ಕೀರ್ತನೆ 117 1ಎಲ್ಲಾ ದೇಶಗಳೇ, ಯೆಹೋವ ದೇವರನ್ನು ಸ್ತುತಿಸಿರಿ; ಸಮಸ್ತ ಜನರೇ, ಯೆಹೋವ ದೇವರನ್ನು ಸ್ತುತಿಸಿರಿ. 2ದೇವರ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ; ಯೆಹೋವ ದೇವರ ಸತ್ಯತೆಯು ಯುಗಯುಗಕ್ಕೂ ಇರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.