ಅಪೋಸ್ತಲರ ಸೇವೆ
೧ ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಮರ್ಮವಾದ ಸತ್ಯಾರ್ಥಗಳ ವಿಷಯದಲ್ಲಿ ದೇವರ ಗೃಹ * 1 ಕೊರಿ. 9:17; 1 ಪೇತ್ರ 4:10:ನಿರ್ವಾಹಕರೆಂತಲೂ ಎಣಿಸಿಕೊಳ್ಳಲಿ. ೨ ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ. ೩ ನನಗಾದರೂ ನಿಮ್ಮಿಂದಾಗಲಿ ಅಥವಾ ಮನುಷ್ಯರು ಮಾಡುವ ವಿಚಾರಣೆಯಾಗಲಿ ತೀರಾ ಲಘುವೆನಿಸಿದೆ. ನಾನೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ. ೪  ಅ. ಕೃ. 23:1:ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು ಕೀರ್ತ. 130:3; 143:2; 1 ಯೋಹಾ 3:21:ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ. ೫ ಆದ್ದರಿಂದ ಕರ್ತನು ಬರುವ § ಮತ್ತಾ 7:1; ರೋಮಾ. 2:1; ಮತ್ತಾ 13:29:ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು * 1 ಕೊರಿ. 3:13:ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. 2 ಕೊರಿ. 10:18:ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.
ಪೌಲನು ಕೊರಿಂಥ ಸಭೆಯವರನ್ನು ತಂದೆಯೋಪಾದಿಯಲ್ಲಿ ಗದರಿಸಿದ್ದು
೬ ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು, ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು 1 ಕೊರಿ. 4:18, 19; 5:2; 13:4:ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ. ೭ ನಿನ್ನನ್ನು ಇತರರಿಗಿಂತಲೂ ಶ್ರೇಷ್ಠನನ್ನಾಗಿ ಮಾಡಿದವರು ಯಾರು? § ಯೋಹಾ 3:27:ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದಿದ್ದಲ್ಲವೆಂಬಂತೆ ಯಾಕೆ ಕೊಚ್ಚಿಕೊಳ್ಳುತ್ತೀ? ೮ ಇಷ್ಟು ಬೇಗನೆ ನೀವು ತೃಪ್ತರಾದಿರಿ. ಇಷ್ಟುಬೇಗನೆ ಐಶ್ವರ್ಯವಂತರಾದಿರಿ. ನಮ್ಮ ಸಹಾಯವಿಲ್ಲದೆ ಅರಸರಂತೆ ಆದಿರಿ. ನೀವು ನಿಜವಾಗಿ ಆಳುವವರಾಗಿದ್ದರೇ ನನಗೆ ಆನಂದವಾಗುತ್ತಿತ್ತು. ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೇವು. ೯ ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು * ರೋಮಾ. 8:36:ಮರಣದ ತೀರ್ಪು ಹೊಂದಿದವರಂತೆ ಅಥವಾ ಕಡೆ ವಿನೋದವಾಗಿ. ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದರಾದೆವು. ೧೦  ಅ. ಕೃ. 17:18; 26:24; 1 ಕೊರಿ. 1:18:ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. § 2 ಕೊರಿ. 11:19:ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. * 1 ಕೊರಿ. 2:3; 2 ಕೊರಿ. 13:9:ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು. ೧೧ ಈ ಗಳಿಗೆಯವರೆಗೂ ರೋಮಾ. 8:35; 2 ಕೊರಿ. 11:27; ಫಿಲಿ. 4:12:ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, 2 ಕೊರಿ. 11:20, 23:ಪೆಟ್ಟು ತಿನ್ನುವವರೂ § ಮತ್ತಾ 8:20:ಮನೆಯಿಲ್ಲದವರೂ, ೧೨  * ಅ. ಕೃ. 18:3:ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. 1 ಪೇತ್ರ 3:9:ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. ೧೩ ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಪ್ರಲಾ. 3:45:ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ.
೧೪ ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ § 2 ಕೊರಿ. 6:13; 1 ಥೆಸ. 2:11:ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ. ೧೫  * 1 ಕೊರಿ. 3:10:ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ ಫಿಲೆ. 10. ಗಲಾ. 4:19:ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ. ೧೬ ಆದ್ದರಿಂದ 1 ಕೊರಿ. 11:1; ಫಿಲಿ. 3:17; 4:9; 1 ಥೆಸ. 1:6:ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ೧೭ ಈ ಕಾರಣದಿಂದ § 1 ತಿಮೊ. 1:2; 2 ತಿಮೊ. 1:2:ಕರ್ತನಲ್ಲಿ ನನ್ನ ಪ್ರಿಯ ಮತ್ತು ನಂಬಿಗಸ್ತ ಮಗನಾದ ತಿಮೊಥೆಯನನ್ನು * 1 ಕೊರಿ. 16:10:ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. 1 ಕೊರಿ. 7:17:ನಾನು ಪ್ರತಿಯೊಂದು ಸಭೆಗಳಲ್ಲಿಯೂ, ಎಲ್ಲೆಲ್ಲಿಯೂ ಬೋಧಿಸುವ ಹಾಗೆ ಕ್ರಿಸ್ತನಲ್ಲಿರುವ ನನ್ನ ನಡವಳಿಕೆಗಳನ್ನು ಅವನು ನಿಮ್ಮ ನೆನಪಿಗೆ ತರುವನು. ೧೮ ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು 1 ಕೊರಿ. 4:6:ಉಬ್ಬಿಕೊಂಡಿದ್ದಾರೆ. ೧೯ ಆದರೆ ಕರ್ತನ ಚಿತ್ತವಾದರೆ § 1 ಕೊರಿ. 11:34; 16:5, 6; ಅ. ಕೃ. 19:21; 20:2; 2 ಕೊರಿ. 1:15, 16:ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ. ೨೦  * 1 ಕೊರಿ. 2:4:ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ. ೨೧ ನಿಮ್ಮ ಇಷ್ಟವೇನು? 2 ಕೊರಿ. 13:2, 10 ಇತ್ಯಾದಿ. ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯದ ಆತ್ಮದಿಂದಲೂ ಕೂಡಿದವನಾಗಿ ಬರಲೋ?

*೪:೧ 1 ಕೊರಿ. 9:17; 1 ಪೇತ್ರ 4:10:

೪:೪ ಅ. ಕೃ. 23:1:

೪:೪ ಕೀರ್ತ. 130:3; 143:2; 1 ಯೋಹಾ 3:21:

§೪:೫ ಮತ್ತಾ 7:1; ರೋಮಾ. 2:1; ಮತ್ತಾ 13:29:

*೪:೫ 1 ಕೊರಿ. 3:13:

೪:೫ 2 ಕೊರಿ. 10:18:

೪:೬ 1 ಕೊರಿ. 4:18, 19; 5:2; 13:4:

§೪:೭ ಯೋಹಾ 3:27:

*೪:೯ ರೋಮಾ. 8:36:

೪:೯ ಅಥವಾ ಕಡೆ ವಿನೋದವಾಗಿ.

೪:೧೦ ಅ. ಕೃ. 17:18; 26:24; 1 ಕೊರಿ. 1:18:

§೪:೧೦ 2 ಕೊರಿ. 11:19:

*೪:೧೦ 1 ಕೊರಿ. 2:3; 2 ಕೊರಿ. 13:9:

೪:೧೧ ರೋಮಾ. 8:35; 2 ಕೊರಿ. 11:27; ಫಿಲಿ. 4:12:

೪:೧೧ 2 ಕೊರಿ. 11:20, 23:

§೪:೧೧ ಮತ್ತಾ 8:20:

*೪:೧೨ ಅ. ಕೃ. 18:3:

೪:೧೨ 1 ಪೇತ್ರ 3:9:

೪:೧೩ ಪ್ರಲಾ. 3:45:

§೪:೧೪ 2 ಕೊರಿ. 6:13; 1 ಥೆಸ. 2:11:

*೪:೧೫ 1 ಕೊರಿ. 3:10:

೪:೧೫ ಫಿಲೆ. 10. ಗಲಾ. 4:19:

೪:೧೬ 1 ಕೊರಿ. 11:1; ಫಿಲಿ. 3:17; 4:9; 1 ಥೆಸ. 1:6:

§೪:೧೭ 1 ತಿಮೊ. 1:2; 2 ತಿಮೊ. 1:2:

*೪:೧೭ 1 ಕೊರಿ. 16:10:

೪:೧೭ 1 ಕೊರಿ. 7:17:

೪:೧೮ 1 ಕೊರಿ. 4:6:

§೪:೧೯ 1 ಕೊರಿ. 11:34; 16:5, 6; ಅ. ಕೃ. 19:21; 20:2; 2 ಕೊರಿ. 1:15, 16:

*೪:೨೦ 1 ಕೊರಿ. 2:4:

೪:೨೧ 2 ಕೊರಿ. 13:2, 10 ಇತ್ಯಾದಿ.