೧೧
ನಂಬಿಕೆಯ ಮಹತ್ವಕ್ಕೆ ದೃಷ್ಟಾಂತಗಳು
೧ ನಂಬಿಕೆಯೋ ನಾವು * ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ. ನಿರೀಕ್ಷಿಸುವಂಥವುಗಳು ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ. ೨ ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ ಅಥವಾ, ಅನುಮತಿ, ಪ್ರಶಂಸಿಸು, ತೋರಿಸಿತು ಇತ್ಯಾದಿ. ದೈವಸಮ್ಮತಿಯನ್ನು ಪಡೆದರು. ೩  ಆದಿ. 1:1:ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
೪ ನಂಬಿಕೆಯಿಂದಲೇ § ಆದಿ. 4:4-8; 1 ಯೋಹಾ. 3:12:ಹೇಬೆಲನು ಕಾಯಿನನ ಯಜ್ಞಕ್ಕಿಂತ * ಜ್ಞಾ. 15:8:ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು. ಆದಿ. 4:10; ಇಬ್ರಿ. 12:24:ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.
೫ ನಂಬಿಕೆಯಿಂದಲೇ ಆದಿ. 5:22-24:ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು. ೬ ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು § 1 ಪೂರ್ವ. 28:9; ಯೆರೆಮೀಯನು 29:12-14; ಯೋಹಾ 4:24:ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.
೭ ನಂಬಿಕೆಯಿಂದಲೇ * ಆದಿ. 6:13-22; ಲೂಕ. 17:26; 1 ಪೇತ್ರ. 3:20:ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ರೋಮಾ. 4:13; ಆದಿ. 6:9; ಯೆಹೆ. 14:14, 20:ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.
೮ ನಂಬಿಕೆಯಿಂದಲೇ ಆದಿ. 12:1-4; ಅ. ಕೃ. 7:2-4:ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ § ಆದಿ. 12:7:ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು. ೯ ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ * ಆದಿ. 12:8; 13:3, 18; 18:1, 9:ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು. ೧೦ ಯಾಕೆಂದರೆ ಅವನು ಕೀರ್ತ. 87:1; ಪ್ರಕ. 21:14:ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ಪ್ರಕ. 21:2, 10:ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.
೧೧ ಇದಲ್ಲದೆ § ಆದಿ. 17:19; 18:11-14; 21:2:ಸಾರಳು * ಇಬ್ರಿ. 10:23:ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು. ೧೨ ಆದುದರಿಂದ ರೋಮಾ. 4:19:ಮೃತಪ್ರಾಯನಾಗಿದ್ದ ಒಬ್ಬನಿಂದ ಆದಿ. 15:5; 22:17; 32:12:ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.
೧೩  § ವ. 39:ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ * ವ. 27; ಯೋಹಾ 8:56; ಮತ್ತಾ 13:17:ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಎಫೆ. 2:19:ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಆದಿ. 23:4; 47:9. 1 ಪೂರ್ವ. 29:15; ಕೀರ್ತ. 39:12:ಒಪ್ಪಿಕೊಂಡರು. ೧೪ ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ. ೧೫  § ಆದಿ. 24:6-8.ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು. ೧೬ ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ * ಆದಿ. 28:13; ವಿಮೋ. 3:6; 4:5.ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಕೀರ್ತ. 107:36; ಮತ್ತಾ 25:34; ಯೋಹಾ. 14:2; ಇಬ್ರಿ. 11:10:ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.
೧೭-೧೮  ಆದಿ. 22:1-10; ಯಾಕೋಬ. 2:21:ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, § ಆದಿ. 21:12; ರೋಮಾ. 9:7:ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು. ೧೯  * ರೋಮಾ. 4:17-21:ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಮೂಲ. ಸತ್ತವರೊಳಗಿಂದ ಸಾಮ್ಯರೂಪವಾಗಿ ಅವನನ್ನು ಹೊಂದಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.
೨೦ ನಂಬಿಕೆಯಿಂದಲೇ ಆದಿ. 27:27-29, 39, 40. ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು. ೨೧  § ಆದಿ. 48:16, 20:ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. * ಆದಿ. 47:31:ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. ೨೨  ಆದಿ. 50. 24, 25; ವಿಮೋ. 13:19:ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.
೨೩  ವಿಮೋ. 2:2, 3; ಅ. ಕೃ. 7:20:ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ § ವಿಮೋ. 1:16, 22:ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. ೨೪ ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ * ವಿಮೋ. 2:10, 11:ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು. ೨೫  1 ಯೋಹಾ. 2:17:ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ಕೀರ್ತ. 84:10:ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು. ೨೬ ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, § ಇಬ್ರಿ. 13:13; ಕೀರ್ತ. 69:9; 89:50, 51; ಫಿಲಿ. 3:7, 8; 1 ಪೇತ್ರ. 4:14:ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ * ಇಬ್ರಿ. 2:2; 10:35:ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. ೨೭ ನಂಬಿಕೆಯಿಂದಲೇ ವಿಮೋ. 10:28, 29; 12:37; 13:17, 18:ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ವ. 13; 1 ತಿಮೊ. 1:17:ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು. ೨೮ ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ § ವಿಮೋ. 12:21-30. ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.
೨೯  * ವಿಮೋ. 14:21-30. ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು. ೩೦ ನಂಬಿಕೆಯಿಂದಲೇ ಯೆಹೋ. 6:15, 16, 20:ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು. ೩೧ ನಂಬಿಕೆಯಿಂದಲೇ ಯೆಹೋ. 6:25; ಯಾಕೋಬ. 2:25:ರಾಹಾಬಳೆಂಬ ಸೂಳೆಯು § ಯೆಹೋ. 2:1, 8-13:ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.
೩೨ ಇನ್ನೂ ಏನು ಹೇಳಬೇಕು? * ನ್ಯಾಯ. 6:11:ಗಿದ್ಯೋನ್, ನ್ಯಾಯ. 4:6:ಬಾರಾಕ ನ್ಯಾಯ. 13:24:ಸಂಸೋನ, § ನ್ಯಾಯ. 11:1:ಯೆಪ್ತಾಹ, * 1 ಸಮು. 16:1, 13:ದಾವೀದ, 1 ಸಮು. 1:20:ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. ೩೩ ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ನ್ಯಾಯ. 14:6; 1 ಸಮು. 17:35; ದಾನಿ. 6:22:ಸಿಂಹಗಳ ಬಾಯಿ ಕಟ್ಟಿದರು., ೩೪  § ದಾನಿ. 3:25, 26:ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, * ನ್ಯಾಯ. 7:21; 1 ಸಮು. 17:51:ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು. ೩೫  1 ಅರಸು. 17:22; 2 ಅರಸು. 4:35:ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು. ೩೬ ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಆದಿ. 39:20; ಯೆರೆಮೀಯನು 20:2; 37:15:ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು. ೩೭  § 1 ಅರಸು. 21:13; 2 ಪೂರ್ವ. 24:21:ಕೆಲವರನ್ನು ಜನರು ಕಲ್ಲೆಸೆದು ಕೊಂದರು, * 1 ಅರಸು. 19:10; ಯೆರೆಮೀಯನು 26:23:ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು 2 ಅರಸು. 1:8:ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. ೩೮ ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ 1 ಸಮು. 22:1; 1 ಅರಸು. 18:4; 19:9:ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.
೩೯ ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, § ಇಬ್ರಿ. 11:13; 1 ಪೇತ್ರ. 1:12:ವಾಗ್ದಾನದ ಫಲವನ್ನು ಹೊಂದಲಿಲ್ಲ. ೪೦ ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, * ಪ್ರಕ. 6:11:ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.

*೧೧:೧ ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ.

೧೧:೨ ಅಥವಾ, ಅನುಮತಿ, ಪ್ರಶಂಸಿಸು, ತೋರಿಸಿತು ಇತ್ಯಾದಿ.

೧೧:೩ ಆದಿ. 1:1:

§೧೧:೪ ಆದಿ. 4:4-8; 1 ಯೋಹಾ. 3:12:

*೧೧:೪ ಜ್ಞಾ. 15:8:

೧೧:೪ ಆದಿ. 4:10; ಇಬ್ರಿ. 12:24:

೧೧:೫ ಆದಿ. 5:22-24:

§೧೧:೬ 1 ಪೂರ್ವ. 28:9; ಯೆರೆಮೀಯನು 29:12-14; ಯೋಹಾ 4:24:

*೧೧:೭ ಆದಿ. 6:13-22; ಲೂಕ. 17:26; 1 ಪೇತ್ರ. 3:20:

೧೧:೭ ರೋಮಾ. 4:13; ಆದಿ. 6:9; ಯೆಹೆ. 14:14, 20:

೧೧:೮ ಆದಿ. 12:1-4; ಅ. ಕೃ. 7:2-4:

§೧೧:೮ ಆದಿ. 12:7:

*೧೧:೯ ಆದಿ. 12:8; 13:3, 18; 18:1, 9:

೧೧:೧೦ ಕೀರ್ತ. 87:1; ಪ್ರಕ. 21:14:

೧೧:೧೦ ಪ್ರಕ. 21:2, 10:

§೧೧:೧೧ ಆದಿ. 17:19; 18:11-14; 21:2:

*೧೧:೧೧ ಇಬ್ರಿ. 10:23:

೧೧:೧೨ ರೋಮಾ. 4:19:

೧೧:೧೨ ಆದಿ. 15:5; 22:17; 32:12:

§೧೧:೧೩ ವ. 39:

*೧೧:೧೩ ವ. 27; ಯೋಹಾ 8:56; ಮತ್ತಾ 13:17:

೧೧:೧೩ ಎಫೆ. 2:19:

೧೧:೧೩ ಆದಿ. 23:4; 47:9. 1 ಪೂರ್ವ. 29:15; ಕೀರ್ತ. 39:12:

§೧೧:೧೫ ಆದಿ. 24:6-8.

*೧೧:೧೬ ಆದಿ. 28:13; ವಿಮೋ. 3:6; 4:5.

೧೧:೧೬ ಕೀರ್ತ. 107:36; ಮತ್ತಾ 25:34; ಯೋಹಾ. 14:2; ಇಬ್ರಿ. 11:10:

೧೧:೧೭-೧೮ ಆದಿ. 22:1-10; ಯಾಕೋಬ. 2:21:

§೧೧:೧೭-೧೮ ಆದಿ. 21:12; ರೋಮಾ. 9:7:

*೧೧:೧೯ ರೋಮಾ. 4:17-21:

೧೧:೧೯ ಮೂಲ. ಸತ್ತವರೊಳಗಿಂದ ಸಾಮ್ಯರೂಪವಾಗಿ ಅವನನ್ನು ಹೊಂದಿದನು.

೧೧:೨೦ ಆದಿ. 27:27-29, 39, 40.

§೧೧:೨೧ ಆದಿ. 48:16, 20:

*೧೧:೨೧ ಆದಿ. 47:31:

೧೧:೨೨ ಆದಿ. 50. 24, 25; ವಿಮೋ. 13:19:

೧೧:೨೩ ವಿಮೋ. 2:2, 3; ಅ. ಕೃ. 7:20:

§೧೧:೨೩ ವಿಮೋ. 1:16, 22:

*೧೧:೨೪ ವಿಮೋ. 2:10, 11:

೧೧:೨೫ 1 ಯೋಹಾ. 2:17:

೧೧:೨೫ ಕೀರ್ತ. 84:10:

§೧೧:೨೬ ಇಬ್ರಿ. 13:13; ಕೀರ್ತ. 69:9; 89:50, 51; ಫಿಲಿ. 3:7, 8; 1 ಪೇತ್ರ. 4:14:

*೧೧:೨೬ ಇಬ್ರಿ. 2:2; 10:35:

೧೧:೨೭ ವಿಮೋ. 10:28, 29; 12:37; 13:17, 18:

೧೧:೨೭ ವ. 13; 1 ತಿಮೊ. 1:17:

§೧೧:೨೮ ವಿಮೋ. 12:21-30.

*೧೧:೨೯ ವಿಮೋ. 14:21-30.

೧೧:೩೦ ಯೆಹೋ. 6:15, 16, 20:

೧೧:೩೧ ಯೆಹೋ. 6:25; ಯಾಕೋಬ. 2:25:

§೧೧:೩೧ ಯೆಹೋ. 2:1, 8-13:

*೧೧:೩೨ ನ್ಯಾಯ. 6:11:

೧೧:೩೨ ನ್ಯಾಯ. 4:6:

೧೧:೩೨ ನ್ಯಾಯ. 13:24:

§೧೧:೩೨ ನ್ಯಾಯ. 11:1:

*೧೧:೩೨ 1 ಸಮು. 16:1, 13:

೧೧:೩೨ 1 ಸಮು. 1:20:

೧೧:೩೩ ನ್ಯಾಯ. 14:6; 1 ಸಮು. 17:35; ದಾನಿ. 6:22:

§೧೧:೩೪ ದಾನಿ. 3:25, 26:

*೧೧:೩೪ ನ್ಯಾಯ. 7:21; 1 ಸಮು. 17:51:

೧೧:೩೫ 1 ಅರಸು. 17:22; 2 ಅರಸು. 4:35:

೧೧:೩೬ ಆದಿ. 39:20; ಯೆರೆಮೀಯನು 20:2; 37:15:

§೧೧:೩೭ 1 ಅರಸು. 21:13; 2 ಪೂರ್ವ. 24:21:

*೧೧:೩೭ 1 ಅರಸು. 19:10; ಯೆರೆಮೀಯನು 26:23:

೧೧:೩೭ 2 ಅರಸು. 1:8:

೧೧:೩೮ 1 ಸಮು. 22:1; 1 ಅರಸು. 18:4; 19:9:

§೧೧:೩೯ ಇಬ್ರಿ. 11:13; 1 ಪೇತ್ರ. 1:12:

*೧೧:೪೦ ಪ್ರಕ. 6:11: