1 Timothy
ಪೌಲನು ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ
೧
೧ ನಮ್ಮ ರಕ್ಷಕನಾದ ದೇವರಿಂದಲೂ * ಕೊಲೊ 1:27ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನಿಂದಲೂ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ † 2 ಕೊರಿ 1:1ಅಪೊಸ್ತಲನಾದ ಪೌಲನು ೨  ‡ ತೀತ 1:4ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, § 2 ತಿಮೊ 1:2; 2 ಯೊಹಾ 3; ಯೂದ 2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
ಸುಳ್ಳುಬೋಧನೆಯ ಬಗ್ಗೆ ಎಚ್ಚರಿಕೆ
೩ ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, * 1 ತಿಮೊ 6:3 ಗಲಾ 1:6,7ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ, ೪  † 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ‡ ತೀತ 3:9ವಂಶಾವಳಿಗಳೂ § 1 ತಿಮೊ. 6:4 ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. ೫  * 2 ತಿಮೊ. 2:22ಶುದ್ಧಹೃದಯ, † 1 ಪೇತ್ರ. 3:16, 21ಒಳ್ಳೆಯ ಮನಸ್ಸಾಕ್ಷಿ, ‡ 2 ತಿಮೊ 1:5ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ. ೬ ಕೆಲವರು ಈ ಗುರಿಯನ್ನು ಬಿಟ್ಟು § ತೀತ 1:10ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ. ೭ ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, * 1 ತಿಮೊ 6:4; ಕೊಲೊ 2:18ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ. ೮  † ರೋಮ 7:16ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು. ೯ ಧರ್ಮಶಾಸ್ತ್ರವು ‡ ಗಲಾ 5:23ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು, ೧೦ ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, § 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ. ೧೧ ಈ ಬೋಧನೆಯು * 1 ತಿಮೊ 6:15ಭಾಗ್ಯವಂತನಾದ † 2 ಕೊರಿ 4:4ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ‡ ತೀತ 1:3,4; ಗಲಾ 2:7ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.
೧೨-೧೩  § ಆ. ಕೃ 9:22; ಫಿಲಿ 4:13; 2 ತಿಮೊ 4:17ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, * ಆ. ಕೃ 8:3ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, † 2 ಕೊರಿ. 3:6ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ‡ ಆ. ಕೃ. 3:17ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ § 1 ಕೊರಿ 7:25; 2 ಕೊರಿ 4:1ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು; ೧೪ ಆದರೆ * ರೋಮ 5:20ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ † ಲೂಕ 7:47, 50; 1 ಥೆಸ. 1:3ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು. ೧೫  ‡ ಮತ್ತಾ 9:13; ಯೋಹಾ 3:17; ರೋಮ 4:25ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು § 1 ತಿಮೊ 3:1; 4:9; 2 ತಿಮೊ. 2:11; ತೀತ 3:8ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದ, ಯಾಕೆಂದರೆ * 1 ಕೊರಿ 15:9 ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು. ೧೬ ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು. ೧೭  † ಪ್ರಕ 15:3; 4:9,10ಸರ್ವಯುಗಗಳ ಅರಸನೂ, ‡ 1 ತಿಮೊ 6:15,16; ರೋಮ 1:23ಅಮರನೂ, § ಯೋಹಾ. 1:18; ಕೊಲೊ 1:15; ಇಬ್ರಿ 11:27; 1 ಯೋಹಾ. 4:12ಅದೃಶ್ಯನೂ ಆಗಿರುವ * ಯೂದ 25ಏಕದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
೧೮ ಮಗನಾದ ತಿಮೊಥೆಯನೇ, † 1 ತಿಮೊ 4:14ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ‡ 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ. ೧೯  § 1 ತಿಮೊ 3:9 ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯೆಂಬ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ. ೨೦  * 2 ತಿಮೊ 2:7; ಹುಮೆನಾಯನೂ † 1 ತಿಮೊ 4:14ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ‡ ಕೊರಿ 5:5ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

*೧:೧ ಕೊಲೊ 1:27

†೧:೧ 2 ಕೊರಿ 1:1

‡೧:೨ ತೀತ 1:4

§೧:೨ 2 ತಿಮೊ 1:2; 2 ಯೊಹಾ 3; ಯೂದ 2

*೧:೩ 1 ತಿಮೊ 6:3 ಗಲಾ 1:6,7

†೧:೪ 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16

‡೧:೪ ತೀತ 3:9

§೧:೪ 1 ತಿಮೊ. 6:4

*೧:೫ 2 ತಿಮೊ. 2:22

†೧:೫ 1 ಪೇತ್ರ. 3:16, 21

‡೧:೫ 2 ತಿಮೊ 1:5

§೧:೬ ತೀತ 1:10

*೧:೭ 1 ತಿಮೊ 6:4; ಕೊಲೊ 2:18

†೧:೮ ರೋಮ 7:16

‡೧:೯ ಗಲಾ 5:23

§೧:೧೦ 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2

*೧:೧೧ 1 ತಿಮೊ 6:15

†೧:೧೧ 2 ಕೊರಿ 4:4

‡೧:೧೧ ತೀತ 1:3,4; ಗಲಾ 2:7

§೧:೧೨-೧೩ ಆ. ಕೃ 9:22; ಫಿಲಿ 4:13; 2 ತಿಮೊ 4:17

*೧:೧೨-೧೩ ಆ. ಕೃ 8:3

†೧:೧೨-೧೩ 2 ಕೊರಿ. 3:6

‡೧:೧೨-೧೩ ಆ. ಕೃ. 3:17

§೧:೧೨-೧೩ 1 ಕೊರಿ 7:25; 2 ಕೊರಿ 4:1

*೧:೧೪ ರೋಮ 5:20

†೧:೧೪ ಲೂಕ 7:47, 50; 1 ಥೆಸ. 1:3

‡೧:೧೫ ಮತ್ತಾ 9:13; ಯೋಹಾ 3:17; ರೋಮ 4:25

§೧:೧೫ 1 ತಿಮೊ 3:1; 4:9; 2 ತಿಮೊ. 2:11; ತೀತ 3:8

*೧:೧೫ 1 ಕೊರಿ 15:9

†೧:೧೭ ಪ್ರಕ 15:3; 4:9,10

‡೧:೧೭ 1 ತಿಮೊ 6:15,16; ರೋಮ 1:23

§೧:೧೭ ಯೋಹಾ. 1:18; ಕೊಲೊ 1:15; ಇಬ್ರಿ 11:27; 1 ಯೋಹಾ. 4:12

*೧:೧೭ ಯೂದ 25

†೧:೧೮ 1 ತಿಮೊ 4:14

‡೧:೧೮ 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4

§೧:೧೯ 1 ತಿಮೊ 3:9

*೧:೨೦ 2 ತಿಮೊ 2:7;

†೧:೨೦ 1 ತಿಮೊ 4:14

‡೧:೨೦ ಕೊರಿ 5:5