೧  * 2 ತಿಮೊ. 1:2ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಎಫೆ. 6:10ಬಲಹೊಂದಿದವನಾಗು. ೨ ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ತೀತ 1:5ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು. ೩  § 1 ತಿಮೊ 1:18; 2 ತಿಮೊ. 1:; 4:5ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು. ೪ ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ. ೫ ಇದಲ್ಲದೆ * 1 ಕೊರಿ. 9:25ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ 2 ತಿಮೊ. 4:8ಜಯಮಾಲೆಯು ದೊರಕುವುದಿಲ್ಲ. ೬  1 ಕೊರಿ. 9:10; ಇಬ್ರಿ. 6:7; ಯಾಕೋಬ 5:7ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ. ೭ ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು. ೮  § ದಾವೀದನ ವಂಶದವನಾದ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂಬುದನ್ನು ಜ್ಞಾಪಕಮಾಡಿಕೋ; 1 ಕೊರಿ. 15:20ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ * ಮತ್ತಾ 1:1ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ರೋಮಾ. 2:16ಇದೇ ನಾನು ಸಾರುವ ಸುವಾರ್ತೆ. ೯ ಇದರಲ್ಲಿ 2 ತಿಮೊ. 1:8, 12ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ § ಫಿಲಿ. 1:7ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. * 2 ತಿಮೊ. 4:17; ಫಿಲಿ 1:13ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. ೧೦ ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು 1 ಪೇತ್ರ 5:10ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ಎಫೆ. 3:13; ಕೊಲೊ. 1:24; 1 ಕೊರಿ. 3:7ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ. ೧೧  § 1 ತಿಮೊ. 1:15ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ
* 1 ಥೆಸ. 5:10; ರೋಮಾ. 6:8ನಾವು ಆತನೊಡನೆ ಸತ್ತಿದ್ದರೆ
ಪ್ರಕ. 20:4ಆತನೊಡನೆ ಜೀವಿಸುವೆವು,
೧೨  2 ಥೆಸ. 1:4,5; ರೋಮಾ. 8:17; ಇಬ್ರಿ. 10:36; ಪ್ರಕ. 20:4ಸಹಿಸಿಕೊಳ್ಳುವವರಾಗಿದ್ದರೆ
ಆತನೊಡನೆ ಆಳುವೆವು.
§ ಮತ್ತಾ 10:33; ಮಾರ್ಕ 8:38; 2 ಪೇತ್ರ 2:1; 1 ಯೋಹಾ 2:23ನಾವು ಯೇಸುವಿನವರಲ್ಲವೆಂದು ಹೇಳಿದರೆ
* ಮತ್ತಾ 7:23; 10:33; 25:12; ಲೂಕ 13:25ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.
೧೩ ನಾವು ಅಪನಂಬಿಗಸ್ತರಾಗಿದ್ದರೂ
1 ಕೊರಿ. 1:9ಆತನು ನಂಬಿಗಸ್ತನಾಗಿಯೇ ಇರುವನು.
ಆತನು ಅರಣ್ಯ. 23:19; ತೀತ 3:9ತನ್ನ ಸ್ವಭಾವವನ್ನು ನಿರಾಕರಿಸಲು ಆಗುವುದಿಲ್ಲ.
ಅನುಮೋದಿತನಾದ ಸೇವಕನು
೧೪ ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ § 1 ತಿಮೊ. 6:4; ವ. 23ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು. ೧೫ ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು. ೧೬  * 1 ತಿಮೊ. 6:20ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ ತೀತ 3:9ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. ೧೭ ಅವರ ಮಾತು ಹುಣ್ಣುವ್ಯಾಧಿಯಂತೆ ಹರಡಿಕೊಳ್ಳುವುದು. ಅವರಲ್ಲಿ 1 ತಿಮೊ. 1:20ಹುಮೆನಾಯನೂ ಪಿಲೇತನೂ ಇದ್ದಾರೆ. ೧೮ ಅವರು ಸತ್ಯಭ್ರಷ್ಟರಾಗಿ § 1 ಕೊರಿ. 15:12ಪುನರುತ್ಥಾನವು ಆಗಿಹೋಯಿತೆಂದು ಹೇಳುತ್ತಾ ಹಲವರ ನಂಬಿಕೆಯನ್ನು ಕೆಡಿಸುವವರಾಗಿದ್ದಾರೆ. ೧೯ ಆದರೂ ದೇವರ ಸ್ಥಿರವಾದ ಅಸ್ಥಿವಾರವು ನಿಲ್ಲುತ್ತದೆ. ಅದರ ಮೇಲೆ * ಅರಣ್ಯ. 16:5; ನಹೂ. 1:7; ಯೋಹಾ. 10:14, 27; 1 ಕೊರಿ. 8:3ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ ಎಂತಲೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು ಎಂತಲೂ ಲಿಖಿತವಾಗಿದೆ.
೨೦  1 ತಿಮೊ. 3:15ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ, ಮರದ ಪಾತ್ರೆಗಳೂ, ಮಣ್ಣಿನ ಪಾತ್ರೆಗಳೂ ಇರುತ್ತವೆ. ಅವುಗಳಲ್ಲಿ ರೋಮಾ. 9:21ಕೆಲವನ್ನು ಉತ್ತಮವಾದ ಬಳಕೆಗೂ ಕೆಲವನ್ನು ಹೀನವಾದ ಬಳಕೆಗೂ ಬಳಸಲಾಗುತ್ತದೆ. ೨೧  § ಜ್ಞಾ. 25:4; ಯೆಶಾ. 52:11ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ, ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು. ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ, ಯಜಮಾನನಿಗೆ ಉಪಯುಕ್ತನಾಗಿಯೂ, * 2 ತಿಮೊ. 3:17; ತೀತ 3:1ಸಕಲ ಸತ್ಕ್ರಿಯೆಗಳನ್ನು ಮಾಡುವುದಕ್ಕೆ ಸಿದ್ಧನಾಗಿಯೂ ಇರುವನು.
೨೨ ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು. ೨೩  1 ತಿಮೊ. 6:4ಮೂಢರ ಬುದ್ಧಿಹೀನರ ವಿಚಾರಗಳು ಜಗಳಗಳಿಗೆ ಕಾರಣವಾಗುತ್ತವೆಯೆಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ. ೨೪  ಮತ್ತಾ 12:18ಕರ್ತನ ಸೇವಕನು ಜಗಳವಾಡದೆ, § 1 ಥೆಸ. 2:7ಎಲ್ಲರ ವಿಷಯದಲ್ಲಿ ಸಾಧುವೂ, * 1 ತಿಮೊ. 3:2ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ ೨೫ ಎದುರಿಸುವವರನ್ನು ಗಲಾತ್ಯ. 6:1; ತೀತ 3:2ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ಅ. ಕೃ. 8:22ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ § 1 ತಿಮೊ. 2:4ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು. ೨೬  * 1 ತಿಮೊ. 3:7ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.

*೨:೧ 2 ತಿಮೊ. 1:2

೨:೧ ಎಫೆ. 6:10

೨:೨ ತೀತ 1:5

§೨:೩ 1 ತಿಮೊ 1:18; 2 ತಿಮೊ. 1:; 4:5

*೨:೫ 1 ಕೊರಿ. 9:25

೨:೫ 2 ತಿಮೊ. 4:8

೨:೬ 1 ಕೊರಿ. 9:10; ಇಬ್ರಿ. 6:7; ಯಾಕೋಬ 5:7

§೨:೮ ದಾವೀದನ ವಂಶದವನಾದ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂಬುದನ್ನು ಜ್ಞಾಪಕಮಾಡಿಕೋ; 1 ಕೊರಿ. 15:20

*೨:೮ ಮತ್ತಾ 1:1

೨:೮ ರೋಮಾ. 2:16

೨:೯ 2 ತಿಮೊ. 1:8, 12

§೨:೯ ಫಿಲಿ. 1:7

*೨:೯ 2 ತಿಮೊ. 4:17; ಫಿಲಿ 1:13

೨:೧೦ 1 ಪೇತ್ರ 5:10

೨:೧೦ ಎಫೆ. 3:13; ಕೊಲೊ. 1:24; 1 ಕೊರಿ. 3:7

§೨:೧೧ 1 ತಿಮೊ. 1:15

*೨:೧೧ 1 ಥೆಸ. 5:10; ರೋಮಾ. 6:8

೨:೧೧ ಪ್ರಕ. 20:4

೨:೧೨ 2 ಥೆಸ. 1:4,5; ರೋಮಾ. 8:17; ಇಬ್ರಿ. 10:36; ಪ್ರಕ. 20:4

§೨:೧೨ ಮತ್ತಾ 10:33; ಮಾರ್ಕ 8:38; 2 ಪೇತ್ರ 2:1; 1 ಯೋಹಾ 2:23

*೨:೧೨ ಮತ್ತಾ 7:23; 10:33; 25:12; ಲೂಕ 13:25

೨:೧೩ 1 ಕೊರಿ. 1:9

೨:೧೩ ಅರಣ್ಯ. 23:19; ತೀತ 3:9

§೨:೧೪ 1 ತಿಮೊ. 6:4; ವ. 23

*೨:೧೬ 1 ತಿಮೊ. 6:20

೨:೧೬ ತೀತ 3:9

೨:೧೭ 1 ತಿಮೊ. 1:20

§೨:೧೮ 1 ಕೊರಿ. 15:12

*೨:೧೯ ಅರಣ್ಯ. 16:5; ನಹೂ. 1:7; ಯೋಹಾ. 10:14, 27; 1 ಕೊರಿ. 8:3

೨:೨೦ 1 ತಿಮೊ. 3:15

೨:೨೦ ರೋಮಾ. 9:21

§೨:೨೧ ಜ್ಞಾ. 25:4; ಯೆಶಾ. 52:11

*೨:೨೧ 2 ತಿಮೊ. 3:17; ತೀತ 3:1

೨:೨೩ 1 ತಿಮೊ. 6:4

೨:೨೪ ಮತ್ತಾ 12:18

§೨:೨೪ 1 ಥೆಸ. 2:7

*೨:೨೪ 1 ತಿಮೊ. 3:2

೨:೨೫ ಗಲಾತ್ಯ. 6:1; ತೀತ 3:2

೨:೨೫ ಅ. ಕೃ. 8:22

§೨:೨೫ 1 ತಿಮೊ. 2:4

*೨:೨೬ 1 ತಿಮೊ. 3:7