೧೬
ದೇವರ ಕೋಪದ ಬಟ್ಟಲುಗಳು
೧ ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು * ಪ್ರಕ. 15:1:ಆ ಏಳು ಮಂದಿ ದೇವದೂತರಿಗೆ, ನೀವು ಹೋಗಿ † ಪ್ರಕ. 15:7:ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ‡ ಕೀರ್ತ. 79:6; ಯೆರೆ. 10:25; ಚೆಫ. 3:8:ಸುರಿಯಿರಿ ಎಂದು ಹೇಳಿತು.
೨ ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು § ಪ್ರಕ. 13:16:ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ * ವ. 11; ವಿಮೋ. 9:9-11:ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.
೩ ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ † ಪ್ರಕ. 8:8:ರಕ್ತದ ಹಾಗಾಯಿತು ಮತ್ತು ‡ ಪ್ರಕ. 8:9; ವಿಮೋ. 7:20, 21ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.
೪ ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು § ಪ್ರಕ. 8:10:ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ * ವಿಮೋ. 7:17-20:ಅವುಗಳ ನೀರು ರಕ್ತವಾಯಿತು.
೫ ಆ ಮೇಲೆ ಜಲಾಧಿಪತಿಯಾದ ದೂತನು, ನೀನು † ಪ್ರಕ. 11:17; 1:4, 8; 4:8:ಇರುವಾತನೂ ‡ ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ. 1:4: ಇದ್ದಾತನೂ § ಪ್ರಕ. 15:4:ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ. ೬ ಅವರು * ಪ್ರಕ. 11:18:ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು † ಪ್ರಕ. 13:15; 18:24ಸುರಿಸಿದ್ದರಿಂದ, ‡ ಯೆಶಾ. 49:26; ಲೂಕ. 11:49, 50. ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು. ಎಂದು ಹೇಳುವುದನ್ನು ಕೇಳಿದೆನು. ೭ ಆ ಮೇಲೆ § ಪ್ರಕ. 6:9; 14:18. ಅಥವಾ, ಬಲಿ ಕೊಡುವ ಸ್ಥಳಯಜ್ಞವೇದಿಯು ಮಾತನಾಡುತ್ತಾ, ದೇವರಾದ ಕರ್ತನೇ ಸರ್ವಶಕ್ತನೇ, * ಪ್ರಕ. 15:3; ಕೀರ್ತ. 119:137:ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ ಎಂದು ಹೇಳುವುದನ್ನು ಕೇಳಿದೆನು.
೮ ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು. ೯ ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು † ಪ್ರಕ. 16:11, 21:ದೂಷಿಸಿದಲ್ಲದೆ, ಅವರು ‡ ದಾನಿ. 5:22 23; ಪ್ರಕ. 2:21:ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.
೧೦ ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ § ಪ್ರಕ. 13:2:ಸಿಂಹಾಸನದ ಮೇಲೆ ಸುರಿಯಲು * ವಿಮೋ. 10:21-23; ಪ್ರಕ. 9:2:ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, ೧೧ ತಮ್ಮ ಯಾತನೆಗಳಿಗಾಗಿಯೂ † ವ. 2:ಹುಣ್ಣುಗಳ ದೆಸೆಯಿಂದಲೂ ‡ ಪ್ರಕ. 11:13ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.
೧೨ ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು § ಪ್ರಕ. 9:14:ಯೂಫ್ರಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, * ಯೆಶಾ. 41:2, 25; 46:11:ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ † ಯೆಶಾ. 11:15; 44:27; ಯೆರೆ. 50. 38; 51:32, 36:ಅದರ ನೀರು ಬತ್ತಿಹೋಯಿತು. ೧೩ ಆಗ ‡ ಪ್ರಕ. 12:3, 9:ಘಟಸರ್ಪದ ಬಾಯಿಂದ, § ಪ್ರಕ. 13 ಮೃಗದ ಬಾಯಿಂದ ಮತ್ತು * ಪ್ರಕ. 13:11-17; 19:20; 20:10:ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. ೧೪ ಇವು † ಪ್ರಕ. 13:13; 1 ತಿಮೊ. 4:1:ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ‡ ಪ್ರಕ. 6:17:ದೇವರ ಮಹಾದಿನದ § ಪ್ರಕ. 20:8; 17:14; 19:19:ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು. ೧೫ ಇಗೋ * ಪ್ರಕ. 3:3:ಕಳ್ಳನು ಬರುವಂತೆ ಬರುತ್ತೇನೆ. † ಪ್ರಕ. 3:18:ತಾನು ‡ ಬೆತ್ತಲೆಯಾಗಿ. ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ § ಮತ್ತಾ 24:42; 25:13; 26:41; ಮಾರ್ಕ. 14:34-38; 1 ಕೊರಿ. 16:13:ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.
೧೬ ಆಗ * ಅಶುದ್ಧಾತ್ಮಗಳು ಅಥವಾ ದೆವ್ವಗಳು. ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ † ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ. 5:19:ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.
೧೭ ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ ಸಂಭವಿಸಿ ‡ ಪ್ರಕ. 10:6ಆಯಿತು ಎಂದು ಹೇಳಿತು. ೧೮ ಆಗ § ಪ್ರಕ. 4:5; 8:5; 11:19:ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ * ಪ್ರಕ. 6:12; 11:13:ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. ೧೯  † ಪ್ರಕ. 11:8:ಮಹಾ ಪಟ್ಟಣವು ‡ ಪ್ರಕ. 11:13:ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ § ಪ್ರಕ. 14:8:ಬಾಬೆಲನ್ನು * ಪ್ರಕ. 18:5:ಜ್ಞಾಪಿಸಿಕೊಂಡು † ಪ್ರಕ. 14:10:ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು. ೨೦ ಆಗ ಪ್ರತಿಯೊಂದು ‡ ಪ್ರಕ. 6:14:ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು. ೨೧ ಮತ್ತು ಆಕಾಶದಿಂದ ಮನುಷ್ಯರ ಮೇಲೆ § ಪ್ರಕ. 11:19; ವಿಮೋ. 9:23-25ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು * ಮೂಲ:ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ. ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು † ಪ್ರಕ. 16:9, 11:ದೇವರನ್ನು ದೂಷಿಸಿದರು.

*೧೬:೧ ಪ್ರಕ. 15:1:

†೧೬:೧ ಪ್ರಕ. 15:7:

‡೧೬:೧ ಕೀರ್ತ. 79:6; ಯೆರೆ. 10:25; ಚೆಫ. 3:8:

§೧೬:೨ ಪ್ರಕ. 13:16:

*೧೬:೨ ವ. 11; ವಿಮೋ. 9:9-11:

†೧೬:೩ ಪ್ರಕ. 8:8:

‡೧೬:೩ ಪ್ರಕ. 8:9; ವಿಮೋ. 7:20, 21

§೧೬:೪ ಪ್ರಕ. 8:10:

*೧೬:೪ ವಿಮೋ. 7:17-20:

†೧೬:೫ ಪ್ರಕ. 11:17; 1:4, 8; 4:8:

‡೧೬:೫ ಭೂತ, ಭವಿಷ್ಯತ್, ವರ್ತಮಾನ ಕಾಲಗಳಲ್ಲಿರುವಂಥವನು. ಪ್ರಕ. 1:4:

§೧೬:೫ ಪ್ರಕ. 15:4:

*೧೬:೬ ಪ್ರಕ. 11:18:

†೧೬:೬ ಪ್ರಕ. 13:15; 18:24

‡೧೬:೬ ಯೆಶಾ. 49:26; ಲೂಕ. 11:49, 50.

§೧೬:೭ ಪ್ರಕ. 6:9; 14:18. ಅಥವಾ, ಬಲಿ ಕೊಡುವ ಸ್ಥಳ

*೧೬:೭ ಪ್ರಕ. 15:3; ಕೀರ್ತ. 119:137:

†೧೬:೯ ಪ್ರಕ. 16:11, 21:

‡೧೬:೯ ದಾನಿ. 5:22 23; ಪ್ರಕ. 2:21:

§೧೬:೧೦ ಪ್ರಕ. 13:2:

*೧೬:೧೦ ವಿಮೋ. 10:21-23; ಪ್ರಕ. 9:2:

†೧೬:೧೧ ವ. 2:

‡೧೬:೧೧ ಪ್ರಕ. 11:13

§೧೬:೧೨ ಪ್ರಕ. 9:14:

*೧೬:೧೨ ಯೆಶಾ. 41:2, 25; 46:11:

†೧೬:೧೨ ಯೆಶಾ. 11:15; 44:27; ಯೆರೆ. 50. 38; 51:32, 36:

‡೧೬:೧೩ ಪ್ರಕ. 12:3, 9:

§೧೬:೧೩ ಪ್ರಕ. 13

*೧೬:೧೩ ಪ್ರಕ. 13:11-17; 19:20; 20:10:

†೧೬:೧೪ ಪ್ರಕ. 13:13; 1 ತಿಮೊ. 4:1:

‡೧೬:೧೪ ಪ್ರಕ. 6:17:

§೧೬:೧೪ ಪ್ರಕ. 20:8; 17:14; 19:19:

*೧೬:೧೫ ಪ್ರಕ. 3:3:

†೧೬:೧೫ ಪ್ರಕ. 3:18:

‡೧೬:೧೫ ಬೆತ್ತಲೆಯಾಗಿ.

§೧೬:೧೫ ಮತ್ತಾ 24:42; 25:13; 26:41; ಮಾರ್ಕ. 14:34-38; 1 ಕೊರಿ. 16:13:

*೧೬:೧೬ ಅಶುದ್ಧಾತ್ಮಗಳು ಅಥವಾ ದೆವ್ವಗಳು.

†೧೬:೧೬ ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ. 5:19:

‡೧೬:೧೭ ಪ್ರಕ. 10:6

§೧೬:೧೮ ಪ್ರಕ. 4:5; 8:5; 11:19:

*೧೬:೧೮ ಪ್ರಕ. 6:12; 11:13:

†೧೬:೧೯ ಪ್ರಕ. 11:8:

‡೧೬:೧೯ ಪ್ರಕ. 11:13:

§೧೬:೧೯ ಪ್ರಕ. 14:8:

*೧೬:೧೯ ಪ್ರಕ. 18:5:

†೧೬:೧೯ ಪ್ರಕ. 14:10:

‡೧೬:೨೦ ಪ್ರಕ. 6:14:

§೧೬:೨೧ ಪ್ರಕ. 11:19; ವಿಮೋ. 9:23-25

*೧೬:೨೧ ಮೂಲ:ಒಂದು ತಲಾಂತು, ಸುಮಾರು ನೂರು ಪೌಂಡುಗಳಷ್ಟು ತೂಕ. ಹಳೇ ಕಾಲಮಾನವನ್ನು ಅಳೆಯುವ ಅಳತೆ ಅಥವಾ ತೂಕ.

†೧೬:೨೧ ಪ್ರಕ. 16:9, 11: