ಐಕಮತ್ಯವು ಶ್ರೇಷ್ಠವಾದುದು
೧೩೩
ಯಾತ್ರಾಗೀತೆ; ದಾವೀದನದು.
 
೧ ಆಹಾ, ಸಹೋದರರು ಒಂದಾಗಿರುವುದು,
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!
೨ ಅದು ಆರೋನನ ತಲೆಯ ಮೇಲೆ ಹಾಕಲ್ಪಟ್ಟು,
ಅವನ ಗಡ್ಡದ ಮೇಲೆಯೂ,
ಅವನ ಅಂಗಿಗಳ ಕೊರಳಪಟ್ಟಿಯವರೆಗೂ ಹರಿದು ಬರುವ ಶ್ರೇಷ್ಠ ತೈಲದಂತೆಯೂ,
೩ ಹೆರ್ಮೋನ್ ಪರ್ವತದಲ್ಲಿ ಹುಟ್ಟಿ,
ಚೀಯೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆಯೂ ಇದೆ.
ಅಲ್ಲಿ ಆಶೀರ್ವಾದವೂ, ಜೀವವೂ ಸದಾಕಾಲ ಇರಬೇಕೆಂದು,
ಯೆಹೋವನು ಆಜ್ಞಾಪಿಸಿದ್ದಾನೆ.