ದೇವರ ದಿನವು ತಡವಾದರೂ ಅದು ಬರುವುದು ನಿಶ್ಚಯ
೧ ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ೨  * ಲೂಕ. 1:70; ಅ. ಕೃ. 3:21:ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ಯೂದ. 17:ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ 2 ಪೇತ್ರ. 1:13:ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ.
೩ ಕಡೆ ದಿನಗಳಲ್ಲಿ § ಯೂದ. 18:ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ, ೪  * 1 ಥೆಸ. 2:19:ಆತನ ಪ್ರತ್ಯಕ್ಷತೆಯ ವಿಷಯವಾದ ಯೆಶಾ. 5:19; ಯೆರೆ. 17:15; ಯೆಹೆ. 11:3; 12:22, 27; ಮಲಾ. 2:17:ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ? ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು. ೫ ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ಆದಿ. 1:6, 7, 9; ಕೀರ್ತ. 33:6; ಇಬ್ರಿ. 11:3:ದೇವರ ವಾಕ್ಯದ ಮೂಲಕ § ಕೀರ್ತ. 24:2; 136:6:ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ. ೬  * ಆದಿ. 7:11, 21; 2 ಪೇತ್ರ. 2:5:ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು. ೭ ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು 2 ಥೆಸ. 1:9:ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ.
೮ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಕೀರ್ತ. 90. 4:ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ. ೯  § ಹಬ. 2:3; ಇಬ್ರಿ. 10:37; ಪ್ರಸಂಗಿ. 8:11:ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. * ಯೆಹೆ. 18:23, 32; 33:11:ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ 1 ತಿಮೊ. 2:4:ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ಯೆಶಾ. 30. 18; ಲೂಕ. 18:7; 1 ಪೇತ್ರ. 3:20:ದೀರ್ಘಶಾಂತಿಯುಳ್ಳವನಾಗಿದ್ದಾನೆ. ೧೦ ಆದರೂ § ಮತ್ತಾ 24:42-51; ಲೂಕ. 12:39-46; 1 ಥೆಸ. 5:2; ಪ್ರಕ. 3:3:ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. * ಮತ್ತಾ 24:35; ಇಬ್ರಿ. 12:26, 27; ಪ್ರಕ. 6:14; 20:11; 21:1:ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. ಯೆಶಾ. 34:4:ಮೂಲಧಾತುಗಳು ಉರಿದು ಲಯವಾಗಿ ಹೋಗುವವು. ಕೆಲವು ಪ್ರತಿಗಳಲ್ಲಿ ಭೂಮಿಯೂ ಅದರಲ್ಲಿರುವ ಕೆಲಸಗಳೂ ಕಾಣುವವೇ? ಎಂದು ಬರೆದದೆ. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
ಲೋಕಾಂತ್ಯವನ್ನು ಎದುರುನೋಡುತ್ತಾ ಪರಿಶುದ್ಧರಾಗಿ ನಡೆಯಿರಿ ಎಂಬ ಬೋಧನೆ
೧೧ ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? § 1 ಪೇತ್ರ. 1:15:ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು. ೧೨ ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ * ಅಥವಾ, ಬೇಗ ಬರುವಂತೆ ಪ್ರಯತ್ನಿಸುತ್ತಾ. ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು. ೧೩ ಆದರೂ ನಾವು ದೇವರ ವಾಗ್ದಾನದ ಪ್ರಕಾರ ಯೆಶಾ. 65:17; 66:22; ಪ್ರಕ. 21:1:ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. ಯೆಶಾ. 60. 21; ಪ್ರಕ. 21:27:ಅವುಗಳಲ್ಲಿ ನೀತಿಯು ವಾಸವಾಗಿರುವುದು.
೧೪  § 1 ಕೊರಿ. 15:58; 1 ಥೆಸ. 3:13; 5:23:ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು * ಯಾಕೋಬ 1:27; ಫಿಲಿ. 2:15:ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ. ೧೫  ವ. 9:ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ಅ. ಕೃ. 15:25:ನಮ್ಮ ಪ್ರಿಯ ಸಹೋದರನಾದ ಪೌಲನು ಸಹ § 1 ಕೊರಿ. 3:10:ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ * ರೋಮಾ. 2:4:ನಿಮಗೆ ಬರೆದಿದ್ದಾನೆ. ೧೬ ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ರೋಮಾ. 8:19; 1 ಕೊರಿ. 15:24; 1 ಥೆಸ. 4:15:ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು ಯೆಶಾ. 28:13:ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ. ೧೭ ಆದಕಾರಣ ಪ್ರಿಯರೇ, § 2 ಪೇತ್ರ. 1:12:ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ * 2 ಪೇತ್ರ. 1:10; 1:1 ಕೊರಿ. 10:12:ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ. ೧೮ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ 2 ಪೇತ್ರ. 1:5; ಎಫೆ. 4:15; ಕೊಲೊ. 1:10; 2:19; 1 ಪೇತ್ರ. 2:2:ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ರೋಮಾ. 11:36:ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.

*೩:೨ ಲೂಕ. 1:70; ಅ. ಕೃ. 3:21:

೩:೨ ಯೂದ. 17:

೩:೨ 2 ಪೇತ್ರ. 1:13:

§೩:೩ ಯೂದ. 18:

*೩:೪ 1 ಥೆಸ. 2:19:

೩:೪ ಯೆಶಾ. 5:19; ಯೆರೆ. 17:15; ಯೆಹೆ. 11:3; 12:22, 27; ಮಲಾ. 2:17:

೩:೫ ಆದಿ. 1:6, 7, 9; ಕೀರ್ತ. 33:6; ಇಬ್ರಿ. 11:3:

§೩:೫ ಕೀರ್ತ. 24:2; 136:6:

*೩:೬ ಆದಿ. 7:11, 21; 2 ಪೇತ್ರ. 2:5:

೩:೭ 2 ಥೆಸ. 1:9:

೩:೮ ಕೀರ್ತ. 90. 4:

§೩:೯ ಹಬ. 2:3; ಇಬ್ರಿ. 10:37; ಪ್ರಸಂಗಿ. 8:11:

*೩:೯ ಯೆಹೆ. 18:23, 32; 33:11:

೩:೯ 1 ತಿಮೊ. 2:4:

೩:೯ ಯೆಶಾ. 30. 18; ಲೂಕ. 18:7; 1 ಪೇತ್ರ. 3:20:

§೩:೧೦ ಮತ್ತಾ 24:42-51; ಲೂಕ. 12:39-46; 1 ಥೆಸ. 5:2; ಪ್ರಕ. 3:3:

*೩:೧೦ ಮತ್ತಾ 24:35; ಇಬ್ರಿ. 12:26, 27; ಪ್ರಕ. 6:14; 20:11; 21:1:

೩:೧೦ ಯೆಶಾ. 34:4:

೩:೧೦ ಕೆಲವು ಪ್ರತಿಗಳಲ್ಲಿ ಭೂಮಿಯೂ ಅದರಲ್ಲಿರುವ ಕೆಲಸಗಳೂ ಕಾಣುವವೇ? ಎಂದು ಬರೆದದೆ.

§೩:೧೧ 1 ಪೇತ್ರ. 1:15:

*೩:೧೨ ಅಥವಾ, ಬೇಗ ಬರುವಂತೆ ಪ್ರಯತ್ನಿಸುತ್ತಾ.

೩:೧೩ ಯೆಶಾ. 65:17; 66:22; ಪ್ರಕ. 21:1:

೩:೧೩ ಯೆಶಾ. 60. 21; ಪ್ರಕ. 21:27:

§೩:೧೪ 1 ಕೊರಿ. 15:58; 1 ಥೆಸ. 3:13; 5:23:

*೩:೧೪ ಯಾಕೋಬ 1:27; ಫಿಲಿ. 2:15:

೩:೧೫ ವ. 9:

೩:೧೫ ಅ. ಕೃ. 15:25:

§೩:೧೫ 1 ಕೊರಿ. 3:10:

*೩:೧೫ ರೋಮಾ. 2:4:

೩:೧೬ ರೋಮಾ. 8:19; 1 ಕೊರಿ. 15:24; 1 ಥೆಸ. 4:15:

೩:೧೬ ಯೆಶಾ. 28:13:

§೩:೧೭ 2 ಪೇತ್ರ. 1:12:

*೩:೧೭ 2 ಪೇತ್ರ. 1:10; 1:1 ಕೊರಿ. 10:12:

೩:೧೮ 2 ಪೇತ್ರ. 1:5; ಎಫೆ. 4:15; ಕೊಲೊ. 1:10; 2:19; 1 ಪೇತ್ರ. 2:2:

೩:೧೮ ರೋಮಾ. 11:36: