James
ಯಾಕೋಬನು ಬರೆದ ಪತ್ರಿಕೆ
೧
ಕಷ್ಟಗಳನ್ನೂ ದುಷ್ಪ್ರೇರಣೆಗಳನ್ನೂ ಕುರಿತದ್ದು
೧ ದೇವರಿಗೂ * ರೋಮಾ. 1:1; 2 ಪೇತ್ರ. 1:1; ಯೂದ 1:ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ † ಅ. ಕೃ. 12:17:ಯಾಕೋಬನು ಅನ್ಯದೇಶಗಳಲ್ಲಿ ‡ 1 ಪೇತ್ರ. 1:1:ಚದುರಿರುವ ಇಸ್ರಾಯೇಲ್ಯರ § ಲೂಕ. 22:30; ಅ. ಕೃ. 26:7:ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, ನಿಮಗೆ ಶುಭವಾಗಲಿ. ೨ ನನ್ನ ಸಹೋದರರೇ, ನೀವು * 1 ಪೇತ್ರ. 1:6:ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ † ಮತ್ತಾ 5:12; ಅ. ಕೃ. 5:41; ಕೊಲೊ. 1:11:ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ. ೩ ಏಕೆಂದರೆ ‡ 1 ಪೇತ್ರ. 1:7:ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ § ರೋಮಾ. 5:6; ಯಾಕೋಬ 5:11; ಇಬ್ರಿ. 10:36; 2 ಪೇತ್ರ. 1:6ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. ೪ ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ * 1 ಥೆಸ. 5:23; ಮತ್ತಾ 5:48:ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ. ೫  † 1 ಅರಸು. 3:9-12; ಜ್ಞಾ. 2:3-6:ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ‡ ಮಾರ್ಕ. 11:24; ಯೋಹಾ. 14:13; 1 ಯೋಹಾ 3:22; 5:14,15:ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಗದರಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ. ೬ ಆದರೆ ದೇವರ ಬಳಿ ಬೇಡುವವನು § ಮತ್ತಾ 21:21:ಸ್ವಲ್ಪವೂ ಸಂದೇಹಪಡದೆ * ಮಾರ್ಕ. 11:24:ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು † ಯೆಶಾ. 57:20; ಎಫೆ. 4:14:ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿತ್ತಾನೆ. ೭ ಇಂತವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ. ೮ ಏಕೆಂದರೆ ಅವನು ‡ ಯಾಕೋಬ. 4:8:ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ.
೯ ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ. ೧೦  § ಯೆರೆಮೀಯನು 9:23:ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು * ಕೀರ್ತ. 102:11; 1 ಕೊರಿ. 7:31; 1 ಪೇತ್ರ. 1:24:ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು. ೧೧  † ಯೆಶಾ. 40. 7:ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಸಸಿಯು ಬಾಡಿ, ಹೂವು ಉದುರಿ ಅದರ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು.
೧೨  ‡ ಯಾಕೋಬ. 5:11; ಮತ್ತಾ 10:22; 1 ಪೇತ್ರ. 3:14:ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು § ಯಾಕೋಬ. 2:5:ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ನಿತ್ಯ * ಪ್ರಕ. 2:10; 3:11; 1 ಕೊರಿ. 9:25; 1 ಪೇತ್ರ. 5:4ಜೀವದ ಕಿರೀಟವನ್ನು ಹೊಂದುವನು. ೧೩ ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ. ೧೪ ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ೧೫ ಆ ಮೇಲೆ † ರೋಮಾ. 5:12; 6:23:ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ‡ ಯೋಬ. 15:35; ಕೀರ್ತ. 7:14; ಯೆಶಾ. 59:4:ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.
೧೬ ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ. ೧೭  § ಯೋಹಾ 3:27; 1 ಕೊರಿ. 4:7:ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು * 1 ಯೋಹಾ. 1:5 ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; † ಮಲಾ. 3:6:ಆತನು ನೆರಳಿನಂತೆ ‡ ಅಥವಾ, ಗ್ರಹಣದಂತಿರುವ ನೆರಳೂ. ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ. ೧೮ ದೇವರು § ಯೋಹಾ. 1:13:ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ * ಯೆರೆಮೀಯನು 2:3; ಪ್ರಕ. 14:4; ರೋಮಾ. 8:19-23; ಎಫೆ. 1:12:ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು.
ದೇವರ ವಾಕ್ಯವನ್ನು ಕೇಳಿ ಅದನ್ನು ಅನುಸರಿಸುವ ವಿಧಾನ
೧೯  † 1 ಯೋಹಾ 2:21:ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ‡ ಪ್ರಸಂಗಿ 5:1,2:ಕಿವಿಗೊಡುವುದರಲ್ಲಿ ಚುರುಕಾಗಿಯೂ, § ಜ್ಞಾ. 10:19; 17:27:ಮಾತನಾಡುವುದರಲ್ಲಿ ಮತ್ತು * ಜ್ಞಾ. 14:29:ಕೋಪಿಸುವುದರಲ್ಲಿ ತಾಳ್ಮೆಯಿಂದಲೂ, ನಿಧಾನದಿಂದಲೂ ಇರಲಿ. ೨೦ ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ೨೧ ಆದಕಾರಣ † ಕೊಲೊ. 3:8; 1 ಪೇತ್ರ. 2:1:ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ‡ 1 ಕೊರಿ. 15:2; ಎಫೆ. 1:13:ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ. ೨೨ ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ § ರೋಮಾ. 2:13; ಮತ್ತಾ 7:21,24-27; ಯೋಹಾ. 13:17:ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ. ೨೩ ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು. ೨೪ ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು. ೨೫ ಆದರೆ * ಅಥವಾ, ಬಿಡುಗಡೆಯಾದವರಿಗೆ ಇರುವ. ಯೋಹಾ 8:32; ಗಲಾ. 2:4; 1 ಪೇತ್ರ. 2:16:ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ † ಕೀರ್ತ. 1:1; ಲೂಕ. 11:28:ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು. ೨೬ ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ‡ ಕೀರ್ತ. 39:1; 141:3:ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ. ೨೭ ಸಂಕಟದಲ್ಲಿ ಬಿದ್ದಿರುವ § ಯೋಬ. 31:17,18; ಯೆಶಾ. 1:7,23:ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ * 1 ತಿಮೊ. 5:22; 2 ಪೇತ್ರ. 3:14; 1 ಯೋಹಾ. 5:18:ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.

*೧:೧ ರೋಮಾ. 1:1; 2 ಪೇತ್ರ. 1:1; ಯೂದ 1:

†೧:೧ ಅ. ಕೃ. 12:17:

‡೧:೧ 1 ಪೇತ್ರ. 1:1:

§೧:೧ ಲೂಕ. 22:30; ಅ. ಕೃ. 26:7:

*೧:೨ 1 ಪೇತ್ರ. 1:6:

†೧:೨ ಮತ್ತಾ 5:12; ಅ. ಕೃ. 5:41; ಕೊಲೊ. 1:11:

‡೧:೩ 1 ಪೇತ್ರ. 1:7:

§೧:೩ ರೋಮಾ. 5:6; ಯಾಕೋಬ 5:11; ಇಬ್ರಿ. 10:36; 2 ಪೇತ್ರ. 1:6

*೧:೪ 1 ಥೆಸ. 5:23; ಮತ್ತಾ 5:48:

†೧:೫ 1 ಅರಸು. 3:9-12; ಜ್ಞಾ. 2:3-6:

‡೧:೫ ಮಾರ್ಕ. 11:24; ಯೋಹಾ. 14:13; 1 ಯೋಹಾ 3:22; 5:14,15:

§೧:೬ ಮತ್ತಾ 21:21:

*೧:೬ ಮಾರ್ಕ. 11:24:

†೧:೬ ಯೆಶಾ. 57:20; ಎಫೆ. 4:14:

‡೧:೮ ಯಾಕೋಬ. 4:8:

§೧:೧೦ ಯೆರೆಮೀಯನು 9:23:

*೧:೧೦ ಕೀರ್ತ. 102:11; 1 ಕೊರಿ. 7:31; 1 ಪೇತ್ರ. 1:24:

†೧:೧೧ ಯೆಶಾ. 40. 7:

‡೧:೧೨ ಯಾಕೋಬ. 5:11; ಮತ್ತಾ 10:22; 1 ಪೇತ್ರ. 3:14:

§೧:೧೨ ಯಾಕೋಬ. 2:5:

*೧:೧೨ ಪ್ರಕ. 2:10; 3:11; 1 ಕೊರಿ. 9:25; 1 ಪೇತ್ರ. 5:4

†೧:೧೫ ರೋಮಾ. 5:12; 6:23:

‡೧:೧೫ ಯೋಬ. 15:35; ಕೀರ್ತ. 7:14; ಯೆಶಾ. 59:4:

§೧:೧೭ ಯೋಹಾ 3:27; 1 ಕೊರಿ. 4:7:

*೧:೧೭ 1 ಯೋಹಾ. 1:5

†೧:೧೭ ಮಲಾ. 3:6:

‡೧:೧೭ ಅಥವಾ, ಗ್ರಹಣದಂತಿರುವ ನೆರಳೂ.

§೧:೧೮ ಯೋಹಾ. 1:13:

*೧:೧೮ ಯೆರೆಮೀಯನು 2:3; ಪ್ರಕ. 14:4; ರೋಮಾ. 8:19-23; ಎಫೆ. 1:12:

†೧:೧೯ 1 ಯೋಹಾ 2:21:

‡೧:೧೯ ಪ್ರಸಂಗಿ 5:1,2:

§೧:೧೯ ಜ್ಞಾ. 10:19; 17:27:

*೧:೧೯ ಜ್ಞಾ. 14:29:

†೧:೨೧ ಕೊಲೊ. 3:8; 1 ಪೇತ್ರ. 2:1:

‡೧:೨೧ 1 ಕೊರಿ. 15:2; ಎಫೆ. 1:13:

§೧:೨೨ ರೋಮಾ. 2:13; ಮತ್ತಾ 7:21,24-27; ಯೋಹಾ. 13:17:

*೧:೨೫ ಅಥವಾ, ಬಿಡುಗಡೆಯಾದವರಿಗೆ ಇರುವ. ಯೋಹಾ 8:32; ಗಲಾ. 2:4; 1 ಪೇತ್ರ. 2:16:

†೧:೨೫ ಕೀರ್ತ. 1:1; ಲೂಕ. 11:28:

‡೧:೨೬ ಕೀರ್ತ. 39:1; 141:3:

§೧:೨೭ ಯೋಬ. 31:17,18; ಯೆಶಾ. 1:7,23:

*೧:೨೭ 1 ತಿಮೊ. 5:22; 2 ಪೇತ್ರ. 3:14; 1 ಯೋಹಾ. 5:18: