ಪರಸ್ಪರ ಭಾರವನ್ನು ಹೊತ್ತುಕೊಳ್ಳಿರಿ
೧ ಸಹೋದರರೇ, * 2 ಕೊರಿ. 2:7, ಇಬ್ರಿ. 12:13, ಯಾಕೋಬ. 5:19ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ರೋಮಾ. 15:1ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ೨ ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ಧರ್ಮಶಾಸ್ತ್ರವನ್ನು, ಗಲಾ. 5:14ನೀತಿನಿಯಮಗಳನ್ನು ನೆರವೇರಿಸಿರಿ. ೩  § 1 ಕೊರಿ. 3:18ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ. ೪  * 1 ಕೊರಿ. 11:28, 2 ಕೊರಿ. 13:5ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ. ೫ ಏಕೆಂದರೆ ರೋಮಾ. 14:12ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು.
೬  ರೋಮಾ. 15:27, 1 ಕೊರಿ. 9:11ದೇವರ ವಾಕ್ಯವನ್ನು ಕಲಿಯುವವನು, ಅದನ್ನು ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಕೊಡಬೇಕು. ೭ ಮೋಸಹೋಗಬೇಡಿರಿ. § ಯೋಬ. 13:9ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. * 2 ಕೊರಿ. 9:6ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ೮ ತನ್ನ ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8ಶರೀರಭಾವವನ್ನು ಕುರಿತು ಬಿತ್ತುವವನು ರೋಮಾ. 6:21ಆ ಭಾವದಿಂದ ನಾಶವನ್ನು ಕೊಯ್ಯುವನು. § ಯಾಕೋಬ. 3:18ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. ೯  * 2 ಥೆಸ. 3:13, 1 ಕೊರಿ. 15:58ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. ೧೦ ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ ಎಫೆ. 2:19, ಇಬ್ರಿ. 3:6ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ.
ಕಡೆ ಎಚ್ಚರಿಕೆಗಳು ಮತ್ತು ವಂದನೆಗಳು
೧೧ ಇಗೋ ನೋಡಿರಿ, 1 ಕೊರಿ. 16:21ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರಗಳಲ್ಲಿ ನಿಮಗೆ ಬರೆಯುತ್ತಾ ಇದ್ದೇನೆ. ೧೨ ದೈಹಿಕವಾಗಿ ಪ್ರಶಂಸೆಯನ್ನು ಹೊಂದಬೇಕೆಂದಿರುವವರು ಸುನ್ನತಿ ಮಾಡಿಸಿಕೊಳ್ಳಿರಿ ಎಂಬುದಾಗಿ ನಿಮ್ಮನ್ನು ಒತ್ತಾಯಿಸುತ್ತಾರೆ. § ಗಲಾ. 5:11ಏಕೆಂದರೆ ಕ್ರಿಸ್ತನ ಶಿಲುಬೆಯ ದೆಸೆಯಿಂದ ತಮಗೆ ಹಿಂಸೆಯಾಗಬಾರದೆಂಬುದೇ ಅವರ ಉದ್ದೇಶ. ೧೩ ಸುನ್ನತಿ ಮಾಡಿಸಿಕೊಂಡವರೇ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತಿಲ್ಲವಲ್ಲಾ. ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳಪಡುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. ೧೪  * 1 ಕೊರಿ. 2:2, ಫಿಲಿ. 3:3, 7-8ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವುದರಿಂದಲೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ರೋಮಾ. 6:6ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು. ೧೫  ರೋಮಾ. 2:28, ಗಲಾ. 5:6ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಏನು ಅಲ್ಲ, ಆದರೆ § ಯೋಹಾ 3:5-7, ರೋಮಾ. 6:4, 2 ಕೊರಿ. 5:17ಹೊಸ ಸೃಷ್ಟಿಯಾಗುವುದೇ ಪ್ರಮುಖವಾದುದು. ೧೬ ಈ ನಿಯಮಗಳನ್ನು ಸರಿಯಾಗಿ ನಡೆಯುವವರೆಲ್ಲರಿಗೂ ಮತ್ತು ದೇವರ * ಗಲಾ. 3:7-9,29; ರೋಮಾ. 2:29, 4:12, 9:6-8ಇಸ್ರಾಯೇಲ್ಯರಿಗೆ ಶಾಂತಿಯೂ, ಕರುಣೆಯೂ ಉಂಟಾಗಲಿ.
೧೭ ಇನ್ನು ಮೇಲೆ ಯಾರೂ ನನಗೆ ತೊಂದರೆಪಡಿಸಬಾರದು, ಯೆಶಾ. 44:5, ಯೆಹೆ. 9:4, ಪ್ರಕ 13:16ನನ್ನ ದೇಹದಲ್ಲಿ ಯೇಸುಕ್ರಿಸ್ತನ ಗುರುತುಗಳನ್ನು ಒತ್ತಿಸಿಕೊಂಡಿದ್ದೇನೆ. ೧೮ ಸಹೋದರರೇ, ಫಿಲೆ. 25, ರೋಮಾ. 16:20ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು § 2 ತಿಮೊ. 4:22ನಿಮ್ಮ ಆತ್ಮದೊಂದಿಗಿರಲಿ. ಆಮೆನ್.

*೬:೧ 2 ಕೊರಿ. 2:7, ಇಬ್ರಿ. 12:13, ಯಾಕೋಬ. 5:19

೬:೧ ರೋಮಾ. 15:1

೬:೨ ಧರ್ಮಶಾಸ್ತ್ರವನ್ನು, ಗಲಾ. 5:14

§೬:೩ 1 ಕೊರಿ. 3:18

*೬:೪ 1 ಕೊರಿ. 11:28, 2 ಕೊರಿ. 13:5

೬:೫ ರೋಮಾ. 14:12

೬:೬ ರೋಮಾ. 15:27, 1 ಕೊರಿ. 9:11

§೬:೭ ಯೋಬ. 13:9

*೬:೭ 2 ಕೊರಿ. 9:6

೬:೮ ಶರೀರಭಾವದಲ್ಲಿ, ಹೋಶೇ. 8:7, ಯೋಬ. 4:8

೬:೮ ರೋಮಾ. 6:21

§೬:೮ ಯಾಕೋಬ. 3:18

*೬:೯ 2 ಥೆಸ. 3:13, 1 ಕೊರಿ. 15:58

೬:೧೦ ಎಫೆ. 2:19, ಇಬ್ರಿ. 3:6

೬:೧೧ 1 ಕೊರಿ. 16:21

§೬:೧೨ ಗಲಾ. 5:11

*೬:೧೪ 1 ಕೊರಿ. 2:2, ಫಿಲಿ. 3:3, 7-8

೬:೧೪ ರೋಮಾ. 6:6

೬:೧೫ ರೋಮಾ. 2:28, ಗಲಾ. 5:6

§೬:೧೫ ಯೋಹಾ 3:5-7, ರೋಮಾ. 6:4, 2 ಕೊರಿ. 5:17

*೬:೧೬ ಗಲಾ. 3:7-9,29; ರೋಮಾ. 2:29, 4:12, 9:6-8

೬:೧೭ ಯೆಶಾ. 44:5, ಯೆಹೆ. 9:4, ಪ್ರಕ 13:16

೬:೧೮ ಫಿಲೆ. 25, ರೋಮಾ. 16:20

§೬:೧೮ 2 ತಿಮೊ. 4:22