2 Timothy
ತಿಮೊಥೆಯನಿಗೆ ಬರೆದ ಎರಡನೆಯ ಪತ್ರಿಕೆ
ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರಿಕೆ
೧
ಪೀಠಿಕೆ
೧ ಕ್ರಿಸ್ತಯೇಸುವಿನಲ್ಲಿರುವ * ತೀತ. 1:2; ಇಬ್ರಿ. 9:15ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ † 1 ಕೊರಿ. 1:1ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ‡ 2 ಕೊರಿ. 1:1ಅಪೊಸ್ತಲನಾದ ಪೌಲನು, ೨ § 1 ಕೊರಿ. 4:17, 2 ತಿಮೊ. 2:1; ಅ. ಕೃ. 16:1ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, * 1 ತಿಮೊ. 1:2ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ.
ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ
೩ † ರೋಮಾ. 1:9ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ ‡ ಅ. ಕೃ. 22:3; 24:14ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. § 1 ತಿಮೊ. 3:9; ಅ. ಕೃ. 23:1ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ * ರೋಮಾ. 1:8ಸ್ತೋತ್ರಸಲ್ಲಿಸುತ್ತೇನೆ. ೪ ನಾನು † ಅ. ಕೃ. 20:37ನಿನ್ನ ಕಣ್ಣೀರನ್ನು ನೆನಪಿಗೆ ತಂದು ‡ ಫಿಲಿ. 1:8ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ. ೫ ನಿನ್ನಲ್ಲಿರುವ § 1 ತಿಮೊ. 1:5 ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ * ಅ. ಕೃ. 16:1; 1 ತಿಮೊ. 3:15ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.
೬ ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ † 1 ತಿಮೊ. 4:14, 1 ಥೆಸ. 5:19ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ. ೭ ದೇವರು ನಮಗೆ ಕೊಟ್ಟಿರುವ ಆತ್ಮವು ‡ ಲೂಕ 24:49; ಅ. ಕೃ. 1:8ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು § ರೋಮಾ. 8:15; ಯೋಹಾ. 14:27; ಪ್ರಕ. 21:8ಹೇಡಿತನದ ಆತ್ಮವಲ್ಲ.
೮ ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ * 1 ಕೊರಿ. 1:6ಸಾಕ್ಷಿಯ ವಿಷಯದಲ್ಲಾಗಲಿ ಆತನ † 2 ತಿಮೊ. 1:16; ಎಫೆ. 3:1ಸೆರೆಯವನಾದ ನನ್ನ ವಿಷಯದಲ್ಲಾಗಲಿ ‡ ರೋಮಾ. 1:16; ಇಬ್ರಿ. 11:16; 1 ಯೋಹಾ 2:28ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ § 2 ತಿಮೊ. 2:3,9; 4:5ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು. ೯ * ತೀತ. 3:5, ರೋಮಾ. 3:27ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, † ಇಬ್ರಿ. 3:11; ರೋಮಾ. 8:28ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ‡ 1 ತಿಮೊ. 1:1; ತೀತ. 3:4ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು § ತೀತ. 1:2, ರೋಮಾ. 16:25; ಎಫೆ. 1:4ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ, ೧೦ ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ * 2 ಥೆಸ. 2:8ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. † 1 ಕೊರಿ. 15:26, 54, 55; ಇಬ್ರಿ. 2:14,15ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.
೧೧ ‡ 1 ತಿಮೊ. 2:7ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು. ೧೨ § 2 ತಿಮೊ. 2:9ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. * 1 ಪೇತ್ರ 4:19ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು † ನಾನು ಆತನಆತನು ‡ 2 ತಿಮೊ. 1:18; 4:8; 1 ಕೊರಿ. 3:13ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ. ೧೩ ನೀನು § 1 ತಿಮೊ. 1:14ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ * 1 ತಿಮೊ. 1:10ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು. ೧೪ † 1 ತಿಮೊ. 6:20ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು ‡ ರೋಮ. 8:9ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.
೧೫ § ಅ. ಕೃ. 19:10ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ. ೧೬ * 2 ತಿಮೊ. 4:19ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. † ವ. 8; ಅ. ಕೃ. 28:20ನನ್ನ ಬೇಡಿಗಳಿಗೆ ನಾಚಿಕೆಪಡದೆ, ೧೭ ರೋಮಾಪುರಕ್ಕೆ ಬಂದಕೂಡಲೆ ‡ ಮತ್ತಾ 25:36-40ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು. ೧೮ ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.
*೧:೧ ತೀತ. 1:2; ಇಬ್ರಿ. 9:15
§೧:೨ 1 ಕೊರಿ. 4:17, 2 ತಿಮೊ. 2:1; ಅ. ಕೃ. 16:1
*೧:೨ 1 ತಿಮೊ. 1:2
†೧:೩ ರೋಮಾ. 1:9
§೧:೩ 1 ತಿಮೊ. 3:9; ಅ. ಕೃ. 23:1
*೧:೩ ರೋಮಾ. 1:8
‡೧:೪ ಫಿಲಿ. 1:8
§೧:೫ 1 ತಿಮೊ. 1:5
*೧:೫ ಅ. ಕೃ. 16:1; 1 ತಿಮೊ. 3:15
†೧:೬ 1 ತಿಮೊ. 4:14, 1 ಥೆಸ. 5:19
§೧:೭ ರೋಮಾ. 8:15; ಯೋಹಾ. 14:27; ಪ್ರಕ. 21:8
‡೧:೮ ರೋಮಾ. 1:16; ಇಬ್ರಿ. 11:16; 1 ಯೋಹಾ 2:28
§೧:೮ 2 ತಿಮೊ. 2:3,9; 4:5
*೧:೯ ತೀತ. 3:5, ರೋಮಾ. 3:27
†೧:೯ ಇಬ್ರಿ. 3:11; ರೋಮಾ. 8:28
‡೧:೯ 1 ತಿಮೊ. 1:1; ತೀತ. 3:4
§೧:೯ ತೀತ. 1:2, ರೋಮಾ. 16:25; ಎಫೆ. 1:4
*೧:೧೦ 2 ಥೆಸ. 2:8
†೧:೧೦ 1 ಕೊರಿ. 15:26, 54, 55; ಇಬ್ರಿ. 2:14,15
‡೧:೧೧ 1 ತಿಮೊ. 2:7
§೧:೧೨ 2 ತಿಮೊ. 2:9
*೧:೧೨ 1 ಪೇತ್ರ 4:19
†೧:೧೨ ನಾನು ಆತನ
‡೧:೧೨ 2 ತಿಮೊ. 1:18; 4:8; 1 ಕೊರಿ. 3:13
§೧:೧೩ 1 ತಿಮೊ. 1:14
*೧:೧೩ 1 ತಿಮೊ. 1:10
†೧:೧೪ 1 ತಿಮೊ. 6:20
‡೧:೧೪ ರೋಮ. 8:9
*೧:೧೬ 2 ತಿಮೊ. 4:19
†೧:೧೬ ವ. 8; ಅ. ಕೃ. 28:20
‡೧:೧೭ ಮತ್ತಾ 25:36-40