ಸಭೆಯಲ್ಲಿ ನಡೆದಿದ್ದ ವಿಪರೀತ ಜಾರತ್ವವನ್ನು ಕುರಿತದ್ದು
೧ ನಿಮ್ಮಲ್ಲಿ ಜಾರತ್ವವುಂಟೆಂಬ ಸುದ್ದಿಯನ್ನು ನಾನು ಕೇಳಿದ್ದೇನೆ. * ಯಾಜ. 18:8; ಧರ್ಮೋ. 22:30; 27:20ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ. ಅಂಥ ಜಾರತ್ವವು ಅನ್ಯಜನರಲ್ಲಿಯೂ ಸಹ ಇಲ್ಲ. ೨ ಹೀಗಿದ್ದರೂ 2 ಕೊರಿ. 7:7ನೀವು ದುಃಖಿಸದೆ, ಈ ಕಾರ್ಯಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸದೆ, ಉಬ್ಬಿಕೊಂಡಿದ್ದೀರಲ್ಲಾ. ೩  2 ಕೊಲೊ. 2:5ನಾನಂತೂ ಶಾರೀರಿಕವಾಗಿ ನಿಮ್ಮಿಂದ ದೂರವಾಗಿದ್ದರೂ, ಆತ್ಮದಿಂದ ಹತ್ತಿರದಲ್ಲಿದ್ದು ಈ ಕಾರ್ಯ ಮಾಡಿದವನನ್ನು ಕುರಿತು ಆಗಲೇ ನಿಮ್ಮ ಹತ್ತಿರವಿದ್ದವನಂತೆ ತೀರ್ಪು ಮಾಡಿದ್ದೇನೆ. ೪  § 2 ಥೆಸ. 3:6; ಮತ್ತಾ 16:19; 18:18; ಯೋಹಾ 20:23; 2 ಕೊರಿ. 13:10ನಮ್ಮ ಕರ್ತನಾದ ಯೇಸುವಿನ ನಾಮದಲ್ಲಿ ನೀವೆಲ್ಲರೂ ಸೇರಿ ಬರುವಾಗ ನಾನು * ಪೌಲನು ತನ್ನ ಯೋಚನೆ ಅಥವಾ ಅಭಿಪ್ರಾಯದ ಮೂಲಕ ಅವರೊಂದಿಗಿದ್ದಾನೆ. ಆತ್ಮದಿಂದ ನಿಮ್ಮೊಂದಿಗಿರುತ್ತೇನೆ ಹಾಗೂ ೫ ಅವನನ್ನು ಸೈತಾನನಿಗೆ ಒಪ್ಪಿಸಿರಿ ಯಾಕೆಂದರೆ ಕರ್ತನಾದ ಯೇಸುವಿನ 1 ಕೊರಿ. 1:8ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವುದಕ್ಕಾಗಿ ಅವನ ಶರೀರಭಾವವು ನಾಶವಾಗುವಂತೆ ಕರ್ತನಾದ ಯೇಸುವಿನ ಶಕ್ತಿಯಿಂದ ತೀರ್ಪು ಮಾಡಿದ್ದೇನೆ. ೬ ನೀವು ಹೊಗಳಿಕೊಳ್ಳುವುದು ಒಳ್ಳೆಯದಲ್ಲ. ಗಲಾ. 5:9; 1 ಕೊರಿ. 15:33ಸ್ವಲ್ಪ ಹುಳಿ ಕಲೆಸಿದರೆ ಕಣಕವೆಲ್ಲಾ ಹುಳಿಯಾಗುತ್ತದೆಂಬುದು ನಿಮಗೆ ತಿಳಿಯದೋ? ೭ ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯಿಂದ ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ. ೮ ಆದಕಾರಣ ನಾವು § ವಿಮೋ. 12:15; 13:7; ಧರ್ಮೋ. 16:3ಹಳೇ ಹುಳಿಯನ್ನು * ಮತ್ತಾ 16:6-12; ಮಾರ್ಕ. 8:15; ಲೂಕ. 12:1ಅಂದರೆ ದುರ್ಮಾರ್ಗತ್ವ ಮತ್ತು ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೇ ಪ್ರಾಮಾಣಿಕತೆ ಹಾಗೂ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.
೯ ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ. ೧೦ ಅದು ಈ ಲೋಕದಲ್ಲಿರುವ ಜಾರರು, ಆಸೆಬುರುಕರು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಮೊದಲಾದವರ ಸಹವಾಸವನ್ನು ಬಿಟ್ಟುಬಿಡಬೇಕೆಂಬ ಅರ್ಥದಲ್ಲಿ ಅಲ್ಲ; ಯೋಹಾ. 17:15ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು. ೧೧ ಆದರೆ 2 ಥೆಸ. 3:6ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ. ೧೨ ಸಭೆಯ ಹೊರಗಿರುವವರನ್ನು ತೀರ್ಪುಮಾಡುವುದಕ್ಕೆ ನನಗೇನಧಿಕಾರವಿದೆ? § 1 ಕೊರಿ. 6:1-4ಒಳಗಿನವರನ್ನು ತೀರ್ಪುಮಾಡುವವರು ನೀವೇ ಅಲ್ಲವೇ. ೧೩ ಹೊರಗಿರುವವರನ್ನು ತೀರ್ಪುಮಾಡುವವನು ದೇವರು. ನಿಮ್ಮ ಮಧ್ಯದಲ್ಲಿರುವ * ಧರ್ಮೋ. 13:5; 17:7; 12:22-24ಆ ದುಷ್ಟ ವ್ಯಕ್ತಿಯನ್ನು ತೆಗೆದುಹಾಕಿರಿ.

*೫:೧ ಯಾಜ. 18:8; ಧರ್ಮೋ. 22:30; 27:20

೫:೨ 2 ಕೊರಿ. 7:7

೫:೩ 2 ಕೊಲೊ. 2:5

§೫:೪ 2 ಥೆಸ. 3:6; ಮತ್ತಾ 16:19; 18:18; ಯೋಹಾ 20:23; 2 ಕೊರಿ. 13:10

*೫:೪ ಪೌಲನು ತನ್ನ ಯೋಚನೆ ಅಥವಾ ಅಭಿಪ್ರಾಯದ ಮೂಲಕ ಅವರೊಂದಿಗಿದ್ದಾನೆ.

೫:೫ 1 ಕೊರಿ. 1:8

೫:೬ ಗಲಾ. 5:9; 1 ಕೊರಿ. 15:33

§೫:೮ ವಿಮೋ. 12:15; 13:7; ಧರ್ಮೋ. 16:3

*೫:೮ ಮತ್ತಾ 16:6-12; ಮಾರ್ಕ. 8:15; ಲೂಕ. 12:1

೫:೧೦ ಯೋಹಾ. 17:15

೫:೧೧ 2 ಥೆಸ. 3:6

§೫:೧೨ 1 ಕೊರಿ. 6:1-4

*೫:೧೩ ಧರ್ಮೋ. 13:5; 17:7; 12:22-24