ಐಶ್ವರ್ಯವಂತರ ನಡತೆಯ ಬಗ್ಗೆ ಎಚ್ಚರಿಕೆ
೧ ಐಶ್ವರ್ಯವಂತರೇ, * ಲೂಕ. 6:24; ಜ್ಞಾ. 11:28; ಆಮೋ. 6:1; 1 ತಿಮೊ. 6:9:ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ. ೨  ಮತ್ತಾ 6:19, 20:ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. ೩ ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. ಯಾಕೋಬ 5:8, 9:ಅಂತ್ಯಕಾಲ ಬಂದರೂ ಸಂಪತ್ತನ್ನು § ಮತ್ತಾ 6:19; ಲೂಕ. 12:21; ರೋಮಾ. 2:5:ಕೂಡಿಸಿ ಇಟ್ಟುಕೊಂಡಿದ್ದೀರಿ. ೪ ಇಗೋ, * ಯಾಜ. 19:13:ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಧರ್ಮೋ. 24:15:ಪೈರುಕೊಯ್ದದವರ ಕೂಗು ರೋಮಾ. 9:29:ಸ್ವರ್ಗದ ಸೈನ್ಯಗಳ ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ. ೫ ಭೂಲೋಕದಲ್ಲಿ ನೀವು § ಲೂಕ. 16:19:ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ. ೬ ನೀವು ನೀತಿವಂತನನ್ನು ಖಂಡಿಸಿ * ಯಾಕೋಬ 4:2:ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ.
ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು
೭ ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು ಧರ್ಮೋ. 11:14:ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು. ೮ ನೀವೂ ತಾಳ್ಮೆಯಿಂದಿರಿ, 1 ಥೆಸ. 3:13:ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ § 1 ಪೇತ್ರ. 4:7; ರೋಮಾ. 13:11, 12; ಫಿಲಿ. 4:5; ಇಬ್ರಿ. 10:25, 37:ಕರ್ತನ ಬರೋಣವು ಹತ್ತಿರವಾಯಿತು. ೯ ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆಮಾಡಬೇಡಿರಿ; ಇದರಿಂದ * ಮತ್ತಾ 7:1:ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, 1 ಪೇತ್ರ. 4:5; ಮತ್ತಾ 24:33; ಮಾರ್ಕ. 13:29; 1 ಕೊರಿ. 4:5; ಪ್ರಕ. 22:12:ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ. ೧೦ ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಮತ್ತಾ 5:12; 23:34; ಅ. ಕೃ. 7:52; ಇಬ್ರಿ. 11:32,38.ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. ೧೧ ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು § ಯೋಬ. 1:21, 22; 2:10:ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ * ಯೋಬ. 42:10, 12:ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ವಿಮೋ. 34:6:ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.
ನಂಬಿಕೆಯ ಪ್ರಾರ್ಥನೆ ಕುರಿತದ್ದು
೧೨ ಮುಖ್ಯವಾಗಿ ನನ್ನ ಸಹೋದರರೇ, ಮತ್ತಾ 5:34:ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. ೧೩ ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, § ಕೊಲೊ. 3:16:ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ. ೧೪ ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ * ಮಾರ್ಕ. 6:13; ಮಾರ್ಕ. 16:18:ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ೧೫ ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ ಯೆಶಾ. 33:24; ಮತ್ತಾ 9:2; ಮಾರ್ಕ. 2:5; ಲೂಕ. 5:20:ಪಾಪಗಳನ್ನು ಕ್ಷಮಿಸುವನು. ೧೬ ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ಅ. ಕೃ. 19:18:ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. § ಆದಿ. 18:23-32; 20:17; ಅರಣ್ಯ. 11:2; 1 ಅರಸು. 13:6; 17:22; 2 ಅರಸು. 4:33; 19:15-20; 20:2, 5; ಯೋಬ. 42:8; ಜ್ಞಾ. 15:29:ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ. ೧೭ ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, * 1 ಅರಸು. 17:1; 18:1:ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಲೂಕ. 4:25:ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. ೧೮ ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು.
೧೯ ನನ್ನ ಸಹೋದರರೇ, ಮತ್ತಾ 18:15; ಗಲಾ. 6:1:ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ § ದಾನಿ. 12:3; ಮಲಾ. 2:6:ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; ೨೦ ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ * ರೋಮಾ. 11:14:ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳಿಗೆ ಅವನು ಕ್ಷಮೆಯನ್ನು ದೊರಕಿಸಿದವನೆಂದು ತಿಳಿದುಕೊಳ್ಳಲ್ಲಿ.

*೫:೧ ಲೂಕ. 6:24; ಜ್ಞಾ. 11:28; ಆಮೋ. 6:1; 1 ತಿಮೊ. 6:9:

೫:೨ ಮತ್ತಾ 6:19, 20:

೫:೩ ಯಾಕೋಬ 5:8, 9:

§೫:೩ ಮತ್ತಾ 6:19; ಲೂಕ. 12:21; ರೋಮಾ. 2:5:

*೫:೪ ಯಾಜ. 19:13:

೫:೪ ಧರ್ಮೋ. 24:15:

೫:೪ ರೋಮಾ. 9:29:

§೫:೫ ಲೂಕ. 16:19:

*೫:೬ ಯಾಕೋಬ 4:2:

೫:೭ ಧರ್ಮೋ. 11:14:

೫:೮ 1 ಥೆಸ. 3:13:

§೫:೮ 1 ಪೇತ್ರ. 4:7; ರೋಮಾ. 13:11, 12; ಫಿಲಿ. 4:5; ಇಬ್ರಿ. 10:25, 37:

*೫:೯ ಮತ್ತಾ 7:1:

೫:೯ 1 ಪೇತ್ರ. 4:5; ಮತ್ತಾ 24:33; ಮಾರ್ಕ. 13:29; 1 ಕೊರಿ. 4:5; ಪ್ರಕ. 22:12:

೫:೧೦ ಮತ್ತಾ 5:12; 23:34; ಅ. ಕೃ. 7:52; ಇಬ್ರಿ. 11:32,38.

§೫:೧೧ ಯೋಬ. 1:21, 22; 2:10:

*೫:೧೧ ಯೋಬ. 42:10, 12:

೫:೧೧ ವಿಮೋ. 34:6:

೫:೧೨ ಮತ್ತಾ 5:34:

§೫:೧೩ ಕೊಲೊ. 3:16:

*೫:೧೪ ಮಾರ್ಕ. 6:13; ಮಾರ್ಕ. 16:18:

೫:೧೫ ಯೆಶಾ. 33:24; ಮತ್ತಾ 9:2; ಮಾರ್ಕ. 2:5; ಲೂಕ. 5:20:

೫:೧೬ ಅ. ಕೃ. 19:18:

§೫:೧೬ ಆದಿ. 18:23-32; 20:17; ಅರಣ್ಯ. 11:2; 1 ಅರಸು. 13:6; 17:22; 2 ಅರಸು. 4:33; 19:15-20; 20:2, 5; ಯೋಬ. 42:8; ಜ್ಞಾ. 15:29:

*೫:೧೭ 1 ಅರಸು. 17:1; 18:1:

೫:೧೭ ಲೂಕ. 4:25:

೫:೧೯ ಮತ್ತಾ 18:15; ಗಲಾ. 6:1:

§೫:೧೯ ದಾನಿ. 12:3; ಮಲಾ. 2:6:

*೫:೨೦ ರೋಮಾ. 11:14: