ಭಕ್ತರ ದೀನಭಾವ
ಯಾತ್ರಾಗೀತೆ; ದಾವೀದನದು.
ಜ್ಞಾನೋ 23:26; ಮತ್ತಾ 18:3
1ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ;
ನನಗೆ ಸೊಕ್ಕಿನ ಕಣ್ಣುಗಳಿಲ್ಲ;
ಅಸಾಧ್ಯ ಕಾರ್ಯಗಳಿಗೆ ಕೈಹಾಕುವುದಿಲ್ಲ.
2ನಿಜವಾಗಿ ನನ್ನ ಮನಸ್ಸನ್ನು ಸಮಾಧಾನಪಡಿಸಿಕೊಂಡಿದ್ದೇನೆ;
ತಾಯಿಯ ಮಡಿಲಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ,
ನನ್ನಲ್ಲಿ ನನ್ನ ಮನಸ್ಸು ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದಿದೆ.
3ಇಸ್ರಾಯೇಲೇ, ಇಂದಿನಿಂದ ಯುಗಯುಗಕ್ಕೂ
ಯೆಹೋವನನ್ನೇ ನಿರೀಕ್ಷಿಸಿಕೊಂಡಿರು.