೨೦
ಸಾವಿರ ವರ್ಷಗಳು
೧ ಆಗ ಒಬ್ಬ ದೇವದೂತನು * ಪ್ರಕ. 9:1:ಅಧೋಲೋಕದ ಪ್ರಕ. 1 18:ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ೨ ಅವನು ಪಿಶಾಚಿಯೂ ಸೈತಾನನೂ ಆಗಿರುವ ಪ್ರಕ. 12:9:ಪುರಾತನ ಸರ್ಪವೆಂಬ ಘಟಸರ್ಪವನ್ನು § 2 ಪೇತ್ರ. 2:4; ಯೂದ 6:ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು. ೩ ಆ ಸಾವಿರ ವರ್ಷ ಮುಗಿಯುವ ತನಕ * ಪ್ರಕ. 20:8, 10ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಪ್ರಕ. 9:1:ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ದಾನಿ. 6:17; ಮತ್ತಾ 27:66:ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು.
೪  § ದಾನಿ. 7:9; ಮತ್ತಾ 19:28; ಲೂಕ. 22:30. ತರುವಾಯ ಸಿಂಹಾಸನಗಳನ್ನು ಕಂಡೆನು. * ಪ್ರಕ. 3:21:ಅವುಗಳ ಮೇಲೆ ಕುಳಿತಿದ್ದವರಿಗೆ ದಾನಿ. 7:22; 1 ಕೊರಿ. 6:2,3:ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಪ್ರಕ. 6:9:ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ § ಪ್ರಕ. 13:12, 14-16:ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. * ಯೋಹಾ. 14:19; 2 ತಿಮೊ. 2:11:ಅವರು ಪುನಃ ಜೀವಿತರಾಗಿ ಎದ್ದು ದಾನಿ. 7:18; ಮತ್ತಾ 20:21; 2 ತಿಮೊ. 2:12:ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು. ೫ ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು. ೬  ಪ್ರಕ. 14:13; 19:9:ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. § ಮತ್ತಾ 10:28:ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ * ಯೆಶಾ. 61:6:ಯಾಜಕರಾಗಿ ವ. 4:ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು. ೭ ಆ ಸಾವಿರ ವರ್ಷಗಳು ಮುಗಿದ ಮೇಲೆ ಪ್ರಕ. 20:2, 3:ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು. ೮ ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, § ಯೆಹೆ. 38:2, 16; 39:1:ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ * ಪ್ರಕ. 16:14:ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು. ೯ ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಯೆಹೆ. 39:6:ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು. ೧೦ ಇದಲ್ಲದೆ ಪ್ರಕ. 20:3, 8:ಅವರನ್ನು ಮೋಸಗೊಳಿಸಿದ ಪಿಶಾಚನು § ಪ್ರಕ. 19:2, 3:ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ * ಪ್ರಕ. 16:13:ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.
ಕಡೇ ನ್ಯಾಯತೀರ್ಪನ್ನು ಕುರಿತದ್ದು
೧೧ ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕುಳಿತಿದ್ದಾತನನ್ನೂ ಕಂಡೆನು. ಕೀರ್ತ. 102:26:ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋದವು, ಆದರೆ ಹೋಗುವುದಕ್ಕೆ ಅವುಗಳಿಗೆ ಸ್ಥಳವಿರಲಿಲ್ಲ. ೧೨ ಇದಲ್ಲದೆ ಸತ್ತವರಾದ, ಶ್ರೇಷ್ಠರು ಮತ್ತು ಕನಿಷ್ಠರೆಲ್ಲರು ಸಿಂಹಾಸನದ ಮುಂದೆ ನಿಂತಿರುವುದನ್ನು ಕಂಡೆನು. ಆಗ ದಾನಿ. 7:10:ಪುಸ್ತಕಗಳು ತೆರೆಯಲ್ಪಟ್ಟವು. § ಲೂಕ. 10:20; ಫಿಲಿ. 4:3:ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು. ಆ ಪುಸ್ತಕಗಳಲ್ಲಿ ಬರೆದಿರುವ ಪ್ರಕಾರ, * ರೋಮಾ. 14:10; 2 ಕೊರಿ. 5:10:ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ ನ್ಯಾಯತೀರ್ಪಾಯಿತು. ೧೩ ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು. ಪ್ರಕ. 6:8:ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ೧೪ ಆ ಮೇಲೆ ಮೃತ್ಯುವೂ ಪಾತಾಳವೂ ಲೂಕ. 20:36; 1 ಕೊರಿ. 15:26; ಪ್ರಕ. 21:4:ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು. § ವ. 6:ಆ ಬೆಂಕಿಯ ಕೆರೆಯೇ ಎರಡನೆಯ ಮರಣವು. ೧೫ ಯಾರ ಹೆಸರು ಜೀವಬಾಧ್ಯರ ಪುಸ್ತಕದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ * ಮತ್ತಾ 13:42, 50. ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

*೨೦:೧ ಪ್ರಕ. 9:1:

೨೦:೧ ಪ್ರಕ. 1 18:

೨೦:೨ ಪ್ರಕ. 12:9:

§೨೦:೨ 2 ಪೇತ್ರ. 2:4; ಯೂದ 6:

*೨೦:೩ ಪ್ರಕ. 20:8, 10

೨೦:೩ ಪ್ರಕ. 9:1:

೨೦:೩ ದಾನಿ. 6:17; ಮತ್ತಾ 27:66:

§೨೦:೪ ದಾನಿ. 7:9; ಮತ್ತಾ 19:28; ಲೂಕ. 22:30.

*೨೦:೪ ಪ್ರಕ. 3:21:

೨೦:೪ ದಾನಿ. 7:22; 1 ಕೊರಿ. 6:2,3:

೨೦:೪ ಪ್ರಕ. 6:9:

§೨೦:೪ ಪ್ರಕ. 13:12, 14-16:

*೨೦:೪ ಯೋಹಾ. 14:19; 2 ತಿಮೊ. 2:11:

೨೦:೪ ದಾನಿ. 7:18; ಮತ್ತಾ 20:21; 2 ತಿಮೊ. 2:12:

೨೦:೬ ಪ್ರಕ. 14:13; 19:9:

§೨೦:೬ ಮತ್ತಾ 10:28:

*೨೦:೬ ಯೆಶಾ. 61:6:

೨೦:೬ ವ. 4:

೨೦:೭ ಪ್ರಕ. 20:2, 3:

§೨೦:೮ ಯೆಹೆ. 38:2, 16; 39:1:

*೨೦:೮ ಪ್ರಕ. 16:14:

೨೦:೯ ಯೆಹೆ. 39:6:

೨೦:೧೦ ಪ್ರಕ. 20:3, 8:

§೨೦:೧೦ ಪ್ರಕ. 19:2, 3:

*೨೦:೧೦ ಪ್ರಕ. 16:13:

೨೦:೧೧ ಕೀರ್ತ. 102:26:

೨೦:೧೨ ದಾನಿ. 7:10:

§೨೦:೧೨ ಲೂಕ. 10:20; ಫಿಲಿ. 4:3:

*೨೦:೧೨ ರೋಮಾ. 14:10; 2 ಕೊರಿ. 5:10:

೨೦:೧೩ ಪ್ರಕ. 6:8:

೨೦:೧೪ ಲೂಕ. 20:36; 1 ಕೊರಿ. 15:26; ಪ್ರಕ. 21:4:

§೨೦:೧೪ ವ. 6:

*೨೦:೧೫ ಮತ್ತಾ 13:42, 50.