ಅಂತ್ಯ ದಿನಗಳು
೧ ಆದರೆ * 1 ತಿಮೊ 4:1ಕಡೆ ದಿನಗಳಲ್ಲಿ ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. ೨ ಮನುಷ್ಯರು ಫಿಲಿ 2:21ಸ್ವಾರ್ಥಚಿಂತಕರೂ, ಲೂಕ 16:14; 1 ತಿಮೊ 6:10ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ೩  § ರೋಮಾ. 1:31ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, * ತೀತ 1:8ಒಳ್ಳೆಯದನ್ನು ದ್ವೇಷಿಸುವವರೂ, ೪ ದ್ರೋಹಿಗಳೂ, ದುಡುಕುವವರೂ, 1 ತಿಮೊ 3:6; 6:4ದುರಹಂಕಾರವುಳ್ಳವರೂ, ಫಿಲಿ 3:19ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ೫ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. ೬ ಅವರಲ್ಲಿ ಕೆಲವರು § ತೀತ 1:11ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ. ೭ ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ * 1 ತಿಮೊ 2:4ಸತ್ಯದ ಪರಿಜ್ಞಾನವನ್ನು ಹೊಂದಲಾರದವರು. ೮  ವಿಮೋ 7:11ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ. ೯ ಆದರೆ ಅವರು ಹೆಚ್ಚು ಮುಂದುವರಿಯಲು ಸಾಧ್ಯವಿಲ್ಲ. ವಿಮೋ 7:12; 8:18; 9:11ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪ್ರಕಟವಾಗಿ ಬಂದ ಹಾಗೆಯೇ ಇವರದೂ ಪ್ರಕಟವಾಗುವುದು.
೧೦  § ಫಿಲಿ 2:22ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, ೧೧  * ಅ. ಕೃ 13:14; 45, 50ಅಂತಿಯೋಕ್ಯ, ಅ. ಕೃ 14:1,2,5ಇಕೋನ್ಯ, ಅ. ಕೃ 14:6,19ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, § ಕೀರ್ತ. 34:19ಅವೆಲ್ಲವುಗಳೊಳಗಿನಿಂದ * 2 ತಿಮೊ 4:17ಕರ್ತನು ನನ್ನನ್ನು ಬಿಡಿಸಿದನು. ೧೨  ಅ. ಕೃ 14:22ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು. ೧೩ ಆದರೆ ದುಷ್ಟರೂ, ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಪ್ರಕ 22:11ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. ೧೪  § 2 ತಿಮೊ 1:13ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. ೧೫  * 2 ತಿಮೊ 1:5ಚಿಕ್ಕಂದಿನಿಂದಲೂ ನಿನಗೆ ಯೋಹಾ 5:39ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ಕೀರ್ತ 119:99ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ. ೧೬ ದೈವ ಪ್ರೇರಿತವಾದ § ರೋಮ 15:4; 2 ಪೇತ್ರ 1:20,21ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ೧೭ ಆದರಿಂದ * 1 ತಿಮೊ 6:11ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ದನಾಗುವನು.

*೩:೧ 1 ತಿಮೊ 4:1

೩:೨ ಫಿಲಿ 2:21

೩:೨ ಲೂಕ 16:14; 1 ತಿಮೊ 6:10

§೩:೩ ರೋಮಾ. 1:31

*೩:೩ ತೀತ 1:8

೩:೪ 1 ತಿಮೊ 3:6; 6:4

೩:೪ ಫಿಲಿ 3:19

§೩:೬ ತೀತ 1:11

*೩:೭ 1 ತಿಮೊ 2:4

೩:೮ ವಿಮೋ 7:11

೩:೯ ವಿಮೋ 7:12; 8:18; 9:11

§೩:೧೦ ಫಿಲಿ 2:22

*೩:೧೧ ಅ. ಕೃ 13:14; 45, 50

೩:೧೧ ಅ. ಕೃ 14:1,2,5

೩:೧೧ ಅ. ಕೃ 14:6,19

§೩:೧೧ ಕೀರ್ತ. 34:19

*೩:೧೧ 2 ತಿಮೊ 4:17

೩:೧೨ ಅ. ಕೃ 14:22

೩:೧೩ ಪ್ರಕ 22:11

§೩:೧೪ 2 ತಿಮೊ 1:13

*೩:೧೫ 2 ತಿಮೊ 1:5

೩:೧೫ ಯೋಹಾ 5:39

೩:೧೫ ಕೀರ್ತ 119:99

§೩:೧೬ ರೋಮ 15:4; 2 ಪೇತ್ರ 1:20,21

*೩:೧೭ 1 ತಿಮೊ 6:11