೩
ನಿಜವಾದ ನೀತಿ
೧ ಕಡೆಯದಾಗಿ ನನ್ನ ಸಹೋದರರೇ, * ಫಿಲಿ. 4:4, ಥೆಸ. 5:16ಕರ್ತನಲ್ಲಿ ಸಂತೋಷಪಡಿರಿ. † 2 ಪೇತ್ರ. 1:12ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು. ೨  ‡ ಕೀರ್ತ. 22:16,20, ಯೆಶಾ. 56:10-11, ಪ್ರಕ. 22:15, ಗಲಾ. 5:15ಆ ನಾಯಿಗಳಿಂದ ಎಚ್ಚರವಾಗಿರಿ, § 2 ಕೊರಿ. 11:13ದುಷ್ಕರ್ಮಿಗಳಿಂದ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ. ೩ ನಿಜವಾದ ಸುನ್ನತಿಯವರು ಯಾರೆಂದರೆ, * ಯೋಹಾ 4:23, ಯೂದ. 20, ಗಲಾ. 5:25ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, † ರೋಮಾ. 15:17, ಗಲಾ. 6:14ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ‡ ರೋಮಾ. 2:29ನಾವುಗಳೇ. ೪  § 2 ಕೊರಿ. 11:18ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. ೫  * ಆದಿ. 17:12ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, † 2 ಕೊರಿ. 11:22ನಾನು ಇಸ್ರಾಯೇಲ್ ವಂಶದವನು, ‡ ರೋಮಾ. 11:1ಬೆನ್ಯಾಮೀನನ ಕುಲದವನು, § 2 ಕೊರಿ. 11:22ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ * ಅ. ಕೃ. 23:6, 26:5ನಾನು ಫರಿಸಾಯನು, ೬  † ಅ. ಕೃ. 8:3, 22:3-4, ಗಲಾ. 1:13-14ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ‡ ವ. 9 ನೋಡಿರಿಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ. ೭ ಆದರೆ, § ಲೂಕ. 14:33ನನಗೆ ಲಾಭವಾಗಿದ್ದಂಥವುಗಳನ್ನು * ಇಬ್ರಿ. 11:26ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ೮ ಇಷ್ಟೇ ಅಲ್ಲದೆ, † ಯೋಹಾ. 17:3, 2 ಪೇತ್ರ. 1:3, ಯೆಶಾ. 53:11, ಯೆರೆಮೀಯನು 9:23-24ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ‡ 2 ಕೊರಿ. 5:15ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. ೯ ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, § ರೋಮಾ. 10:5, ವ. 6 ನೋಡಿರಿಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, * ರೋಮಾ. 1:17, 3:22, 1 ಕೊರಿ. 1:30ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. ೧೦  † ಎಫೆ. 4:13ಆತನನ್ನೂ ‡ ರೋಮಾ. 1:4, 6:4, ಎಫೆ. 1:19-20ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, § 1 ಪೇತ್ರ. 4:13, 2 ಕೊರಿ. 1:5ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. ೧೧ ಹೀಗಾದರೆ * ಲೂಕ. 20:35, 1 ಕೊರಿ. 15:23, ಪ್ರಕ. 20:5-6, ಇಬ್ರಿ. 11:35ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.
ಬಿರುದಗಾಗಿ ಓಟ
೧೨ ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು † ಇಬ್ರಿ. 5:9, 11:40, 12:23ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ. ೧೩ ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ‡ ಲೂಕ. 9:62, ಇಬ್ರಿ. 6:1ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, ೧೪ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ § ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28ಕರೆದು ನಮ್ಮ ಮುಂದೆ ಇಟ್ಟಿರುವ * 1 ಕೊರಿ. 9:24, ಕೊಲೊ. 2:18ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ. ೧೫ ನಮ್ಮಲ್ಲಿ † 1 ಕೊರಿ. 2:6ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು. ೧೬ ಅಂತೂ, ‡ ಗಲಾ. 6:16ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.
೧೭ ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ § ಫಿಲಿ. 4:9, 1 ಕೊರಿ. 4:16ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. ೧೮ ಯಾಕೆಂದರೆ * 2 ಕೊರಿ. 11:13ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ † ಅ. ಕೃ. 20:31ಅಳುತ್ತಾ ಹೇಳುತ್ತೇನೆ. ೧೯  ‡ 2 ಕೊರಿ. 11:15, 2 ಥೆಸ. 1:9ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, § 2 ಕೊರಿ. 11:12, ಗಲಾ. 6:13ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, * ರೋಮಾ. 8:5, ಕೊಲೊ. 3:2ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. ೨೦  † ಎಫೆ. 2:19ನಾವಾದರೋ ಪರಲೋಕದ ಪ್ರಜೆಗಳು, ‡ ಅ. ಕೃ. 1:11, 1 ಕೊರಿ. 1:7, ಇಬ್ರಿ. 9:28ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. ೨೧ ಆತನು § 1 ಕೊರಿ. 15:28ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ * ಎಫೆ. 1:19ಪರಾಕ್ರಮವನ್ನು ಹೊಂದಿದವನಾಗಿ † 1 ಕೊರಿ. 15:43-53ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ‡ ಫಿಲಿ. 3:10, ಕೊಲೊ. 3:4, ರೋಮಾ. 8:29ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

*೩:೧ ಫಿಲಿ. 4:4, ಥೆಸ. 5:16

†೩:೧ 2 ಪೇತ್ರ. 1:12

‡೩:೨ ಕೀರ್ತ. 22:16,20, ಯೆಶಾ. 56:10-11, ಪ್ರಕ. 22:15, ಗಲಾ. 5:15

§೩:೨ 2 ಕೊರಿ. 11:13

*೩:೩ ಯೋಹಾ 4:23, ಯೂದ. 20, ಗಲಾ. 5:25

†೩:೩ ರೋಮಾ. 15:17, ಗಲಾ. 6:14

‡೩:೩ ರೋಮಾ. 2:29

§೩:೪ 2 ಕೊರಿ. 11:18

*೩:೫ ಆದಿ. 17:12

†೩:೫ 2 ಕೊರಿ. 11:22

‡೩:೫ ರೋಮಾ. 11:1

§೩:೫ 2 ಕೊರಿ. 11:22

*೩:೫ ಅ. ಕೃ. 23:6, 26:5

†೩:೬ ಅ. ಕೃ. 8:3, 22:3-4, ಗಲಾ. 1:13-14

‡೩:೬ ವ. 9 ನೋಡಿರಿ

§೩:೭ ಲೂಕ. 14:33

*೩:೭ ಇಬ್ರಿ. 11:26

†೩:೮ ಯೋಹಾ. 17:3, 2 ಪೇತ್ರ. 1:3, ಯೆಶಾ. 53:11, ಯೆರೆಮೀಯನು 9:23-24

‡೩:೮ 2 ಕೊರಿ. 5:15

§೩:೯ ರೋಮಾ. 10:5, ವ. 6 ನೋಡಿರಿ

*೩:೯ ರೋಮಾ. 1:17, 3:22, 1 ಕೊರಿ. 1:30

†೩:೧೦ ಎಫೆ. 4:13

‡೩:೧೦ ರೋಮಾ. 1:4, 6:4, ಎಫೆ. 1:19-20

§೩:೧೦ 1 ಪೇತ್ರ. 4:13, 2 ಕೊರಿ. 1:5

*೩:೧೧ ಲೂಕ. 20:35, 1 ಕೊರಿ. 15:23, ಪ್ರಕ. 20:5-6, ಇಬ್ರಿ. 11:35

†೩:೧೨ ಇಬ್ರಿ. 5:9, 11:40, 12:23

‡೩:೧೩ ಲೂಕ. 9:62, ಇಬ್ರಿ. 6:1

§೩:೧೪ ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28

*೩:೧೪ 1 ಕೊರಿ. 9:24, ಕೊಲೊ. 2:18

†೩:೧೫ 1 ಕೊರಿ. 2:6

‡೩:೧೬ ಗಲಾ. 6:16

§೩:೧೭ ಫಿಲಿ. 4:9, 1 ಕೊರಿ. 4:16

*೩:೧೮ 2 ಕೊರಿ. 11:13

†೩:೧೮ ಅ. ಕೃ. 20:31

‡೩:೧೯ 2 ಕೊರಿ. 11:15, 2 ಥೆಸ. 1:9

§೩:೧೯ 2 ಕೊರಿ. 11:12, ಗಲಾ. 6:13

*೩:೧೯ ರೋಮಾ. 8:5, ಕೊಲೊ. 3:2

†೩:೨೦ ಎಫೆ. 2:19

‡೩:೨೦ ಅ. ಕೃ. 1:11, 1 ಕೊರಿ. 1:7, ಇಬ್ರಿ. 9:28

§೩:೨೧ 1 ಕೊರಿ. 15:28

*೩:೨೧ ಎಫೆ. 1:19

†೩:೨೧ 1 ಕೊರಿ. 15:43-53

‡೩:೨೧ ಫಿಲಿ. 3:10, ಕೊಲೊ. 3:4, ರೋಮಾ. 8:29