2 Thessalonians
ಪೌಲನು ಥೆಸಲೋನಿಕದವರಿಗೆ ಬರೆದ ಎರಡನೆಯ ಪತ್ರಿಕೆ
ಪೀಠಿಕೆ
೧  * ವ. 1, 2; 1 ಥೆಸ. 1:1:ನಮ್ಮ ತಂದೆಯಾದ ದೇವರಲ್ಲಿಯೂ ಕರ್ತನಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ, ಮತ್ತು ತಿಮೊಥೆ ಎಂಬ ನಾವು ಬರೆಯುವುದೇನಂದರೆ, ೨ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
ದೇವರಿಗೆ ಕೃತಜ್ಞತಾಸ್ತುತಿ
೩  2 ಥೆಸ. 2:13; 1 ಥೆಸ. 1:2, 3; ಎಫೆ. 5:20:ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ. ೪ ಹೀಗಿರುವುದರಿಂದ 1 ಥೆಸ. 2:14:ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ § 1 ಥೆಸ. 2:19; 2 ಕೊರಿ. 7:14:ನಿಮಿತ್ತ * 1 ಥೆಸ. 1:8:ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ.
೫  ಫಿಲಿ. 1:28:ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ಅ. ಕೃ. 14:22:ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು. ೬ ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ § ಪ್ರಕ. 6:11; 11:18; 14:13:ನಮ್ಮೊಡನೆ ಉಪಶಮನವನ್ನೂ ಕೊಡುವುದು * ಪ್ರಕ. 6:10:ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ೭ ಯೇಸು ಕರ್ತನು ಯೂದ 14:ತನ್ನ ಶಕ್ತಿಯುತ ದೇವದೂತರೊಂದಿಗೆ ಯೆಶಾ. 66:15, 16; ಮಲಾ. 4:1; ಮತ್ತಾ 25:41; 1 ಕೊರಿ. 3:13; ಇಬ್ರಿ. 10:27; 12:29; ಪ್ರಕ. 21:8:ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ § ಲೂಕ. 17:30; 1 ಕೊರಿ. 1:7; 1 ಪೇತ್ರ. 1:7, 13; 4:13; ಮತ್ತಾ 16:27; 24:44:ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. ೮ ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ * ರೋಮಾ. 2:8:ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು. ೯ ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. ೧೦ ಆ ದಿನದಲ್ಲಿ ಆತನು ಬರುವಾಗ ತನ್ನ ಯೆಶಾ. 49:3; ಯೋಹಾ. 17:10:ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು. ೧೧  1 ಕೊರಿ. 3:13:ಆದುದರಿಂದ § ಕೊಲೊ. 1:9:ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಮಾಡಿ, ನಮ್ಮ ದೇವರು ನಿಮ್ಮನ್ನು ಕರೆದದ್ದಕ್ಕೆ ತಾನೇ * ವ. 5:ನಿಮ್ಮನ್ನು ಯೋಗ್ಯರೆಂದು ಎಣಿಸಬೇಕೆಂತಲೂ, ಸತ್ಕ್ರಿಯೆಗಳಿಗಾಗಿರುವ ನಿಮ್ಮ ಸಕಲ ಆಸೆಗಳನ್ನೂ, 1 ಥೆಸ. 1:3:ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಶಕ್ತಿಪೂರ್ವಕವಾಗಿ ಈಡೇರಿಸಬೇಕೆಂತಲೂ ಬೇಡಿಕೊಳ್ಳುತ್ತೇವೆ. ೧೨ ಹೀಗಿರಲಾಗಿ ನಮ್ಮ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗೆ ಅನುಸಾರವಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆಯ ಹೊಂದುವುದು ನೀವೂ ಆತನಲ್ಲಿ ಮಹಿಮೆಯ ಹೊಂದುವಿರಿ.

*೧:೧ ವ. 1, 2; 1 ಥೆಸ. 1:1:

೧:೩ 2 ಥೆಸ. 2:13; 1 ಥೆಸ. 1:2, 3; ಎಫೆ. 5:20:

೧:೪ 1 ಥೆಸ. 2:14:

§೧:೪ 1 ಥೆಸ. 2:19; 2 ಕೊರಿ. 7:14:

*೧:೪ 1 ಥೆಸ. 1:8:

೧:೫ ಫಿಲಿ. 1:28:

೧:೫ ಅ. ಕೃ. 14:22:

§೧:೬ ಪ್ರಕ. 6:11; 11:18; 14:13:

*೧:೬ ಪ್ರಕ. 6:10:

೧:೭ ಯೂದ 14:

೧:೭ ಯೆಶಾ. 66:15, 16; ಮಲಾ. 4:1; ಮತ್ತಾ 25:41; 1 ಕೊರಿ. 3:13; ಇಬ್ರಿ. 10:27; 12:29; ಪ್ರಕ. 21:8:

§೧:೭ ಲೂಕ. 17:30; 1 ಕೊರಿ. 1:7; 1 ಪೇತ್ರ. 1:7, 13; 4:13; ಮತ್ತಾ 16:27; 24:44:

*೧:೮ ರೋಮಾ. 2:8:

೧:೧೦ ಯೆಶಾ. 49:3; ಯೋಹಾ. 17:10:

೧:೧೧ 1 ಕೊರಿ. 3:13:

§೧:೧೧ ಕೊಲೊ. 1:9:

*೧:೧೧ ವ. 5:

೧:೧೧ 1 ಥೆಸ. 1:3: