೨೨
೧ ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ * ಯೆಹೆ. 47:1-12; ಜೆಕ. 14:8:ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, ೨ ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. † ಯೆಹೆ. 47:12:ಆ ನದಿಯ ಎರಡು ದಡಗಳಲ್ಲಿ ‡ ಆದಿ. 2:9; ಪ್ರಕ. 22:14, 19; 2:7:ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ § ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. * ಪ್ರಕ. 21:24:ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. ೩  † ಯೆಹೆ. 14:11; ಆದಿ. 3:17:ಇನ್ನೂ ಯಾವ ಶಾಪವು ಇರುವುದಿಲ್ಲ. ‡ ಯೆಹೆ. 48:35; ಪ್ರಕ. 21:3, 23:ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾತನ ಸಿಂಹಾಸನವಿರುವುದು. § ಪ್ರಕ. 7:15:ಆತನ ಸೇವಕರು ಆತನಿಗೆ ಸೇವೆ ಮಾಡುವರು. ೪  * ಮತ್ತಾ 5:8; 1 ಕೊರಿ. 13:12; 1 ಯೋಹಾ. 3:2:ಅವರು ಆತನ ಮುಖವನ್ನು ನೋಡುವರು. † ಪ್ರಕ. 3:12; 7:3; 14:1:ಅವರ ಹಣೆಯ ಮೇಲೆ ಆತನ ಹೆಸರು ಇರುವುದು. ೫ ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ ‡ ಕೀರ್ತ. 36:9; ಪ್ರಕ. 21:11, 23-25:ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. § ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ. 20:4:ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
ಯೇಸುವಿನ ಪುನರಾಗಮನ
೬ ಆ ಮೇಲೆ ದೇವದೂತನು ನನಗೆ, * ಪ್ರಕ. 21:5 ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ † ಪ್ರಕ. 1:1:ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.
೭ ಇಗೋ ನೋಡು! ನಾನು ‡ ಪ್ರಕ. 3:11; 22:12, 20:ಅತಿಬೇಗನೆ ಬರುತ್ತೇನೆ! § ಪ್ರಕ. 1:3.ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು ಎಂದು ಹೇಳಿದನು.
೮  * ಪ್ರಕ. 1:1; 4:9:ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು. ೯ ಆದರೆ † ಪ್ರಕ. 9:10ಅವನು ನನಗೆ, ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ, ‡ ಪ್ರಕ. 1:3:ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು ಎಂದು ಹೇಳಿದನು. ೧೦ ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ § ಮೂಲ:ವಾಕ್ಯಗಳನ್ನು ಗುಪ್ತವಾಗಿಡಬೇಡ. ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ. ೧೧  * ಯೆಹೆ. 3 27; ದಾನಿ. 12:10; 2 ತಿಮೊ. 3:13:ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.
೧೨ ನೋಡು! ನಾನು ಬೇಗನೇ ಬರುತ್ತೇನೆ. † ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ ‡ ಯೆಶಾ. 40. 10; 62:11:ಪ್ರತಿಫಲವು ನನ್ನಲ್ಲಿದೆ. ೧೩ ನಾನೇ § ಪ್ರಕ. 1:8:ಆದಿಯೂ, ಅಂತ್ಯವೂ, * ಪ್ರಕ. 1:17; 1:4:ಮೊದಲನೆಯವನೂ, ಕಡೆಯವನೂ, † ಪ್ರಕ. 21:6:ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.
೧೪  ‡ ಪ್ರಕ. 7:14ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ § ಪ್ರಕ. 22:2, 19:ಜೀವವೃಕ್ಷದ ಹಕ್ಕು ಇರುವುದು. * ಕೀರ್ತ. 118:20; ಪ್ರಕ. 21:27:ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು. ೧೫ ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ † ಮತ್ತಾ 8:12; ಗಲಾ. 5:19-21; ಪ್ರಕ. 21:8:ಹೊರಗಿರುವರು ಎಂದು ಹೇಳಿದನು.
೧೬ ಯೇಸುವೆಂಬ ನಾನು ‡ ಪ್ರಕ. 1:4:ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ § ಪ್ರಕ. 1:1:ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು * ಪ್ರಕ. 5:5:ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ † 2 ಸಮು. 7:12-16; ಯೆಶಾ. 11:1; ರೋಮಾ. 1:3:ಅವನ ಸಂತತಿಯೂ ‡ ಅರಣ್ಯ. 24:17; ಯೆಶಾ. 60. 3; ಮತ್ತಾ 2:2; ಪ್ರಕ. 2:28:ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.
೧೭ ಆತ್ಮನು ಮತ್ತು § ಪ್ರಕ. 21:2, 9:ಮದಲಗಿತ್ತಿಯು, ಬಾ ಎನ್ನುತ್ತಾರೆ. ಕೇಳುವವನು, ಬಾ ಎನ್ನಲಿ. ಬಾಯಾರಿದವನು ಬರಲಿ, * ಯೆಶಾ. 55:1; ಯೋಹಾ 7:37; ಪ್ರಕ. 21:6:ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.
ಸಮಾಪ್ತಿ
೧೮ ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ, † ಧರ್ಮೋ. 4:2; 12:32; ಜ್ಞಾ. 30. 6:ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು. ೧೯ ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ‡ ಪ್ರಕ. 21:2:ಪರಿಶುದ್ಧ ಪಟ್ಟಣದಲ್ಲಿಯೂ § ಪ್ರಕ. 22:2, 14:ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.
೨೦ ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, ಹೌದು ನಾನು ನಿಜವಾಗಿ * ಪ್ರಕ. 22:7,12:ಬೇಗನೇ ಬರುತ್ತೇನೆ! ಎಂದು ಹೇಳುತ್ತಾನೆ. ಆಮೆನ್. † 2 ತಿಮೊ. 4:8:ಕರ್ತನಾದ ಯೇಸುವೇ ಬಾ.
೨೧ ಕರ್ತನಾದ ಯೇಸುವಿನ ಕೃಪೆಯು ‡ ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.ಎಲ್ಲರೊಂದಿಗೆ ಇರಲಿ. ಆಮೆನ್!

*೨೨:೧ ಯೆಹೆ. 47:1-12; ಜೆಕ. 14:8:

†೨೨:೨ ಯೆಹೆ. 47:12:

‡೨೨:೨ ಆದಿ. 2:9; ಪ್ರಕ. 22:14, 19; 2:7:

§೨೨:೨ ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:

*೨೨:೨ ಪ್ರಕ. 21:24:

†೨೨:೩ ಯೆಹೆ. 14:11; ಆದಿ. 3:17:

‡೨೨:೩ ಯೆಹೆ. 48:35; ಪ್ರಕ. 21:3, 23:

§೨೨:೩ ಪ್ರಕ. 7:15:

*೨೨:೪ ಮತ್ತಾ 5:8; 1 ಕೊರಿ. 13:12; 1 ಯೋಹಾ. 3:2:

†೨೨:೪ ಪ್ರಕ. 3:12; 7:3; 14:1:

‡೨೨:೫ ಕೀರ್ತ. 36:9; ಪ್ರಕ. 21:11, 23-25:

§೨೨:೫ ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ. 20:4:

*೨೨:೬ ಪ್ರಕ. 21:5

†೨೨:೬ ಪ್ರಕ. 1:1:

‡೨೨:೭ ಪ್ರಕ. 3:11; 22:12, 20:

§೨೨:೭ ಪ್ರಕ. 1:3.

*೨೨:೮ ಪ್ರಕ. 1:1; 4:9:

†೨೨:೯ ಪ್ರಕ. 9:10

‡೨೨:೯ ಪ್ರಕ. 1:3:

§೨೨:೧೦ ಮೂಲ:ವಾಕ್ಯಗಳನ್ನು ಗುಪ್ತವಾಗಿಡಬೇಡ.

*೨೨:೧೧ ಯೆಹೆ. 3 27; ದಾನಿ. 12:10; 2 ತಿಮೊ. 3:13:

†೨೨:೧೨ ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:

‡೨೨:೧೨ ಯೆಶಾ. 40. 10; 62:11:

§೨೨:೧೩ ಪ್ರಕ. 1:8:

*೨೨:೧೩ ಪ್ರಕ. 1:17; 1:4:

†೨೨:೧೩ ಪ್ರಕ. 21:6:

‡೨೨:೧೪ ಪ್ರಕ. 7:14

§೨೨:೧೪ ಪ್ರಕ. 22:2, 19:

*೨೨:೧೪ ಕೀರ್ತ. 118:20; ಪ್ರಕ. 21:27:

†೨೨:೧೫ ಮತ್ತಾ 8:12; ಗಲಾ. 5:19-21; ಪ್ರಕ. 21:8:

‡೨೨:೧೬ ಪ್ರಕ. 1:4:

§೨೨:೧೬ ಪ್ರಕ. 1:1:

*೨೨:೧೬ ಪ್ರಕ. 5:5:

†೨೨:೧೬ 2 ಸಮು. 7:12-16; ಯೆಶಾ. 11:1; ರೋಮಾ. 1:3:

‡೨೨:೧೬ ಅರಣ್ಯ. 24:17; ಯೆಶಾ. 60. 3; ಮತ್ತಾ 2:2; ಪ್ರಕ. 2:28:

§೨೨:೧೭ ಪ್ರಕ. 21:2, 9:

*೨೨:೧೭ ಯೆಶಾ. 55:1; ಯೋಹಾ 7:37; ಪ್ರಕ. 21:6:

†೨೨:೧೮ ಧರ್ಮೋ. 4:2; 12:32; ಜ್ಞಾ. 30. 6:

‡೨೨:೧೯ ಪ್ರಕ. 21:2:

§೨೨:೧೯ ಪ್ರಕ. 22:2, 14:

*೨೨:೨೦ ಪ್ರಕ. 22:7,12:

†೨೨:೨೦ 2 ತಿಮೊ. 4:8:

‡೨೨:೨೧ ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.