೨
ಪೌಲನು ಥೆಸಲೊನೀಕದಲ್ಲಿ ಮಾಡಿದ ಸೇವೆ
೧ ಸಹೋದರರೇ, * ಅಥವಾ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂತಲೂ. ನಾವು ವ್ಯರ್ಥವಾಗಿ ನಿಮ್ಮಲ್ಲಿಗೆ ಬರಲಿಲ್ಲವೆಂಬುದು ನಿಮಗೆ ತಿಳಿದಿರುವ ಪ್ರಕಾರವೇ, ೨ ನಮಗೆ † ಅ. ಕೃ. 16:22-24:ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ ‡ ಅ. ಕೃ. 17:2-9:ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ. ೩ ಯಾಕೆಂದರೆ § 2 ಕೊರಿ. 2:17:ನಮ್ಮ ಬೋಧನೆಯು * 2 ಥೆಸ. 2:11:ತಪ್ಪಾದದ್ದಲ್ಲ, † 1 ಥೆಸ 4:7:ಅಶುದ್ಧವಾದದ್ದೂ ಅಲ್ಲ, ‡ 2 ಕೊರಿ. 4:2:ಮೋಸವೂ ಅಲ್ಲ. ೪ ದೇವರು ನಮ್ಮನ್ನು ಯೋಗ್ಯರೆಂದೆಣಿಸಿ, § ಗಲಾ. 2:7:ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಿದನು. ಆದುದರಿಂದ * ಗಲಾ. 1:10:ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿಯಲ್ಲ † ಕೀರ್ತ. 17:3; ರೋಮಾ. 8:27:ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತಿದ್ದೇವೆ. ೫ ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಯಾರ ಮುಖಸ್ತುತಿಯನ್ನೂ ಮಾಡಿಲ್ಲ ಮತ್ತು ‡ ಅ. ಕೃ. 20:33:ದುರಾಶೆಯನ್ನು ಮರೆಮಾಡುವುಕ್ಕಾಗಿ ವೇಷವನ್ನು ಹಾಕಿಕೊಂಡಿಲ್ಲ. § 1 ಥೆಸ. 2:10; ರೋಮಾ. 1:9:ಇದಕ್ಕೆ ದೇವರೇ ಸಾಕ್ಷಿ. ೬ ಇದಲ್ಲದೆ ನಾವು ಯೇಸು ಕ್ರಿಸ್ತನ * 1 ಕೊರಿ. 9:1:ಅಪೊಸ್ತಲರಾಗಿರುವುದರಿಂದ † ಅಥವಾ, ನಮ್ಮನ್ನು ಸಂರಕ್ಷಿಸಬೇಕಾದ ಹೊರೆಯನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ. 1 ಕೊರಿ. 9:4; 2 ಥೆಸ. 3:9; 1 ಥೆಸ. 2:9; 2 ಕೊರಿ. 11:9:ನಮಗೆ ಗೌರವವನ್ನು ತೋರಿಸಬೇಕೆಂದು ಹೇಳಬಹುದಾಗಿದ್ದರೂ, ‡ 2 ಕೊರಿ. 4:5; ಯೋಹಾ 5:41:ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲಿ, ಇತರರಿಂದಾಗಲಿ ಪಡೆದುಕೊಳ್ಳಲು ಅಪೇಕ್ಷಿಸಲಿಲ್ಲ. ೭ ಆದರೆ § ವ. 11:ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ. ೮ ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ * 2 ಕೊರಿ. 12:15:ನಿಮಗಾಗಿ ಪ್ರಾಣವನ್ನೇ ಕೊಡಲೂ ಸಂತೋಷದಿಂದ ಸಿದ್ಧರಾಗಿದ್ದೆವು.
೯ ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು † ಅ. ಕೃ. 18:3:ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. ‡ 2 ಥೆಸ. 3:8:ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ. ೧೦ ನಂಬುವವರಾದ ನಿಮ್ಮ ವಿಷಯದಲ್ಲಿ § 1 ಥೆಸ. 1:5 ನಾವು ಎಷ್ಟೋ ನಿರ್ಮಲರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬುದಕ್ಕೆ ನೀವು ಮತ್ತು * ವ. 5 ನೋಡಿರಿ. ದೇವರೂ ಸಾಕ್ಷಿಗಳಾಗಿದ್ದೀರಿ. ೧೧  † ವ. 7:ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ, ೧೨ ಧೈರ್ಯಪಡಿಸುತ್ತಾ ತನ್ನ ರಾಜ್ಯದಲ್ಲಿ ಮತ್ತು ಆತನ ಮಹಿಮೆಯಲ್ಲಿ ಪಾಲುಗಾರರಾಗುವುದಕ್ಕಾಗಿ ‡ 1 ಥೆಸ. 5:24; 2 ಥೆಸ. 2:14; 1 ಪೇತ್ರ. 5:10:ಕರೆಯುವ ದೇವರಿಗೆ ತಕ್ಕಹಾಗೆ § ಎಫೆ. 4:1:ಯೋಗ್ಯರಾಗಿ ನೀವು ಜೀವಿಸಬೇಕೆಂದು ವಿಧಿಸಿದೆವೆಂಬುದು ನಿಮಗೇ ತಿಳಿದಿದೆ.
೧೩ ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು * ಗಲಾ. 4:14:ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ † 1 ಥೆಸ. 1:2, 3ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. ‡ ಇಬ್ರಿ. 4:12:ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಕೆಲಸ ಮಾಡುತ್ತದೆ. ೧೪ ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು§ 1 ಥೆಸ. 1:6: ಅನುಸರಿಸುವವರಾಗಿದ್ದಿರಿ. * ಇಬ್ರಿ. 10:33,34:ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು † 1 ಥೆಸ. 3:4; ಅ. ಕೃ. 17:5; 2 ಥೆಸ. 1:4,5:ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ. ೧೫  ‡ ಲೂಕ 24:20:ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು § ಯೆರೆಮೀಯನು 2:30; ಮತ್ತಾ 23:29-34; 5:12:ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು. ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ೧೬  * ಅ. ಕೃ 13:45, 50; 14:2, 19; 17:5, 13; 18:12; 22:21 22:ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೂ ಅಡ್ಡಿಮಾಡುತ್ತಾರೆ. ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣಮಾಡುತ್ತಾರೆ. ಕಡೆಗೆ † 1 ಥೆಸ. 1:10:ದೇವರ ಕೋಪವು ಅವರ ಮೇಲೆ ಬರುತ್ತದೆ.
ಪೌಲನು ಥೆಸಲೋನಿಕದವರನ್ನು ನೋಡುವುದಕ್ಕೆ ಆಸೆಪಟ್ಟದ್ದು
೧೭ ಸಹೋದರರೇ, ನಾವಂತೂ ಸ್ವಲ್ಪಕಾಲ ಮಾತ್ರ ನಿಮ್ಮಿಂದ ದೂರವಾಗಿದ್ದರೂ ‡ 1 ಕೊರಿ. 5:3; ಕೊಲೊ. 2:5:ಹೃದಯದಲ್ಲಿ ಅಗಲದೆ § 1 ಥೆಸ. 3:10:ನಿಮ್ಮನ್ನು ಮುಖಾಮುಖಿಯಾಗಿ ನೋಡುವುದಕ್ಕೆ ಅತಿಯಾದ ಆಸೆಯಿಂದ ಬಹಳ ಪ್ರಯತ್ನಿಸಿದೆವು. ೧೮ ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. ಆದರೆ ಸೈತಾನನು ನನಗೆ * ರೋಮಾ. 1:13; 15:22:ಅಡ್ಡಿ ಮಾಡಿದನು. ೧೯  † 1 ಥೆಸ. 3:13; 4:15; 5:23; ಮತ್ತಾ 24:3; 1 ಕೊರಿ. 15:23; 2 ಥೆಸ. 2:1,8; ಯಾಕೋಬ 5:7,8; 2 ಪೇತ್ರ 1:16; 3:4, 12; 1 ಯೋಹಾ 2:28:ನಮ್ಮ ಕರ್ತನಾದ ಯೇಸು ಹಿಂತಿರುಗಿ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆಯೂ, ‡ ಫಿಲಿ. 4:1:ನಮ್ಮ ಸಂತೋಷವೂ, ನಾವು ಹೊಗಳಿಕೊಳ್ಳುವ ಕಿರೀಟವೂ ಯಾರು? § 1 ಕೊರಿ. 15:31; 2 ಥೆಸ. 1:4:ನೀವೇ ಅಲ್ಲವೇ. ೨೦ ಹೀಗಿರಲಾಗಿ ನೀವೇ ನಮ್ಮ ಮಹಿಮೆ ಮತ್ತು ಸಂತೋಷವೂ ಆಗಿದ್ದೀರಿ.

*೨:೧ ಅಥವಾ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲವೆಂತಲೂ.

†೨:೨ ಅ. ಕೃ. 16:22-24:

‡೨:೨ ಅ. ಕೃ. 17:2-9:

§೨:೩ 2 ಕೊರಿ. 2:17:

*೨:೩ 2 ಥೆಸ. 2:11:

†೨:೩ 1 ಥೆಸ 4:7:

‡೨:೩ 2 ಕೊರಿ. 4:2:

§೨:೪ ಗಲಾ. 2:7:

*೨:೪ ಗಲಾ. 1:10:

†೨:೪ ಕೀರ್ತ. 17:3; ರೋಮಾ. 8:27:

‡೨:೫ ಅ. ಕೃ. 20:33:

§೨:೫ 1 ಥೆಸ. 2:10; ರೋಮಾ. 1:9:

*೨:೬ 1 ಕೊರಿ. 9:1:

†೨:೬ ಅಥವಾ, ನಮ್ಮನ್ನು ಸಂರಕ್ಷಿಸಬೇಕಾದ ಹೊರೆಯನ್ನು ನಿಮ್ಮ ಮೇಲೆ ಹಾಕಬಹುದಾಗಿದ್ದರೂ. 1 ಕೊರಿ. 9:4; 2 ಥೆಸ. 3:9; 1 ಥೆಸ. 2:9; 2 ಕೊರಿ. 11:9:

‡೨:೬ 2 ಕೊರಿ. 4:5; ಯೋಹಾ 5:41:

§೨:೭ ವ. 11:

*೨:೮ 2 ಕೊರಿ. 12:15:

†೨:೯ ಅ. ಕೃ. 18:3:

‡೨:೯ 2 ಥೆಸ. 3:8:

§೨:೧೦ 1 ಥೆಸ. 1:5

*೨:೧೦ ವ. 5 ನೋಡಿರಿ.

†೨:೧೧ ವ. 7:

‡೨:೧೨ 1 ಥೆಸ. 5:24; 2 ಥೆಸ. 2:14; 1 ಪೇತ್ರ. 5:10:

§೨:೧೨ ಎಫೆ. 4:1:

*೨:೧೩ ಗಲಾ. 4:14:

†೨:೧೩ 1 ಥೆಸ. 1:2, 3

‡೨:೧೩ ಇಬ್ರಿ. 4:12:

§೨:೧೪ 1 ಥೆಸ. 1:6:

*೨:೧೪ ಇಬ್ರಿ. 10:33,34:

†೨:೧೪ 1 ಥೆಸ. 3:4; ಅ. ಕೃ. 17:5; 2 ಥೆಸ. 1:4,5:

‡೨:೧೫ ಲೂಕ 24:20:

§೨:೧೫ ಯೆರೆಮೀಯನು 2:30; ಮತ್ತಾ 23:29-34; 5:12:

*೨:೧೬ ಅ. ಕೃ 13:45, 50; 14:2, 19; 17:5, 13; 18:12; 22:21 22:

†೨:೧೬ 1 ಥೆಸ. 1:10:

‡೨:೧೭ 1 ಕೊರಿ. 5:3; ಕೊಲೊ. 2:5:

§೨:೧೭ 1 ಥೆಸ. 3:10:

*೨:೧೮ ರೋಮಾ. 1:13; 15:22:

†೨:೧೯ 1 ಥೆಸ. 3:13; 4:15; 5:23; ಮತ್ತಾ 24:3; 1 ಕೊರಿ. 15:23; 2 ಥೆಸ. 2:1,8; ಯಾಕೋಬ 5:7,8; 2 ಪೇತ್ರ 1:16; 3:4, 12; 1 ಯೋಹಾ 2:28:

‡೨:೧೯ ಫಿಲಿ. 4:1:

§೨:೧೯ 1 ಕೊರಿ. 15:31; 2 ಥೆಸ. 1:4: