ತಂದೆತಾಯಿಗಳೂ ಮಕ್ಕಳೂ
೧  * ಜ್ಞಾ. 1:8; 6:20; 23:22; ಕೊಲೊ. 3:20:ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು. ೨ ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, ವಿಮೋ. 20:12; ಧರ್ಮೋ. 5:16:ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, ೩ ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.
೪  ಆದಿ. 18:19; ಧರ್ಮೋ. 4:9; 6:7; 11:19; ಜ್ಞಾ. 19:18; 22:6; 29:17 ಇತ್ಯಾದಿ. ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.
ಯಜಮಾನರೂ ದಾಸರೂ
೫  § ಅಥವಾ. ಗುಲಾಮರೇ, ದಾಸರೇ. ಕೊಲೊ. 3:22; ತಿಮೊ. 6:1; 1 ಪೇತ್ರ. 2:18:ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ * ಎಫೆ. 5:22:ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ. ೬  ಗಲಾ. 1:10.ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ. ೭ ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ. ೮ ಯಾಕೆಂದರೆ ಗಲಾ. 3:28. ಕೊಲೊ. 3:11.ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ § ಕೀರ್ತ. 62:12.ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ.
೯ ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. * ಯೋಹಾ. 13:13. ಯೋಬ. 31:13-15.ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ರೋಮಾ. 2:11; ಗಲಾ. 2:6:ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.
ದೇವರ ಸರ್ವಾಯುಧಗಳು
೧೦ ಕಡೆಯದಾಗಿ, ನೀವು 2 ತಿಮೊ. 2:1; 1 ಯೊಹಾ. 2:14; ಎಫೆ. 3:16:ಕರ್ತನಲ್ಲಿಯೂ § ಎಫೆ. 1:19:ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. ೧೧ ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ * ಎಫೆ. 6:13; 2 ಕೊರಿ. 10:4:ಸರ್ವಾಯುಧಗಳನ್ನು ವ. 14. ರೋಮಾ. 13:12:ಧರಿಸಿಕೊಳ್ಳಿರಿ. ೧೨ ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ಎಫೆ. 1:21:ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, § ಲೂಕ. 22:53; ಕೊಲೊ. 1:13:ಈ ಅಂಧಕಾರದ * ಎಫೆ. 2:2:ಲೋಕಾಧಿಪತಿಗಳ ಮೇಲೆಯೂ, ಎಫೆ. 3:10:ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. ೧೩ ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ೧೪  1 ಪೇತ್ರ. 1:13; ಯೆಶಾ. 11:5ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, § ಯೆಶಾ. 59:17; 1 ಥೆಸ. 5:8; ಯೆಶಾ. 61:10; 2 ಕೊರಿ. 6:7:ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು, ೧೫  * ಯೆಶಾ. 52:7; ರೋಮಾ. 10:15:ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ೧೬ ಎಲ್ಲಾದಕ್ಕಿಂತ ಹೆಚ್ಚಾಗಿ 1 ಯೊಹಾ. 5:4:ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ಮತ್ತಾ 13:19; 1 ಯೊಹಾ. 2:14:ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. ೧೭ ಇದಲ್ಲದೆ § ಯೆಶಾ. 59:17; 1 ಥೆಸ. 5:8:ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು * ಇಬ್ರಿ. 4:12; ಯೆಶಾ. 11:4; 49:2:ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ. ೧೮ ನೀವು ಯೂದ. 20:ಪವಿತ್ರಾತ್ಮಪ್ರೇರಿತರಾಗಿ ಲೂಕ. 18:1:ಎಲ್ಲಾ ಸಮಯಗಳಲ್ಲಿ § ಕೊಲೊ. 4:2-4:ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ * 1 ತಿಮೊ. 2:1:ವಿಜ್ಞಾಪನೆಮಾಡುತ್ತಾ ಮಾರ್ಕ. 13:33:ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ. ೧೯ ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಎಫೆ. 4:3.ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು § ಕೊಲೊ. 4:3; 1 ಥೆಸ. 5:25; 2 ಥೆಸ. 3:1.ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ. ೨೦ ಆ ಸುವಾರ್ತೆಯ ನಿಮಿತ್ತವಾಗಿ * 2 ಕೊರಿ. 5:20.ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ ಅ. ಕೃ. 28:20.ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.
ಕಡೆ ಮಾತುಗಳು
೨೧  ಕೊಲೊ. 4:7-9:ನನ್ನ ವಿಷಯವನ್ನೂ ನನ್ನ ಕೆಲಸಕಾರ್ಯಗಳನ್ನೂ ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ § ಅ. ಕೃ. 20:4. 2 ತಿಮೊ. 4:12; ತೀತ. 3:12:ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು. ೨೨ ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
೨೩ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ * ಗಲಾ. 6:16; ಥೆಸ. 3:16:ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ. ೨೪ ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ 1 ಕೊರಿ. 16:22ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.

*೬:೧ ಜ್ಞಾ. 1:8; 6:20; 23:22; ಕೊಲೊ. 3:20:

೬:೨ ವಿಮೋ. 20:12; ಧರ್ಮೋ. 5:16:

೬:೪ ಆದಿ. 18:19; ಧರ್ಮೋ. 4:9; 6:7; 11:19; ಜ್ಞಾ. 19:18; 22:6; 29:17 ಇತ್ಯಾದಿ.

§೬:೫ ಅಥವಾ. ಗುಲಾಮರೇ, ದಾಸರೇ. ಕೊಲೊ. 3:22; ತಿಮೊ. 6:1; 1 ಪೇತ್ರ. 2:18:

*೬:೫ ಎಫೆ. 5:22:

೬:೬ ಗಲಾ. 1:10.

೬:೮ ಗಲಾ. 3:28. ಕೊಲೊ. 3:11.

§೬:೮ ಕೀರ್ತ. 62:12.

*೬:೯ ಯೋಹಾ. 13:13. ಯೋಬ. 31:13-15.

೬:೯ ರೋಮಾ. 2:11; ಗಲಾ. 2:6:

೬:೧೦ 2 ತಿಮೊ. 2:1; 1 ಯೊಹಾ. 2:14; ಎಫೆ. 3:16:

§೬:೧೦ ಎಫೆ. 1:19:

*೬:೧೧ ಎಫೆ. 6:13; 2 ಕೊರಿ. 10:4:

೬:೧೧ ವ. 14. ರೋಮಾ. 13:12:

೬:೧೨ ಎಫೆ. 1:21:

§೬:೧೨ ಲೂಕ. 22:53; ಕೊಲೊ. 1:13:

*೬:೧೨ ಎಫೆ. 2:2:

೬:೧೨ ಎಫೆ. 3:10:

೬:೧೪ 1 ಪೇತ್ರ. 1:13; ಯೆಶಾ. 11:5

§೬:೧೪ ಯೆಶಾ. 59:17; 1 ಥೆಸ. 5:8; ಯೆಶಾ. 61:10; 2 ಕೊರಿ. 6:7:

*೬:೧೫ ಯೆಶಾ. 52:7; ರೋಮಾ. 10:15:

೬:೧೬ 1 ಯೊಹಾ. 5:4:

೬:೧೬ ಮತ್ತಾ 13:19; 1 ಯೊಹಾ. 2:14:

§೬:೧೭ ಯೆಶಾ. 59:17; 1 ಥೆಸ. 5:8:

*೬:೧೭ ಇಬ್ರಿ. 4:12; ಯೆಶಾ. 11:4; 49:2:

೬:೧೮ ಯೂದ. 20:

೬:೧೮ ಲೂಕ. 18:1:

§೬:೧೮ ಕೊಲೊ. 4:2-4:

*೬:೧೮ 1 ತಿಮೊ. 2:1:

೬:೧೮ ಮಾರ್ಕ. 13:33:

೬:೧೯ ಎಫೆ. 4:3.

§೬:೧೯ ಕೊಲೊ. 4:3; 1 ಥೆಸ. 5:25; 2 ಥೆಸ. 3:1.

*೬:೨೦ 2 ಕೊರಿ. 5:20.

೬:೨೦ ಅ. ಕೃ. 28:20.

೬:೨೧ ಕೊಲೊ. 4:7-9:

§೬:೨೧ ಅ. ಕೃ. 20:4. 2 ತಿಮೊ. 4:12; ತೀತ. 3:12:

*೬:೨೩ ಗಲಾ. 6:16; ಥೆಸ. 3:16:

೬:೨೪ 1 ಕೊರಿ. 16:22