ಕ್ರೈಸ್ತರು ಕ್ರೈಸ್ತರಲ್ಲದವರ ಮುಂದೆ ವ್ಯಾಜ್ಯವಾಡಿದ್ದನ್ನು ಕುರಿತದ್ದು
೧ ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ * ಮತ್ತಾ 18:17ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ? ೨  ದಾನಿ. 7:22; ಮತ್ತಾ 19:28ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ? ೩ ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ? ೪ ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನೀವು ಕರೆಯಲ್ಪಟ್ಟಿದ್ದರೆ ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ನೇಮಿಸಿರಿ? ೫ ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ? ೬ ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ? ೭ ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ಮತ್ತಾ 5:39,40ನಷ್ಟವನ್ನು ಯಾಕೆ ತಾಳಬಾರದು? ೮ ಆದರೆ ನೀವು ನಿಮ್ಮ § 1 ಥೆಸ. 4:6ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ. ೯ ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು, ೧೦ ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು * 1 ಕೊರಿ. 15:50; ಗಲಾ. 5:21; ಎಫೆ. 5:5; ಇಬ್ರಿ. 12:14; ಪ್ರಕ. 21:8; 22:15ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. ೧೧  1 ಕೊರಿ. 12:2-3, 22; 5:8; ಕೊಲೊ. 3:7; ತೀತ 3:3ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಅ. ಕೃ. 22:16; ಇಬ್ರಿ. 10:22; ತೀತ 3:5ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, § 1 ಕೊರಿ. 1:2ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ * ರೋಮಾ. 8:30ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ
೧೨  1 ಕೊರಿ. 10:23ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು, ಆದರೆ ಎಲ್ಲವು ಪ್ರಯೋಜನಕರವಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು ಆದರೆ ನಾನು ಯಾವುದಕ್ಕೂ ಅಧೀನನಲ್ಲ. ೧೩  ಮತ್ತಾ 19:5; ಮಾರ್ಕ. 10:; ಎಫೆ. 5:31ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. § 1 ಕೊರಿ. 6:15-19ಕರ್ತನಿಗೋಸ್ಕರ ಇರುವುದಾಗಿದೆ. * ಎಫೆ. 5:23ಕರ್ತನು ದೇಹ ಕೊಸಕರ ಇದ್ದಾನೆ. ೧೪  ಅ. ಕೃ. 2:24ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ 1 ಕೊರಿ. 15:22,23; ಯೋಹಾ 6:39, 40ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು. ೧೫  § 1 ಕೊರಿ. 6:13; ಎಫೆ. 5:30; 1 ಕೊರಿ. 12:27; ರೋಮಾ. 12:5ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು ೧೬ ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? * ಆದಿ. 2:24; ಮತ್ತಾ 19:5; ಮಾರ್ಕ. 10:8; ಎಫೆ. 5:31ಇಬ್ಬರು ಒಂದೇ ಶರೀರವಾಗಿರುವರೆಂದು ದೇವರವಾಕ್ಯ ಹೇಳುತ್ತದಲ್ಲಾ. ೧೭ ಆದರೆ ಕರ್ತನೊಂದಿಗೆ ಸೇರಿಕೊಂಡವನು ಎಫೆ. 4:4; ಯೋಹಾ. 17:21-23ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ. ೧೮ ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಾಗಿವೆ, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. ೧೯  ರೋಮಾ. 14:7ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು § 1 ಕೊರಿ. 3:16; ಯೋಹಾ 2:21ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ? ೨೦  * 1 ಕೊರಿ. 7:23; ಅ. ಕೃ. 20:28ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ 1 ಕೊರಿ. 12:4, 11; ರೋಮಾ. 12:6ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.

*೬:೧ ಮತ್ತಾ 18:17

೬:೨ ದಾನಿ. 7:22; ಮತ್ತಾ 19:28

೬:೭ ಮತ್ತಾ 5:39,40

§೬:೮ 1 ಥೆಸ. 4:6

*೬:೧೦ 1 ಕೊರಿ. 15:50; ಗಲಾ. 5:21; ಎಫೆ. 5:5; ಇಬ್ರಿ. 12:14; ಪ್ರಕ. 21:8; 22:15

೬:೧೧ 1 ಕೊರಿ. 12:2-3, 22; 5:8; ಕೊಲೊ. 3:7; ತೀತ 3:3

೬:೧೧ ಅ. ಕೃ. 22:16; ಇಬ್ರಿ. 10:22; ತೀತ 3:5

§೬:೧೧ 1 ಕೊರಿ. 1:2

*೬:೧೧ ರೋಮಾ. 8:30

೬:೧೨ 1 ಕೊರಿ. 10:23

೬:೧೩ ಮತ್ತಾ 19:5; ಮಾರ್ಕ. 10:; ಎಫೆ. 5:31

§೬:೧೩ 1 ಕೊರಿ. 6:15-19

*೬:೧೩ ಎಫೆ. 5:23

೬:೧೪ ಅ. ಕೃ. 2:24

೬:೧೪ 1 ಕೊರಿ. 15:22,23; ಯೋಹಾ 6:39, 40

§೬:೧೫ 1 ಕೊರಿ. 6:13; ಎಫೆ. 5:30; 1 ಕೊರಿ. 12:27; ರೋಮಾ. 12:5

*೬:೧೬ ಆದಿ. 2:24; ಮತ್ತಾ 19:5; ಮಾರ್ಕ. 10:8; ಎಫೆ. 5:31

೬:೧೭ ಎಫೆ. 4:4; ಯೋಹಾ. 17:21-23

೬:೧೯ ರೋಮಾ. 14:7

§೬:೧೯ 1 ಕೊರಿ. 3:16; ಯೋಹಾ 2:21

*೬:೨೦ 1 ಕೊರಿ. 7:23; ಅ. ಕೃ. 20:28

೬:೨೦ 1 ಕೊರಿ. 12:4, 11; ರೋಮಾ. 12:6