ಕ್ರೈಸ್ತ ಸ್ವಾತಂತ್ರ್ಯ
೧ ಕ್ರಿಸ್ತನು ನಮ್ಮನ್ನು * ಗಲಾ. 2:4; 5:13ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, ಅ. ಕೃ. 15:10ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.
೨ ನೋಡಿರಿ, ಪೌಲನೆಂಬ ನಾನು ನಿಮಗೆ ಹೇಳುತ್ತೇನೆ, ಅ. ಕೃ. 15:1; 1 ಕೊರಿ. 7:18; ಗಲಾ. 5:3-11ನೀವು ಸುನ್ನತಿಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನೂ ಪ್ರಯೋಜನವಿಲ್ಲ. ೩  § ರೋಮಾ. 2:25ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನಿಗೆ, ನೀನು ಧರ್ಮಶಾಸ್ತ್ರದಲ್ಲಿ ಹೇಳಿರುವುದನ್ನೆಲ್ಲಾ ಮಾಡುವ ಹಂಗಿನಲ್ಲಿದ್ದೀ ಎಂದು ತಿರುಗಿ ಪ್ರಮಾಣವಾಗಿ ಹೇಳುತ್ತೇನೆ. ೪  * ಗಲಾ. 2:21; 3:10; ರೋಮಾ. 9:31,32ನಿಮ್ಮಲ್ಲಿ ಯಾರಾರು ಧರ್ಮಶಾಸ್ತ್ರದಿಂದ ನೀತಿವಂತರಾಗಬೇಕೆಂದು ಬಯಸಿದ್ದೀರೋ ಅವರು ಕ್ರಿಸ್ತನಿಂದ ಅಗಲಿಹೋದವರಾಗಿದ್ದೀರಿ. ಕೃಪೆಯಿಂದ ಬಿದ್ದಹೋದವರಾಗಿದ್ದೀರಿ. ೫ ನಾವಾದರೋ ದೇವರಾತ್ಮನ ಮೂಲಕ ನಂಬಿಕೆಯಿಂದ ನೀತಿವಂತರಾಗುತ್ತೇವೆಂಬುವ ರೋಮಾ. 8:23,25ನಿರೀಕ್ಷೆ ಸಫಲವಾಗುವುದೆಂದು ಎದುರುನೋಡುವವರಾಗಿದ್ದೇವೆ. ೬ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಗಲಾ. 6:15; 1 ಕೊರಿ. 7:19; ಕೊಲೊ. 3:11; ಗಲಾ. 3:28ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ § ಎಫೆ. 6:23; 1 ಥೆಸ. 1:3; ಯಾಕೋಬ 2:18,20,22ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜವಾಗಿದೆ. ೭ ಚೆನ್ನಾಗಿ ಓಡುತ್ತಾ ಇದ್ದೀರಿ. ಆದರೆ ನೀವು ಸತ್ಯವನ್ನು ಅನುಸರಿಸದಂತೆ ನಿಮ್ಮನ್ನು ತಡೆದವರು ಯಾರು? ೮ ಈ ಮನವೊಲಿಕೆಯು ನಿಮ್ಮನ್ನು ಕರೆದಾತನಿಂದ ಹುಟ್ಟಿದ್ದಲ್ಲ. ೯  * 1 ಕೊರಿ. 5:6ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗುವುದು. ೧೦ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. ಗಲಾ. 1:; 5:12ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು.
೧೧ ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ಗಲಾ. 4:29; 6:12ನನಗೆ ಹಿಂಸೆಯಾಗುವುದಾದರೂ ಯಾಕೆ? § 1 ಕೊರಿ. 1:23ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ? ೧೨  * ಗಲಾ. 5:10, 2:4ನಿಮ್ಮನ್ನು ಕಳವಳಪಡಿಸುವವರು ತಮ್ಮನೇ ತಾವು ಕಸಿ ಮಾಡುವುದುಅಂಗಚ್ಛೇದನೆಯನ್ನಾದರೂ ಮಾಡಿಕೊಂಡರೆ ಚೆನ್ನಾಗಿತ್ತು.
೧೩ ಸಹೋದರರೇ, ಗಲಾ. 5:1ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ § 1 ಪೇತ್ರ. 2:1; ಯೂದ. 4ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, * 1 ಕೊರಿ. 9:19ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ. ೧೪ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ. ೧೫ ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.
ಆತ್ಮನ ಫಲವು ಮತ್ತು ದೇಹದ ದುಷ್ಫಲಗಳು
೧೬ ನಾನು ಹೇಳುವುದೇನಂದರೆ ಗಲಾ. 5:24,25; ರೋಮಾ. 8:4ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಎಫೆ. 2:3ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ. ೧೭ ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. § ರೋಮಾ. 7:15, 18-20ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ವಿರುದ್ಧವಾಗಿವೆ. ೧೮ ಆದರೆ * ರೋಮಾ. 8:14ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ರೋಮಾ. 7:4ಧರ್ಮಶಾಸ್ತ್ರಕ್ಕೆ ಅಧೀನರಲ್ಲ.
೧೯ ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ, ೨೦ ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, 1 ಕೊರಿ. 11:19ಭಿನ್ನಮತ, ೨೧ ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. § ಕೊಲೊ. 3:6; 1 ಕೊರಿ. 6:9ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.
೨೨ ಆದರೆ * ರೋಮಾ. 7:4; 8:5; ಎಫೆ. 5:9ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, 2 ಕೊರಿ. 6:6ದಯೆ, ಪರೋಪಕಾರ, ನಂಬಿಕೆ, ೨೩ ಸಾಧುತ್ವ, ಅ. ಕೃ. 24:5; 2 ಪೇತ್ರ 1:6ಶಮೆದಮೆ ಇಂಥವುಗಳೇ. § 1 ತಿಮೊ. 1:9ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ. ೨೪ ಕ್ರಿಸ್ತ ಯೇಸುವಿನಲ್ಲಿರುವವರು * ಗಲಾ. 5:16; ರೋಮಾ. 6:6ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.
೨೫  ಗಲಾ. 5:16ನಾವು ಆತ್ಮನಿಂದ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡೆಯೋಣ. ೨೬  ಫಿಲಿ. 2:3ಅಹಂಕಾರಿಗಳೂ, ಒಬ್ಬರನ್ನೊಬ್ಬರು ಕೆಣಕುವವರೂ, ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.

*೫:೧ ಗಲಾ. 2:4; 5:13

೫:೧ ಅ. ಕೃ. 15:10

೫:೨ ಅ. ಕೃ. 15:1; 1 ಕೊರಿ. 7:18; ಗಲಾ. 5:3-11

§೫:೩ ರೋಮಾ. 2:25

*೫:೪ ಗಲಾ. 2:21; 3:10; ರೋಮಾ. 9:31,32

೫:೫ ರೋಮಾ. 8:23,25

೫:೬ ಗಲಾ. 6:15; 1 ಕೊರಿ. 7:19; ಕೊಲೊ. 3:11; ಗಲಾ. 3:28

§೫:೬ ಎಫೆ. 6:23; 1 ಥೆಸ. 1:3; ಯಾಕೋಬ 2:18,20,22

*೫:೯ 1 ಕೊರಿ. 5:6

೫:೧೦ ಗಲಾ. 1:; 5:12

೫:೧೧ ಗಲಾ. 4:29; 6:12

§೫:೧೧ 1 ಕೊರಿ. 1:23

*೫:೧೨ ಗಲಾ. 5:10, 2:4

೫:೧೨ ಕಸಿ ಮಾಡುವುದು

೫:೧೩ ಗಲಾ. 5:1

§೫:೧೩ 1 ಪೇತ್ರ. 2:1; ಯೂದ. 4

*೫:೧೩ 1 ಕೊರಿ. 9:19

೫:೧೬ ಗಲಾ. 5:24,25; ರೋಮಾ. 8:4

೫:೧೬ ಎಫೆ. 2:3

§೫:೧೭ ರೋಮಾ. 7:15, 18-20

*೫:೧೮ ರೋಮಾ. 8:14

೫:೧೮ ರೋಮಾ. 7:4

೫:೨೦ 1 ಕೊರಿ. 11:19

§೫:೨೧ ಕೊಲೊ. 3:6; 1 ಕೊರಿ. 6:9

*೫:೨೨ ರೋಮಾ. 7:4; 8:5; ಎಫೆ. 5:9

೫:೨೨ 2 ಕೊರಿ. 6:6

೫:೨೩ ಅ. ಕೃ. 24:5; 2 ಪೇತ್ರ 1:6

§೫:೨೩ 1 ತಿಮೊ. 1:9

*೫:೨೪ ಗಲಾ. 5:16; ರೋಮಾ. 6:6

೫:೨೫ ಗಲಾ. 5:16

೫:೨೬ ಫಿಲಿ. 2:3