ಅಪೊಸ್ತಲರ ಅಧಿಕ್ಕಾರ
೧ ನಾನು ಸ್ವತಂತ್ರನಲ್ಲವೋ? ನಾನು * ಅ. ಕೃ. 14:14; 2 ಕೊರಿ. 12:12; 1 ಥೆಸ. 2:6; 1 ತಿಮೊ. 2:7ಅಪೊಸ್ತಲನಲ್ಲವೋ? 1 ಕೊರಿ. 15:8; ಅ. ಕೃ. 9:17; 18:9; 22:18; 23:11 ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? 1 ಕೊರಿ. 3:6ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ? ೨ ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ. ೩ ನನ್ನನ್ನು ವಿಮರ್ಶಿಸುವವರಿಗೆ ನನ್ನ ಪ್ರತ್ಯುತ್ತರವೇನೆಂದರೆ, ೪ ಅನ್ನ, ಪಾನಗಳಿಗೆ ನಮಗೆ ಹಕ್ಕಿಲ್ಲವೇ? ೫ ಕ್ರೈಸ್ತವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಸಂಚರಿಸುವುದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ, ಕರ್ತನ § ಮತ್ತಾ 12:46; 13:55; ಮಾರ್ಕ 6:3; ಯೋಹಾ 7:3,5,10; ಅ. ಕೃ. 1:14; ಗಲಾ. 1:19ಸಹೋದರರಂತೆಯ, ಮತ್ತು * ಮಾತನಾ. 8:14ಕೇಫನಂತೆಯೂ ನಮಗೆ ಹಕ್ಕಿಲ್ಲವೇ? ೬ ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ? ೭  1 ತಿಮೊ. 1:18; 2 ತಿಮೊ. 2:3,4.ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? 1 ಕೊರಿ. 3:6-8; ಧರ್ಮೋ. 20:6; ಜ್ಞಾ. 27:18ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ? ೮ ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ? ೯  § ಧರ್ಮೋ. 25:4; 1 ತಿಮೊ. 5:18ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಚಿಂತಿಸುವುದು ಎತ್ತುಗಳಿಗಾಗಿಯೋ? ೧೦ ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, * ರೋಮಾ. 3:24ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು. ೧೧  ರೋಮಾ. 15:27; ಗಲಾ. 6:6ನಾವು ನಿಮ್ಮಲ್ಲಿ ಆತ್ಮಿಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ? ೧೨ ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? 1 ಕೊರಿ. 9:15,18; ಅ. ಕೃ. 20:33,34ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು. ೧೩  § ಯಾಜ. 6:16,26; ಅರಣ್ಯ. 5:9,10; ಧರ್ಮೋ. 18:1ದೇವಾಲಯದಲ್ಲಿ ಸೇವೆ ಸಲ್ಲಿಸುವವರು ದೇವಾಲಯದಿಂದ ತಮ್ಮ ಬದುಕನ್ನು ಸಾಗಿಸಬೇಕೆಂದೂ ಮತ್ತು ಯಜ್ಞವೇದಿಯ ಬಳಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ? ೧೪ ಅದೇ ರೀತಿಯಾಗಿ ಕರ್ತನು ಸಹ * 1 ಕೊರಿ. 9:4; ಮತ್ತಾ 10:10; ಲೂಕ. 10:7ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ತಮ್ಮ ಜೀವನಮಾಡಬೇಕೆಂದು ಆಜ್ಞಾಪಿಸಿದ್ದಾನೆ.
೧೫  ಅ. ಕೃ. 18:3ನಾನಂತೂ ಇವುಗಳಲ್ಲಿ ಒಂದನ್ನೂ ಪಾಲಿಸಲಿಲ್ಲ. ನನಗೆ ಏನಾದರೂ ಸಿಕ್ಕಬೇಕೆಂಬ ಉದ್ದೇಶದಿಂದ ನಾನು ಇದನ್ನು ಬರೆಯುತ್ತಿಲ್ಲ. ಯಾರಾದರೂ ಈ ಹೊಗಳಿಕೆಯನ್ನು ವ್ಯರ್ಥಮಾಡುವುದಕ್ಕಿಂತ ಸಾಯುವುದೇ ನನಗೆ ಲೇಸು. ೧೬ ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಅ. ಕೃ. 4:20; ರೋಮಾ. 1:14ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ! ೧೭ ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ § 1 ಕೊರಿ. 4:1; ಗಲಾ. 2:7ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ. ೧೮ ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು * 2 ಕೊರಿ. 11:7; 12:13ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.
೧೯ ನಾನು ಎಲ್ಲಾ ವಿಷಯಗಳಲ್ಲಿ ವ. 1-23ಸ್ವತಂತ್ರನಾಗಿದ್ದರೂ ಮತ್ತಾ 18:15; 1 ಪೇತ್ರ 3:1ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು § 2 ಕೊರಿ. 4:5ನಾನು ಎಲ್ಲರಿಗೂ ದಾಸನಾದೆನು. ೨೦ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ * ಅ. ಕೃ. 16:3; 18:18; 21:23-26ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು. ೨೧ ನಾನು ದೇವರ ಧರ್ಮಶಾಸ್ತ್ರ ಇಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ಧರ್ಮಶಾಸ್ತ್ರಕ್ಕೆ ಹೊರತಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ರೋಮಾ. 14:1-23ಧರ್ಮಶಾಸ್ತ್ರ ಬಾಹಿರನಂತಾದೆನು. ೨೨  2 ಕೊರಿ. 11:29ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು § 1 ಕೊರಿ. 10:33ಎಲ್ಲರಿಗೂ ಎಲ್ಲರಂತಾದೆನು. ೨೩ ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿ, ನಾನು ಇತರರ ಸಂಗಡ ಸುವಾರ್ತೆಯ ಆಶೀರ್ವಾದದಲ್ಲಿ ಪಾಲುಗಾರನಾಗಬೇಕೆಂದು ಇದನ್ನು ಮಾಡುತ್ತಿದ್ದೇನೆ.
೨೪ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಒಬ್ಬನು ಮಾತ್ರ ಜಯಮಾಲೆಯನ್ನು ಪಡೆಯುತ್ತಾನೆ ಎಂಬುದು ನಿಮಗೆ ತಿಳಿಯದೋ? ಅವರಂತೆ * ಗಲಾ. 2:2; 5:7; ಫಿಲಿ. 2:16; ಇಬ್ರಿ. 12:1ನೀವೂ ಸಹ ಬಹುಮಾನವನ್ನು ಗೆಲ್ಲಬೇಕೆಂದು ಓಡಿರಿ. ೨೫ ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ಯಾಕೋಬ 1:12ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ೨೬ ಆದ್ದರಿಂದ ನಾನು ಸಹ ಗೊತ್ತುಗುರಿಯಿಲ್ಲದವನಂತೆ ಓಡುವುದಿಲ್ಲ; ಗಾಳಿಯೊಂದಿಗೆ ಗುದ್ದಾಡುವವನಂತೆ ಹೋರಾಡುವುದಿಲ್ಲ. ೨೭ ಇತರರಿಗೆ ಬೋಧಿಸಿದ ಮೇಲೆ ನಾನೇ ಇಬ್ರಿ. 6:8ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ § ರೋಮಾ. 6:19ಸ್ವಾಧಿನದಲ್ಲಿಟ್ಟುಕೊಳ್ಳುತ್ತೇನೆ.

*೯:೧ ಅ. ಕೃ. 14:14; 2 ಕೊರಿ. 12:12; 1 ಥೆಸ. 2:6; 1 ತಿಮೊ. 2:7

೯:೧ 1 ಕೊರಿ. 15:8; ಅ. ಕೃ. 9:17; 18:9; 22:18; 23:11

೯:೧ 1 ಕೊರಿ. 3:6

§೯:೫ ಮತ್ತಾ 12:46; 13:55; ಮಾರ್ಕ 6:3; ಯೋಹಾ 7:3,5,10; ಅ. ಕೃ. 1:14; ಗಲಾ. 1:19

*೯:೫ ಮಾತನಾ. 8:14

೯:೭ 1 ತಿಮೊ. 1:18; 2 ತಿಮೊ. 2:3,4.

೯:೭ 1 ಕೊರಿ. 3:6-8; ಧರ್ಮೋ. 20:6; ಜ್ಞಾ. 27:18

§೯:೯ ಧರ್ಮೋ. 25:4; 1 ತಿಮೊ. 5:18

*೯:೧೦ ರೋಮಾ. 3:24

೯:೧೧ ರೋಮಾ. 15:27; ಗಲಾ. 6:6

೯:೧೨ 1 ಕೊರಿ. 9:15,18; ಅ. ಕೃ. 20:33,34

§೯:೧೩ ಯಾಜ. 6:16,26; ಅರಣ್ಯ. 5:9,10; ಧರ್ಮೋ. 18:1

*೯:೧೪ 1 ಕೊರಿ. 9:4; ಮತ್ತಾ 10:10; ಲೂಕ. 10:7

೯:೧೫ ಅ. ಕೃ. 18:3

೯:೧೬ ಅ. ಕೃ. 4:20; ರೋಮಾ. 1:14

§೯:೧೭ 1 ಕೊರಿ. 4:1; ಗಲಾ. 2:7

*೯:೧೮ 2 ಕೊರಿ. 11:7; 12:13

೯:೧೯ ವ. 1-23

೯:೧೯ ಮತ್ತಾ 18:15; 1 ಪೇತ್ರ 3:1

§೯:೧೯ 2 ಕೊರಿ. 4:5

*೯:೨೦ ಅ. ಕೃ. 16:3; 18:18; 21:23-26

೯:೨೧ ರೋಮಾ. 14:1-23

೯:೨೨ 2 ಕೊರಿ. 11:29

§೯:೨೨ 1 ಕೊರಿ. 10:33

*೯:೨೪ ಗಲಾ. 2:2; 5:7; ಫಿಲಿ. 2:16; ಇಬ್ರಿ. 12:1

೯:೨೫ ಯಾಕೋಬ 1:12

೯:೨೭ ಇಬ್ರಿ. 6:8

§೯:೨೭ ರೋಮಾ. 6:19