೯
ಭೂಲೋಕದ ಮತ್ತು ಪರಲೋಕದ ಆಲಯ
೧ ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿ-ವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ * ವಿಮೋ. 25:8:ದೇವಾಲಯವಿತ್ತು. ೨  † ವಿಮೋ. 26:1:ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ‡ ವಿಮೋ. 25:31-39; 26:35; 40. 4:ದೀಪಸ್ತಂಭ, § ವಿಮೋ. 25:23-29:ಮೇಜು, ಮತ್ತು * ವಿಮೋ. 25:30; ಯಾಜ. 24:5-8:ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು. ೩ ಮತ್ತು † ವಿಮೋ. 26:31-33; 40. 3, 21:ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು. ೪ ಅದರಲ್ಲಿ ಚಿನ್ನದ ‡ ಯಜ್ಞವೇದಿಧೂಪಾರತಿಯು ಮತ್ತು § ಯಾಜ. 16:12,13. ವಿಮೋ. 30:1 ಚಿನ್ನದ ತಗಡಿನಿಂದ ಹೊದಿಸಿದ * ವಿಮೋ. 25:10; 26:33; 40. 3, 21; ಪ್ರಕ. 11:19:ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ † ವಿಮೋ. 16:33, 34:ಚಿನ್ನದ ಪಾತ್ರೆಯೂ, ‡ ಅರಣ್ಯ. 17:10:ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು. ೫ ಅದರ ಮೇಲೆ § ಯಾಜ. 16:2:ಕೃಪಾಸನವನ್ನು ಮುಚ್ಚುವ * ವಿಮೋ. 25:18-22; 1 ಅರಸು. 8:6, 7:ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
೬ ಹೀಗೆ ಇವುಗಳನ್ನು ಸಿದ್ಧಮಾಡಲ್ಪಟ್ಟ ಮೇಲೆ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು. ೭ ಆದರೆ † ಯಾಜ. 16:15, 34; ಇಬ್ರಿ. 10:3; ವಿಮೋ. 30. 10:ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ‡ ಇಬ್ರಿ. 5:3:ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು. ೮ ಈ ಗುಡಾರದ ಮೊದಲನೆಯ ಭಾಗವು § ಇಬ್ರಿ. 10:20; ಯೋಹಾ. 14:6:ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ. ೯ ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ * ಇಬ್ರಿ. 7:19:ಆರಾಧನೆ ಮಾಡುವವರ ಮನಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ. ೧೦ ಅವು † ಯಾಜ. 11:2:ಅನ್ನಪಾನಗಳೂ ಮತ್ತು ‡ ಮಾರ್ಕ. 7:4, 8; ಯಾಜ. 11:25:ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
೧೧ ಕ್ರಿಸ್ತನಾದರೋ § ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1:ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ * ಮಾರ್ಕ. 14:58; ಅ. ಕೃ. 7:48; 17:24:ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, † ಇಬ್ರಿ. 8:2; 9:24:ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ, ೧೨  ‡ ಇಬ್ರಿ. 10:4:ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ § ಅ. ಕೃ. 20:28:ಸ್ವಂತ ರಕ್ತದ ಮೂಲಕ * ಇಬ್ರಿ. 7:27; 10:10:ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ † 1 ಕೊರಿ. 6:20:ನಿತ್ಯವಿಮೋಚನೆಯನ್ನು ಸಾಧಿಸಿದನು. ೧೩  ‡ ಯಾಜ. 16:14-16:ಹೋತ ಹೋರಿಗಳ ರಕ್ತವೂ § ಅರಣ್ಯ. 19:2, 17, 18:ಅಶುದ್ಧರಾದವರ ಮೇಲೆ ಚಿಮುಕಿಸುವ * ಎಳೆ ಕರುವಿನ, ಮಣಕ, ಪಡ್ಡೆ. ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ, ೧೪ ನಿತ್ಯಾತ್ಮನಿಂದ † ಇಬ್ರಿ. 7:27; 8:3:ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ‡ ಇಬ್ರಿ. 9:12; 1 ಯೋಹಾ. 1:7; ಪ್ರಕ. 7:14:ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, § ಕೆಲವು ಪ್ರತಿಗಳಲ್ಲಿ, ನಿಮ್ಮನ್ನು, ನೀವು ಮತ್ತು ನಿಮ್ಮ ಎಂದು ಬರೆದದೆ. ನಮ್ಮನ್ನು * ಇಬ್ರಿ. 6:1:ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸಾಕ್ಷಿಯನ್ನು † ಇಬ್ರಿ. 1:3; 10:22:ಶುದ್ಧೀಕರಿಸುತ್ತದಲ್ಲವೇ?
೧೫  ‡ ಇಬ್ರಿ. 3:1; ರೋಮಾ. 8:28:ದೇವರಿಂದ ಕರೆಯಲ್ಪಟ್ಟ ಜನರು, ದೇವರ § ಇಬ್ರಿ. 10:36; ವಿಮೋ. 32:13:ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು * ಇಬ್ರಿ. 8:6; 12:24:ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ † ರೋಮಾ. 3:24, 25; 5:6; ಪ್ರಕ. 5:9:ಕ್ರಿಸ್ತನು ಮರಣ ಹೊಂದಿದನು. ೧೬  ‡ ಅಥವಾ. ಒಡಂಬಡಿಕೆಯಿರುವಲ್ಲಿ ಅದನ್ನು ನಿಶ್ಚಯಪಡಿಸುವ ಪಶುವಿನ ಮರಣವು ಪ್ರಸಿದ್ಧವಾಗಿರಬೇಕಷ್ಟೆ. ಪಶುವಿನ ಮರಣವಾದ ಮೇಲೆ ಒಡಂಬಡಿಕೆಯು ದೃಢವಾಗುವುದೇ ಹೊರತು ನಿಶ್ಚಯಪಡಿಸುವ ಆ ಪಶು ಜೀವದಿಂದಿರುವಾಗ ಆ ಒಡಂಬಡಿಕೆ ಎಂದಿಗೂ ಪ್ರಯೋಜನಕ್ಕೆ ಬರುವುದಿಲ್ಲ. ಗಲಾ. 3:15:ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ. ೧೭ ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.
೧೮ ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ. ೧೯  § ವಿಮೋ. 24:6, 8:ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು * ಯಾಜ. 14:4, 7; ಅರಣ್ಯ. 19:6, 17:ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ † ವ. 12:ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು. ೨೦  ‡ ವಿಮೋ. 24:8; ಮತ್ತಾ 26:28:ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ ಎಂದು ಹೇಳಿದನು. ೨೧ ಇದಲ್ಲದೆ § ವಿಮೋ. 29:12, 36; ಯಾಜ. 8:15, 19; 16:14, 16; 2 ಪೂರ್ವ. 29:22:ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು. ೨೨ ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. * ಯಾಜ. 17:11:ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.
ಯೇಸುವಿನ ಯಜ್ಞ ಪಾಪವನ್ನು ನಿವಾರಿಸುತ್ತದೆ
೨೩ ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ † ಇಬ್ರಿ. 8:5:ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ. ೨೪ ಯಾಕೆಂದರೆ ಕ್ರಿಸ್ತನು ‡ ಇಬ್ರಿ. 8:2; 9:11:ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ § ವ. 7:ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ * ಇಬ್ರಿ. 7:25; ರೋಮಾ. 8:34:ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು. ೨೫ ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ. ೨೬ ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ † ಇಬ್ರಿ. 7:27; 9:12; 10:10; 1 ಪೇತ್ರ 3:18:ಒಂದೇ ಸಾರಿ, ‡ ಇಬ್ರಿ. 1:2; 1 ಕೊರಿ. 10:11:ಯುಗಗಳ ಸಮಾಪ್ತಿಯವರೆಗೂ, § ಯೋಹಾ. 1:29; 1 ಯೋಹಾ. 3:5:ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು. ೨೭ ಒಂದೇ ಸಾರಿ ಸಾಯುವುದೂ * ಮತ್ತಾ 16:27; 2 ಕೊರಿ. 5:10:ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ, ೨೮ ಹಾಗೆಯೇ ಕ್ರಿಸ್ತನು ಸಹ † ಯೆಶಾ. 53:12; 1 ಪೇತ್ರ. 2:24; 3:18; ಮತ್ತಾ 20:28; 26:28; ಮಾರ್ಕ. 10:45; ಪ್ರಕ. 5:9:ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ‡ ಅ. ಕೃ. 1:11:ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು § ಇಬ್ರಿ. 4:15:ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ * ತೀತ. 2:13:ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.

*೯:೧ ವಿಮೋ. 25:8:

†೯:೨ ವಿಮೋ. 26:1:

‡೯:೨ ವಿಮೋ. 25:31-39; 26:35; 40. 4:

§೯:೨ ವಿಮೋ. 25:23-29:

*೯:೨ ವಿಮೋ. 25:30; ಯಾಜ. 24:5-8:

†೯:೩ ವಿಮೋ. 26:31-33; 40. 3, 21:

‡೯:೪ ಯಜ್ಞವೇದಿ

§೯:೪ ಯಾಜ. 16:12,13. ವಿಮೋ. 30:1

*೯:೪ ವಿಮೋ. 25:10; 26:33; 40. 3, 21; ಪ್ರಕ. 11:19:

†೯:೪ ವಿಮೋ. 16:33, 34:

‡೯:೪ ಅರಣ್ಯ. 17:10:

§೯:೫ ಯಾಜ. 16:2:

*೯:೫ ವಿಮೋ. 25:18-22; 1 ಅರಸು. 8:6, 7:

†೯:೭ ಯಾಜ. 16:15, 34; ಇಬ್ರಿ. 10:3; ವಿಮೋ. 30. 10:

‡೯:೭ ಇಬ್ರಿ. 5:3:

§೯:೮ ಇಬ್ರಿ. 10:20; ಯೋಹಾ. 14:6:

*೯:೯ ಇಬ್ರಿ. 7:19:

†೯:೧೦ ಯಾಜ. 11:2:

‡೯:೧೦ ಮಾರ್ಕ. 7:4, 8; ಯಾಜ. 11:25:

§೯:೧೧ ಕೆಲವು ಪ್ರತಿಗಳಲ್ಲಿ, ಮುಂದೆ ದೊರೆಯಬೇಕಾಗಿದ್ದ ಎಂದು ಬರೆದದೆ. ಇಬ್ರಿ. 10:1:

*೯:೧೧ ಮಾರ್ಕ. 14:58; ಅ. ಕೃ. 7:48; 17:24:

†೯:೧೧ ಇಬ್ರಿ. 8:2; 9:24:

‡೯:೧೨ ಇಬ್ರಿ. 10:4:

§೯:೧೨ ಅ. ಕೃ. 20:28:

*೯:೧೨ ಇಬ್ರಿ. 7:27; 10:10:

†೯:೧೨ 1 ಕೊರಿ. 6:20:

‡೯:೧೩ ಯಾಜ. 16:14-16:

§೯:೧೩ ಅರಣ್ಯ. 19:2, 17, 18:

*೯:೧೩ ಎಳೆ ಕರುವಿನ, ಮಣಕ, ಪಡ್ಡೆ.

†೯:೧೪ ಇಬ್ರಿ. 7:27; 8:3:

‡೯:೧೪ ಇಬ್ರಿ. 9:12; 1 ಯೋಹಾ. 1:7; ಪ್ರಕ. 7:14:

§೯:೧೪ ಕೆಲವು ಪ್ರತಿಗಳಲ್ಲಿ, ನಿಮ್ಮನ್ನು, ನೀವು ಮತ್ತು ನಿಮ್ಮ ಎಂದು ಬರೆದದೆ.

*೯:೧೪ ಇಬ್ರಿ. 6:1:

†೯:೧೪ ಇಬ್ರಿ. 1:3; 10:22:

‡೯:೧೫ ಇಬ್ರಿ. 3:1; ರೋಮಾ. 8:28:

§೯:೧೫ ಇಬ್ರಿ. 10:36; ವಿಮೋ. 32:13:

*೯:೧೫ ಇಬ್ರಿ. 8:6; 12:24:

†೯:೧೫ ರೋಮಾ. 3:24, 25; 5:6; ಪ್ರಕ. 5:9:

‡೯:೧೬ ಅಥವಾ. ಒಡಂಬಡಿಕೆಯಿರುವಲ್ಲಿ ಅದನ್ನು ನಿಶ್ಚಯಪಡಿಸುವ ಪಶುವಿನ ಮರಣವು ಪ್ರಸಿದ್ಧವಾಗಿರಬೇಕಷ್ಟೆ. ಪಶುವಿನ ಮರಣವಾದ ಮೇಲೆ ಒಡಂಬಡಿಕೆಯು ದೃಢವಾಗುವುದೇ ಹೊರತು ನಿಶ್ಚಯಪಡಿಸುವ ಆ ಪಶು ಜೀವದಿಂದಿರುವಾಗ ಆ ಒಡಂಬಡಿಕೆ ಎಂದಿಗೂ ಪ್ರಯೋಜನಕ್ಕೆ ಬರುವುದಿಲ್ಲ. ಗಲಾ. 3:15:

§೯:೧೯ ವಿಮೋ. 24:6, 8:

*೯:೧೯ ಯಾಜ. 14:4, 7; ಅರಣ್ಯ. 19:6, 17:

†೯:೧೯ ವ. 12:

‡೯:೨೦ ವಿಮೋ. 24:8; ಮತ್ತಾ 26:28:

§೯:೨೧ ವಿಮೋ. 29:12, 36; ಯಾಜ. 8:15, 19; 16:14, 16; 2 ಪೂರ್ವ. 29:22:

*೯:೨೨ ಯಾಜ. 17:11:

†೯:೨೩ ಇಬ್ರಿ. 8:5:

‡೯:೨೪ ಇಬ್ರಿ. 8:2; 9:11:

§೯:೨೪ ವ. 7:

*೯:೨೪ ಇಬ್ರಿ. 7:25; ರೋಮಾ. 8:34:

†೯:೨೬ ಇಬ್ರಿ. 7:27; 9:12; 10:10; 1 ಪೇತ್ರ 3:18:

‡೯:೨೬ ಇಬ್ರಿ. 1:2; 1 ಕೊರಿ. 10:11:

§೯:೨೬ ಯೋಹಾ. 1:29; 1 ಯೋಹಾ. 3:5:

*೯:೨೭ ಮತ್ತಾ 16:27; 2 ಕೊರಿ. 5:10:

†೯:೨೮ ಯೆಶಾ. 53:12; 1 ಪೇತ್ರ. 2:24; 3:18; ಮತ್ತಾ 20:28; 26:28; ಮಾರ್ಕ. 10:45; ಪ್ರಕ. 5:9:

‡೯:೨೮ ಅ. ಕೃ. 1:11:

§೯:೨೮ ಇಬ್ರಿ. 4:15:

*೯:೨೮ ತೀತ. 2:13: