೧ ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ * ಇಬ್ರಿ. 12:15:ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ. ೨ ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ ರೋಮಾ. 3:3:ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ 1 ಥೆಸ. 2:13:ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ. ೩ ಈಗ ನಂಬುವವರಾದ ನಾವುಗಳೇ ಆ § ಕೀರ್ತ. 95:11; ಇಬ್ರಿ. 3:11:ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ
‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು
ನಾನು ಕೋಪದಿಂದ ಪ್ರಮಾಣ ಮಾಡಿದೆನು’ ಎಂದು ಹೇಳಿದೆಯಲ್ಲಾ.
೪ ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, * ಆದಿ. 2:2; ವಿಮೋ. 20:11; 31:17:ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು ಬರೆದದೆ. ೫  ಇಬ್ರಿ. 4:3:ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ. ೬ ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು. ೭ ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ,
ಇಬ್ರಿ. 3:7, 8:ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ,
ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ! ಎಂದು ಹೇಳುತ್ತಾನಷ್ಟೆ.
೮  § ಯೆಹೋ. 3:10, 14-17; ಅ. ಕೃ. 7:45:ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ. ೯ ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. ೧೦ ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ. ೧೧ ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. * ಇಬ್ರಿ. 3:12:ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ. ೧೨ ಏಕೆಂದರೆ 1 ಪೇತ್ರ. 1:23:ದೇವರ ವಾಕ್ಯವು ಸಜೀವವಾದದ್ದು, ಯೆರೆಮೀಯನು 23:29; ಅ. ಕೃ. 2:37; 1 ಥೆಸ. 2:13:ಸಕ್ರಿಯವಾದದ್ದು ಮತ್ತು ಯಾವ § ಪ್ರಕ. 1:16; 2:12:ಇಬ್ಬಾಯಿ ಕತ್ತಿಗಿಂತಲೂ * ಯೆಶಾ. 49:2; ಎಫೆ. 6:17:ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, 1 ಕೊರಿ. 14:24, 25:ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ೧೩  2 ಪೂರ್ವ. 16:9; ಯೋಬ. 34:21; ಕೀರ್ತ. 33:13-15; ಜ್ಞಾ. 15:11:ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. § ಯೋಬ. 26:6:ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.
ಯೇಸು ಶ್ರೇಷ್ಠನಾದ ಮಹಾಯಾಜಕನು
೧೪  * ಇಬ್ರಿ. 7:26; 9:24; ಎಫೆ. 4:10:ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಇಬ್ರಿ. 2:17, 3:1; ಇಬ್ರಿ. 10:21:ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ಇಬ್ರಿ. 10:23: ನಂಬಿಕೆಯನ್ನು ದೃಢವಾಗಿ ಹಿಡಿಯೋಣ. ೧೫ ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ § ಯೆಶಾ. 53:3; ಇಬ್ರಿ. 5:2:ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. * ಇಬ್ರಿ. 2:17, 18:ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಇಬ್ರಿ. 7:26; 9:28; 2 ಕೊರಿ. 5:21; 1 ಪೇತ್ರ. 2:22; 1 ಯೋಹಾ. 3:5; ಯೋಹಾ 8:46; 14:30. ಪಾಪ ಮಾತ್ರ ಮಾಡಲಿಲ್ಲವಷ್ಟೇ. ೧೬ ಆದುದರಿಂದ ಇಬ್ರಿ. 7:19, 25; 10:19; ಎಫೆ. 2:18; 3:12:ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ.

*೪:೧ ಇಬ್ರಿ. 12:15:

೪:೨ ರೋಮಾ. 3:3:

೪:೨ 1 ಥೆಸ. 2:13:

§೪:೩ ಕೀರ್ತ. 95:11; ಇಬ್ರಿ. 3:11:

*೪:೪ ಆದಿ. 2:2; ವಿಮೋ. 20:11; 31:17:

೪:೫ ಇಬ್ರಿ. 4:3:

೪:೭ ಇಬ್ರಿ. 3:7, 8:

§೪:೮ ಯೆಹೋ. 3:10, 14-17; ಅ. ಕೃ. 7:45:

*೪:೧೧ ಇಬ್ರಿ. 3:12:

೪:೧೨ 1 ಪೇತ್ರ. 1:23:

೪:೧೨ ಯೆರೆಮೀಯನು 23:29; ಅ. ಕೃ. 2:37; 1 ಥೆಸ. 2:13:

§೪:೧೨ ಪ್ರಕ. 1:16; 2:12:

*೪:೧೨ ಯೆಶಾ. 49:2; ಎಫೆ. 6:17:

೪:೧೨ 1 ಕೊರಿ. 14:24, 25:

೪:೧೩ 2 ಪೂರ್ವ. 16:9; ಯೋಬ. 34:21; ಕೀರ್ತ. 33:13-15; ಜ್ಞಾ. 15:11:

§೪:೧೩ ಯೋಬ. 26:6:

*೪:೧೪ ಇಬ್ರಿ. 7:26; 9:24; ಎಫೆ. 4:10:

೪:೧೪ ಇಬ್ರಿ. 2:17, 3:1; ಇಬ್ರಿ. 10:21:

೪:೧೪ ಇಬ್ರಿ. 10:23:

§೪:೧೫ ಯೆಶಾ. 53:3; ಇಬ್ರಿ. 5:2:

*೪:೧೫ ಇಬ್ರಿ. 2:17, 18:

೪:೧೫ ಇಬ್ರಿ. 7:26; 9:28; 2 ಕೊರಿ. 5:21; 1 ಪೇತ್ರ. 2:22; 1 ಯೋಹಾ. 3:5; ಯೋಹಾ 8:46; 14:30.

೪:೧೬ ಇಬ್ರಿ. 7:19, 25; 10:19; ಎಫೆ. 2:18; 3:12: