದ ಕ್ಷಮೆಗೆ ನೀವು ಭರಿಸಲು ಸಾಧ್ಯವಿಲ್ಲ. ಶ್ರದ್ಧೆ, ದೇವರ ಕೃಪೆ ಮತ್ತು ಕರುಣೆಯಿಂದ ಅದನ್ನು ನೀವು ಪಡೆಯಲು ಮಾತ್ರ ಸಾಧ್ಯ. ನೀವು ಯೇಸು ಕ್ರಿಸ್ತನನ್ನು ನಿಮ್ಮ ಉದ್ಧಾರಕನನ್ನಾಗಿ ಒಪ್ಪಲು ಮತ್ತು ದೇವರಿಂದ ಕ್ಷಮೆಯನ್ನು ಪಡೆಯಲು ಇಚ್ಛಿಸಿದರೆ, ನೀವು ಪ್ರಾರ್ಥಿಸಬಹುದಾದ ಪ್ರಾರ್ಥನೆ ಇಲ್ಲಿದೆ. ಈ ಪ್ರಾರ್ಥನೆ ಅಥವಾ ಇನ್ನಾವುದಾದರು ಬೇರೆ ಪ್ರಾರ್ಥನೆಯನ್ನು ಹೇಳುವುದು ನಿಮ್ಮನ್ನು ರಕ್ಷಿಸುವುದಿಲ್ಲ. ಯೇಸು ಕ್ರಿಸ್ತನಲ್ಲಿ ವಿಶ್ವಾಸವನ್ನಿರಿಸಿದರೆ ಮಾತ್ರ ನಿಮ್ಮ ಪಾಪಗಳ ಕ್ಷಮೆಗೆ ಅವಕಾಶವಿದೆ. ಈ ಪ್ರಾರ್ಥನೆಯು ದೇವರಲ್ಲಿ ನಿಮ್ಮ ಶ್ರದ್ಧೆಯನ್ನು ವ್ಯಕ್ತಿಪಡಿಸಲು ಮತ್ತು ನಿಮ್ಮ ಕ್ಷಮೆಗಾಗಿ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಸುಮ್ಮನೆ ಒಂದು ದಾರಿ. “ಭಗವಂತನೇ, ನಾನು ನಿನ್ನ ವಿರುದ್ಧ ಪಾಪವೆಸಗಿದ್ದೇನೆಂದು ಮತ್ತು ನಾನು ಶಿಕ್ಷೆಗೆ ಅರ್ಹನಾಗಿದ್ದೇನೆಂದು ತಿಳಿದಿದ್ದೇನೆ. ಆದರೆ ಯೇಸು ಕ್ರಿಸ್ತನು ಅವನಲ್ಲಿನ ಶ್ರದ್ಧೆಯ ಮೂಲಕ ನಾನು ಕ್ಷಮಿಸಲ್ಪಡಲೆಂದು ನನಗೆ ಸಲ್ಲಬೇಕಾಗಿದ್ದ ಶಿಕ್ಷೆಯನ್ನು ತೆಗೆದುಕೊಂಡನು. ರಕ್ಷಣೆಗಾಗಿ ನಾನು ನನ್ನ ವಿಶ್ವಾಸವನ್ನು ನಿನ್ನಲ್ಲಿರಿಸುತ್ತೇನೆ. ನಿನ್ನ ಅದ್ಭುತವಾದ ಕೃಪೆ ಮತ್ತು ಕ್ಷಮೆಗೆ ಧನ್ಯವಾದಗಳು! ಆಮೇನ್!”

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.

ಪ್ರಶ್ನೆ: ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಅಂಗೀಕರಿಸುವುದು ಎಂಬುದರ ಅರ್ಥವೇನು?

ನೀವು ಎಂದಾದರೂ ಏಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಅಂಗೀಕರಿಸಿದ್ದೀರಾ? ನೀವು ಉತ್ತರಿಸುವ ಮೊದಲು ನನಗೆ ಈ ಪ್ರಶ್ನೆಯನ್ನು ವಿವರಿಸಲು ಅನುವು ಮಾಡಿಕೊಡಿ. ಈ ಪ್ರಶ್ನೆಯನ್ನು ಸರಿಯಗಿ ಅರ್ಥಮಾಡಿಕೊಳ್ಳಲು, ಮೊದಲನೆಯದಾಗಿ ನೀವು “ಯೇಸು ಕ್ರಿಸ್ತ”, “ವೈಯಕ್ತಿಕ” ಮತ್ತು “ಉದ್ಧಾರಕ” ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.

ಯೇಸು ಕ್ರಿಸ್ತ ಎಂದರೆ ಯಾರು? ಹಲವಾರು ಜನರು ಯೇಸು ಕ್ರಿಸ್ತನನ್ನು ಒಬ್ಬ ಉತ್ತಮ ವ್ಯಕ್ತಿ, ಶ್ರೇಷ್ಠ ಗುರು, ಅಥವಾ ದೇವರ ಪ್ರವಾದಿಯೆಂದೂ ಸಹ ಪರಿಗಣಿಸುತ್ತಾರೆ. ಯೇಸುವಿನ ಕುರಿತ ಈ ವಿಷಯಗಳು ಖಂಡಿತವಾಗಿಯೂ ಸತ್ಯ, ಆದರೆ ಆತನು ನಿಜವಾಗಿಯೂ ಯಾರೆಂಬುದನ್ನು ಅವು ವ್ಯಾಖ್ಯಾನಿಸುವುದಿಲ್ಲ. ಯೇಸುಕ್ರಿಸ್ತನು ಒಬ್ಬ ಮಾಂಸಮಯವಾದ ಶರೀರವನ್ನು ಹೊಂದಿರುವ ದೇವರು, ದೇವರು ಒಬ್ಬ ಮನುಷ್ಯನಾದನು ಎಂದು ಬೈಬಲ್ ನಮಗೆ ಹೇಳುತ್ತದೆ (ಜಾನ್ 1:1,14 ಅನ್ನು ನೋಡಿ). ದೇವರು ನಮಗೆ ಬೋಧಿಸುವುದಕ್ಕಾಗಿ, ನಮ್ಮನ್ನು ಗುಣಪಡಿಸುವುದಕ್ಕಾಗಿ, ನಮ್ಮ ತಪ್ಪುಗಳನ್ನು ತಿದ್ದುವುದಕ್ಕಾಗಿ, ನಮ್ಮನ್ನು ಕ್ಷಮಿಸುವುದಕ್ಕಾಗಿ- ಮತ್ತು ನಮಗಾಗಿ ಮರಣ ಹೊಂದುವುದಕ್ಕಾಗಿ ಭೂಮಿಗೆ ಬಂದನು! ಯೇಸು ಕ್ರಿಸ್ತನು ದೇವರು, ಸೃಷ್ಟಿಕರ್ತ, ಅಧೀಶ್ವರನಾದ ಭಗವಂತ. ಈ ಯೇಸುವನ್ನು ನೀವು ಅಂಗೀಕರಿಸಿದ್ದೀರಾ?

ಉದ್ಧಾರಕ ಎಂದರೆ ಯಾರು ಮತ್ತು ನಮಗೆ ಯಾಕೆ ಉದ್ಧಾರಕನ ಅಗತ್ಯವಿದೆ? ನಾವೆಲ್ಲರೂ ಪಾಪವನ್ನು ಮಾಡಿದ್ದೇವೆ, ನಾವೆಲ್ಲರೂ ದುಷ್ಕೃತ್ಯಗಳನ್ನು ಎಸಗಿದ್ದೇವೆ ಎಂಬುದಾಗಿ ಬೈಬಲ್ ನಮಗೆ ಹೇಳುತ್ತದೆ (ರೋಮನ್ನರು 3:10-18). ನಮ್ಮ ಪಾಪದ ಪರಿಣಾಮವಾಗಿ ನಾವು ದೇವರ ಕ್ರೋಧ ಮತ್ತು ಶಿಕ್ಷೆಗೆ ಅರ್ಹರಾಗಿದ್ದೇವೆ. ಅನಂತ ಮತ್ತು ಶಾಶ್ವತವಾದ ದೇವರ ವಿರುದ್ಧ ಎಸಗಿದ ಪಾಪಗಳಿಗಾಗಿ ಪಡೆಯಬೇಕಾದ ಒಂದೇ ಯೋಗ್ಯ ಶಿಕ್ಷೆಯೆಂದರೆ ಅನಂತವಾದ ಶಿಕ್ಷೆ (ರೋಮನ್ನರು 6:23; ಪ್ರಕರಣ 20:11-15). ಇದೇ ಕಾರಣಕ್ಕಾಗಿ ನಮಗೆ ಒಬ್ಬ ಉದ್ಧಾರಕನ ಅಗತ್ಯವಿದೆ!

ಯೇಸು ಕ್ರಿಸ್ತನು ಭೂಮಿಗೆ ಬಂದು ನಮ್ಮ ಸ್ಥಾನದಲ್ಲಿ ಮರಣ ಹೊಂದಿದ್ದಾನೆ. ಮಾಂಸಮಯವಾದ ಶರೀರವನ್ನು ಹೊಂದಿರುವ ದೇವರಾಗಿ ಯೇಸುವಿನ ಮರಣವು ನಮ್ಮ ಪಾಪಗಳನ್ನು ಅನಂತವಾಗಿ ಭರಿಸಿದೆ. (2 ಕೊರಿಂಥಿಯನ್ನರು 5:21). ನಮ್ಮ ಪಾಪಗಳಿಗೆ ದಂಡ ತೆರುವುದಕ್ಕಾಗಿ ಯೇಸುವು ಮರಣ ಹೊಂದಿದನು (ರೋಮನ್ನರು 5:8). ನಮಗೆ ಭರಿಸುವ ಅವಶ್ಯಕತೆ ಬಾರದಂತೆ ಯೇಸುವು ಮೊತ್ತವನ್ನು ಪಾವತಿಸಿದನು.ಮರಣದಿಂದ ಯೇಸುವಿನ ಪುನರುಜ್ಜೀವನವು ನಮ್ಮೆಲ್ಲರ ಪಾಪಗಳಿಗೆ ದಂಡ ತೆರಲು ಅವನ ಮರಣವೊಂದೇ ಸಾಕಾಗಿತ್ತು ಎಂಬುದನ್ನು ರುಜುವಾತುಪಡಿಸುತ್ತದೆ. ಈ ಕಾರಣದಿಂದಾಗಿಯೇ ಯೇಸುವು ಏಕಮಾತ್ರ ಉದ್ಧಾರಕನೆಂದು ಹೇಳಬಹುದು (ಜಾನ್ 14:6; ಕ್ರಿಯೆಗಳು 4:12)!. ನೀವು ನಿಮ್ಮ ಉದ್ಧಾರಕನನ್ನಾಗಿ ಯೇಸುವಲ್ಲಿ ವಿಶ್ವಾಸವಿಡುತ್ತೀರಾ?

ಯೇಸುವು ನಿಮ್ಮ “ವೈಯಕ್ತಿಕ” ಉದ್ಧಾರಕನೇ? ಹಲವಾರು ಜನರು ಕ್ರೈಸ್ತ ಧರ್ಮವನ್ನು ಅನುಸರಿಸುವುದೆಂದರೆ ಇಗರ್ಜಿಗಳಿಗೆ ಹೋಗುವುದು, ಧಾರ್ಮಿಕ ವಿಧಿಗಳನ್ನು ನೆರವೇರಿಸುವುದು, ಕೆಲವು ಪಾಪಗಳನ್ನು ಮಾಡದಿರುವುದು ಎಂದು ಪರಿಗಣಿಸುತ್ತಾರೆ. ಅದು ಕ್ರೈಸ್ತಧರ್ಮವಲ್ಲ. ನಿಜವಾದ ಕ್ರೈಸ್ತಧರ್ಮವೆಂದರೆ ಯೇಸುಕ್ರಿಸ್ತನೊಂದಿಗಿನ ವೈಯಕ್ತಿಕ ಸಂಬಂಧವಾಗಿರುತ್ತದೆ. ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಯೇಸುವನ್ನು ಸ್ವೀಕರಿಸುವುದೆಂದರೆ ನಿಮ್ಮ ಸ್ವಂತ ವೈಯಕ್ತಿಕ ಶ್ರದ್ಧೆ ಮತ್ತು ವಿಶ್ವಾಸವನ್ನು ಅವನಲ್ಲಿಡುವುದು ಎಂದರ್ಥ. ಯಾರೊಬ್ಬರೂ ಇತರರ ಶ್ರದ್ಧೆಯಿಂದ ಕಾಪಾಡಲ್ಪಟ್ಟಿಲ್ಲ. ಯಾರೊಬ್ಬರೂ ಕೆಲವು ನಿರ್ದಿಷ್ಟ ಅಚರಣೆಗಳನ್ನು ಮಾಡುವುದರ ಮೂಲಕ ಕ್ಷಮೆಯನ್ನು ಪಡೆದಿಲ್ಲ. ನೀವು ಉಳಿವಿಗೆ ಇರುವ ಒಂದೇ ಮಾರ್ಗವೆಂದರೆ ವೈಯಕ್ತಿಕವಾಗಿ ಯೇಸುವನ್ನು ನಿಮ್ಮ ಉದ್ಧಾರಕನನ್ನಾಗಿ ಸ್ವೀಕರಿಸುವುದು, ಅವನ ಮರಣ ನಿಮ್ಮ ಪಾಪಗಳಿಗಾಗಿ ಮಾಡಿದ ಪಾವತಿ ಎಂಬುದಾಗಿ ಹಾಗೂ ಅವನ ಪುನರುಜ್ಜೀವನವು ನಿಮಗೆ ನಿತ್ಯಜೀವನದ ಖಾತರಿ ಎಂಬ ವಿಶ್ವಾಸ ಹೊಂದುವುದು (ಜಾನ್ 3:16). ಯೇಸುವು ವೈಯಕ್ತಿಕವಾಗಿ ನಿಮ್ಮ ಉದ್ಧಾರಕನೇ?

ನೀವು ಯೇಸು ಕ್ರಿಸ್ತನನ್ನು ನಿಮ್ಮ ವೈಯಕ್ತಿಕ ಉದ್ಧಾರಕನನ್ನಾಗಿ ಸ್ವೀಕರಿಸಲು ಬಯಸುತ್ತಿದ್ದಲ್ಲಿ, ಈ ಕೆಳಗಿನ ಶಬ್ದಗಳನ್ನು ದೇವರಿಗೆ ಹೇಳಿರಿ. ನೆನಪಿಡಿ, ಈ ಪ್ರಾರ್ಥನೆಯನ್ನು ಅಥವಾ ಬೇರೆ ಯಾವುದೇ ಪ್ರಾರ್ಥನೆಯನ್ನು ಹೇಳುವುದು ನಿಮ್ಮನ್ನು ಕಾಪಾಡುವುದಿಲ್ಲ. ಕ್ರಿಸ್ತನ ಮೇಲಿನ ವಿಶ್ವಾಸ ಮಾತ್ರ ನಿಮ್ಮನ್ನು ಪಾಪದಿಂದ ಕಾಪಾಡಬಲ್ಲದು. ಈ ಪ್ರಾರ್ಥನೆಯು ದೇವರಿಗೆ ಅವನಲ್ಲಿರುವ ನಿಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ರಕ್ಷಣೆಗಾಗಿ ಅವಕಾಶ ಒದಗಿಸುದುದಕ್ಕೆ ಧನ್ಯವಾದ ಸಲ್ಲಿಸಲು ಸುಮ್ಮನೆ ಒಂದು ಮಾರ್ಗ. “ದೇವರೆ, ನಾನು ನಿನ್ನ ವಿರುದ್ಧ ಪಾಪವನ್ನು ಮಾಡಿದ್ದೇನೆ ಮತ್ತು ಶಿಕ್ಷೆಗೆ ಅರ್ಹನಾಗಿದ್ದೇನೆ ಎಂದು ನನಗೆ ತಿಳಿದಿದೆ. ಆದರೆ ಯೇಸು ಕ್ರಿಸ್ತನು ಅವನಲ್ಲಿ ನಂಬಿಕೆಯನ್ನಿಟ್ಟು ನನಗೆ ಕ್ಷಮೆ ದೊರೆಯುವಂತಾಗಲು ನನಗ ಸಲ್ಲಬೇಕಿದ್ದ ಶಿಕ್ಷೆಯನ್ನು ತೆಗೆದುಕೊಂಡಿದ್ದಾನೆ. ನಾನು ನೀವು ಒದಗಿಸಿದ ಕ್ಷಮೆಯ ಕೊಡುಗೆಯನ್ನು ಪಡೆಯುತ್ತೇನೆ ಮತ್ತು ರಕ್ಷಣೆಗಾಗಿ ನಿನ್ನಲ್ಲಿ ನನ್ನ ವಿಶ್ವಾಸವನ್ನು ಇಡುತ್ತೇನೆ. ನಾನು ಯೇಸುವನ್ನು ನನ್ನ ವೈಯಕ್ತಿಕ ಉದ್ಧಾರಕನನ್ನಾಗಿ ಸ್ವೀಕರಿಸುತ್ತೇನೆ! ನಿಮ್ಮ ಅದ್ಭುತ ಕೃಪೆ ಮತ್ತು ಕ್ಷಮೆಗೆ – ನಿತ್ಯಜೀವನದ ಉಡುಗೊರೆಗೆ ನಿಮಗೆ ಧನ್ಯವಾದಗಳು! ಆಮೇನ್!”

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.

ಪ್ರಶ್ನೆ: ರಕ್ಷಣೆಯ ಯೋಜನೆ/ ರಕ್ಷಣೆಯ ಮಾರ್ಗ ಎಂದರೇನು?

ನಿಮಗೆ ಹಸಿವಾಗಿದೆಯೇ? ದೈಹಿಕವಾದ ಹಸಿವೆಯಲ್ಲ, ನೀವು ಜೀವನದಲ್ಲಿ ಹೆಚ್ಚಿನ ಏನನ್ನಾದರೂ ಸಾಧಿಸಬೇಕೆಂಬ ಹಸಿವೆಯನ್ನು ಹೊಂದಿದ್ದೀರಾ? ನಿಮ್ಮೊಳಗೆ ಎಂದೂ ತೃಪ್ತಿಯನ್ನು ಹೊಂದದಂತಿರುವ ಆಳವಾದ ಯಾವುದೋ ಆಕಾಂಕ್ಷೆಯಿದೆಯೇ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸು ಹೀಗೆ ಹೇಳಿದನು, "ನಾನು ಆಧ್ಯಾತ್ಮಿಕ ಆಹಾರವಾಗಿದ್ದೇನೆ. ನನ್ನ ಬಳಿ ಬಂದವರಾರೂ ಹಸಿವೆಯಿಂದ ಹಿಂತಿರುಗುವುದಿಲ್ಲ, ಹಾಗೂ ನನ್ನಲ್ಲಿ ನಂಬಿಕೆಯಿಟ್ಟವರು ಯಾವಾಗಲೂ ಬಾಯಾರಿಕೆಯಿಂದ ಬಳಲುವುದಿಲ್ಲ” (ಜಾನ್ 6:35).

ನೀವು ಗೊಂದಲಕ್ಕೊಳಗಾಗಿದ್ದೀರಾ? ನಿಮಗೆ ಜೀವನದ ಮಾರ್ಗ ಅಥವಾ ಉದ್ದೇಶವನ್ನು ಕಂಡುಕೊಳ್ಳಲು ಆಗುತ್ತಿಲ್ಲವೆಂಬಂತೆ ಅನಿಸುತ್ತಿದೆಯೇ? ಯಾರೋ ಎಲ್ಲಾ ದೀಪಗಳನ್ನು ಆರಿಸಿದ್ದು ನಿಮಗೆ ಸ್ವಿಚ್ ನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೆಂಬಂತೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸುವು ಹೀಗೆಂದು ಘೋಷಿಸಿದನು, “ನಾನು ಜಗತ್ತನ್ನು ಬೆಳಗುವ ಜ್ಯೋತಿಯಾಗಿದ್ದೇನೆ. ನನ್ನನ್ನು ಅನುಸರಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಬದಲಾಗಿ ಅವರು ಜೀವನದ ಜ್ಯೋತಿಯನ್ನು ಹೊಂದುವರು” (ಜಾನ್ 8:12).

ನಿಮಗೆ ಎಂದಾದರೂ ನಿಮ್ಮನ್ನು ಜೀವನದ ಹೊರಕ್ಕೆ ಹಾಕಿ ಬೀಗ ಹಾಕಲಾಗಿದೆ ಎಂದೆನಿಸುತ್ತದೆಯೇ? ನೀವು ಹಲವಾರು ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ್ದರೂ, ಅವುಗಳ ಹಿಂದೆ ಕೇವಲ ಬರಿದಾದುದು ಮತ್ತು ನಿರರ್ಥಕವಾದುದನ್ನು ಕಂಡುಕೊಂಡಿದ್ದೀರಾ? ನೀವು ಸಾರ್ಥಕತೆಯ ಜೀವನಕ್ಕೆ ಪ್ರವೇಶವನ್ನು ಹುಡುಕುತ್ತಿರುವಿರಾ? ಹಾಗಿದ್ದಲ್ಲಿ, ಯೇಸುವೇ ಮಾರ್ಗವಾಗಿದ್ದಾನೆ! ಯೇಸುವು ಹೀಗೆಂದು ಘೋಷಿಸಿದನು, “ನಾನು ದ್ವಾರವಾಗಿದ್ದೇನೆ; ನನ್ನ ಮೂಲಕ ಪ್ರವೇಶಿಸುವವರು ರಕ್ಷಣೆ ಪಡೆಯುತ್ತಾರೆ. ಅವನು ಒಳಗೆ ಬರುತ್ತಾನೆ ಮತ್ತು ಹೊರಗೆ ಹೋಗುತ್ತಾನೆ, ಮತ್ತು ಮೇವನ್ನು ಪಡೆಯುತ್ತಾನೆ." (ಜಾನ್ 10:9).

ಇತರರು ನಿಮ್ಮನ್ನು ಯಾವಾಗಲೂ ನಿರಾಶೆಗೊಳಪಡಿಸುತ್ತಾರೆಯೇ? ನಿಮ್ಮ ಸಂಬಂಧಗಳು ಗಾಢವಾಗಿರದೆ ಬರಿದಾಗಿವೆಯೇ? ಎಲ್ಲರೂ ನಿಮ್ಮಿಂದ ಪ್ರಯೋಜನ ಪಡೆಯಲು ಪ್ರಯತ್ನಿಸುವಂತೆ ಭಾಸವಾಗುತ್ತದೆಯೇ? ಹಾಗಿದ್ದಲ್ಲಿ, ಯೇಸುವೇ ದಾರಿ! ಯೇಸು ಹೇಳಿದ್ದಾನೆ, “ನಾನು ಒಬ್ಬ ಒಳ್ಳೆಯ ಕುರುಬ. ಒಬ್ಬ ಒಳ್ಳೆಯ ಕುರುಬನು ತನ್ನ ಜೀವನವನ್ನು ಕುರಿಗಾಗಿ ಅರ್ಪಿಸುತ್ತಾನೆ… ನಾನು ಒಬ್ಬ ಒಳ್ಳೆಯ ಕುರುಬ; ನಾನು ನನ್ನ ಕುರಿಯನ್ನು ತಿಳಿದಿದ್ದೇನ ಮತ್ತು ನನ್ನ ಕುರಿ ನನ್ನನ್ನು ತಿಳಿದಿದೆ”(ಜಾನ್ 10:11, 14).

ಈ ಜೀವನದ ನಂತರ ಏನಾಗುವುದೆಂಬ ಕೌತುಕ ನಿಮಗಿದೆಯೇ? ನೀವು ಹಾಳಾದ ಅಥವಾ ತುಕ್ಕುಹಿಡಿದ ವಸ್ತುಗಳಿಗೋಸ್ಕರ ಬದುಕುವ ಈ ಬದುಕಿನಿಂದ ದಣಿದಿದ್ದೀರಾ? ಕೆಲವೊಮ್ಮೆ ನಿಮಗೆ ಈ ಜೀವನದಲ್ಲಿ ಏನಾದರೂ ಅರ್ಥವಿದೆಯೇ ಎಂದು ಅನುಮಾನ ಉಂಟಾಗುತ್ತದೆಯೇ? ನೀವು ನಿಮ್ಮ ಜೇವನದ ನಂತರವೂ ಬದುಕಬಯಸುತ್ತೀರಾ? ಹಾಗಿದ್ದಲ್ಲಿ, ಯೇಸುವೇ ದಾರಿ! ಯೇಸುವು ಘೋಷಿಸಿದ್ದಾನೆ, “ನಾನೇ ಪುನರುಜ್ಜೀವನ ಮತ್ತು ಜೀವನ. ಯಾರು ನನ್ನನ್ನು ನಂಬುತ್ತಾರೋ ಅವರು ಮರಣಿಸಿದರೂ ಬದುಕುತ್ತಾರೆ; ಮತ್ತು ಯಾರು ನನ್ನನ್ನು ನಂಬುತ್ತಾರೆ ಮತ್ತು ಬದುಕುತ್ತಾರೆ, ಅವರು ಎಂದೂ ಮರಣಿಸುವುದಿಲ್ಲ” (ಜಾನ್ 11:25-26).

ಯಾವುದು ಮಾರ್ಗ? ಯಾವುದು ಸತ್ಯ? ಯಾವುದು ಜೀವನ? ಯೇಸುವು ಉತ್ತರಿಸಿದನು, “ನಾನೇ ಮಾರ್ಗ, ಮತ್ತು ಸತ್ಯ, ಮತ್ತು ಜೀವನ. ನನ್ನ ಮೂಲಕವಲ್ಲದೇ ಯಾರೂ ದೇವರಲ್ಲಿಗೆ ಬರಲು ಸಾಧ್ಯವಿಲ್ಲ” (ಜಾನ್ 14:6).

ನಿಮಗೆ ಅನುಭವವಾಗುವ ಹಸಿವು ಆಧ್ಯಾತ್ಮದ ಹಸಿವು, ಮತ್ತು ಅದು ಯೇಸುವಿನಿಂದ ಮತ್ರ ಭರಿಸಲಾಗುವಂಥದ್ದು. ಯೇಸು ಒಬ್ಬ ಮಾತ್ರ ಕತ್ತಲೆಯನ್ನು ಹೋಗಲಾಡಿಸಬಲ್ಲನು. ಯೇಸುವು ನೀವು ಎದುರು ನೋಡುತ್ತಿರುವ ಸ್ನೇಹಿತ ಮತ್ತು ಉದ್ಧಾರಕ. ಯೇಸುವು ಈಗಿನ ಮತ್ತು ನಂತರದ ಜೀವನ. ಯೇಸುವು ರಕ್ಷಣೆಗೆ ಮಾರ್ಗವಾಗಿದ್ದಾನೆ!

ನೀವು ಹಸಿವನ್ನು ಅನುಭವಿಸುವುದಕ್ಕೆ, ನೀವು ಕತ್ತಲೆಯಲ್ಲಿ ಕಳೆದುಹೋದಂತೆ ಭಾಸವಾಗಲು, ನೀವು ಜೀವನದಲ್ಲಿ ಅರ್ಥವನ್ನು ಹುಡುಕಲು ಸಾಧ್ಯವಾಗದಿರಲು ಕಾರಣ, ನೀವು ದೇವರಿಂದ ಬೇರ್ಪಟ್ಟಿದ್ದೀರಿ. ಬೈಬಲ್ ನಮಗೆ ಹೇಳುವುದೇನೆಂದರೆ ನಾವೆಲ್ಲಾ ಪಾಪ ಮಾಡಿದ್ದೇವೆ, ಮತ್ತು ಅದರಿಂದಾಗಿ ದೇವರಿಂದ ಬೇರ್ಪಡಿಸಲ್ಪಟ್ಟಿದ್ದೇವೆ.(ಇಕ್ಲೀಸಿಯಾಸ್ಟೀಸ್ 7:20; ರೋಮನ್ಸ್ 3:23). ನಿಮ್ಮ ಹೃದಯದಲ್ಲಿ ನೀವು ಅನುಭವಿಸುವ ಖಾಲಿತನವು ದೇವರು ನಿಮ್ಮ ಜೀವನದಲ್ಲಿ ಕಾಣೆಯಾಗಿರುವುದನ್ನು ತೋರಿಸುತ್ತದೆ. ನಾವು ದೇವರೊಂದಿಗೆ ಸಂಬಂಧವನ್ನು ಹೊಂದಲು ಸೃಷ್ಟಿಸಲ್ಪಟ್ಟಿದ್ದೇವೆ. ನಮ್ಮ ಪಾಪದಿಂದಾಗಿ ನಾವು ಆ ಸಂಬಂಧದಿಂದ ಬೇರ್ಪಟ್ಟಿದ್ದೇವೆ. ಇನ್ನೂ ಕೆಟ್ಟ ವಿಷಯವೆಂದರೆ ನಮ್ಮ ಪಾಪವು ಎಂದೆಂದಿಗೂ ಈಗಿನ ಮತ್ತು ಮುಂದಿನ ಜೀವನದಲ್ಲಿ ದೇವರಿಂದ ದೂರವಾಗುವುದಕ್ಕೆ ಕಾರಣವಾಗುತ್ತದೆ (ರೋಮನ್ಸ್ 6:23; ಜಾನ್ 3:36).

ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು? ಯೇಸುವು ಮಾರ್ಗವಾಗಿದ್ದಾನೆ! ಯೇಸುವು ನಮ್ಮ ಪಾಪವನ್ನು ಅವನ ಮೇಲೆ ತೆಗೆದುಕೊಂಡಿದ್ದಾನೆ (2 ಕರಿಂತಿಯನ್ಸ್ 5:21). ನಮ್ಮ ಪರವಾಗಿ ಮರಣಿಸಿದ್ದಾನೆ (ರೋಮನ್ಸ್ 5:8), ಯೇಸುವು ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತಾನು ತೆಗೆದುಕೊಂಡು. ಮೂರು ದಿನಗಳ ನಂತರ, ಯೇಸುವು ಪಾಪ ಮತ್ತುಮರಣದ ಜಯವನ್ನು ಸಾಧಿಸುತ್ತ ಮರಣದಿಂದ ಎದ್ದು ಬಂದನು (ರೋಮನ್ಸ್ 6:4-5). ಅವನು ಇದನ್ನು ಯಾಕೆ ಮಾಡಿದನು? ಯೇಸುವು ಈ ಪ್ರಶ್ನೆಗೆ ತಾನೇ ಉತ್ತರಿಸಿದನು, “ಮಹತ್ತರವಾದ ಪ್ರೀತಿಯು ಇದನ್ನು ಬಿಟ್ಟು ಬೇರೆ ಯಾರನ್ನೂ ಹೊಂದಿಲ್ಲ,ಅದೇನೆಂದರೆ ಅವನು ತನ್ನ ಜೀವನವನ್ನು ತನ್ನ ಸ್ನೇಹಿತರಿಗಾಗಿ ಮುಡಿಪಾಗಿಟ್ಟನು”(ಜಾನ್ 15:13). ಯೇಸುವು ಮರಣಿಸಿದನು, ಏಕೆಂದರೆ ಅದರಿಂದ ನಾವು ಜೀವಿಸಬಹುದಾಗಿದೆ. ನಾವು ಯೇಸುವಿನ ಮರಣವು ನಮ್ಮ ಪಾಪಗಳನ್ನು ಭರಿಸಿದೆಯೆಂದು ಭಾವಿಸಿ, ಯೇಸುವಿನಲ್ಲಿ ನಂಬಿಕೆಯನ್ನು ಇರಿಸಿದ್ದೇ ಆದಲ್ಲಿ, ನಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ತೊಳೆಯಲ್ಪಡುತ್ತವೆ. ನಂತರವೇ ನಮ್ಮ ಆಧ್ಯಾತ್ಮಿಕ ಹಸಿವು ನೀಗಿಸಲ್ಪಡುತ್ತದೆ. ಬೆಳಕು ಹರಿಯುತ್ತದೆ. ಪರಿಪೂರ್ಣ ಜೀವನಕ್ಕೆ ನಮಗೆ ಪ್ರವೇಶ ಸಿಗುತ್ತದೆ. ನಾವು ನಮ್ಮ ನಿಜವಾದ ಒಳ್ಳೆಯ ಸ್ನೇಹಿತನನ್ನು ಮತ್ತು ಒಳ್ಳೆಯ ಉದ್ಧಾರಕನನ್ನು ತಿಳಿಯುತ್ತೇವೆ. ನಾವು ಮರಣದ ನಂತರವೂ ಬದುಕನ್ನು ಹೊಂದಿರುವುದನ್ನು ನಾವು ತಿಳಿಯುತ್ತೇವೆ –ಸ್ವರ್ಗದಲ್ಲಿ ಯೇಸುವಿನೊಂದಿಗೆ ಒಂದು ಪುನರುಜ್ಜೀವಿತವಾದ ನಿತ್ಯಜೀವನ !

"ದೇವರು ಈ ಜಗತ್ತನ್ನು ಎಷ್ಟು ಪ್ರೀತಿಸಿದನೆಂದರೆ, ಯಾರು ಅವನನ್ನು ನಂಬುತ್ತಾರೋ ಅವರು ನಾಶ ಹೊಂದದೆ ನಿತ್ಯಜೀವನವನ್ನು ಹೊಂದುವಂತಾಗಲು ಅವನ ಏಕೈಕ ಪುತ್ರನನ್ನು ನಮಗೆ ಕೊಟ್ಟಿದ್ದಾನೆ," (ಜಾನ್ 3:16).

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.

ಪ್ರಶ್ನೆ: ಕ್ರಿಶ್ಚಿಯನ್ ಎಂದರೆ ಏನು?

ವೆಬ್ ಸ್ಟರ್ಸ್ ಪದಕೋಶ ಕ್ರಿಶ್ಚಿಯನ್ ನ್ನು ಹೀಗೆಂದು ವರ್ಣಿಸುತ್ತದೆ “ಕ್ರೈಸ್ತಧರ್ಮೀಯನಾಗಿ ಯೇಸುವಿನಲ್ಲಿ ನಂಬಿಕೆಯನ್ನು ಅಥವಾ ಯೇಸುವಿನ ಬೋಧನೆಯ ಆಧಾರದ ಮೇಲಿನ ಧರ್ಮವನ್ನು ಅನುಸರಿಸುವ ಒಬ್ಬ ವ್ಯಕ್ತಿ”. ಕ್ರೈಸ್ತಧರ್ಮೀಯನೆಂದರೆ ಯಾರು ಎಂದು ಅರ್ಥ ಮಾಡಿಕೊಳ್ಳುವಲ್ಲಿ ಇದು ಒಳ್ಳೆಯ ಪ್ರಾರಂಭದ ಅಂಶವಾದರೂ, ಇತರ ಲೌಕಿಕ ವ್ಯಾಖ್ಯಾನಗಳಂತೆ , ಬೈಬಲ್ ನ ಸತ್ಯದ ಪ್ರಕಾರ ಕ್ರೈಸ್ತಧರ್ಮೀಯನೆಂದರೆ ಯಾರು ಎಂದು ಸರಿಯಾಗಿ ಸಂವಹಿಸುವುದರಲ್ಲಿ ಒಂದು ರೀತಿ ಹಿಂದೆ ಬೀಳುತ್ತದೆ. ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತಧರ್ಮೀಯ ಎಂಬ ಪದವನ್ನು ಮೂರು ಬಾರಿ ಬಳಸಲಾಗಿದೆ. (ಕಾಯ್ದೆಗಳು 11:26; ಕಾಯ್ದೆಗಳು 26:28; 1 ಪೀಟರ್ 4:16; ಯ್ದೆಗಳು 11:26).

ಯೇಸು ಕ್ರಿಸ್ತನ ಅನುಯಾಯಿಗಳನ್ನು ಎಂಟಿಯೊಕ್(ಕಾಯ್ದೆಗಳು 11:26) ನಲ್ಲಿ ಮೊದಲು “ಕ್ರೈಸ್ತಧರ್ಮೀಯರು” ಎಂದು ಕರೆಯಲಾಯಿತು. ಏಕೆಂದರೆ ಅವರ ನಡತೆ, ಚಟುವಟಿಕೆ, ಮತ್ತು ಮಾತುಗಳು ಕ್ರಿಸ್ತನಂತೆ ಇದ್ದವು. ಇದು ಮೂಲತಃ ಎಂಟಿಯೊಕ್ ನಲ್ಲಿ ರಕ್ಷಿಸಲ್ಪಡದ ಜನರಿಂದ ಕ್ರೈಸ್ತಧರ್ಮೀಯರನ್ನು ತಮಾಷೆಗೀಡುಮಾಡಲು ಒಂದು ರೀತಿಯ ತುಚ್ಛ ಅಡ್ಡ ಹೆಸರಾಗಿ ಉಪಯೋಗಿಸಲ್ಪಟ್ಟಿತು. ನಿಜಾರ್ಥದಲ್ಲಿ ಇದರ ಅರ್ಥ “ಕ್ರಿಸ್ತನ ಪಂಗಡಕ್ಕೆ ಸೇರಿದವರು” ಅಥವಾ “ಕ್ರಿಸ್ತನಿಗೆ ನಿಷ್ಠನಾಗಿರುವವನು ಅಥವಾ ಅವನ ಅನುಯಾಯಿ”, ಇದು ವೆಬ್ ಸ್ಟರ್ಸ್ ಪದಕೋಶದ ವ್ಯಾಖ್ಯಾನವನ್ನು ಬಹಳವಾಗಿ ಹೋಲುತ್ತದೆ.

ದುರದೃಷ್ಟವಶಾತ್ ಕಾಲಕ್ರಮೇಣ, “ಕ್ರೈಸ್ತಧರ್ಮೀಯ” ಪದವು ದೊಡ್ಡ ಪ್ರಮಾಣದಲ್ಲಿ ಅರ್ಥವನ್ನು ಕಳೆದುಕೊಂಡಿದೆ ಮತ್ತು ಯೇಸು ಕ್ರಿಸ್ತನ ನಿಜವಾದ ಅನುಯಾಯಿಯನ್ನು ಬಿಟ್ಟು ಹೆಚ್ಚಾಗಿ ಧರ್ಮನಿಷ್ಠರು ಅಥವಾ ಉನ್ನತ ನೈತಿಕ ಮೌಲ್ಯವನ್ನು ಹೊಂದಿರುವವರಿಗೆ ಬಳಸಲಾಗಿದೆ. ಯೇಸು ಕ್ರಿಸ್ತನನ್ನು ನಂಬದ ಬಹಳಷ್ಟು ಜನರು ತಮ್ಮನ್ನು ತಾವು ಕ್ರೈಸ್ತಧರ್ಮೀಯರು ಎಂದು ಪರಿಗಣಿಸುತ್ತಾರೆ ಏಕೆಂದರೆ ಅವರು ಇಗರ್ಜಿಗೆ ಹೋಗುತ್ತಾರೆ ಅಥವಾ ಅವರು “ಕ್ರೈಸ್ತಧರ್ಮೀಯ” ದೇಶದಲ್ಲಿ ಜೀವಿಸುತ್ತಾರೆ. ಆದರೆ ಇಗರ್ಜಿಗೆ ಹೋಗುವುದರಿಂದ, ನಿಮಗಿಂತ ಕಡಿಮೆ ಅದೃಷ್ಟಶಾಲಿಗಳ ಸೇವೆ ಮಾಡುವುದರಿಂದ, ಅಥವಾ ಒಳ್ಳೆಯ ವ್ಯಕ್ತಿಯಾಗಿರುವುದರಿಂದ ನೀವು ಕ್ರಿಶ್ಚಿಯನ್ ಅಗುವುದಿಲ್ಲ. ಒಬ್ಬ ಸಂಚಾರೀ ಪ್ರಚಾರಕ ಒಮ್ಮೆ ಹೀಗೆ ಹೇಳಿದ್ದಾನೆ, “ಹೇಗೆ ಒಬ್ಬ ಗ್ಯಾರೇಜಿಗೆ ಹೋಗುವುದರಿಂದ ಮೋಟಾರು ಗಾಡಿಯಾಗಲು ಸಾಧ್ಯವಿಲ್ಲವೋ ಹಾಗೇ ಇಗರ್ಜಿಗೆ ಹೋಗುವುದರಿಂದ ಕ್ರೈಸ್ತಧರ್ಮೀಯ ಆಗಲು ಸಾಧ್ಯವಿಲ್ಲ.” ಇಗರ್ಜಿಯ ಸದಸ್ಯನಾಗುವುದು, ಸೇವೆಗೆ ನಿಯಮಿತವಾಗಿ ಹಾಜರಾಗುವುದು, ಮತ್ತು ಇಗರ್ಜಿಯ ಕೆಲಸವನ್ನು ಮಾಡುವುದು ನಿಮ್ಮನ್ನು ಕ್ರಿಶ್ಚಿಯನ್ ಆಗಿ ಮಾಡಲಾರದು.

ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮನ್ನು ದೇವರು ಸ್ವೀಕರಿಸುವಂತೆ ಮಾಡಲಾರವು ಎಂದು ಬೈಬಲ್ ನಮಗೆ ಕಲಿಸುತ್ತದೆ. ಟಿಟಸ್ 3:5 ನಮಗೆ ಹೇಳುತ್ತದೆ “ಅವನು ನಮ್ಮನ್ನು ರಕ್ಷಿಸಿದ್ದಾನೆ, ಏಕೆಂದರೆ ಅವನ ಕರುಣೆಯಿಂದಾಗಿ,ಧಾರ್ಮಿಕ ಕೆಲಸಗಳನ್ನು ಮಾಡಿದ್ದಕ್ಕಲ್ಲ. ಅವನು ನಮ್ಮನ್ನು ಪುನರ್ಜನ್ಮದಿಂದ ತೊಳೆದು ರಕ್ಷಿಸಿದ್ದಾನೆ ಮತ್ತು ಪವಿತ್ರವಾದ ಆತ್ಮದಿಂದ ನವೀಕರಿಸಿದ್ದಾನೆ.” ಆದ್ದರಿಂದ ಕ್ರಿಶ್ಚಿಯನ್ ಎಂದರೆ ದೇವರಿಂದ ಪುನರ್ಜನ್ಮವನ್ನು ಪಡೆದವನು(ಜಾನ್ 3:3; ಜಾನ್ 3:7; 1 ಪೀಟರ್ 1:23) ಮತ್ತು ಯೇಸು ಕ್ರಿಸ್ತನ ಮೇಲೆ ಅವರ ಶ್ರದ್ಧೆ ಮತ್ತು ವಿಶ್ವಾಸವನ್ನು ಇಟ್ಟವರು. ಎಫಿಶಿಯನ್ಸ್ 2:8 ನಮಗೆ ಹೀಗೆ ಹೇಳುತ್ತದೆ “…“…ನೀವು ಕೃಪೆಯ,ಶ್ರದ್ಧೆಯ ಮೂಲಕ ಕಾಪಾಡಲ್ಪಟ್ಟಿದ್ದೀರಿ - ಮತ್ತು ಇದು ನಿಮ್ಮಿಂದಾಗಿ ಅಲ್ಲ, ಇದು ದೇವರ ಉಡುಗೊರೆ -.” ಯಾರು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡುತ್ತಾರೋ ಮತ್ತು ಯೇಸು ಕ್ರಿಸ್ತನಲ್ಲಿ ಮಾತ್ರ ಶ್ರದ್ಧೆ ಮತ್ತು ವಿಶ್ವಾಸವನ್ನಿಡುತ್ತಾರೋ ಅವರೇ ನಿಜವಾದ ಕ್ರೈಸ್ತಧರ್ಮೀಯರು. ಅವರ ವಿಶ್ವಾಸ ಒಂದು ಧರ್ಮವನ್ನು ಅಥವಾ ನೀತಿ ಸಂಹಿತೆಗಳ ಒಂದು ಗುಂಪನ್ನು ಅಥವಾ ಮಾಡಬೇಕಾದ್ದು ಅಥವಾ ಮಾಡಬಾರದ್ದು ಎಂಬುವುಗಳ ಪಟ್ಟಿಯನ್ನು ಅನುಸರಿಸುವುದರಲ್ಲಾಗಲೀ ಅವರ ವಿಶ್ವಾಸವಿಲ್ಲ.

ಯೇಸು ಕ್ರಿಸ್ತನೆಂಬ ವ್ಯಕ್ತಿಯಲ್ಲಿ ಮತ್ತು ಅವನು ಪಾಪಗಳನ್ನು ಭರಿಸಲು ಶಿಲುಬೆಯ ಮೇಲೆ ಮರಣ ಹೊಂದಿದ ಮತ್ತು ಅವನಲ್ಲಿ ನಂಬಿಕೆಯನ್ನಿರಿಸಿರುವ ಎಲ್ಲರಿಗೂ ನಿತ್ಯಜೀವನವನ್ನು ನೀಡಲು ಹಾಗು ಮರಣದ ಮೇಲೆ ವಿಜಯವನ್ನು ಗಳಿಸಲು ಮೂರನೆಯ ದಿನ ಮತ್ತೆ ಮೇಲೆದ್ದ ಎಂಬ ಸತ್ಯದಲ್ಲಿ ಅವನ ಅಥವಾ ಅವಳ ಶ್ರದ್ಧೆ ಮತ್ತು ವಿಶ್ವಾಸವನ್ನಿರಿಸಿರುವ ವ್ಯಕ್ತಿಯೇ ನಿಜವಾದ ಕ್ರೈಸ್ತಧರ್ಮೀಯ. ಜಾನ್ 1:12 ನಮಗೆ ಹೇಳುತ್ತದೆ: “ಅವನನ್ನು ಸ್ವೀಕರಿಸಿದ ಎಲ್ಲರಿಗೆ, ಅವನ ಹೆಸರಿನಲ್ಲಿ ನಂಬಿಕೆಯಿರುವವರಿಗೆ ಅವನು ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟನು”. ಇಬ್ಬ ನಿಜವಾದ ಕ್ರೈಸ್ತಧರ್ಮೀಯ ನಿಗಕ್ಕೂ ದೇವರ ಮಗು, ದೇವರ ನಿಜವಾದ ಕುಟುಂಬದ ಒಂದು ಭಾಗ ಮತ್ತು ಕ್ರೈಸ್ತನಲ್ಲಿ ಹೊಸಜೀವನ ಕಂಡವರು. ಇತರರಿಗಾಗಿ ಪ್ರೀತಿ ಮತ್ತು ದೇವರ ವಚನದೆಡೆ ವಿಧೇಯತೆ ಒಬ್ಬ ನಿಜವಾದ ಕ್ರೈಸ್ತಧರ್ಮೀಯನ ಗುರುತು.(1 ಜಾನ್ 2:4; 1 ಜಾನ್ 2:10).

ನೀವು ಇಲ್ಲಿ ಏನನ್ನು ಓದಿದ್ದೀರಿ, ಅದರಿಂದಾಗಿ ನೀವು ಯೇಸು ಕ್ರಿಸ್ತನಿಗೋಸ್ಕರ ನಿರ್ಧಾರವನ್ನು ಮಾಡಿದ್ದೀರಾ? ಹಾಗಿದ್ದರೆ, ದಯವಿಟ್ಟು “ನಾನು ಇಂದು ಯೇಸು ಕ್ರಿಸ್ತನನ್ನು ಅಂಗೀಕರಿಸಿದ್ದೇನೆ” ಎಂಬ ಕೆಳಗಿನ ಬಟನ್ ಒತ್ತಿರಿ.

ನಾನು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇನಷ್ಟೆ…ಮುಂದೇನು?

ಅಭಿನಂದನೆಗಳು! ನೀವು ಜೀವನವನ್ನು ಬದಲಾಯಿಸುವ ನಿರ್ಧಾರವನ್ನು ಕೈಗೊಂಡಿದ್ದೀರಿ! ಪ್ರಾಯಶಃ ನೀವು ಕೇಳುತ್ತಿದ್ದೀರಿ, ”ಮುಂದೇನು? ನಾನು ದೇವರೊಂದಿಗಿನ ಪಯಣವನ್ನು ಹೇಗೆ ಪ್ರಾರಂಭಿಸುವುದು? ”ಕೆಳಗೆ ಉಲ್ಲೇಖಿಸಿರುವ ಐದು ಹಂತಗಳು ನಿಮಗೆ ಬೈಬಲ್ ಇಂದ ಮಾರ್ಗದರ್ಶನವನ್ನು ನೀಡುತ್ತವೆ. ನಿಮ್ಮ ಪಯಣದಲ್ಲಿ ನಿಮಗೆ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಅನ್ನು ಸಂಪರ್ಕಿಸಿ.

1. ನೀವು ಮೋಕ್ಷಪ್ರಾಪ್ತಿಯನ್ನು ಅರ್ಥಮಾಡಿಕೊಂಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

1 ಜಾನ್ 5:13 ನಮಗೆ ಹೇಳುತ್ತಾರೆ, “ನಾನು ಇವುಗಳನ್ನು ಯಾರು ದೇವರ ಪುತ್ರನನ್ನು ನಂಬುತ್ತಾರೋ ಅವರಿಗೋಸ್ಕರ ಬರೆಯುತ್ತಿದ್ದೇನೆ, ಇದರಿಂದ ನಿಮಗೆ ನಿತ್ಯ ಜೀವನ ಇರುವುದನ್ನು ನೀವು ತಿಳಿಯಬಹುದು.” ನಾವು ರಕ್ಷಣೆಯನ್ನು ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ನಾವು ರಕ್ಷಿಸಲ್ಪಟ್ಟಿದ್ದೇವೆ ಎಂಬ ಅತ್ಮವಿಶ್ವಾಸವನ್ನು ಹೊಂದಿರಬೇಕೆಂದು ದೇವರು ಬಯಸುತ್ತಾನೆ. ಸಂಕ್ಷೇಪವಾಗಿ, ರಕ್ಷಣೆಯ ಪ್ರಧಾನ ಅಂಶಗಳನ್ನು ನೋಡೋಣ:

(a) ನಾವೆಲ್ಲಾ ಪಾಪಕೃತ್ಯವನ್ನು ಮಾಡಿದ್ದೇವೆ. ನಾವೆಲ್ಲಾ ದೇವರಿಗೆ ಅಪ್ರಿಯವಾದ ಕಾರ್ಯವನ್ನು ಮಾಡಿದ್ದೇವೆ (ರೋಮನ್ಸ್ 3:23).

(b) ನಾವು ಮಾಡಿದ ಪಾಪಕ್ಕಾಗಿ, ನಾವು ಎಂದೆಂದಿಗೂ ದೇವರಿಂದ ಬೇರ್ಪಡುವ ಶಿಕ್ಷೆಗೆ ಅರ್ಹರಾಗಿದ್ದೇವೆ (ರೋಮನ್ಸ್ 6:23).

(c) ನಾವು ಮಾಡಿದ ಪಾಪದ ದಂಡ ತೆರುವ ಸಲುವಾಗಿ ಯೇಸುವು ಶಿಲುಬೆಗೇರಿ ಮರಣ ಹೊಂದಿದನು(ರೋಮನ್ಸ್ 5:8; 2 ಕರಿಂತಿಯನ್ಸ್ 5:21). ನಮಗೆ ಸಲ್ಲಬೇಕಾದ ಶಿಕ್ಷೆಯನ್ನು ತಾನು ಪಡೆದು, ಯೇಸುವು ನಮ್ಮ ಪರವಾಗಿ ಮರಣ ಹೊಂದಿದನು. ಅವನ ಪುನರುತ್ಥಾನವು ನಮ್ಮ ಪಾಪವನ್ನು ಭರಿಸಲು ಯೇಸುವಿನ ಮರಣವೇ ಸಾಕಾಗಿತ್ತು ಎಂಬುದನ್ನು ಸಮರ್ಥಿಸುತ್ತದೆ.

(d) (ಡಿ) ಯಾರು ಯೇಸುವಿನಲ್ಲಿ ನಂಬಿಕೆಯನ್ನಿಡುತ್ತಾರೋ ಅವರಿಗೆಲ್ಲಾ ದೇವರು ಕ್ಷಮೆ ಮತ್ತು ರಕ್ಷಣೆಯನ್ನು ಅನುಗ್ರಹಿಸುತ್ತಾನೆ –ನಮ್ಮ ಪಾಪಗಳ ದಂಡವನ್ನು ಅವನ ಮರಣವೇ ಭರಿಸುತ್ತದೆ ಎಂದು ನಂಬುತ್ತಾ(ಜಾನ್ 3:16; ರೋಮನ್ಸ್ 5:1; ರೋಮನ್ಸ್ 8:1).

ಇದೇ ಮೋಕ್ಷದ ಸಂದೇಶ! ನೀವು ಯೇಸು ಕ್ರಿಸ್ತನು ನಿಮ್ಮ ಉದ್ಧಾರಕನೆಂದು ನಂಬಿಕೆ ಹೊಂದಿದ್ದಲ್ಲಿ ನೀವು ರಕ್ಷಿಸಲ್ಪಡುತ್ತೀರಿ! ನಿಮ್ಮ ಎಲ್ಲಾ ಪಾಪಗಳೂ ವಿಮೋಚಿಸಲ್ಪಡುತ್ತವೆ, ಹಾಗೂ ದೇವರು ನಿಮ್ಮನ್ನು ಬಿಡುವುದಿಲ್ಲ ಅಥವಾ ತ್ಯಜಿಸುವುದಿಲ್ಲ ಎಂಬ ಭರವಸೆ ನೀಡುತ್ತಾನೆ (ರೋಮನ್ಸ್ 8:38-39; ಮ್ಯಾಥ್ಯೂ 28:20). ನೆನಪಿಡಿ, ನಿಮ್ಮ ರಕ್ಷಣೆಯು ಯೇಸು ಕ್ರಿಸ್ತನಲ್ಲಿ ಭದ್ರವಾಗಿರುತ್ತದೆ(ಜಾನ್ 10:28-29). ನೀವು ಕೇವಲ ಯೇಸು ಕ್ರಿಸ್ತನು ನಿಮ್ಮ ಉದ್ಧಾರಕನೆಂದು ನಂಬಿಕೆ ಹೊಂದಿದ್ದಲ್ಲಿ ನೀವು ಸ್ವರ್ಗದಲ್ಲಿ ನಿತ್ಯಜೀವನವನ್ನು ದೇವರೊಂದಿಗೆ ಕಳೆಯುತ್ತೀರಿ ಎಂಬ ಆತ್ಮವಿಶ್ವಾಸವನ್ನು ಹೊಂದಬಹುದು!

2. ಬೈಬಲ್ ಅನ್ನು ಚೆನ್ನಾಗಿ ಬೋಧಿಸುವ ಚರ್ಚ್ ನ್ನು ಹುಡುಕಿಕೊಳ್ಳಿ.

ಇಗರ್ಜಿಯನ್ನು ಬರೇ ಕಟ್ಟಡವೆಂದು ಭಾವಿಸಬೇಡಿ. ಇಗರ್ಜಿ ಎಂಬುದು ಜನರ ಸಮೂಹ. ಯೇಸುಕ್ರಿಸ್ತನನ್ನು ನಂಬುವವರು ಒಬ್ಬರಿಗೊಬ್ಬರು ಸೌಹಾರ್ದದಿಂದ ವರ್ತಿಸುವರು ಎಂಬುದು ಬಹಳ ಮುಖ್ಯ. ಅದು ಇಗರ್ಜಿಯ ಮೂಲಭೂತ ಧ್ಯೇಯಗಳಲ್ಲೊಂದು. ಈಗ ನೀವು ಯೇಸು ಕ್ರಿಸ್ತನ ಮೇಲೆ ನಂಬಿಕೆಯನ್ನು ಹೊಂದಿದ್ದೀರಿ,ನಾವು ನಿಮಗೆ ನಿಮ್ಮ ಪ್ರದೇಶದಲ್ಲಿರುವ ಬೈಬಲ್ ನ್ನು ನಂಬುವ ಇಗರ್ಜಿಯನ್ನು ಹುಡುಕಲು ಮತ್ತು ಪಾದ್ರಿಯೊಂದಿಗೆ ಮತನಾಡಲು ಪ್ರೋತ್ಸಾಹಿಸುತ್ತೇವೆ. ಯೇಸು ಕ್ರಿಸ್ತನ ಬಗ್ಗೆ ನಿಮಗಿರುವ ಹೊಸ ನಂಬಿಕೆಯ ಬಗ್ಗೆ ಅವರಿಗೂ ತಿಳಿಯಲಿ.

ಇಗರ್ಜಿಯ ಎರಡನೇ ಉದ್ದೇಶ ಬೈಬಲ್ ನ್ನು ಬೋಧಿಸುವುದು. ದೇವರ ಸೂಚನೆಗಳನ್ನು ಹೇಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ಕಲಿಯಬಹುದು. ಬೈಬಲ್ ನ್ನು ಅರ್ಥಮಾಡಿಕೊಳ್ಳುವುದೇ ಯಶಸ್ವೀ ಹಾಗೂ ಪ್ರಭಾವೀ ಕ್ರೈಸ್ತಧರ್ಮೀಯ ಜೀವನವನ್ನು ಹೋಂದುವ ಸಾಧನ.. 2 ಟಿಮಥಿ 3:16-17 ಹೇಳುತ್ತದೆ, “ಎಲ್ಲಾ ಬೈಬಲ್ ನ ಸೂಕ್ತಿಗಳೂ ದೇವರಿಂದ ಸೂಚಿಸಲ್ಪಟ್ಟವುಗಳು ಮತ್ತು ಅವು ಬೋಧಿಸಲು, ಗದರಿಸಲು, ಸರಿಪಡಿಸಲು, ಮತ್ತು ನ್ಯಾಯಯುತವದ ರೀತಿಯಲ್ಲಿ ತರಬೇತು ನೀಡಲು ಉಪಯುಕ್ತವಾಗಿದೆ, ಇದರಿಂದ ಒಬ್ಬ ಭಕ್ತನನ್ನು ಪೂರ್ಣ ಪ್ರಮಾಣವಾಗಿ ಒಳ್ಳೆಯ ಕೆಲಸಗಳನ್ನು ಮಾಡಲು ಸಜ್ಜುಗೊಳಿಸಬಹುದು.”

ಇಗರ್ಜಿಯ ಮೂರನೇ ಉದ್ದೇಶ ಆರಾಧಿಸುವುದು. ಆರಾಧಿಸುವುದೆಂದರೆ ದೇವರು ಮಾಡಿರುವ ಎಲ್ಲಾ ಕೆಲಸಗಳಿಗೂ ಧನ್ಯವಾದವನ್ನು ಅರ್ಪಿಸುವುದು! ದೇವರು ನಮ್ಮನ್ನು ರಕ್ಷಿಸಿದ್ದಾನೆ. ದೇವರು ನಮ್ಮನ್ನು ಪ್ರೀತಿಸುತ್ತಾನೆ. ದೇವರು ನಮಗೆ ಒದಗಿಸುತ್ತಾನೆ. ದೇವರು ನಮಗೆ ದಾರಿ ತೋರಿಸುತ್ತಾನೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾನೆ. ನಾವು ಹೇಗೆ ಅವನಿಗೆ ಧನ್ಯವಾದ ಅರ್ಪಿಸದೇ ಇರಲಾದೀತು? ದೇವರು ಪವಿತ್ರ, ಸದ್ಗುಣಶೀಲನೂ, ಪ್ರೀತಿಪತ್ರನೂ, ಕರುಣಾಮಯನೂ, ಘನತೆಯನ್ನು ಹೊಂದಿರುವವನೂ ಆಗಿದ್ದಾನೆ. ಪ್ರಕರಣ 4:11 ಘೋಷಿಸುತ್ತದೆ ““ ನೀನು ಗಣ್ಯನು, ನೀನೇ ನಮ್ಮ ಒಡೆಯ ಮತ್ತು ದೇವರು, ಘನತೆ ಮತ್ತು ಮರ್ಯಾದೆ ಮತ್ತು ಶಕ್ತಿಯನ್ನು ಪಡೆಯಲು, ನೀನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿರುವೆ, ಹಾಗೂ ನಿನ್ನ ಆಶಯದಂತೆ ಅವೆಲ್ಲಾ ಸೃಷ್ಟಿಸಲ್ಪಡುತ್ತಿವೆ ಮತ್ತು ಅಸ್ತಿತ್ವದಲ್ಲಿವೆ.”

3. ಪ್ರತೀ ದಿನವೂ ದೇವರ ಬಗ್ಗೆ ಕೇಂದ್ರೀಕರಿಸಲು ಸಮಯವನ್ನು ಗೊತ್ತುಪಡಿಸಿ.

ನಾವು ದಿನವೂ ದೇವರ ಕುರಿತು ಕೇಂದ್ರೀಕರಿಸುವ ಸಮಯವನ್ನು ವ್ಯಯಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲವರು ಇದನ್ನು “ನಿಶ್ಶಬ್ದವಾದ ಸಮಯ” ಎಂದು ಕರೆಯುತ್ತಾರೆ.ಇನ್ನು ಕೆಲವರು “ಭಕ್ತಿ,” ಯಾಕೆಂದರೆ ಈ ಸಮಯದಲ್ಲಿ ನಾವು ನಮ್ಮನ್ನು ದೇವರಿಗೆ ಮುಡಿಪಾಗಿಡುತ್ತೇವೆ. ಕೆಲವರು ಬೆಳಗಿನ ಹೊತ್ತು ಸಮಯವನ್ನು ಹೊಂದಿಸುತ್ತಾರೆ,ಇನ್ನು ಕೆಲವರು ಸಂಜೆಯ ಸಮಯವನ್ನು ನೇಮಿಸುತ್ತಾರೆ. ನೀವು ಈ ಸಮಯವನ್ನು ಏನೆಂದು ಕರೆಯುತ್ತೀರಿ ಮತ್ತು ಯಾವಾಗ ಹೊಂದಿಸುತ್ತೀರಿ ಎಂಬುದು ಗಣನೆಗೆ ಬರುವುದಿಲ್ಲ. ಯಾವುದು ಗಣನೆಗೆ ತೆಗೆದುಕೊಳ್ಳಬೇಕಾದುದೆಂದರೆ ನೀವು ಕಾಯಂ ಆಗಿ ದೇವರೊಡನೆ ಸಮಯವನ್ನು ಕಳೆಯುವುದು. ಯಾವ ಸಂಗತಿಯು ನಮ್ಮ ಸಮಯವನ್ನು ದೇವರೊಂದಿಗೆ ಕಳೆಯುವಂತೆ ಮಾಡುತ್ತದೆ?

(ಎ) ಪ್ರಾರ್ಥನೆ. ಪ್ರಾರ್ಥನೆಯು ಕೇವಲ ದೇವರೊಂದಿಗೆ ಮಾತನಾಡುವುದು. ದೇವರೊಂದಿಗೆ ನಿಮಗೆ ಸಂಬಧಿಸಿದ ಹಾಗೂ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮಗೆ ಬುದ್ಧಿವಂತಿಕೆ ಮತ್ತು ಮಾರ್ಗದರ್ಶನ ನೀಡುವಂತೆ ದೇವರಲ್ಲಿ ಕೇಳಿಕೊಳ್ಳಿ. ನಿಮ್ಮ ಅಗತ್ಯಗಳನ್ನು ಪೂರೈಸಲು ಕೇಳಿಕೊಳ್ಳಿ. ನೀವು ದೇವರನ್ನು ಎಷ್ಟು ಪ್ರೀತಿಸುತ್ತೀರಿ ಮತ್ತು ಅವನು ನಿಮಗೋಸ್ಕರ ಮಾಡುವ ಕೆಲಸಗಳಿಗೆ ಎಷ್ಟು ಬೆಲೆ ಕಟ್ಟುತ್ತೀರಿ ಎಂದು ಅವನಲ್ಲಿ ಹೇಳಿ. ಪ್ರಾರ್ಥನೆ ಎಂದರೆ ಅದೇ.

(ಬಿ)ಬೈಬಲ್ ಓದುವುದು. ಇಗರ್ಜಿಯಲ್ಲಿ ಕಲಿಸಲ್ಪಡುವ ಬೈಬಲ್, ರವಿವಾರದ ಶಾಲೆ, ಮತ್ತು/ಅಥವಾ ಬೈಬಲ್ ಅಧ್ಯಯನ – ಜೊತೆಗೆ ನೀವು ಬೈಬಲ್ ನ್ನು ನಿಮಗೋಸ್ಕರ ಓದಬೇಕು. ಬೈಬಲ್ ನಲ್ಲಿ ನಿಮಗೆ ಸಫಲವಾದ ಕ್ರೈಸ್ತಧರ್ಮೀಯ ಜೀವನ ನಡೆಸಲು ಬೇಕಾಗುವ ಎಲ್ಲಾ ಅಂಶಗಳೂ ಇವೆ. ಇದು ಹೇಗೆ ವಿವೇಕವುಳ್ಳ ನಿರ್ಧಾರವನ್ನು ಕೈಗೊಳ್ಳುವುದು, ಹೇಗೆ ದೇವರ ಇಚ್ಛೆಯನ್ನು ತಿಳಿಯುವುದು, ಹೇಗೆ ಇನ್ನೊಬ್ಬರಿಗೆ ನೆರವಾಗುವುದು, ಮತ್ತು ಹೇಗೆ ಆಧ್ಯಾತ್ಮಿಕವಾಗಿ ಬೆಳೆಯುವುದು ಎಂಬುದನ್ನು ಒಳಗೊಂಡಿದೆ. ಬೈಬಲ್ ನಮಗೆ ದೇವರ ನುಡಿ. ಬೈಬಲ್ ಹೇಗೆ ನಮ್ಮ ಜೀವನವನ್ನು ದೇವರಿಗೆ ಸಂತೋಷವಾಗುವಂತೆ, ಮತ್ತು ನಮಗೆ ತೃಪ್ತಿಕರವಾಗುವಂತೆ ನಡೆಸುವುದು ಎಂಬುದರ ಬಗ್ಗೆ ಅತ್ಯವಶ್ಯಕವಾದ ದೇವರ ಸೂಚನೆಯನ್ನೊಳಗೊಂಡ ಕೈಪಿಡಿ.

4. ಯಾರು ನಿಮಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡಬಲ್ಲರೋ ಅವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಿ.

1 ಕರಿಂತಿಯನ್ಸ್ 15:33 ನಮಗೆ ಹೇಳುತ್ತದೆ, “ ತಪ್ಪಾದ ದಾರಿಯಲ್ಲಿ ನಡೆಯಬೇಡಿ: ’ ಕೆಟ್ಟ ಜೊತೆಗಾರರು ಒಳ್ಳೆಯ ಗುಣಗಳನ್ನು ಕೆಡಿಸುತ್ತಾರೆ.’” ಬೈಬಲ್ “ದುಷ್ಟ” ಜನರು ನಮ್ಮ ಮೇಲೆ ಬೀರಬಹುದಾದ ಪ್ರಭಾವಗಳ ಬಗ್ಗೆ ಎಚ್ಚರಿಕೆಯನ್ನು ಒಳಗೊಂಡಿದೆ. ಯಾರು ಪಾಪಮಯ ಚತುವಟಿಕೆಗಳಲ್ಲಿ ಮಗ್ನರಾಗಿರುತ್ತಾರೋ ಅಂತವರೊಂದಿಗೆ ಕಾಲ ಕಳೆಯುವುದರಿಂದ ನಾವು ಅಂತಹ ಕೆಲಸಗಳಲ್ಲಿ ಪ್ರಲೋಭನೆಗೊಳ್ಳುವಂತೆ ಮಾಡುತ್ತದೆ. ನಮ್ಮ ಸುತ್ತಮುತ್ತಲಿರುವವರ ಗುಣಗಳು ನಮಗೆ ವರ್ಗಾಯಿಸಲ್ಪಡುತ್ತವೆ.ಆದ್ದರಿಂದ ನಮ್ಮನ್ನು ನಾವು ಯಾರು ದೇವರನ್ನು ಪ್ರೀತಿಸುತ್ತಾರೆ ಮತ್ತು ಅವನಿಗೆ ಬದ್ಧನಾಗಿರುತ್ತಾರೆ ಅಂತವರಿಂದ ಸುತ್ತುವರಿಯಲ್ಪಡುವಂತೆ ನೋಡಿಕೊಳ್ಳಬೇಕು.

ಯಾರು ನಿಮಗೆ ಸಹಾಯ ಮಾಡಬಲ್ಲರೋ ಮತ್ತು ಯಾರು ನಿಮ್ಮನ್ನು ಪ್ರೋತ್ಸಾಹಿಸಬಲ್ಲರೋ ಅಂತಹ ಒಬ್ಬ ಅಥವಾ ಇಬ್ಬರು ಸ್ನೇಹಿತರನ್ನು ನಿಮ್ಮ ಚರ್ಚ್ ನಲ್ಲಿ ಹುಡುಕಲು ಪ್ರಯತ್ನಿಸಿ (ಹೀಬ್ರೂಸ್ 3:13; 10:24). ನಿಮ್ಮ ಶಾಂತವಾದ ಸಮಯ, ನಿಮ್ಮ ಚಟುವಟಿಕೆಗಳು, ಮತ್ತು ನಿಮ್ಮ ದೇವರೊಂದಿಗಿನ ಪಯಣದಲ್ಲಿ ನಿಮ್ಮ ಲಕ್ಷ್ಯವಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವೇ ಹೊರುವಂತೆ ಮಾಡಲು ನಿಮ್ಮ ಸ್ನೇಹಿತನಲ್ಲಿ ಕೇಳಿಕೊಳ್ಳಿ. ನೀವೂ ಅವರನ್ನು ಹಾಗೆ ನೋಡಿಕೊಳ್ಳಬಹುದೇ ಎಂದು ಕೇಳಿ. ಇದರ ಅರ್ಥ ನಿಮ್ಮ ಯಾವ ಸ್ನೇಹಿತರಿಗೆ ಯೇಸುವು ಅವರ ರಕ್ಷಕನೆಂದು ತಿಳಿದಿಲ್ಲವೋ ಅವರನ್ನು ಬಿಟ್ಟುಬಿಡಬೇಕೆಂದಲ್ಲ. ಅವರೊಂದಿಗಿನ ಗೆಳೆತನವನ್ನು ಮುಂದುವರಿಸಿ ಮತ್ತು ಅವರನ್ನು ಪ್ರೀತಿಸಿ. ಯೇಸುವು ನಿಮ್ಮ ಜೀವನವನ್ನು ಬದಲಾಯಿಸಿದ್ದಾನೆ ಮತ್ತು ನೀವು ಮೊದಲು ಮಾಡುತ್ತಿದ್ದ ಎಲ್ಲ ಕೆಲಸಗಳನ್ನು ಈಗ ಮಾಡಲಾಗದು ಎಂದು ಸುಮ್ಮನೆ ತಿಳಿಯಪಡಿಸಿ. ಯೇಸುವಿನ ಬಗ್ಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಕಲ್ಪಿಸುವಂತೆ ದೇವರಲ್ಲಿ ಬೇಡಿಕೊಳ್ಳಿ.

5. ಪರಿಶುದ್ಧರಾಗಿರಿ.

ಬಹಳಷ್ಟು ಜನರಲ್ಲಿ ದೀಕ್ಷಾಸ್ನಾನದ ಬಗ್ಗೆ ತಪ್ಪು ಗ್ರಹಿಕೆ ಇದೆ. “ದೀಕ್ಷಾಸ್ನಾನ” ಎಂದರೆ ನೀರಿನಲ್ಲಿ ಮುಳುಗುವುದು ಎಂದರ್ಥ. ದೀಕ್ಷಾಸ್ನಾನ ಎಂದರೆ ಬೈಬಲ್ ಗೆ ಸಂಬಂಧಿಸಿದಂತೆ ನಿಮ್ಮ ಕ್ರಿಸ್ತನ ಬಗೆಗಿರುವ ಹೊಸ ನಂಬಿಕೆಯನ್ನು ಮತ್ತು ಅವನನ್ನು ಬದ್ಧತೆಯಿಂದ ಅನುಸರಿಸುವುದನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವುದು. ನೀರಿನಲ್ಲಿ ಒಂದಾಗಿ ಮುಳುಗುವ ಕ್ರಿಯೆಯ ಅರ್ಥ ಕ್ರಿಸ್ತನೊಂದಿಗೆ ಹುಗಿಯಲ್ಪಡುವುದು. ನೀರಿನಿಂದ ಮೇಲೆ ಬರುವ ಕ್ರಿಯೆಯು ಕ್ರಿಸ್ತನ ಪುನರುತ್ಥಾನವನ್ನು ಚಿತ್ರೀಕರಿಸುತ್ತದೆ. ದೀಕ್ಷಾಸ್ನಾನಕ್ಕೆ ಒಳಪಡುವುದೆಂದರೆ ನಿಮ್ಮನ್ನು ನೀವು ಕ್ರಿಸ್ತನ ಮರಣ, ಹುಗಿಯುವಿಕೆ ಮತ್ತು ಪುನರುತ್ಥಾನದಲ್ಲಿ ಗುರುತಿಸುವುದು (Romans 6:3-4).

ದೀಕ್ಷಾಸ್ನಾನವು ನಿಮ್ಮನ್ನು ರಕ್ಷಿಸುವುದಲ್ಲ. ದೀಕ್ಷಾಸ್ನಾನವು ನಿಮ್ಮ ಪಾಪಗಳನ್ನು ತೊಳೆಯುವುದಿಲ್ಲ. ದೀಕ್ಷಾಸ್ನಾನವು ನೀವು ವಿಧೇಯರಾಗುವ ಒಂದು ಹಂತ, ಏಕಾಂತವಾಗಿ ಕ್ರಿಸ್ತನ ಬಗೆಗಿರುವ ಮುಕ್ತಿಮಾರ್ಗದ ನಂಬಿಕೆಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವುದು. ದೀಕ್ಷಾಸ್ನಾನವು ತುಂಬಾ ಮುಖ್ಯವಾದುದು ಯಾಕೆಂದರೆ ಇದು ವಿಧೇಯತೆಯ ಒಂದು ಹಂತ. ನೀವು ದೀಕ್ಷಾಸ್ನಾನಕ್ಕೆ ತಯಾರಿದ್ದಲ್ಲಿ ನೀವು ಪಾದ್ರಿಗಳಲ್ಲಿ ಆ ಬಗ್ಗೆ ಮಾತನಾಡಬೇಕು.


ಪ್ರಶ್ನೆ: ದೇವರಿದ್ದಾನೆಯೇ? ದೇವರ ಇರುವಿಕೆಗೆ ಸಾಕ್ಷ್ಯಾಧಾರವಿದೆಯೇ?

ದೇವರಿದ್ದಾನೆಯೇ? ಈ ವಿವಾದಕ್ಕೆ ಇಷ್ಟೊಂದು ಗಮನ ನೀಡಲಾಗಿರುವುದು ಬಹಳ ಆಸಕ್ತಿಕರ. ಪ್ರಪಂಚದ 90% ಜನರು ಈಗ ದೇವರ ಅಥವಾ ಯಾವುದೋ ಮಹತ್ತರವಾದ ಶಕ್ತಿಯ ಅಸ್ತಿತ್ವವನ್ನು ನಂಬುತ್ತಾರೆ ಎಂದು ಇತ್ತೀಚಿನ ಸರ್ವೆ ನಮಗೆ ತಿಳಿಸುತ್ತದೆ. ಆದರೂ ಏಕೋ ಏನೋ ದೇವರು ನಿಜಕ್ಕೂ ಇದ್ದಾನೆಂದು ರುಜುವಾತುಪಡಿಸುವುದು, ದೇವರಿದ್ದಾನೆಂದು ನಂಬುವವರ ಜವಾಬ್ದಾರಿಯಾಗಿಬಿಟ್ಟಿದೆ. ಇದು ಅದಲು- ಬದಲು ದಿಶೆಯಲಾಗಿದ್ದಿದ್ದರೆ ಹೆಚ್ಚು ತಾರ್ಕಿಕವಾಗಿರುತ್ತಿತ್ತು.

ಆದರೆ ದೇವರ ಇರುವಿಕೆಯನ್ನು ರುಜುವಾತು ಪಡಿಸಲಾಗಲೀ ಅಥವಾ ನಿರಾಕರಿಸಲಾಗಲೀ ಸಾಧ್ಯವಿಲ್ಲ. ದೇವರಿದ್ದಾನೆ ಎಂಬ ವಾಸ್ತವತೆಯನ್ನು ನಾವು ಶ್ರದ್ಧೆಯಿಂದ ಒಪ್ಪಬೇಕು ಎಂಬುದಾಗಿ ಬೈಬಲ್ ಸಹ ಹೇಳುತ್ತದೆ. “ಮತ್ತು ಶ್ರದ್ಧಾರಹಿತರಾಗಿ ದೇವರನ್ನು ಮೆಚ್ಚಿಸಲು ಅಸಾಧ್ಯ ಏಕೆಂದರೆ ಅವನ ಬಳಿಗೆ ಯಾರೇ ಬಂದರೂ ಅವನಿದ್ದಾನೆ ಮತ್ತು ಅವನನ್ನು ಹೃತ್ಪೂರ್ವಕವಾಗಿ ಬೇಡುವವರನ್ನು ಹರಸುತ್ತಾನೆ ಎಂದು ನಂಬಬೇಕು” (ಹೀಬ್ರೂಸ್ 11:6). ದೇವರು ಹಾಗೆ ಆಶಿಸಿದ್ದರೆ, ಅವನು ಸುಮ್ಮನೆ ಪ್ರತ್ಯಕ್ಷನಾಗಬಹುದಿತ್ತು ಮತ್ತು ಅವನಿದ್ದಾನೆ ಎಂದು ಇಡೀ ಜಗತ್ತಿಗೆ ರುಜುವಾತುಪಡಿಸಬಹುದಿತ್ತು. ಆದರೆ ಅವನು ಹಾಗೆ ಮಾಡಿದ್ದಿದ್ದರೆ, ಆಗ ಶ್ರದ್ಧೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. “ ಆಗ ಯೇಸುವು ಅವನಿಗೆ ಹೇಳಿದರು, ನೀನು ನನ್ನನ್ನು ನೋಡಿರುವೆಯಾದ್ದರಿಂದ ನಿನಗೆ ನಂಬಿಕೆ ಇದೆ. ಯಾರು ನೋಡದೇ ಇದ್ದರೂ ನಂಬಿದ್ದಾರೋ ಅವರೇ ಧನ್ಯರು" (ಜಾನ್ 20:29).

ಹೀಗೆ ಹೇಳಿದ ಮಾತ್ರಕ್ಕೆ, ದೇವರ ಅಸ್ತಿತ್ವಕ್ಕೆ ರುಜುವಾತು ಇಲ್ಲವೆಂದೇನೂ ಅರ್ಥವಲ್ಲ. ಬೈಬಲ್ ಹೇಳುತ್ತದೆ, “ಸ್ವರ್ಗಗಳು ದೇವರ ಮಹಿಮೆಯನ್ನು ಘೋಷಿಸುತ್ತವೆ; ಆಕಾಶಗಳು ಅವನ ಕೈಗಳ ಕಾರ್ಯವನ್ನು ಸಾರುತ್ತವೆ. ದಿನ ದಿನವೂ ಅವುಗಳು ಮಾತುಗಳ ಧಾರೆ ಹರಿಸುತ್ತವೆ. ನಿಶೆ ನಿಶೆಯೂ ಅವುಗಳು ಜ್ಞಾನವನ್ನು ಪ್ರದರ್ಶಿಸುತ್ತವೆ. ಅವುಗಳ ಧ್ವನಿ ಕೇಳದ ಮಾತು ಅಥವಾ ಭಾಷೆಯಿಲ್ಲ . ಅವುಗಳ ಧ್ವನಿ ಇಡೀ ಭೂಮಿಯೊಳಗೆ ಪ್ರವೇಶಿಸುತ್ತದೆ, ಅವುಗಳ ಮಾತು ಜಗತ್ತಿನ ತುದಿಯನ್ನು ಮುಟ್ಟುತ್ತದೆ.” (ಸಾಮ್ 19:1-4). ತಾರೆಗಳನ್ನು ವೀಕ್ಷಿಸುವಾಗ, ಬ್ರಹ್ಮಾಂಡದ ವಿಸ್ತಾರವನ್ನು ಅರ್ಥ ಮಾಡಿಕೊಳ್ಳುವಾಗ, ಪ್ರಕೃತಿಯ ಅದ್ಭುತಗಳನ್ನು ಗಮನಿಸಿದಾಗ, ಸೂರ್ಯಾಸ್ತದ ಸೌಂದರ್ಯವನ್ನು ನೋಡಿದಾಗ – ಈ ವಿಷಯಗಳೆಲ್ಲವೂ ಒಬ್ಬ ಸೃಷ್ಟಿಕರ್ತ ದೇವನನ್ನು ಸೂಚಿಸುತ್ತವೆ. ಇಷ್ಟು ಸಾಕಾಗದಿದ್ದರೆ, ನಮ್ಮದೇ ಹೃದಯದಲ್ಲಿ ದೇವರ ಅಸ್ತಿತ್ವಕ್ಕೆ ರುಜುವಾತಿದೆ. ಇಕ್ಲೀಸಿಯಾಸ್ಟೀಸ್ 3:11 ನಮಗೆ ತಿಳಿಸಿ, “…ಮನುಷ್ಯರ ಹೃದಯದಲ್ಲಿ ಸಹ ಅವನು ಶಾಶ್ವತತೆಯನ್ನು ಇಟ್ಟಿದ್ದಾನೆ.…”. ಈ ಜೀವನವನ್ನು ಮೀರಿದ ಯಾವುದೋ ಒಂದು ಇದೆ ಅಥವಾ ಈ ಜಗತ್ತನ್ನು ಮೀರಿದ ಯಾರೋ ಇಬ್ಬರಿದ್ದಾರೆ ಎಂಬುದನ್ನು ಗುರುತಿಸುವ ಏನೋ ಒಂದು ಅರಿವು ನಮ್ಮೊಳಗೆ ಆಳದಲ್ಲಿದೆ. ಈ ಅರಿವನ್ನು ನಾವು ಬೌದ್ಧಿಕವಾಗಿ ಅಲ್ಲಗಳೆಯಬಹುದು, ಆಗಲೂ ಸಹ ನಮ್ಮಲಿ ನಮ್ಮ ಮೂಲಕ ದೇವರ ಅಸ್ತಿತ್ವ ಇದ್ದೇ ಇದೆ. ಇವೆಲ್ಲದರ ಹೊರತಾಗಿಯೂ, ಕೆಲವರು ದೇವರ ಅಸ್ತಿತ್ವವನ್ನು ಅಲ್ಲಗಳೆಯುತ್ತಾರೆ ಎಂದು ಬೈಬಲ್ ಎಚ್ಚರಿಸುತ್ತದೆ, “ಮೂರ್ಖನಾದವನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾನೆ, ‘ದೇವರಿಲ್ಲ’ ಎಂದು“. (ಸಾಮ್ 14:1). ಸಂಪುರ್ಣ ಚರಿತ್ರೆಯಲ್ಲಿ, ಎಲ್ಲಾ ಸಂಸ್ಕೃತಿಗಳಲ್ಲಿ, ಎಲ್ಲಾ ನಾಗರೀಕತೆಗಳಲ್ಲಿ, ಎಲ್ಲಾ ಭೂಖಂಡಗಳಲ್ಲಿ 98% ಜನರಿಗೆ ಯಾವುದೋ ಒಂದು ರೀತಿಯ ದೇವರ ಅಸ್ತಿತ್ವದಲ್ಲಿ ಶ್ರದ್ಧೆಯಿದೆ, ಈ ಶ್ರದ್ಧೆಗೆ ಕಾರಣವಾದ ಯಾವುದೋ ಒಂದು (ಯಾರೋ ಒಬ್ಬರು) ಇರಲೇಬೇಕು.

ದೇವರ ಅಸ್ತಿತ್ವದ ಕುರಿತಾಗಿರುವ ಬೈಬಲ್ ಆಧಾರಿತ ವಾದಗಳ ಜೊತೆ ತಾರ್ಕಿಕವಾದ ವಾದಗಳೂ ಇವೆ. ಮೊದಲನೆಯದಾಗಿ, ಮೂಲತತ್ತ್ವಶಾಸ್ತ್ರದ ವಾದವಿದೆ. ಬಹಳ ಜನಪ್ರಿಯವಾದ ಮೂಲತತ್ವಶಾಸ್ತ್ರದ ವಾದವು ದೇವರ ಅಸ್ತಿತ್ವವನ್ನು ರುಜುವಾತುಪಡಿಸಲು ದೇವರು ಎಂಬ ಕಲ್ಪನೆಯನ್ನು ಬಳಸಿಕೊಳ್ಳುತ್ತದೆ. “ಯಾವುದಕ್ಕಿಂತ ಹೆಚ್ಚಿನದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಅದು” ಎಂಬುದಾಗಿ ದೇವರನ್ನು ಕುರಿತ ವ್ಯಾಖ್ಯಾನದಿಂದ ಅದು ಪ್ರಾರಂಭವಾಗುತ್ತದೆ. ನಂತರ ಅಸ್ತಿತ್ವದಲ್ಲಿ ಇರುವುದು, ಅಸ್ತಿತ್ವದಲ್ಲಿ ಇಲ್ಲದಿರುವುದಕ್ಕಿಂತ ಹೆಚ್ಚಿನದು ಎಂಬುದಾಗಿ ವಾದಿಸಲಾಗುತ್ತದೆ, ಆದ್ದರಿಂದ ಅತಿ ಹೆಚ್ಚಿನ ಕಲ್ಪಿತವಾದುದು ಅಸ್ತಿತ್ವದಲ್ಲಿ ಇರಬೇಕು. ದೇವರು ಇರಲಿಲ್ಲವಾದರೆ, ಅತಿ ಹೆಚ್ಚಿನ ಕಲ್ಪಿತವಾದದ್ದು ದೇವರಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದು ದೇವರ ಕುರಿತ ವ್ಯಾಖ್ಯಾನಕ್ಕೇ ವಿರೋಧಾಭಾಸವನ್ನುಂಟು ಮಾಡುತ್ತದೆ. ಮೂಲ ಸಂಕಲ್ಪ ಸಿದ್ಧಾಂತ ಎರಡನೆಯದು. ಮೂಲ ಸಂಕಲ್ಪ ಸಿದ್ಧಾಂತದ ವಾದವೇನೆಂದರೆ ಬ್ರಹ್ಮಾಂಡವು ಇಂತಹ ಅಚ್ಚರಿಯನ್ನುಂಟು ಮಾಡುವ ಸೃಷ್ಟಿ ವಿನ್ಯಾಸವನ್ನು ಪ್ರಸ್ತುತ ಪಡಿಸತ್ತಿರುವ ಹಿನ್ನೆಲೆಯಲ್ಲಿ ಒಬ್ಬ ದೈವೀ ವಿನ್ಯಾಸಕಾರರು ಇರಬೇಕು ಎಂದು. ಉದಾಹರಣೆಗೆ,ಭೂಮಿಯು ಸೂರ್ಯನಿಂದ ಕೇವಲ ಕೆಲವೇ ನೂರು ಮೈಲಿಗಳಷ್ಟ ಸಮೀಪವಾಗಿದ್ದಿದ್ದರೆ ಅಥವಾ ದೂರವಾಗಿದ್ದಿದ್ದರೆ, ಈಗಿನಷ್ಟು ಜೀವನವನ್ನು ಬೆಂಬಲಿಸಲು ಸಮರ್ಥವಾಗಿರುತ್ತಿರಲಿಲ್ಲ. ನಮ್ಮ ವಾತಾವರಣದಲ್ಲಿರುವ ಶಕ್ತಿಗಳು ಶೇಕಡ ಕೆಲವು ಅಂಶದಷ್ಟು ಬದಲಾದರೂ,ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳು ಸಾವನ್ನಪ್ಪುತ್ತವೆ. 10243 ಅಣುಗಳಲ್ಲಿ ಪ್ರೊಟೀನ್ ಅಣುವಾಗುವ ಸಾಧ್ಯತೆಗಳು ಅವಕಾಶದ ಆಧಾರದ ಮೇಲೆ 1 ಅಣುವಿಗೆ ಮಾತ್ರ (ಅಂದರೆ 10ರ ನಂತರ 243 0ಗಳು). ಒಂದು ಏಕೈಕ ಜೀವಕೋಶವು ಮಿಲಿಯನ್ ಗಟ್ಟಳೆ ಪ್ರೊಟೀನ್ ಅಣುಗಳನ್ನು ಒಳಗೊಂಡಿರುತ್ತದೆ.

ದೇವರ ಅಸ್ತಿತ್ವದ ಕುರಿತಾದ ಮೂರನೆಯ ತಾರ್ಕಿಕ ವಾದವನ್ನು ವಿಶ್ವಶಾಸ್ತ್ರಕ್ಕೆ ಸಂಬಂಧಪಟ್ಟ ವಾದ ಎಂದು ಕರೆಯುತ್ತಾರೆ. ಪ್ರತಿಯೊಂದು ಕಾರ್ಯವೂ ಒಂದು ಕಾರಣವನ್ನು ಹೊಂದಿರಬೇಕು. ಈ ಪ್ರಪಂಚ ಮತ್ತು ಅದರಲ್ಲಿರುವ ಎಲ್ಲವೂ ಒಂದು ಕಾರ್ಯ. ಎಲ್ಲವೂ ಅಸ್ತಿತ್ವಕ್ಕೆ ಬರಲು ಕಾರಣವಾದ ಯಾವುದೋ ಒಂದು ಇರಬೇಕು. ಕೊನೆಯದಾಗಿ, ಎಲ್ಲವೂ ಅಸ್ತಿತ್ವಕ್ಕೆ ಬರಲು ಒಂದು ಕಾರಣವಾದ ಯಾವುದೋ “ಕಾರಣವೇ ಇಲ್ಲದ್ದು” ಇರಬೇಕು. ಆ "ಕಾರಣವೇ ಇಲ್ಲದ” ಯಾವುದೋ ಒಂದೇ, ದೇವರು.

ನಾಲ್ಕನೆಯ ವಾದವನ್ನು ನೈತಿಕ ವಾದವೆಂದು ಕರೆಯಲಾಗುತ್ತದೆ. ಚರಿತ್ರೆಯಲ್ಲಿನ ಪ್ರತಿ ಸಂಸ್ಕೃತಿಯೂ ಕೆಲವು ರೀತಿಯ ವಿಧಿನಿಯಮಗಳನ್ನು ಹೊಂದಿದೆ. ಪ್ರತಿಯೊಬ್ಬರೂ ಸರಿ, ತಪ್ಪುಗಳ ಅರಿವನ್ನು ಹೊಂದಿರುತ್ತಾರೆ. ಕೊಲೆ, ಸುಳ್ಳು, ಕಳ್ಳತನ ಮತ್ತು ಅನೈತಿಕತೆಯನ್ನು ಬಹುಮಟ್ಟಿಗೆ ಸಾರ್ವತ್ರಿಕವಾಗಿ ನಿರಾಕರಿಸಲಾಗಿದೆ. ಈ ತಪ್ಪು ಸರಿಗಳ ಅರಿವು ಪವಿತ್ರವಾದ ದೇವರಿಂದಲ್ಲದೆ ಬೇರೆಲ್ಲಿಂದ ಬಂದಿತು?

ಇವೆಲ್ಲವುಗಳ ಹೊರತಾಗಿಯೂ, ಸ್ಪಷ್ಟ ಮತ್ತು ನಿರಾಕರಿಸಲಾರದ ಜ್ಞಾನವನ್ನು ಜನರು ತಿರಸ್ಕರಿಸುತ್ತಾರೆ ಮತ್ತು ಅದರ ಬದಲಿಗೆ ಸುಳ್ಳನ್ನು ನಂಬುತ್ತಾರೆ ಎಂದು ಬೈಬಲ್ ನಮಗೆ ಹೇಳುತ್ತದೆ. ರೋಮನ್ಸ್ 1:25 ಘೋಷಿಸುತ್ತದೆ, “ಅವರು ದೇವರ ಸತ್ಯವನ್ನು ಒಂದು ಸುಳ್ಳಿಗೆ ಬದಲಿಸಿಕೊಂಡರು, ಮತ್ತು ಎಂದೆಂದೂ ಸ್ತುತಿಸಲ್ಪಡುವ - ಸೃಷ್ಟಿಕರ್ತನ ಬದಲಿಗೆ ಸೃಷ್ಟಿಯಾದ ವಸ್ತುಗಳನ್ನು ಪೂಜಿಸಿದರು ಮತ್ತು ಸೇವೆಗೈದರು. ಆಮೇನ್.” ದೇವರನ್ನು ನಂಬದಿರುವುದಕ್ಕೆ ಜನರಿಗೆ ಕ್ಷಮೆಯಿಲ್ಲವೆಂದೂ ಸಹ ಬೈಬಲ್ ಸಾರುತ್ತದೆ, “ ಪ್ರಪಂಚದ ಸೃಷ್ಟಿಯಾದಂದಿನಿಂದ ದೇವರ ಅಗೋಚರ ಗುಣಗಳು – ಅವನ ಶಾಶ್ವತವಾದ ಶಕ್ತಿ – ಮತ್ತು ದೈವೀ ಸ್ವಭಾವ—ಸ್ಪಷ್ಟವಾಗಿ ಕಂಡುಬಂದಿವೆ, ಪ್ರಕಟಗೊಂಡುದರ ಮೂಲಕ ಅರ್ಥವಾಗುವಂತಹುದಾದ್ದರಿಂದ ಜನರಿಗೆ ಕ್ಷಮೆಯಿಲ್ಲ” (ರೋಮನ್ಸ್ 1:20).

ಜನರು ಇದು “ಅವೈಜ್ಞಾನಿಕ” ಅಥವಾ “ ರುಜುವಾತು ಇಲ್ಲದ ಕಾರಣ” ದೇವರಲ್ಲಿ ಶ್ರದ್ಧೆ ಹೊಂದುವುದಿಲ್ಲವಾಗಿ ದಾವೆ ಹೂಡುತ್ತಾರೆ. ನಿಜವಾದ ಕಾರಣವೇನೆಂದರೆ, ಒಮ್ಮೆ ಜನರು ದೇವರಿದ್ದಾನೆಂದು ಒಪ್ಪಿಕೊಂಡರೆ, ಅವರು ದೇವರಿಗೆ ಬದ್ಧರು ಮತ್ತು ಅವನಿಂದ ಕ್ಷಮೆಯ ಅವ್ಶ್ಯಕತೆಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. (ರೋಮನ್ಸ್ 3:23; 6:23). ದೇವರಿದ್ದರೆ, ನಮ್ಮ ಕಾರ್ಯಗಳ ಕುರಿತಾಗಿ ಅವನಿಗೆ ಉತ್ತರಿಸಬೇಕಾಗುತ್ತದೆ. ದೇವರಿಲ್ಲದಿದ್ದರೆ, ನಮ್ಮನು ಕುರಿತ ದೇವರ ನಿರ್ಧಾರದ ಚಿಂತೆಯಿಲ್ಲದೆಯೇ ನಾವು ಬಯಸಿದ್ದೆಲ್ಲವನ್ನು ಮಾಡಬಹುದು. ಆದ್ದರಿಂದ ವಿಕಾಸವಾದವನ್ನು ಗಟ್ಟಿಯಾಗಿ ಹಿಡಿದಿರುವ ನಮ್ಮ ಸಮಾಜದಲ್ಲಿನ ಬಹಳ ಜನರು, ಇದನ್ನು ಜನರಿಗೆ ಸೃಷ್ತಿಕರ್ತನಲ್ಲಿನ ನಂಬಿಕೆಗೆ ಪರ್ಯಾಯವನ್ನಾಗಿ ನೀಡುತ್ತಾರೆ. ದೇವರಿದ್ದಾನೆ ಮತ್ತು ಕೊನೆಯದಾಗಿ ಎಲ್ಲರೂ ಅವನು ಇದ್ದಾನೆ ಎಂದು ತಿಳಿದಿರುತ್ತಾರೆ. ಕೆಲವರು ಅವನ ಅಸ್ತಿತ್ವವನ್ನು ಅಲ್ಲಗಳೆಯಲು ಮಾಡುವ ಆಕ್ರಮಣಕಾರೀ ಪ್ರಯತ್ನವೇ ವಾಸ್ತವದಲ್ಲಿ ಅವನ ಅಸ್ತಿತ್ವಕ್ಕೆ ಮಾಡುವ ವಾದ.

ದೇವರ ಅಸ್ತಿತ್ವಕ್ಕೆ ಒಂದು ಕೊನೆಯ ವಾದಕ್ಕೆ ಅನುವು ಮಾಡಿಕೊಡಿ. ದೇವರು ಇದ್ದಾನೆಂದು ನಮಗೆ ಹೇಗೆ ತಿಳಿಯುತ್ತದೆ? ಕ್ರಿಶ್ಚಿಯನ್ನರಾಗಿ , ನಾವು ಅವನೊಂದಿಗೆ ಪ್ರತಿದಿನ ಮಾತನಾಡುತ್ತೇವಾದ್ದರಿಂದ ದೇವರಿದ್ದಾನೆಂದು ನಮಗೆ ತಿಳಿದಿದೆ. ಅವನು ನಮ್ಮೊಂದಿಗೆ ಹಿಂದಿರುಗಿ ಮಾತನಾಡುವುದು ನಮಗೆ ಕೇಳಿಸುವುದಿಲ್ಲ, ಆದರೆ ಅವನ ಇರುವಿಕೆಯನ್ನು ನಾವು ಗ್ರಹಿಸುತ್ತೇವೆ, ನಾವು ಅವನ ನೇತೃತ್ವವನ್ನು ಭಾವಿಸುತ್ತೇವೆ, ನಮಗೆ ಅವನ ಪ್ರೇಮವು ತಿಳಿದಿದೆ, ಅವನ ಕೃಪೆಯನ್ನು ನಾವು ಆಶಿಸುತ್ತೇವೆ. ನಮ್ಮ ಜೀವನದಲ್ಲಿ ದೇವರು ಎಂಬುದನ್ನು ಹೊರತು ಪಡಿಸಿ ಬೇರೆ ವಿವರಣೆಗಳು ಸಾಧ್ಯವಿಲ್ಲದ ವಿಷಯಗಳು ಘಟಿಸಿವೆ. ದೇವರು ಚಮತ್ಕಾರಪೂರ್ಣವಾಗಿ ನಮ್ಮನ್ನು ಕಾಪಾಡಿರುವುದರಿಂದ ಮತ್ತು ನಮ್ಮ ಜೀವನವನ್ನು ಬದಲಾಯಿಸಿರುವುದರಿಂದ ಅವನ ಅಸ್ತಿತ್ವವನ್ನು ಒಪ್ಪಿಕೊಳ್ಳದೇ ಮತ್ತು ಸ್ತುತಿಸದೇ ಬೇರೆ ದಾರಿಯಿಲ್ಲ.ಸರಳವಾಗಿ ಸ್ಪಷ್ಟವಾಗಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸುವ ಯಾರನ್ನೇ ಆಗಲಿ ಈ ಯಾವುದೇ ವಾದಗಳು ತಮ್ಮಷ್ಟಕ್ಕೆ ಒಪ್ಪುವಂತೆ ಮಾಡಲಾರವು. ಕೊನೆಯಲ್ಲಿ, ದೇವರ ಅಸ್ತಿತ್ವವನ್ನು ಶ್ರದ್ಡೆಯಿಂದ ಒಪ್ಪಿಕೊಳ್ಳಬೇಕು. (ಹೀಬ್ರೂಸ್ 11:6). ದೇವರಲ್ಲಿ ಶ್ರದ್ಡೆಯನ್ನು ಹೊಂದುವುದು ಕತ್ತಲಲ್ಲಿ ಹಾರಿದ ಕುರುಡು ನೆಗೆತದಂತಲ್ಲ; ಈಗಾಗಲೇ 90%ರಷ್ಟು ನಿಂತಿರುವ ಜನರನ್ನು ಹೊಂದಿರುವ ಚೆನ್ನಾಗಿ ಬೆಳಕಿರುವ ಕೋಣೆಯೊಳಗೆ ಸುರಕ್ಷಿತ ಪಾದಾರ್ಪಣೆ.


ಪ್ರಶ್ನೆ: ಯೇಸು ಕ್ರಿಸ್ತ ಯಾರು?

ಯೇಸು ಕ್ರಿಸ್ತ ಯಾರು? ಈ ಪ್ರಶ್ನೆಯ ಹಾಗಲ್ಲದೆ " ದೇವರಿದ್ದಾನೆಯೇ?", ಯೇಸು ಕ್ರಿಸ್ತನು ಅಸ್ತಿತ್ವದಲ್ಲಿದ್ದನೇ ಎಂಬ ಪ್ರಶ್ನೆಯನ್ನು ತುಂಬಾ ಕಡಿಮೆ ಜನರು ಕೇಳುತ್ತಾರೆ. ಯೇಸುವು ನಿಜವಾಗಿಯೂ ಸುಮಾರು 2000 ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಇಸ್ರೇಲ್ನಲ್ಲಿ ನಡೆದಾಡಿದ ವ್ಯಕ್ತಿ ಎಂಬುದನ್ನು ಸಾಮಾನ್ಯವಾಗಿ ಸ್ವೀಕರಿಸಲಾಗಿದೆ. ಯೇಸುವಿನ ಸಂಪೂರ್ಣ ಸ್ವಸ್ವರೂಪದ ವಿಷಯವನ್ನು ಚರ್ಚಿಸಿದಾಗ ವಾಗ್ವಾದ ಪ್ರಾರಂಭವಾಗುತ್ತದೆ. ಬಹುತೇಕ ಪ್ರತಿಯೊಂದು ಪ್ರಧಾನ ಧರ್ಮವು ಯೇಸುವು ಒಬ್ಬ ಪ್ರವಾದಿ, ಅಥವಾ ಒಬ್ಬ ಉತ್ತಮ ಗುರು, ಅಥವಾ ಒಬ್ಬ ದೇವತಾ ಮನುಷ್ಯನೆಂಬುದಾಗಿ ಕಲಿಸುತ್ತವೆ. ಇಲ್ಲಿ ಸಮಸ್ಯೆಯೆಂದರೆ, ಯೇಸುವು ಒಬ್ಬ ಪ್ರವಾದಿ, ಅಥವಾ ಒಬ್ಬ ಉತ್ತಮ ಗುರು, ಅಥವಾ ಒಬ್ಬ ದೇವತಾ ಮನುಷ್ಯನಿಗಿಂತ ಅನಂತವಾಗಿ ಉನ್ನತನಾದವನೆಂದು ಬೈಬಲ್ ಹೇಳುತ್ತದೆ.

ಸಿ.ಎಸ್. ಲೂಯಿಸ್ ತನ್ನ ಪುಸ್ತಕ ಮಿಯರ್ ಕ್ರಿಶ್ಚಿಯಾನಿಟಿಯಲ್ಲಿ ಈ ಕೆಳಗಿನದನ್ನು ಬರೆಯುತ್ತಾನೆ. “ನಾನು ಇಲ್ಲಿ ಜನರು ಆಗಾಗ ಅವನ [ಯೇಸು ಕ್ರಿಸ್ತನ] ಕುರಿತು ಹೇಳುವ ನಿಜವಾದ ಮೂರ್ಖತನದ ಮಾತನ್ನು ಹೇಳುವುದರಿಂದ ಯಾರನ್ನಾದರೂ ತಡೆಯಲು ಪ್ರಯತ್ನಿಸುತ್ತಿದ್ದೇನೆ: ‘ನಾನು ಯೇಸುವನ್ನು ಒಬ್ಬ ಮಹಾನ್ ನೈತಿಕ ಗುರುವೆಂದು ಸ್ವೀಕರಿಸಲು ಸಿದ್ಧನಿದ್ದೇನೆ, ಆದರೆ ಅವನು ದೇವರೆಂಬ ಸಾರುವಿಕೆಯನ್ನು ನಾನು ಒಪ್ಪುವುದಿಲ್ಲ.’ ಇದು ನಾವು ಹೇಳಬಾರದಾಗಿರುವಂಥ ಒಂದು ವಿಷಯವಾಗಿದೆ. ಕೇವಲ ಒಬ್ಬ ಮಾನವನಾಗಿರುವ ಮತ್ತು ಯೇಸುವು ಹೇಳಿರುವಂತಹ ವಿಷಯಗಳನ್ನು ಹೇಳಿರುವ ಒಬ್ಬ ಮನುಷ್ಯನು ಒಬ್ಬ ಮಹಾನ್ ನೈತಿಕ ಗುರುವಾಗಲಾರನು. ಅವನು ಒಂದೋ ಒಬ್ಬ ಹುಚ್ಚನಾಗಿರುತ್ತಾನೆ -- ಅವನು ನಿಷ್ಪ್ರಯೋಜಕ ವ್ಯಕ್ತಿಯ ಮಟ್ಟದಲ್ಲಿರುತ್ತಾನೆ -- ಅಥವಾ ಅವನೊಬ್ಬ ನರಕದ ಪಿಶಾಚಿಯಾಗಿರುತ್ತಾನೆ. ನೀವು ನಿಮ್ಮ ಆಯ್ಕೆಯನ್ನು ಮಾಡಬೇಕು. ಒಂದೋ ಈ ಮನುಷ್ಯನು ದೇವರ ಮಗನಾಗಿದ್ದನು, ಮತ್ತು ಆಗಿರುವನು, ಇಲ್ಲವೇ ಒಬ್ಬ ಹುಚ್ಚುಮಾನವ ಅಥವಾ ಇನ್ನೂ ಕೆಟ್ಟವನಾಗಿರುವನು…. ಒಬ್ಬ ಮೂರ್ಖನೆಂದು ನೀವು ಆತನ ಬಾಯಿ ಮುಚ್ಚಿಸಬಹುದು, ಅವನ ಮೇಲೆ ಉಗುಳಬಹುದು ಮತ್ತು ಅವನನ್ನು ಒಬ್ಬ ರಾಕ್ಷಸನೆಂದು ಕರೆಯಬಹುದು; ಅಥವಾ ನೀವು ಅವನ ಪಾದಗಳ ಮೇಲೆ ಎರಗಿ ಅವನನ್ನು ಅಧೀಶ್ವರ ಮತ್ತು ದೇವರೆಂದು ಕರೆಯಬಹುದು. ಆದರೆ ಅವನು ಒಬ್ಬ ಮಹಾನ್ ಮಾನವ ಗುರುವಾಗಿದ್ದ ಕುರಿತು ನಾವು ಪ್ರೋತ್ಸಾಹಕ ಅಸಂಬದ್ಧ ಕಲ್ಪನೆಯನ್ನು ಮುಂದಿಡುವುದು ಬೇಡ.ಅವನು ನಮಗೆ ಈ ಆಯ್ಕೆಯನ್ನು ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಇದು ಅವನ ಉದ್ದೇಶವೂ ಅಲ್ಲ.”

ಹಾಗಾದರೆ, ಯೇಸುವನ್ನು ಯಾರೆಂದು ಸಾರಲಾಗಿತ್ತು? ಆತನು ಯಾರಾಗಿದ್ದನೆಂದು ಬೈಬಲ್ ಹೇಳುತ್ತದೆ? ಮೊದಲು, ಜಾನ್ 10:30 ರಲ್ಲಿ ಯೇಸುವಿನ ಮಾತುಗಳನ್ನು ನೋಡೋಣ, “ನಾನು ಮತ್ತು ತಂದೆ ಒಂದೇ ಆಗಿದ್ದೇವೆ.” ಮೊದಲ ನೋಟದಲ್ಲಿ, ಇದು ತಾನು ದೇವರೆಂಬ ಪ್ರತಿಪಾದನೆಯಂತೆ ಕಾಣದೇ ಇರಬಹುದು. ಆದರೂ, ಆತನ ಹೇಳಿಕೆಗೆ ಯಹೂದಿಗಳ ಪ್ರತಿಕ್ರಿಯೆಯನ್ನು ನೋಡಿ, ಯಹೂದಿಗಳು ಹೀಗೆ ಪ್ರತ್ಯುತ್ತರ ನೀಡಿದರು, “ಇವುಗಳಲ್ಲಿ ಯಾವುದೇ ಕಾರಣಕ್ಕಾಗಿಯೂ ನಾವು ನಿನಗೆ ಕಲ್ಲು ಎಸೆಯುತ್ತಿಲ್ಲ, ನಾವು ಹೀಗೆ ಮಾಡುತ್ತಿರುವುದು ಧರ್ಮ ನಿಂದೆಗಾಗಿ, ಏಕೆಂದರೆ ನೀನೊಬ್ಬ ಮನುಷ್ಯ ಮಾತ್ರನಾಗಿ ದೇವರೆಂದು ಸಾರಿಕೊಳ್ಳತ್ತಿರುವೆ” (ಜಾನ್ 10:33). ಯಹೂದಿಗಳು ಯೇಸುವಿನ ಹೇಳಿಕೆಯನ್ನು ಅದು ತಾನು ದೇವರೆಂದು ಸಾರಿಕೊಳ್ಳುವುದು ಎಂಬುದಾಗಿ ಅರ್ಥಮಾಡಿಕೊಂಡರು. ಈ ಕೆಳಗಿನ ಪಂಕ್ತಿಗಳಲ್ಲಿ ಯೇಸುವು “ತಾನು ದೇವರೆಂದು ಸಾರಿಕೊಳ್ಳಲಿಲ್ಲ” ಎಂದು ಹೇಳುವ ಮೂಲಕ ಎಂದಿಗೂ ಯಹೂದಿಗಳನ್ನು ತಿದ್ದುವುದಿಲ್ಲ. ಯೇಸುವು “ನಾನು ಮತ್ತು ತಂದೆ ಒಂದೇ ಆಗಿದ್ದೇವೆ” (ಜಾನ್ 10:30) ಎಂದು ಘೋಷಿಸುವ ಮೂಲಕ ತಾನು ದೇವರೆಂಬುದಾಗಿ ನಿಜವಾಗಿಯೂ ಹೇಳುತ್ತಿದ್ದನು ಎಂಬುದನ್ನು ಅದು ಸೂಚಿಸುತ್ತದೆ. ಜಾನ್ 8:58 ಮತ್ತೊಂದು ಉದಾಹರಣೆಯಾಗಿದೆ. ಯೇಸುವು ಘೋಷಿಸಿದನು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಯೇಸು ಉತ್ತರಿಸಿದನು, ಅಬ್ರಾಹಾಂಗೆ ಮೊದಲು ಜನಿಸಿದ್ದು ನಾನು!” ಪುನಃ, ಪ್ರತ್ಯುತ್ತರವಾಗಿ, ಯೆಹೂದ್ಯರು ಯೇಸುವಿಗೆ ಕಲ್ಲು ಹೊಡೆಯಲು ಪ್ರಯತ್ನಿಸುತ್ತಾ ಕಲ್ಲುಗಳನ್ನು ಎತ್ತಿಕೊಂಡರು (ಜಾನ್ 8:59). ಯೇಸುವು ತನ್ನ ಸ್ವಸ್ವರೂಪವನ್ನು “ನಾನು” ಎಂಬುದಾಗಿ ಘೋಷಿಸುತ್ತಿರುವುದು ಹಳೆಯ ಒಡಂಬಡಿಕೆಯಲ್ಲಿರುವ ದೇವರ ಹೆಸರಿನ ನೇರ ಬಳಕೆಯಾಗಿದೆ (ಎಕ್ಸೋಡಸ್ 3:14). ಯಹೂದಿಗಳು ಧರ್ಮನಿಂದೆ ಎಂಬುದಾಗಿ ನಂಬಿರುವಂತಹ ಏನನ್ನೂ, ಉದಾಹರಣೆಗೆ ತಾನು ದೇವರೆಂಬ ಸಾರುವಿಕೆಯನ್ನು,ಯೇಸುವು ಮಾಡದಿದ್ದರೆ ಅವರು ಏಕೆ ಅವನಿಗೆ ಪುನಃ ಕಲ್ಲುಗಳಿಂದ ಹೊಡೆಯಲು ಬಯಸುತ್ತಿದ್ದರು?

“ಆ ಶಬ್ದವು ದೇವರಾಗಿತ್ತು” ಎಂದು 1:1 ಹೇಳುತ್ತದೆ. “ಆ ಶಬ್ದವು ಮಾಂಸಮಯವಾದ ಶರೀರವಾಯಿತು” ಎಂದು 1:14 ಹೇಳುತ್ತದೆ. ಯೇಸುವು ಮಾಂಸಮಯವಾದ ಶರೀರವಿರುವ ದೇವರು ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅನುಯಾಯಿಯಾದ ಥಾಮಸ್ ಯೇಸುವನ್ನು “ನನ್ನ ಭಗವಂತ ಮತ್ತು ನನ್ನ ದೇವರು” ಎಂದು ಘೋಷಿಸಿದನು (ಜಾನ್ 20:28). ಯೇಸುವು ಅವನನ್ನು ತಿದ್ದುವುದಿಲ್ಲ. ಪ್ರಚಾರಕನಾದ ಪೌಲ್ ಅವನನ್ನು, “...ನಮ್ಮ ಮಹಾನ್ ದೇವರು ಮತ್ತು ಉದ್ಧಾರಕ, ಯೇಸು ಕ್ರಿಸ್ತ” ಎಂದು ವಿವರಿಸುತ್ತಾನೆ (ಟೈಟಸ್ 2:13). ಪ್ರಚಾರಕನಾದ ಪೀಟರ್ ಅದನ್ನೇ ಹೇಳುತ್ತಾನೆ, “... ನಮ್ಮ ದೇವರು ಮತ್ತು ಉದ್ಧಾರಕ ಯೇಸು ಕ್ರಿಸ್ತ” (2 ಪೀಟರ್ 1:1). ದೇವರು ಯೇಸುವಿನ ಸಂಪೂರ್ಣ ಸ್ವಸ್ವರೂಪದ ಸಾಕ್ಷಿಯಾಗಿದ್ದಾನೆ, ಆದರೆ ಪುತ್ರನ ಕುರಿತು ಅವನು ಹೀಗೆ ಹೇಳುತ್ತಾನೆ, “ಓ ದೇವರೆ, ನಿಮ್ಮ ಪ್ರಭುತ್ವವು ಸದಾಕಾಲ ಇರುತ್ತದೆ, ಹಾಗೂ ಧರ್ಮಶೀಲತೆಯು ನಿಮ್ಮ ಸಾಮ್ರಾಜ್ಞದ ರಾಜದಂಡವಾಗಿದೆ.” ಹಳೆಯ ಒಡಂಬಡಿಕೆಯ ಯೇಸುವಿನ ಭವಿಷ್ಯವಾದಿಗಳು ತಮ್ಮ ದೇವರನ್ನು ಹೀಗೆಂದು ಘೋಷಿಸುತ್ತಾರೆ, “ನಮಗಾಗಿ ಒಂದು ಮಗುವು ಜನಿಸಿದೆ, ನಮಗೆ ಒಬ್ಬ ಮಗನನ್ನು ನೀಡಲಾಗಿದೆ, ಹಾಗೂ ಸರ್ಕಾರದ ಹೊಣೆಯು ಅವನ ಭುಜಗಳ ಮೇಲಿರುತ್ತದೆ. ಮತ್ತು ಅವನನ್ನುಒಬ್ಬ ಪ್ರಶಂಸನೀಯ ಸಲಹೆಗಾರ, ಶ್ರೇಷ್ಠ ದೇವರು, ಚಿರಂಜೀವಿ ಸೃಷ್ಟಿಕರ್ತ, ಶಾಂತಿದೂತನೆಂದು ಕರೆಯಲಾಗುತ್ತದೆ.”

ಆದ್ದರಿಂದ, ಸಿ. ಎಸ್. ಲೂಯಿಸ್ ವಾದಿಸಿದಂತೆ ಯೇಸುವನ್ನು ಒಬ್ಬ ಉತ್ತಮ ಗುರುವೆಂದು ನಂಬುವುದು ಒಂದು ಆಯ್ಕೆಯಾಗಿರುವುದಿಲ್ಲ. ಯೇಸುವನ್ನು ಸ್ಪಷ್ಟವಾಗಿ ಮತ್ತು ನಿರ್ವಿವಾದವಾಗಿ ದೇವರೆಂದು ಸಾರಲಾಗಿದೆ. ಅವನು ದೇವರಾಗಿರದಿದ್ದಲ್ಲಿ, ಅವನೊಬ್ಬ ಸುಳ್ಳುಗಾರನಾಗಿರುವನು, ಹಾಗೂ ಆದ್ದರಿಂದ ಒಬ್ಬ ಪ್ರವಾದಿ, ಉತ್ತಮ ಗುರು, ಅಥವಾ ದೇವತಾ ಮನುಷ್ಯನಾಗಿರಲಾರನು. ಯೇಸುವಿನ ಮಾತುಗಳನ್ನು ಟೀಕಿಸುತ್ತಾ ವಿವರಿಸುವ ತಮ್ಮ ಪ್ರಯತ್ನಗಳಲ್ಲಿ, ಆಧುನಿಕ “ವಿದ್ವಾಂಸರು”, ಯೇಸುವಿನ ಮಾತುಗಳೆಂದು ಬೈಬಲ್ ಹೇಳುವ ಹಲವಾರು ವಿಷಯಗಳನ್ನು “ಸತ್ಯವಾದ ಚಾರಿತ್ರಿಕ ಯೇಸು”ವು ಹೇಳಿರಲೇ ಇಲ್ಲ ಎಂಬುದಾಗಿ ಸಾರುತ್ತಾರೆ. ಯೇಸುವು ಏನನ್ನು ಹೇಳಿದನು ಅಥವಾ ಹೇಳಲಿಲ್ಲ ಎಂಬುದಕ್ಕೆ ಸಂಬಂಧಪಟ್ಟ ದೇವರ ಶಬ್ದಗಳೊಡನೆ ವಾದ ಮಾಡಲು ನಾವು ಯಾರು? ಎರಡು ಸಾವಿರ ವರ್ಷಗಳಿಂದ ಯೇಸುವಿನಿಂದ ಪ್ರತ್ಯೇಕಗೊಂಡಿರುವ ಒಬ್ಬ “ವಿದ್ವಾಂಸನು” ಯೇಸುವು ಏನನ್ನು ಹೇಳಿದನು ಅಥವಾ ಹೇಳಲಿಲ್ಲ ಎಂಬ ಕುರಿತು ಸ್ವತಃ ಯೇಸುವಿನೊಂದಿಗೆ ಜೀವಿಸಿದ, ಸೇವೆ ಮಾಡಿದ, ಮತ್ತು ಕಲಿತ ಜನರಿಗಿಂತ ಉತ್ತಮವಾದ ಪರಿಜ್ಞಾನವನ್ನು ಹೊಂದಿರಲು ಹೇಗೆ ಸಾಧ್ಯ (ಜಾನ್ 14:26)?

ಯೇಸುವಿನ ನಿಜವಾದ ಸ್ವಸ್ವರೂಪದ ಮೇಲಿನ ಪ್ರಶ್ನೆಯು ಯಾಕೆ ಅಷ್ಟು ಮುಖ್ಯವಾಗಿದೆ? ಯೇಸುವು ದೇವರೇ ಅಥವಾ ಅಲ್ಲವೇ ಎಂಬ ಮಾತು ಯಾಕೆ ಮಹತ್ವವನ್ನು ಪಡೆದಿದೆ? ಯೇಸುವು ದೇವರಾಗಿರಬೇಕು ಎನ್ನುವುದಕ್ಕೆ ಅತೀ ಮುಖ್ಯವಾದ ಕಾರಣವೆಂದರೆ, ಅವನು ದೇವರಲ್ಲದಿದ್ದಲ್ಲಿ, ಅವನ ಮರಣವು ಇಡೀ ಜಗತ್ತಿನ ಪಾಪಗಳಿಗೆ ದಂಡ ತೆರಲು ಸಾಕಾಗುತ್ತಿರಲಿಲ್ಲ (1 ಜಾನ್ 2:2). ಅಂತಹ ಅನಂತವಾದ ದಂಡವನ್ನು ದೇವರಿಗೆ ಮಾತ್ರ ಪಾವತಿಸಲು ಸಾಧ್ಯ 5:8; 2 ಕೊರಿಂಥಿಯನ್ನರು 5:21). ನಮ್ಮ ಸಾಲವನ್ನು ಪಾವತಿಸುವಂತಾಗಲು ಯೇಸುವು ದೇವರಾಗಿರಲೇಬೇಕು. ಯೇಸುವು ಮರಣವನ್ನು ಹೊಂದುವಂತಾಗಲು ಅವನು ಮನುಷ್ಯನಾಗಬೇಕಿತ್ತು. ಯೇಸು ಕ್ರಿಸ್ತನಲ್ಲಿ ಶ್ರದ್ದೆಯಿಡುವುದರಿಂದ ಮಾತ್ರ ರಕ್ಷಣೆ ಪ್ರಾಪ್ತಿಯಾಗುತ್ತದೆ! ಯೇಸು ದೇವರು ರಕ್ಷಣೆಯ ಏಕಮಾತ್ರ ಮಾರ್ಗವಾಗಿರುತ್ತಾರೆ. ಆದ್ದರಿಂದಲೇ ಯೇಸು ದೇವರು ಹೀಗೆಂದು ಘೋಷಿಸಿದ್ದಾರೆ, “ನಾನೇ ಮಾರ್ಗ ಮತ್ತು ಸತ್ಯ ಮತ್ತು ಜೀವನ. ನನ್ನ ಮೂಲಕವಲ್ಲದೆ ಯಾರಿಗೂ ತಂದೆಯನ್ನು ತಲುಪಲು ಸಾಧ್ಯವಿಲ್ಲ” (ಜಾನ್ 14:6).


ಪ್ರಶ್ನೆ: ಯೇಸುವು ದೇವರೇ? ಯೇಸುವು ಎಂದಾದರು ತಾನು ದೇವರೆಂದು ಸಾರಿಕೊಂಡನೇ?

“ನಾನು ದೇವರು”, ಎಂಬ ಇದೇ ಪದಗಳನ್ನು ಯೇಸುವು ಹೇಳಿದುದು ಬೈಬಲ್ನಲ್ಲಿ ಎಂದೂ ದಾಖಲಾಗಿಲ್ಲ. ಆದರೆ ಅದರರ್ಥ ಅವನು ತಾನು ದೇವರೆಂದು ಸಾರಿಲ್ಲವೆಂದು ಅಲ್ಲ. ಉದಾಹರಣೆಗೆ ಜಾನ್ 10:30 ನಲ್ಲಿ ಯೇಸುವಿನ ಮಾತುಗಳನ್ನು ತೆಗೆದುಕೊಳ್ಳಿ “ನಾನು ಮತ್ತು ತಂದೆಯು ಒಂದೇ ಆಗಿದ್ದೇವೆ”. ಮೊದಲ ನೋಟಕ್ಕೆ ಇದು ದೇವರಾಗಿರುವುದಾಗಿ ಸಾರಿದಂತೆ ಕಾಣುವುದಿಲ್ಲ. ಆದರೆ, ಅವನ ಹೇಳಿಕೆಗೆ ಯಹೂದಿಯ ಪ್ರತಿಕ್ರಿಯೆಯನ್ನು ನೋಡಿ, “ ನಾವು ಈ ಯಾವುದಕ್ಕಾಗಿಯೂ ಕಲ್ಲು ತೂರುತ್ತಿಲ್ಲ, ಜ್ಯೂಗಳು ಉತ್ತರಿಸುತ್ತಾ ಹೇಳಿದರು, ದೈವದ್ರೋಹಕ್ಕಾಗಿ, ಏಕೆಂದರೆ ಕೇವಲವಾದ ಮನುಷ್ಯ, ದೇವರೆಂದು ಸಾರಿಕೊಳ್ಳುತ್ತಿರುವುದರಿಂದ” (ಜಾನ್ 10:33). ಯೇಸುವಿನ ಹೇಳಿಕೆಯನ್ನು ಯಹೂದಿಗಳು ದೇವರೆಂದು ಸಾರಿಕೊಳ್ಳುತ್ತಿರುವುದಾಗಿ ಅರ್ಥ ಮಾಡಿಕೊಂಡರು. ಈ ಕೆಳಗಿನ ಶ್ಲೋಕಗಳಲ್ಲಿ, ಯೇಸುವು ಯಹೂದಿಗಳನ್ನು ಕುರಿತು “ನಾನು ದೇವರೆಂದು ಸಾರಿಕೊಳ್ಳಲಿಲ್ಲ” ಎಂದು ಹೇಳುತ್ತಾ ಸರಿಪಡಿಸಲಿಲ್ಲ. “ನಾನು ಮತ್ತು ತಂದೆ ಒಂದೇ ಆಗಿದ್ದೇವೆ” ಎಂದು ಸಾರಿಕೊಳ್ಳುವ ಮೂಲಕ ಯೇಸುವು ನಿಜಕ್ಕೂ ತಾನು ದೇವರೆಂದು ಹೇಳಿದ ಎಂದು ಸೂಚಿಸುತ್ತದೆ 10:30). ಜಾನ್ 8:58 ಇನ್ನೊಂದು ಉದಾಹರಣೆ. ಯೇಸುವು ಸಾರಿದ, "ನಾನು ನಿಮಗೆ ನಿಜವನ್ನು ಹೇಳುತ್ತೇನೆ, ಅಬ್ರಹಾಂಗೂ ಮೊದಲು ಹುಟ್ಟಿದ್ದು, ನನ್ನ ಇರುವಿಕೆ! ಮತ್ತೆ, ಪ್ರತಿಕ್ರಿಯಿಸುತ್ತಾ, ಜ್ಯೂಗಳು ಯೇಸುವಿಗೆ ಕಲ್ಲು ತೂರಲು ಪ್ರಯತ್ನಿಸುತ್ತಾ ಕಲ್ಲುಗಳನ್ನು ತೆಗೆದುಕೊಳ್ಳುತ್ತಾರೆ, 8:59). ಅವರು ದೈವದ್ರೋಹವೆಂದು ಪರಿಗಣಿಸಿದ ದೇವರೆಂದು ಸಾರಿಕೊಳ್ಳುವುದನ್ನು ಯೇಸುವು ಮಾಡಲಿಲ್ಲವಾದರೆ ಯಹೂದಿಗಳು ಯೇಸುವಿಗೆ ಏಕೆ ಕಲ್ಲು ತೂರುತ್ತಿದ್ದರು?

ಜಾನ್ 1:1 ಹೇಳುತ್ತಾನೆ “ಮಾತೇ ದೇವರಾಗಿತ್ತು.” ಜಾನ್ 1:14 ಹೇಳುತ್ತಾರೆ “ಮಾತೇ ಮಾಂಸಮಯವಾಯಿತು.” ಇದು ಯೇಸುವು ಮಾಂಸಮಯವಾದ ಶರೀರದಲ್ಲಿರುವ ದೇವರು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಕಾಯ್ದೆ 20:28 ನಮಗೆ ಹೇಳುತ್ತದೆ, "...ತನ್ನದೇ ರಕ್ತದಿಂದ ಕೊಂಡಂತಹ ದೇವರ ಇಗರ್ಜಿಯ ಕುರುಬರಾಗಿರಿ." ತನ್ನದೇ ರಕ್ತದಿಂದ ಇಗರ್ಜಿಯನ್ನು ಯಾರು ಕೊಂಡರು? ಯೇಸು ಕ್ರಿಸ್ತನು. ಕಾಯ್ದೆ 20:28 ದೇವರು ತನ್ನದೇ ರಕ್ತದಿಂದ ಇಗರ್ಜಿಯನ್ನು ಖರೀದಿಸಿದನು ಎಂದು ಘೋಷಿಸುತ್ತದೆ. ಆದ್ದರಿಂದ, ಯೇಸುವು ದೇವರು!

ಶಿಷ್ಯನಾದ ಥಾಮಸ್ ಯೇಸುವನ್ನು ಕುರಿತು ಘೋಷಿಸಿದನು, “ಅಧೀಶ ಮತ್ತು ನನ್ನ ದೇವರು”. (ಜಾನ್ 20:28). ಯೇಸುವು ಅವನನ್ನು ಸರಿಪಡಿಸಲಿಲ್ಲ. ಟಿಟಸ್ 2:13 ನಮ್ಮ ದೇವರು ಮತ್ತು ಉದ್ಧಾರಕನಾದ - ಯೇಸು ಕ್ರಿಸ್ತನ ಬರುವಿಕೆಗೆ ಕಾಯಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. (ಇದನ್ನೂ ನೋಡಿ 2 ಪೀಟರ್ 1:1). ಇದರಲ್ಲಿ ಹೀಬ್ರೂಸ್ 1:8, ಯೇಸುವಿನ ಬಗ್ಗೆ ತಂದೆಯು ಘೋಷಿಸುತ್ತಾನೆ, " ಆದರೆ ಮಗನ ಬಗ್ಗೆ ಅವನು ಹೇಳುತ್ತಾನೆ, "ನಿನ್ನ ಸಿಂಹಾಸನ, ಓ ದೇವರೇ, ಎಂದೆಂದಿಗೂ ಇರುತ್ತದೆ ಮತ್ತು ಧರ್ಮಶೀಲತೆಯು ನಿನ್ನ ಸಾಮ್ರಾಜ್ಯದ ರಾಜದಂಡವಾಗುತ್ತದೆ.”

ದಿವ್ಯಜ್ಞಾನವನ್ನು ನೀಡುತ್ತಾ, ಒಬ್ಬ ದೇವದೂತ ಯೇಸುವಿನ ದೂತನಾದ ಜಾನ್ ಗೆ ದೇವರನ್ನು ಮಾತ್ರ ಪೂಜಿಸಲು ಸೂಚಿಸಿದನು. (ಪ್ರಕರಣ 19:10). ಪವಿತ್ರ ಬೈಬಲಿನಲ್ಲಿ ಹಲವು ಬಾರಿ ಯೇಸುವು ಪೂಜೆಯನ್ನು ಸ್ವೀಕರಿಸುತ್ತಾನೆ. (ಮ್ಯಾಥ್ಯೂ 2:11; 14:33; 28:9,17; ಲ್ಯೂಕ್ 24:52; ಜಾನ್ 9:38). ಅವನನ್ನು ಪೂಜಿಸಿದುದಕ್ಕೆ ಅವನು ಎಂದೂ ಜನರನ್ನು ಗದರಿಸುವುದಿಲ್ಲ. ಯೇಸುವು ದೇವರಲ್ಲವಾಗಿದ್ದರೆ, ದಿವ್ಯಜ್ಞಾನ ಬೋಧನೆಯಲ್ಲಿ ದೇವದೂತನ ಹಾಗೆ, ಅವನು ಜನರಿಗೆ ತನ್ನನ್ನು ಪೂಜೆ ಮಾಡದಿರುವಂತೆ ಹೇಳುತ್ತಿದ್ದನು. ಯೇಸುವಿನ ದೈವತ್ವದ ಪರವಾಗಿ ವಾದಿಸುವ ಹಲವು ಇತರ ಶ್ಲೋಕಗಳು ಮತ್ತು ಉದ್ಧೃತ ಭಾಗಗಳು ಪವಿತ್ರ ಬೈಬಲಿನಲ್ಲಿವೆ.

ಯೇಸುವು ದೇವರಾಗಿರಲೇಬೇಕೆಂಬುದಕ್ಕೆ ಎಲ್ಲಕ್ಕಿಂತ ಮುಖ್ಯವಾದ ಕಾರಣವೆಂದರೆ, ಅವನು ದೇವರಲ್ಲವಾಗಿದ್ದಿದ್ದರೆ, ಇಡೀ ಜಗತ್ತಿನ ಪಾಪಗಳ ದಂಡ ತೆರಲು ಅವನ ಮರಣವು ಸಾಕಾಗುತ್ತಿರಲಿಲ್ಲ. (1 ಜಾನ್ 2:2). ಕೇವಲ ದೇವರಿಗೆ ಮಾತ್ರ ಅಂತಹ ಅನಂತವಾದ ದಂಡ ತೆರಲು ಸಾಧ್ಯವಾಯಿತು. ಜಗತ್ತಿನ ಪಾಪಗಳನ್ನು ದೇವರಿಗೆ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಯಿತು. (2 ಕರಿಂತಿಯನ್ಸ್ 5:21), ಮರಣ ಹೊಂದು, ಮತ್ತು ಪುನರುಜ್ಜೀವಿತನಾಗು – ಪಾಪ ಮತ್ತು ಮರಣದ ಮೇಲೆ ಅವನ ವಿಜಯವನ್ನು ರುಜುವಾತು ಪಡಿಸುತ್ತಾ.