ಜಗಳಗಂಟಿತನ, ಪ್ರಾಪಂಚಿಕಬುದ್ಧಿಯ ವಿಷಯವಾಗಿ ಎಚ್ಚರಿಕೆ
೧ ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಿಂದ ಪ್ರಚೋದಿಸಲ್ಪಡುವ * ಅಥವಾ. ದಂಡಿಳಿದಿರುವ. ರೋಮಾ. 7:23; 1 ಪೇತ್ರ. 2:11:ಹೋರಾಡುವ ಮನೋಭಾವ ದುರಾಶೆಗಳಿಂದ ಬರುತ್ತವಲ್ಲವೇ? ೨ ನೀವು ಬಯಸಿದ್ದು ಹೊಂದದೆ ಇದ್ದೀರಿ. ನೀವು ಕೊಲೆ ಮಾಡಿದರೂ, ಹೊಟ್ಟೆಕಿಚ್ಚುಪಟ್ಟರೂ ಬಯಸಿದ್ದನ್ನು ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ನಿವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ. ೩ ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ 1 ಯೋಹಾ. 5:14:ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ. ೪  ಯೆಶಾ. 54:5; ಯೆರೆಮೀಯನು 2:20:ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ § ಯೋಹಾ. 15:19; 1 ಯೋಹಾ. 2:15. ಮತ್ತಾ 6:24:ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ. ೫  * 1 ಕೊರಿ. 6:19; 2 ಕೊರಿ. 6:16:ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನ ನಿರೀಕ್ಷೆಯೊಂದಿಗೆ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ? ೬  ಯೆಶಾ. 54:7, 8; ಮತ್ತಾ 13:12:ಆತನು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದುದರಿಂದ, ಜ್ಞಾ. 3:34; 1 ಪೇತ್ರ. 5:5; ಕೀರ್ತ. 138:6; ಮತ್ತಾ 23:12; 2 ಕೊರಿ. 7:6:ದೇವರು ಅಹಂಕಾರಿಗಳಿಗೆ ಎದುರಾಳಿಯಾಗಿದ್ದಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ ಎಂದು ಧರ್ಮಶಾಸ್ತ್ರವು ಹೇಳುತ್ತದೆ. ೭ ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು § 1 ಪೇತ್ರ. 5:8, 9; ಎಫೆ. 4:27; 6:11:ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು. ೮  * 2 ಪೂರ್ವ. 15:2; ಜೆಕ. 1:3; ಮಲಾ. 3:7; ಲೂಕ. 15:20:ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ಯೆಶಾ. 1:16:ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ಯೆರೆಮೀಯನು 4:14:ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. ೯  § ಮತ್ತಾ 5:4:ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಕರ್ತನ ಕೃಪೆಗಾಗಿ ಗೋಳಿಟ್ಟು ಬೇಡಿಕೊಳ್ಳಿ. ನಿಮ್ಮ ಲೌಕಿಕ ಸಂತೋಷವನ್ನು ಬಿಟ್ಟು ಕರ್ತನನ್ನು ಪಡೆಯಲು ಪ್ರಯತ್ನಿಸಿ. ೧೦  * ವ. 6; ಯೆಶಾ. 57:15. ಮತ್ತಾ 23:12; ಲೂಕ. 14:11; 18:14; 1 ಪೇತ್ರ. 5:5, 6:ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು.
೧೧ ಸಹೋದರರೇ, 2 ಕೊರಿ. 12:20; 1 ಪೇತ್ರ. 2:1; ಯಾಕೋಬ 5:9:ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ಮತ್ತಾ 7:1; ಲೂಕ. 6:37; ರೋಮಾ. 14:13; 1 ಕೊರಿ. 4:5:ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ. ೧೨  § ಯೆಶಾ. 33:22; ಯಾಕೋಬ. 5:9:ಧರ್ಮಶಾಸ್ತ್ರವನ್ನು ಕೊಟ್ಟಂಥ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವುದಕ್ಕೂ * ಮತ್ತಾ 10:28:ನಾಶಮಾಡುವುದಕ್ಕೂ ಸಮರ್ಥನು. ರೋಮಾ. 14:4:ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?
೧೩  ಜ್ಞಾ. 27:1; ಲೂಕ. 12:18-20:ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಎನ್ನುವವರೇ ಕೇಳಿರಿ. ೧೪ ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? § ಕೀರ್ತ. 102:3; ಯೋಬ. 7:7:ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ. ೧೫ ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು * ಅ. ಕೃ. 18:21:ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು. ೧೬ ಆದರೆ ನೀವು ನಿಮ್ಮ ಅಹಂನಿಂದ ನಿಮ್ಮಬಗ್ಗೆ ಹೊಗಳಿಕೊಳ್ಳುತ್ತೀರಿ. 1 ಕೊರಿ. 5:6:ಅಂಥ ಹೊಗಳಿಕೆಯೆಲ್ಲಾ ದೇವರಮುಂದೆ ಕೆಟ್ಟದ್ದೇ. ೧೭ ಹೀಗಿರುವುದರಿಂದ ಯೋಹಾ 9:41; 15:22, 24; ಲೂಕ. 12:47, 48; 2 ಪೇತ್ರ. 2:21:ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

*೪:೧ ಅಥವಾ. ದಂಡಿಳಿದಿರುವ. ರೋಮಾ. 7:23; 1 ಪೇತ್ರ. 2:11:

೪:೩ 1 ಯೋಹಾ. 5:14:

೪:೪ ಯೆಶಾ. 54:5; ಯೆರೆಮೀಯನು 2:20:

§೪:೪ ಯೋಹಾ. 15:19; 1 ಯೋಹಾ. 2:15. ಮತ್ತಾ 6:24:

*೪:೫ 1 ಕೊರಿ. 6:19; 2 ಕೊರಿ. 6:16:

೪:೬ ಯೆಶಾ. 54:7, 8; ಮತ್ತಾ 13:12:

೪:೬ ಜ್ಞಾ. 3:34; 1 ಪೇತ್ರ. 5:5; ಕೀರ್ತ. 138:6; ಮತ್ತಾ 23:12; 2 ಕೊರಿ. 7:6:

§೪:೭ 1 ಪೇತ್ರ. 5:8, 9; ಎಫೆ. 4:27; 6:11:

*೪:೮ 2 ಪೂರ್ವ. 15:2; ಜೆಕ. 1:3; ಮಲಾ. 3:7; ಲೂಕ. 15:20:

೪:೮ ಯೆಶಾ. 1:16:

೪:೮ ಯೆರೆಮೀಯನು 4:14:

§೪:೯ ಮತ್ತಾ 5:4:

*೪:೧೦ ವ. 6; ಯೆಶಾ. 57:15. ಮತ್ತಾ 23:12; ಲೂಕ. 14:11; 18:14; 1 ಪೇತ್ರ. 5:5, 6:

೪:೧೧ 2 ಕೊರಿ. 12:20; 1 ಪೇತ್ರ. 2:1; ಯಾಕೋಬ 5:9:

೪:೧೧ ಮತ್ತಾ 7:1; ಲೂಕ. 6:37; ರೋಮಾ. 14:13; 1 ಕೊರಿ. 4:5:

§೪:೧೨ ಯೆಶಾ. 33:22; ಯಾಕೋಬ. 5:9:

*೪:೧೨ ಮತ್ತಾ 10:28:

೪:೧೨ ರೋಮಾ. 14:4:

೪:೧೩ ಜ್ಞಾ. 27:1; ಲೂಕ. 12:18-20:

§೪:೧೪ ಕೀರ್ತ. 102:3; ಯೋಬ. 7:7:

*೪:೧೫ ಅ. ಕೃ. 18:21:

೪:೧೬ 1 ಕೊರಿ. 5:6:

೪:೧೭ ಯೋಹಾ 9:41; 15:22, 24; ಲೂಕ. 12:47, 48; 2 ಪೇತ್ರ. 2:21: