೧ ಯಜಮಾನರೇ, ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ.
ಪ್ರಾರ್ಥಿಸಲು ಉತ್ತೇಜನ
೨  * ವ. 2-4; ಎಫೆ. 6:18-20ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ, ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ. ೩ ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ಕೊಲೊ. 4:18; ಎಫೆ. 6:20; ಫಿಲಿ. 1:7ನಾನು ಸೆರೆಯಲ್ಲಿದ್ದೇನಲ್ಲಾ. ೪ ನಾನು ಆ ರೋಮಾ. 16:25ಸತ್ಯಾರ್ಥವನ್ನು ಹೇಳಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ ಪ್ರಾರ್ಥಿಸಿರಿ. ೫ ಸಮಯವನ್ನು ಸರಿಯಾಗಿ ಸದುಪಯೋಗಿಸಿಕೊಂಡು § ಮಾರ್ಕ. 4:11ಹೊರಗಿನವರೊಂದಿಗೆ * ಎಫೆ. 5:15-17ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ೬ ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ಉಪ್ಪಾಗಿಯೂರುಚಿಕರವಾಗಿಯೂ ಇರಲಿ. 1 ಪೇತ್ರ 3:15ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.
ವಂದನೆಗಳು ಹಾಗೂ ಕಡೆ ಮಾತುಗಳು
೭  § ವ. 7-9; ಎಫೆ. 6:21-22ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು. ೮ ನೀವು ನಮ್ಮ ಕುರಿತು ತಿಳಿದುಕೊಳ್ಳುವಂತೆ, ಅವನು ನಿಮ್ಮ ಹೃದಯಗಳನ್ನು ಉರಿದುಂಬಿಸುವಂತೆ, ೯ ಅವನನ್ನು ನಂಬಿಗಸ್ತನು ಮತ್ತು* ಫಿಲೆ. 16 ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ ಫಿಲೆ. 10ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.
೧೦ ನನ್ನ ಜೊತೆ ಸೆರೆಯವನಾದ ಅ. ಕೃ. 19:29; 20:4; 7:2; ಫಿಲೆ. 24ಅರಿಸ್ತಾರ್ಕನೂ ಮತ್ತು § ಅ. ಕೃ. 15:37-39ಬಾರ್ನಬನ ಸೋದರಸಂಬಂಧಿಯಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. * ಅ. ಕೃ. 12:12ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಅವನ ವಿಷಯದಲ್ಲಿ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ. ೧೧ ಯುಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆ ಹೇಳುತ್ತಾನೆ. ಅ. ಕೃ. 11:2ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಸೇವಕರಾಗಿದ್ದಾರೆ, ಇವರಿಂದ ನನಗೆ ಆದರಣೆ ಉಂಟಾಯಿತು. ೧೨ ಕ್ರಿಸ್ತಯೇಸುವಿನ ದಾಸನಾಗಿರುವ ನಿಮ್ಮ ಊರಿನವನಾದ ಕೊಲೊ. 1:7; ಫಿಲೆ. 23ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ, ನೀವು § ಮತ್ತಾ 5:48ಪ್ರವೀಣರಾಗಿಯೂ ದೇವರ ಎಲ್ಲಾ ಚಿತ್ತದಲ್ಲಿ ಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಯಲ್ಲಿ ಹೋರಾಡುತ್ತಾನೆ. ೧೩ ಇವನು ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಮತ್ತು ಹಿರಿಯಾಪೋಲಿಯದವರಿಗಾಗಿಯೂ ಬಹಳ ಪ್ರಯಾಸ ಪಡುತ್ತಾನೆಂದು ನಾನು ಸಾಕ್ಷಿಹೇಳುತ್ತೇನೆ. ೧೪ ಪ್ರಿಯ ವೈದ್ಯನಾಗಿರುವ * 2 ತಿಮೊ. 4:11; ಅ. ರು. 16:10ಲೂಕನು ಮತ್ತು 2 ತಿಮೊ. 4:10; ಫಿಲೆ. 24ದೇಮನು ನಿಮಗೆ ವಂದನೆ ಹೇಳುತ್ತಾರೆ. ೧೫ ಲವೊದಿಕೀಯದಲ್ಲಿರುವ ಸಹೋದರರಿಗೂ ಮತ್ತು ನುಂಫಳಿಗೂ ಹಾಗೂ ಆಕೆಯ ರೋಮಾ. 16:5ಮನೆಯಲ್ಲಿ ಸೇರಿಬರುವ ಸಭೆಯವರಿಗೂ ವಂದನೆ ಹೇಳಿರಿ.
೧೬ ನಿಮ್ಮಲ್ಲಿ ಈ ಪತ್ರವನ್ನು ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಇದನ್ನು ಓದಿಸಿರಿ ಮತ್ತು ನಾನು ಬರೆದ ಪತ್ರವನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಕೊಳ್ಳಿರಿ. ೧೭  § ಫಿಲೆ. 2ಅರ್ಖಿಪ್ಪನಿಗೆ, ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು ಹೇಳಿರಿ. ೧೮  * 1 ಕೊರಿ. 16:21ಇದು ಪೌಲನೆಂಬ ನಾನು ಸ್ವಂತ ಕೈಯಿಂದಲೇ ಬರೆದ ವಂದನೆ. ಫಿಲಿ. 1:7; ಕೊಲೊ. 4:3; ಇಬ್ರಿ. 13:3ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. 1 ತಿಮೊ. 6:21; 2 ತಿಮೊ. 4:22; ತೀತ. 3:15; ಇಬ್ರಿ. 13:25ಕೃಪೆಯು ನಿಮ್ಮೊಂದಿಗಿರಲಿ.

*೪:೨ ವ. 2-4; ಎಫೆ. 6:18-20

೪:೩ ಕೊಲೊ. 4:18; ಎಫೆ. 6:20; ಫಿಲಿ. 1:7

೪:೪ ರೋಮಾ. 16:25

§೪:೫ ಮಾರ್ಕ. 4:11

*೪:೫ ಎಫೆ. 5:15-17

೪:೬ ಉಪ್ಪಾಗಿಯೂ

೪:೬ 1 ಪೇತ್ರ 3:15

§೪:೭ ವ. 7-9; ಎಫೆ. 6:21-22

*೪:೯ ಫಿಲೆ. 16

೪:೯ ಫಿಲೆ. 10

೪:೧೦ ಅ. ಕೃ. 19:29; 20:4; 7:2; ಫಿಲೆ. 24

§೪:೧೦ ಅ. ಕೃ. 15:37-39

*೪:೧೦ ಅ. ಕೃ. 12:12

೪:೧೧ ಅ. ಕೃ. 11:2

೪:೧೨ ಕೊಲೊ. 1:7; ಫಿಲೆ. 23

§೪:೧೨ ಮತ್ತಾ 5:48

*೪:೧೪ 2 ತಿಮೊ. 4:11; ಅ. ರು. 16:10

೪:೧೪ 2 ತಿಮೊ. 4:10; ಫಿಲೆ. 24

೪:೧೫ ರೋಮಾ. 16:5

§೪:೧೭ ಫಿಲೆ. 2

*೪:೧೮ 1 ಕೊರಿ. 16:21

೪:೧೮ ಫಿಲಿ. 1:7; ಕೊಲೊ. 4:3; ಇಬ್ರಿ. 13:3

೪:೧೮ 1 ತಿಮೊ. 6:21; 2 ತಿಮೊ. 4:22; ತೀತ. 3:15; ಇಬ್ರಿ. 13:25