ದುರ್ಮಾರ್ಗತನವನ್ನು ಬೋಧಿಸುವವರ ವಿಷಯದಲ್ಲಿ ಎಚ್ಚರಿಕೆ (ಯೂದ 1-19)
೧ ಆದರೆ ಇಸ್ರಾಯೇಲ್ ಜನರೊಂದಿಗೆ * ಧರ್ಮೋ. 13:1-3; ಯೆರೆ. 14:14; 23:16; ಅ. ಕೃ. 13:6; 1 ಯೋಹಾ 4:1:ಸುಳ್ಳುಪ್ರವಾದಿಗಳೂ ಸಹ ಇದ್ದರು. ಅದೇ ಪ್ರಕಾರ ನಿಮ್ಮಲ್ಲಿಯೂ ಅ. ಕೃ. 20:30; 2 ಕೊರಿ. 11:13; 1 ತಿಮೊ. 4:1:ಸುಳ್ಳುಬೋಧಕರು ಇರುವರು. ಅವರು ಹಾನಿಕರವಾದ ದುರ್ಬೋಧನೆಗಳನ್ನು ಯೂದ. 4; ಗಲಾ. 2:4:ರಹಸ್ಯವಾಗಿ ಒಳಗೆತರುವವರೂ § 1 ಕೊರಿ. 6:20; 7:23; ಗಲಾ. 3:13; 4:5; ವಿಮೋ. 15:16:ತಮ್ಮನ್ನು ಕೊಂಡುಕೊಂಡ ಒಡೆಯನನ್ನೂ ಕೂಡ * ಮತ್ತಾ 10:33:ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶನವನ್ನು ಬರಮಾಡಿಕೊಳ್ಳುವರು. ೨ ಅವರ ದುಷ್ಕರ್ಮಗಳ ಮಾರ್ಗವನ್ನು ಅನೇಕರು ಅನುಸರಿಸುವರು. ರೋಮಾ. 2:24:ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು. ೩ ಅವರು 1 ತಿಮೊ. 6:5; ತೀತ. 1:11:ದ್ರವ್ಯಾಶೆಯುಳ್ಳವರಾಗಿ § ರೋಮಾ. 16:18; ಕೊಲೊ. 2:4:ಕಲ್ಪಿತ ಮಾತುಗಳನ್ನಾಡುತ್ತಾ ನಿಮ್ಮನ್ನು ಮಾರಾಟಮಾಡಿ ಲಾಭವನ್ನು ಸಂಪಾದಿಸಬೇಕೆಂದಿರುವರು. ಧೀರ್ಘಕಾಲದಿಂದ * ಧರ್ಮೋ. 32:35; ಫಿಲಿ. 3:19:ಅಂಥವರಿಗಿರುವಂಥ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವುದು. ಅವರಿಗೆ ಬರುವ ನಾಶವು ತೂಕಡಿಸುವುದಿಲ್ಲ. ೪ ಹೇಗೆಂದರೆ ಯೂದ. 6:ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ಮತ್ತಾ 25:41:ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ § ಪ್ರಕ. 20:2,3,10:ಕತ್ತಲೆಯ ಕೂಪಕ್ಕೆ ಒಪ್ಪಿಸಿದನು. ೫ ಆತನು ಭಕ್ತಿಹೀನರಾದ ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ * 2 ಪೇತ್ರ. 3:6; 1 ಪೇತ್ರ. 3:20; ಆದಿ. 7:10, 8:14:ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುತ್ತಿದ್ದ 1 ಪೇತ್ರ. 3:20:ನೋಹನನ್ನೂ ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಉಳಿಸಿದನು. ೬  ಆದಿ. 19:24:ಆತನು ಸೊದೋಮ್ ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಇನ್ನು ಮೇಲೆ § ಅರಣ್ಯ. 26:10:ಭಕ್ತಿಹೀನರಾಗಿ ಬದುಕುವವರಿಗೆ ಬರುವ ದುರ್ಗತಿಯನ್ನು ಸೂಚಿಸುವುದಕ್ಕಾಗಿ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. ೭ ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ * ಆದಿ. 19:16:ಲೋಟನನ್ನು ಕಾಪಾಡಿದನು. ೮ ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ಕೀರ್ತ. 119:136,158; ಯೆಹೆ. 9:4:ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು. ೯ ಕರ್ತನು 1 ಕೊರಿ. 10:13; ಪ್ರಕ. 3:10:ಭಕ್ತರನ್ನು ಕಷ್ಟಗಳಿಂದ ರಕ್ಷಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವನಾಗಿದ್ದಾನೆ. ೧೦ ಮುಖ್ಯವಾಗಿ § ಯೂದ. 16,18.ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು * ಯೂದ. 8.ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಯೂದ. 8. ಕೆಲವು ಪ್ರತಿಗಳಲ್ಲಿ ದೇವದೂತರು ಎಂದು ಬರೆದದೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು. ೧೧  ಯೂದ. 9:ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಅವರಿಗೆ ವಿರೋಧವಾಗಿ ದೂಷಣೆಯನ್ನು, ನಿಂದೆಯನ್ನು ಹೇಳದಿರಲು, ಆ ಗರ್ವಿಷ್ಠರು ಮಹಿಮಾಪದವಿಗಳನ್ನು ದೂಷಿಸಲು ಹಿಂಜರಿಯುವುದಿಲ್ಲ. ೧೨  § ಯೂದ. 10; ಯೆರೆ. 12:3:ಸ್ವಾಭಾವಿಕವಾಗಿ ಸೆರೆಹಿಡಿಯಲ್ಪಟ್ಟು ನಾಶವಾಗುವುದಕ್ಕೆ ಹುಟ್ಟಿರುವ * ಫಿಲಿ. 3:19:ವಿವೇಕಶೂನ್ಯ ಪ್ರಾಣಿಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಿಸುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಸಂಪೂರ್ಣ ನಾಶವಾಗುವರು. ೧೩ ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ಅಥವಾ, ತಾತ್ಕಾಲಿಕ ಭೋಗಾನುಭವವನ್ನೇ. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು 1 ಕೊರಿ. 11:21:ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು § ಕೆಲವು ಪ್ರತಿಗಳಲ್ಲಿ, ಪ್ರೇಮಭೋಜನಗಳಲ್ಲಿ ಎಂದು ಬರೆದದೆ; ಯೂದ. 12:ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ. ೧೪ ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, * 1 ಪೇತ್ರ. 4:1:ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, ಎಫೆ. 2:3:ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ. ೧೫ ಇವರು ಸನ್ಮಾರ್ಗವನ್ನು ಬಿಟ್ಟವರು. ಹಾದಿ ತಪ್ಪಿದವರು ಮತ್ತು ಬೇಯೋರಿನ ಮಗನಾದ ಅರಣ್ಯ. 22:5,7; ಧರ್ಮೋ. 23:4; ನೆಹೆ. 13:2; ಯೂದ 11:ಬಿಳಾಮನ ಮಾರ್ಗವನ್ನು ಹಿಡಿದವರಾಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಭಾವನೆಯನ್ನು ಪ್ರೀತಿಸಿದನು. ೧೬ ಆದರೆ ಅವನ ದುಷ್ಟ ಕೃತ್ಯಕ್ಕೆ ಖಂಡನೆಯಾಯಿತು. § ಅರಣ್ಯ. 22:21,23,28:ಮೂಕ ಪ್ರಾಣಿಯಾದ ಕತ್ತೆಯು ಮನುಷ್ಯಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನವನ್ನು ಅಡ್ಡಿ ಮಾಡಿತು. ೧೭ ಇವರು * ಯೂದ 12:ನೀರಿಲ್ಲದ ಹಾಳು ಬಾವಿಗಳೂ, ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೋಡಗಳೂ ಆಗಿದ್ದಾರೆ. ಯೂದ 13:ಇಂಥವರಿಗಾಗಿ ಕಗ್ಗತ್ತಲೆಯನ್ನು ಸಂಗ್ರಹಿಸಿ ಇಡಲಾಗಿದೆ. ೧೮ ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ 2 ಪೇತ್ರ. 1:4; 2:20:ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ § ಯೂದ 16:ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ. ೧೯ ಇಂಥವರು * ಗಲಾ. 5:13; ಯಾಕೋಬ. 1:25:ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ. ಆದರೆ ಯೋಹಾ 8:34; ರೋಮಾ. 6:16:ತಾವೇ ಕೆಟ್ಟತನಕ್ಕೆ ದಾಸರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋಲುವನೋ ಅವನು ಅದರ ದಾಸನಾಗಿದ್ದಾನಷ್ಟೇ.
೨೦ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ವ. 18:ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ § ಮತ್ತಾ 12:45:ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. ೨೧  * ಯೆಹೆ. 18:24; ಲೂಕ. 12:47; ಯಾಕೋಬ. 4:17:ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು. ೨೨  ಜ್ಞಾ. 26:11:ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಂಡಿತು. ಮತ್ತು ಮೈತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವುದಕ್ಕೆ ಹೋಯಿತು. ಎಂಬ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.

*೨:೧ ಧರ್ಮೋ. 13:1-3; ಯೆರೆ. 14:14; 23:16; ಅ. ಕೃ. 13:6; 1 ಯೋಹಾ 4:1:

೨:೧ ಅ. ಕೃ. 20:30; 2 ಕೊರಿ. 11:13; 1 ತಿಮೊ. 4:1:

೨:೧ ಯೂದ. 4; ಗಲಾ. 2:4:

§೨:೧ 1 ಕೊರಿ. 6:20; 7:23; ಗಲಾ. 3:13; 4:5; ವಿಮೋ. 15:16:

*೨:೧ ಮತ್ತಾ 10:33:

೨:೨ ರೋಮಾ. 2:24:

೨:೩ 1 ತಿಮೊ. 6:5; ತೀತ. 1:11:

§೨:೩ ರೋಮಾ. 16:18; ಕೊಲೊ. 2:4:

*೨:೩ ಧರ್ಮೋ. 32:35; ಫಿಲಿ. 3:19:

೨:೪ ಯೂದ. 6:

೨:೪ ಮತ್ತಾ 25:41:

§೨:೪ ಪ್ರಕ. 20:2,3,10:

*೨:೫ 2 ಪೇತ್ರ. 3:6; 1 ಪೇತ್ರ. 3:20; ಆದಿ. 7:10, 8:14:

೨:೫ 1 ಪೇತ್ರ. 3:20:

೨:೬ ಆದಿ. 19:24:

§೨:೬ ಅರಣ್ಯ. 26:10:

*೨:೭ ಆದಿ. 19:16:

೨:೮ ಕೀರ್ತ. 119:136,158; ಯೆಹೆ. 9:4:

೨:೯ 1 ಕೊರಿ. 10:13; ಪ್ರಕ. 3:10:

§೨:೧೦ ಯೂದ. 16,18.

*೨:೧೦ ಯೂದ. 8.

೨:೧೦ ಯೂದ. 8. ಕೆಲವು ಪ್ರತಿಗಳಲ್ಲಿ ದೇವದೂತರು ಎಂದು ಬರೆದದೆ.

೨:೧೧ ಯೂದ. 9:

§೨:೧೨ ಯೂದ. 10; ಯೆರೆ. 12:3:

*೨:೧೨ ಫಿಲಿ. 3:19:

೨:೧೩ ಅಥವಾ, ತಾತ್ಕಾಲಿಕ ಭೋಗಾನುಭವವನ್ನೇ.

೨:೧೩ 1 ಕೊರಿ. 11:21:

§೨:೧೩ ಕೆಲವು ಪ್ರತಿಗಳಲ್ಲಿ, ಪ್ರೇಮಭೋಜನಗಳಲ್ಲಿ ಎಂದು ಬರೆದದೆ; ಯೂದ. 12:

*೨:೧೪ 1 ಪೇತ್ರ. 4:1:

೨:೧೪ ಎಫೆ. 2:3:

೨:೧೫ ಅರಣ್ಯ. 22:5,7; ಧರ್ಮೋ. 23:4; ನೆಹೆ. 13:2; ಯೂದ 11:

§೨:೧೬ ಅರಣ್ಯ. 22:21,23,28:

*೨:೧೭ ಯೂದ 12:

೨:೧೭ ಯೂದ 13:

೨:೧೮ 2 ಪೇತ್ರ. 1:4; 2:20:

§೨:೧೮ ಯೂದ 16:

*೨:೧೯ ಗಲಾ. 5:13; ಯಾಕೋಬ. 1:25:

೨:೧೯ ಯೋಹಾ 8:34; ರೋಮಾ. 6:16:

೨:೨೦ ವ. 18:

§೨:೨೦ ಮತ್ತಾ 12:45:

*೨:೨೧ ಯೆಹೆ. 18:24; ಲೂಕ. 12:47; ಯಾಕೋಬ. 4:17:

೨:೨೨ ಜ್ಞಾ. 26:11: