೧ ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೆನೆಂದರೆ; ದೇವರಿಂದ ಪಡೆದ ಕೃಪೆಯನ್ನು ವ್ಯರ್ಥಮಾಡಬೇಡಿರಿ. ೨  * ಯೆಶಾ. 49:8; ಲೂಕ. 4:19ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ನೋಡಿ, ಯೆಶಾ. 55:6; ಇಬ್ರಿ. 3:13ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ. ೩ ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ. ೪ ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಅ. ಕೃ. 9:16ಸಂಕಟದಲ್ಲಿಯೂ, § 2 ಕೊರಿ. 12:10ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, * 2 ಕೊರಿ. 11:23-27; ಅ. ಕೃ. 16:23ಪೆಟ್ಟುಗಳಲ್ಲಿಯೂ, ೫ ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಅ. ಕೃ. 17:5ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ. ೬  1 ಥೆಸ. 2:10ಶುದ್ಧಮನಸ್ಸು, § 2 ಕೊರಿ. 11:6ಜ್ಞಾನ, ದೀರ್ಘಶಾಂತಿ, ದಯೆ, * ರೋಮಾ. 15:19; 1 ಥೆಸ. 1:5ಪವಿತ್ರಾತ್ಮನಲ್ಲಿ, ರೋಮಾ. 12:9ನಿಷ್ಕಪಟವಾದ ಪ್ರೀತಿ, ೭  ಎಫೆ. 1:13; ಕೊಲೊ. 1:5ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, § 2 ಕೊರಿ. 10:4; ಎಫೆ. 6:11-17ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ. ೮ ನಾವು ಮಾನ ಮತ್ತು * ರೋಮಾ. 3:8ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ. ೯ ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನಿಸಿಕೊಂಡು ಸೇವೆ ಮಾಡಿದ್ದೇವೆ. 2 ಕೊರಿ. 4:10ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ, ೧೦  ಯೋಹಾ. 16:22; 2 ಕೊರಿ. 7:4ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, § 2 ಕೊರಿ. 8:9; ಜ್ಞಾ. 13:7ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; * ಅ. ಕೃ. 3:6ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.
೧೧ ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ. ೧೨ ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ. ೧೩ ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವು ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.
ಕ್ರೈಸ್ತರು ಅನ್ಯಜನಗಳ ಅನ್ಯೋನ್ಯತೆಯಲ್ಲಿ ಕೆಡಬಾರದು
೧೪ ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಧರ್ಮೋ. 7:3; ಯೋಹಾ 23:12; ಎಜ್ರ. 9:2; ನೆಹೆ. 13:25ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ಎಫೆ. 5:7,11; 1 ಯೋಹಾ. 1:6ಅಧರ್ಮಕ್ಕೂ ಸಹವಾಸವೇನು? ೧೫  § ಅ. ಕೃ. 26:18ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? * 1 ಕೊರಿ. 10:21ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು? ೧೬ ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ಎಫೆ. 2:22; 1 ಕೊರಿ. 3:16ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, ಯಾಜ. 26:11,12; ವಿಮೋ. 29:45; ಪ್ರಕ. 2:1; 21:3ನನ್ನ ಜನರಲ್ಲೇ ನಾ ಮನೆಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು § ವಿಮೋ. 6:7; ಯೆರೆಮೀಯನು 31:33; ಯೆಹೆ. 11:20; ಜೆಕ. 8:8 ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ೧೭ ಆದ್ದರಿಂದ, * ಯೆಶಾ. 52:11ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. ೧೮ ಇದಲ್ಲದೆ, 2 ಸಮು. 7:8, 14; ಯೆಶಾ. 43:6; ಹೋಶೇ. 1:10ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

*೬:೨ ಯೆಶಾ. 49:8; ಲೂಕ. 4:19

೬:೨ ಯೆಶಾ. 55:6; ಇಬ್ರಿ. 3:13

೬:೪ ಅ. ಕೃ. 9:16

§೬:೪ 2 ಕೊರಿ. 12:10

*೬:೪ 2 ಕೊರಿ. 11:23-27; ಅ. ಕೃ. 16:23

೬:೫ ಅ. ಕೃ. 17:5

೬:೬ 1 ಥೆಸ. 2:10

§೬:೬ 2 ಕೊರಿ. 11:6

*೬:೬ ರೋಮಾ. 15:19; 1 ಥೆಸ. 1:5

೬:೬ ರೋಮಾ. 12:9

೬:೭ ಎಫೆ. 1:13; ಕೊಲೊ. 1:5

§೬:೭ 2 ಕೊರಿ. 10:4; ಎಫೆ. 6:11-17

*೬:೮ ರೋಮಾ. 3:8

೬:೯ 2 ಕೊರಿ. 4:10

೬:೧೦ ಯೋಹಾ. 16:22; 2 ಕೊರಿ. 7:4

§೬:೧೦ 2 ಕೊರಿ. 8:9; ಜ್ಞಾ. 13:7

*೬:೧೦ ಅ. ಕೃ. 3:6

೬:೧೪ ಧರ್ಮೋ. 7:3; ಯೋಹಾ 23:12; ಎಜ್ರ. 9:2; ನೆಹೆ. 13:25

೬:೧೪ ಎಫೆ. 5:7,11; 1 ಯೋಹಾ. 1:6

§೬:೧೫ ಅ. ಕೃ. 26:18

*೬:೧೫ 1 ಕೊರಿ. 10:21

೬:೧೬ ಎಫೆ. 2:22; 1 ಕೊರಿ. 3:16

೬:೧೬ ಯಾಜ. 26:11,12; ವಿಮೋ. 29:45; ಪ್ರಕ. 2:1; 21:3

§೬:೧೬ ವಿಮೋ. 6:7; ಯೆರೆಮೀಯನು 31:33; ಯೆಹೆ. 11:20; ಜೆಕ. 8:8

*೬:೧೭ ಯೆಶಾ. 52:11

೬:೧೮ 2 ಸಮು. 7:8, 14; ಯೆಶಾ. 43:6; ಹೋಶೇ. 1:10