5
ಆದಾಮನ ಕುಟುಂಬ ಚರಿತ್ರೆ
ಇದು ಆದಾಮನ ಕುಟುಂಬ ಚರಿತ್ರೆ. ದೇವರು ಮನುಷ್ಯನನ್ನು ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿ ಮಾಡಿದನು. ದೇವರು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ಉಂಟುಮಾಡಿದನು. ಆತನು ಅವರನ್ನು ನಿರ್ಮಿಸಿದ ದಿನದಲ್ಲೇ ಅವರನ್ನು ಆಶೀರ್ವದಿಸಿ ಅವರಿಗೆ, “ಮನುಷ್ಯ” ಎಂದು ಹೆಸರಿಟ್ಟನು.
ಆದಾಮನು 130 ವರ್ಷದವನಾದಾಗ ಮತ್ತೊಬ್ಬ ಮಗನನ್ನು ಪಡೆದನು. ಆ ಮಗನು ರೂಪದಲ್ಲಿ ಆದಾಮನಂತಿದ್ದನು. ಆದಾಮನು ಅವನಿಗೆ ಸೇತ ಎಂದು ಹೆಸರಿಟ್ಟನು. ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. ಹೀಗೆ ಆದಾಮನು ಒಟ್ಟು 930 ವರ್ಷ ಜೀವಿಸಿ ಮರಣಹೊಂದಿದನು.
ಸೇತನು 105 ವರ್ಷದವನಾದಾಗ ಎನೋಷ್ ಎಂಬ ಮಗನನ್ನು ಪಡೆದನು. ಎನೋಷನು ಹುಟ್ಟಿದ ಮೇಲೆ ಸೇತನು 807 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಸೇತನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. ಹೀಗೆ ಸೇತನು ಒಟ್ಟು 912 ವರ್ಷ ಜೀವಿಸಿ ಮರಣಹೊಂದಿದನು.
ಎನೋಷನು 90 ವರ್ಷದವನಾದಾಗ ಕೇನಾನ ಎಂಬ ಮಗನನ್ನು ಪಡೆದನು. 10 ಕೇನಾನನು ಹುಟ್ಟಿದ ಮೇಲೆ ಎನೋಷನು 815 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಬೇರೆ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 11 ಹೀಗೆ ಎನೋಷನು ಒಟ್ಟು 905 ವರ್ಷ ಜೀವಿಸಿ ಮರಣಹೊಂದಿದನು.
12 ಕೇನಾನನು 70 ವರ್ಷದವನಾದಾಗ ಅವನು ಮಹಲಲೇಲ ಎಂಬ ಮಗನನ್ನು ಪಡೆದನು. 13 ಮಹಲಲೇಲನು ಹುಟ್ಟಿದ ಮೇಲೆ ಕೇನಾನನು 840 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಕೇನಾನನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 14 ಹೀಗೆ ಕೇನಾನನು ಒಟ್ಟು 910 ವರ್ಷ ಜೀವಿಸಿ ಮರಣಹೊಂದಿದನು.
15 ಮಹಲಲೇಲನು 65 ವರ್ಷದವನಾದಾಗ ಯೆರೆದ ಎಂಬ ಮಗನನ್ನು ಪಡೆದನು. 16 ಯೆರೆದನು ಹುಟ್ಟಿದ ಮೇಲೆ ಮಹಲಲೇಲನು 830 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 17 ಹೀಗೆ ಮಹಲಲೇಲನು ಒಟ್ಟು 895 ವರ್ಷ ಜೀವಿಸಿ ಮರಣಹೊಂದಿದನು.
18 ಯೆರೆದನು 162 ವರ್ಷದವನಾದಾಗ ಹನೋಕ ಎಂಬ ಮಗನನ್ನು ಪಡೆದನು. 19 ಹನೋಕನು ಹುಟ್ಟಿದ ಮೇಲೆ ಯೆರೆದನು 800 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 20 ಹೀಗೆ ಯೆರೆದನು ಒಟ್ಟು 962 ವರ್ಷ ಜೀವಿಸಿ ಮರಣಹೊಂದಿದನು.
21 ಹನೋಕನು 65 ವರ್ಷದವನಾದಾಗ ಮೆತೂಷೆಲಹ ಎಂಬ ಮಗನನ್ನು ಪಡೆದನು. 22 ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರ ಅನ್ಯೋನ್ಯತೆಯಲ್ಲಿ 300 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 23 ಹೀಗೆ ಹನೋಕನು ಒಟ್ಟು 365 ವರ್ಷ ಜೀವಿಸಿದನು. 24 ಹನೋಕನು ದೇವರ ಅನ್ಯೋನ್ಯತೆಯಲ್ಲಿ ಜೀವಿಸುತ್ತಿದ್ದಾಗ, ದೇವರು ಅವನನ್ನು ತನ್ನ ಬಳಿಗೆ ಕರೆದುಕೊಂಡನು. ಅಂದಿನಿಂದ ಅವನು ಕಣ್ಮರೆಯಾದನು.
25 ಮೆತೂಷೆಲಹನು 187 ವರ್ಷದವನಾದಾಗ ಲೆಮೆಕ ಎಂಬ ಮಗನನ್ನು ಪಡೆದನು. 26 ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು 782 ವರ್ಷ ಜೀವಿಸಿದನು. ಆ ಕಾಲಾವಧಿಯಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 27 ಹೀಗೆ ಮೆತೂಷೆಲಹನು ಒಟ್ಟು 969 ವರ್ಷ ಜೀವಿಸಿ ಮರಣಹೊಂದಿದನು.
28 ಲೆಮೆಕನು 182 ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು. 29 ಲೆಮೆಕನು, “ನಾವು ರೈತರಾಗಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಯಾಕೆಂದರೆ ದೇವರು ಭೂಮಿಯನ್ನು ಶಪಿಸಿದನು. ಆದರೆ ಈ ಮಗನು ನಮಗೆ ವಿಶ್ರಾಂತಿ ಕೊಡುವನು” ಎಂದು ಹೇಳಿ ಆ ಮಗುವಿಗೆ ನೋಹ ಎಂದು ಹೆಸರಿಟ್ಟನು.
30 ನೋಹನು ಹುಟ್ಟಿದ ಮೇಲೆ, ಲೆಮೆಕನು 595 ವರ್ಷ ಜೀವಿಸಿದನು. ಆ ಕಾಲದಲ್ಲಿ ಅವನು ಇತರ ಗಂಡುಮತ್ತು ಹೆಣ್ಣುಮಕ್ಕಳನ್ನು ಪಡೆದನು. 31 ಹೀಗೆ ಲೆಮೆಕನು ಒಟ್ಟು 777 ವರ್ಷ ಜೀವಿಸಿ ಮರಣಹೊಂದಿದನು.
32 ನೋಹನು 500 ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂವರು ಗಂಡುಮಕ್ಕಳನ್ನು ಪಡೆದನು.