ಮೋಶೆಗಿಂತ ಯೇಸು ಶ್ರೇಷ್ಠನು
೧ ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ * ಎಫೆ. 4:1; ಫಿಲಿ. 3:14; 2 ತಿಮೊ. 1:9:ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು. ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ.
೨  ಅರಣ್ಯ. 12:7; ಇಬ್ರಿ. 5:5:ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ. ೩ ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. ೪ ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ § ಎಫೆ. 2:10; 3:9:ಸಮಸ್ತವನ್ನು ಕಟ್ಟಿದಾತನು ದೇವರೇ. ೫ ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ * ವಿಮೋ. 14:31; ಧರ್ಮೋ. 34:5; ಯೆಹೋ. 1:2; 8:31; ಕೀರ್ತ. 105:26; ಪ್ರಕ. 15:3:ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಧರ್ಮೋ. 18:15,18,19:ಸಾಕ್ಷಿಕೊಟ್ಟಿದ್ದಾನೇ. ೬ ಆದರೆ ಕ್ರಿಸ್ತನಾದರೋ ಇಬ್ರಿ. 1:2:ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, § ಇಬ್ರಿ. 3:14; 6:11; ಮತ್ತಾ 10:22; ಪ್ರಕ. 2:26:ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ * 1 ಕೊರಿ. 3:16; 6:19; 2 ಕೊರಿ. 6:16; ಎಫೆ. 2:21; 1 ತಿಮೊ. 3:15; 1 ಪೇತ್ರ 2:5:ನಾವೇ ದೇವರ ಮನೆಯಾಗಿರುತ್ತೇವೆ.
ದೇವರು ಮಕ್ಕಳಿಗಿರುವ ವಿಶ್ರಾಂತಿ
೭ ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ,
ಕೀರ್ತ. 95:7-11; ಇಬ್ರಿ. 3:15:ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,
೮  ವಿಮೋ. 17:7:ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
೯ ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ,
§ ವಿಮೋ. 16:35; ಅರಣ್ಯ. 14:33,34; ಅ. ಕೃ. 7:36,42:ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.
೧೦ ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು,
‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ,
ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ.
೧೧ ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು
* ಇಬ್ರಿ. 4:3,5:ಕೋಪಗೊಂಡು ಪ್ರಮಾಣಮಾಡಿದೆನು.’
೧೨ ಸಹೋದರರೇ, ಮತ್ತಾ 16:16; 2 ಕೊರಿ. 3:3; 1 ತಿಮೊ. 4:10:ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ. ೧೩ ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಯೆಶಾ. 44:20; ರೋಮಾ. 7:11; ಎಫೆ. 4:22:ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. ೧೪ ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು § ಇಬ್ರಿ. 3:6; 10:23; 1 ಕೊರಿ. 15:2:ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ * ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ. ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ.
೧೫  ಕೀರ್ತ. 95:7-11; ಇಬ್ರಿ. 3:7; 4:7:ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ,
ಪೂರ್ವಿಕರು ಮೊಂಡುತನದಿಂದ ಮಾಡಿದಂತೆ,
ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
೧೬  ಅರಣ್ಯ. 14:2,23,24,30; ಧರ್ಮೋ. 1:34-38:ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ? ೧೭ ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? § ಅರಣ್ಯ. 14:29; 1 ಕೊರಿ. 10:5:ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು. ೧೮ ನನ್ನ ವಿಶ್ರಾಂತಿಯಲ್ಲಿ * ಧರ್ಮೋ. 1:34,35; ಇಬ್ರಿ. 4:2:ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ? ೧೯  ಇಬ್ರಿ. 4:6; ಕೀರ್ತ. 78:21; 106:24ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.

*೩:೧ ಎಫೆ. 4:1; ಫಿಲಿ. 3:14; 2 ತಿಮೊ. 1:9:

೩:೧ ಯೋಹಾ 20:21. ಅಥವಾ ದೇವಪ್ರೇಷಿತನೂ, ದೇವರಿಂದ ಕಳುಹಿಸಲ್ಪಟ್ಟವನು.

೩:೨ ಅರಣ್ಯ. 12:7; ಇಬ್ರಿ. 5:5:

§೩:೪ ಎಫೆ. 2:10; 3:9:

*೩:೫ ವಿಮೋ. 14:31; ಧರ್ಮೋ. 34:5; ಯೆಹೋ. 1:2; 8:31; ಕೀರ್ತ. 105:26; ಪ್ರಕ. 15:3:

೩:೫ ಧರ್ಮೋ. 18:15,18,19:

೩:೬ ಇಬ್ರಿ. 1:2:

§೩:೬ ಇಬ್ರಿ. 3:14; 6:11; ಮತ್ತಾ 10:22; ಪ್ರಕ. 2:26:

*೩:೬ 1 ಕೊರಿ. 3:16; 6:19; 2 ಕೊರಿ. 6:16; ಎಫೆ. 2:21; 1 ತಿಮೊ. 3:15; 1 ಪೇತ್ರ 2:5:

೩:೭ ಕೀರ್ತ. 95:7-11; ಇಬ್ರಿ. 3:15:

೩:೮ ವಿಮೋ. 17:7:

§೩:೯ ವಿಮೋ. 16:35; ಅರಣ್ಯ. 14:33,34; ಅ. ಕೃ. 7:36,42:

*೩:೧೧ ಇಬ್ರಿ. 4:3,5:

೩:೧೨ ಮತ್ತಾ 16:16; 2 ಕೊರಿ. 3:3; 1 ತಿಮೊ. 4:10:

೩:೧೩ ಯೆಶಾ. 44:20; ರೋಮಾ. 7:11; ಎಫೆ. 4:22:

§೩:೧೪ ಇಬ್ರಿ. 3:6; 10:23; 1 ಕೊರಿ. 15:2:

*೩:೧೪ ಅಥವಾ, ನಮ್ಮ ಹಿರಿಯರು ಎದುರು ನೋಡುತ್ತಿದ್ದ ಕ್ರಿಸ್ತನಲ್ಲಿ.

೩:೧೫ ಕೀರ್ತ. 95:7-11; ಇಬ್ರಿ. 3:7; 4:7:

೩:೧೬ ಅರಣ್ಯ. 14:2,23,24,30; ಧರ್ಮೋ. 1:34-38:

§೩:೧೭ ಅರಣ್ಯ. 14:29; 1 ಕೊರಿ. 10:5:

*೩:೧೮ ಧರ್ಮೋ. 1:34,35; ಇಬ್ರಿ. 4:2:

೩:೧೯ ಇಬ್ರಿ. 4:6; ಕೀರ್ತ. 78:21; 106:24